ಆಚಾರ್ಯ ಚಾಣಕ್ಯ ಅವರಿಂದ ರಚನೆಯಾದ ಚಾಣಕ್ಯ ನೀತಿ ಎಂಬುದು ಒಂದು ನೀತಿ ಗ್ರಂಥವಾಗಿದೆ. ಜೀವನವನ್ನು ಸುಖಮಯ ಹಾಗೂ ಸಫಲವಾಗಿಸಲು ಅನುಸರಿಸಬೇಕಾದ ನಿಯಮಗಳನ್ನು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗಾದರೆ ಚಾಣಕ್ಯ ತಮ್ಮ ಗ್ರಂಥದಲ್ಲಿ ತಿಳಿಸಿದ ಜೀವನದ ನಿಯಮಗಳನ್ನು ಈ ಲೇಖನದಲ್ಲಿ ನೋಡೋಣ.
ಮಾನವನ ಜೀವನಕ್ಕೆ ವ್ಯಾವಹಾರಿಕ ಜ್ಞಾನವನ್ನು ಚಾಣಕ್ಯ ನೀತಿ ಗ್ರಂಥ ನೀಡುತ್ತದೆ. ಚಾಣಕ್ಯ ಜ್ಞಾನಿಯಾಗಿದ್ದು ತಮ್ಮ ತಂತ್ರದಿಂದ ಚಂದ್ರಗುಪ್ತ ಮೌರ್ಯನನ್ನು ರಾಜ ಸಿಂಹಾಸನದ ಮೇಲೆ ರಾಜನನ್ನಾಗಿ ಮಾಡಿದರು. ಚಾಣಕ್ಯ ತಿಳಿಸುವ ನೀತಿಗಳನ್ನು ಜೀವನದಲ್ಲಿ ಪಾಲಿಸಿದರೆ ಯಾವುದಾದರೂ ಸಮಯದಲ್ಲಿ ಪ್ರಯೋಜನಕ್ಕೆ ಬರುತ್ತದೆ. ಮನುಷ್ಯನಿಗೆ ನಾಲ್ಕು ವಿಷಯದಲ್ಲಿ ಹಸಿವು ಯಾವತ್ತೂ ಕಡಿಮೆ ಆಗುವುದಿಲ್ಲ. ಧನ ಸಂಪತ್ತು, ಜೀವನ, ವಾಸನ, ಭೋಜನ ಈ ನಾಲ್ಕು ವಿಷಯದ ಬಗ್ಗೆ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು.
ವ್ಯಕ್ತಿಗೆ ಕೆಟ್ಟ ಸಮಯ ಎದುರಾದಾಗ ತಮ್ಮವರು ದೂರ ಆಗುತ್ತಾರೆ. ಅಂತಹ ಸಮಯದಲ್ಲಿ ಹಣವಿದ್ದರೆ ಅದನ್ನು ಎದುರಿಸಬಹುದು. ಮುಗ್ಧವಾಗಿ ಹಾಗೂ ನೇರವಾಗಿ ಇರುವ ಜನರನ್ನು ಸಮಾಜ ನಿಂದನೆ ಮಾಡುತ್ತದೆ. ಜನರು ಲೂಟಿ ಮಾಡುವಷ್ಟು ನೇರವಾಗಿರಬಾರದು. ಶಿವ ಪರಮಾತ್ಮನು ಸರ್ವಶಕ್ತನು ಆತನ ಕೈಯಲ್ಲಿ ಭೂಮಂಡಲವಿದೆ. ಶ್ರೀಮಂತನನ್ನು ಬಡವನನ್ನಾಗಿ, ಬಡವನನ್ನು ಶ್ರೀಮಂತನನ್ನಾಗಿ ಮಾಡುವ ಶಕ್ತಿ ಆತನಿಗಿದೆ. ಶಿವ ಪರಮಾತ್ಮನನ್ನು ನಂಬಿದರೆ ಆತನು ಕೈ ಬಿಡುವುದಿಲ್ಲ. ಜಗತ್ತಿನ ಎಲ್ಲ ಸ್ಥಳಗಳಲ್ಲಿ ಒಳ್ಳೆಯವರು ಸಿಗುವುದಿಲ್ಲ, ಜಗತ್ತು ವಿವಾದದಿಂದ ಕೂಡಿದೆ ಆದ್ದರಿಂದ ನಿರ್ಧಾರ ಮಾಡುವಾಗ ಒಮ್ಮೆ ಯೋಚನೆ ಮಾಡಿ ನಿರ್ಧಾರ ಮಾಡಬೇಕು.
ಚಿನ್ನ ಬೆಂಕಿಗೆ ಬಿದ್ದ ಮೇಲೂ ಚಿನ್ನವಾಗಿರುತ್ತದೆ ಅದರಂತೆ ಒಳ್ಳೆಯವರು ಎಲ್ಲಿ ಹೋದರೂ ತಮ್ಮ ಒಳ್ಳೆಯ ಗುಣಗಳನ್ನು ಬಿಡುವುದಿಲ್ಲ. ಕೆಲವು ಹುಚ್ಚು ಜನರು ಕಲ್ಲುಗಳನ್ನು ರತ್ನಗಳೆಂದು ತಿಳಿಯುತ್ತಾರೆ. ಚಾಣಕ್ಯನ ಪ್ರಕಾರ ದವಸ ಧಾನ್ಯ, ನೀರು ಹಾಗೂ ಜ್ಞಾನ ನಿಜವಾದ ರತ್ನಗಳಾಗಿದೆ ಇವುಗಳಿಗಿಂತ ದೊಡ್ಡ ರತ್ನ ಇನ್ಯಾವುದೂ ಇಲ್ಲ. ಪಾಪ ಮತ್ತು ಪುಣ್ಯದ ನಡುವೆ ಅಂತರ ಏನಿದೆ, ನಮ್ಮ ಶತ್ರುಗಳು ಯಾರು, ನಮ್ಮ ಮಿತ್ರರು ಯಾರು, ಯಾವ ಕಾರ್ಯದಿಂದ ಲಾಭ ಸಿಗುತ್ತದೆ, ಯಾವ ಕಾರ್ಯದಿಂದ ನಷ್ಟ ಲಭಿಸುತ್ತದೆ ಎಂಬುದನ್ನು ಯೋಚನೆ ಮಾಡಿ ಜೀವನವನ್ನು ನಡೆಸಬೇಕು.
ಕಠಿಣ ಸಮಯದಲ್ಲಿ ಸೇವಕರ, ಸಂಕಟ ಸಮಯದಲ್ಲಿ ಬಂಧುಗಳ, ಆಪತ್ತಿನಲ್ಲಿ ಸ್ನೇಹಿತರ, ಧನ ಸಂಪತ್ತಿನ ನಾಶವಾದಾಗ ಹೆಂಡತಿಯ ಪರೀಕ್ಷೆ ಇರುತ್ತದೆ. ಸಿಂಹದ ಮೂಲಕ 1, ಕಾಗೆಯಿಂದ 5, ನಾಯಿಯಿಂದ 6, ಹುಲಿಯಿಂದ 3 ಗುಣಗಳನ್ನು ಮನುಷ್ಯನು ಕಲಿಯಬೇಕು. ಮನುಷ್ಯನು ಕೆಲಸವನ್ನು ಮನಸಿಟ್ಟು ಮಾಡಬೇಕು. ಸರಿಯಾದ ಸಮಯಕ್ಕೆ ಎದ್ದೇಳಬೇಕು, ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು. ಸರಿಯಾದ ಸಮಯದಲ್ಲಿ ಹಣ ಸಂಗ್ರಹ ಮಾಡುವುದು, ಇನ್ನೊಬ್ಬರ ಮೇಲೆ ಅತಿಯಾಗಿ ವಿಶ್ವಾಸ ಇಡದೆ ಇರುವುದು. ಬಹಳ ಹಸಿವಾದಾಗಲೂ ಸಂತೋಷದಿಂದ ಇರುವುದು, ಗಾಢ ನಿದ್ರೆಯಲ್ಲಿ ಇದ್ದಾಗಲೂ ಎಚ್ಚರದಿಂದ ಇರಬೇಕು. ಮಾಲೀಕರಿಗೆ ನಿಯತ್ತಿನಿಂದ ಇರಬೇಕು ಇಂತಹ ಅನೇಕ ಗುಣಗಳನ್ನು ಪ್ರಾಣಿಗಳಿಂದ ಕಲಿಯಬೇಕು.
ಒಂದು ವೇಳೆ ಧನ ಸಂಪತ್ತಿನ ನಾಶವಾದರೆ, ಮನಸ್ಸಿನ ನೆಮ್ಮದಿ ನಾಶವಾದರೆ ಬುದ್ದಿವಂತ ಜನರು ಇನ್ನೊಬ್ಬರ ಬಳಿ ಹೇಳುವುದಿಲ್ಲ. ಇಂತಹ ವಿಷಯವನ್ನು ಇನ್ನೊಬ್ಬರ ಬಳಿ ಹೇಳಿದರೆ ಜನರು ಅಪಹಾಸ್ಯ ಮಾಡುತ್ತಾರೆ. ವ್ಯರ್ಥವಾಗಿ ಖರ್ಚು ಮಾಡಬಾರದು, ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಬಾರದು, ಇನ್ನೊಬ್ಬರೊಂದಿಗೆ ಜಗಳ ಮಾಡಬಾರದು. ಗುರುವಿನ ಸೇವೆ ಮಾಡುವುದರಿಂದ ವಿದ್ಯೆ ಲಭಿಸುತ್ತದೆ. ಗಂಡನ ಮಾತನ್ನು ಒಪ್ಪದ ಸ್ತ್ರೀ, ಇಷ್ಟವಿಲ್ಲದೆ ವ್ರತ ಮಾಡುವ ಸ್ತ್ರೀಯರು ತಮ್ಮ ಗಂಡನ ಆಯಸ್ಸನ್ನು ಕಡಿಮೆ ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಗಂಡನ ಸೇವೆಯಿಂದ ಹೆಂಡತಿಗೆ ಸ್ವರ್ಗ ಸಿಗುತ್ತದೆ.
ಒಳ್ಳೆಯ ಜ್ಞಾನದಿಂದ ಪುರುಷರು ಮಹಾನ್ ರಾಗುತ್ತಾರೆ. ಜೀವನದ ಪ್ರತಿಯೊಂದು ಕ್ಷಣವನ್ನು ಒಳ್ಳೆಯ ಕಾರ್ಯಕ್ಕೆ ಬಳಸಬೇಕು. ಜೀವನದಲ್ಲಿ ಮೃತ್ಯು ಬಂದು ಅಂತ್ಯಗೊಂಡಾಗ ಜೀವನದ ಪ್ರತಿಯೊಂದು ಕ್ಷಣವು ಅಂತ್ಯವಾಗುತ್ತದೆ. ಇನ್ನೊಬ್ಬರಿಗೆ ಒಳ್ಳೆಯದನ್ನು ಬಯಸುವವರು ಆತ್ಮಕ್ಕೆ ಶಾಂತಿ ಪಡೆಯುತ್ತಾರೆ. ಇಂದ್ರಿಯಗಳ ಮೇಲೆ ಸಂಯಮ, ಇನ್ನೊಬ್ಬರ ಮೇಲೆ ದಯೆ ತೋರಿಸುವುದರಿಂದ ಮುಕ್ತಿ ಸಿಗುತ್ತದೆ. ಕರ್ಮಗಳಿಂದ ದೊಡ್ಡವರು ಚಿಕ್ಕವರಾಗುತ್ತಾರೆ.
ಒಳ್ಳೆಯ ಕರ್ಮ ಮಾಡುವುದರಿಂದ ಜೀವನದಲ್ಲಿ ಸುಖ ಮತ್ತು ಶಾಂತಿ ಸಿಗುತ್ತದೆ. ಮಾನವ ಶರೀರದಲ್ಲಿ ಆತ್ಮ ವಾಸ ಮಾಡುತ್ತದೆ ಆತ್ಮವನ್ನು ಶರೀರದಿಂದ ಭಿನ್ನವಾಗಿಸಲು ಸಾಧ್ಯವಿಲ್ಲ. ಕೇವಲ ವಿಚಾರದಿಂದ ಪರೀಕ್ಷೆ ಮಾಡಬೇಕು. ದೇವರು ಗುಡಿಗಳಲ್ಲಿ, ಮೂರ್ತಿಗಳಲ್ಲಿ ಮಾತ್ರವಲ್ಲ ನಮ್ಮ ಮನಸ್ಸಿನಲ್ಲಿಯೂ ವಾಸವಾಗಿದ್ದಾರೆ. ಮನುಷ್ಯನ ಜೀವನದ ಎಲ್ಲ ಕ್ಷಣಗಳಲ್ಲಿ ಅವನ ಭಾವನೆಯ ಪ್ರಭಾವ ಬೀರುತ್ತದೆ. ಮನುಷ್ಯನ ಭಾವನೆ ಇರುವಂತೆ ಫಲಗಳು ಹಾಗೆಯೆ ಇರುತ್ತದೆ. ಒಳ್ಳೆಯ ಫಲ ಸಿಗಲೂ ಭಾವನೆಯನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು. ಕೆಟ್ಟ ಜನರು ಹಾವಿಗಿಂತ ಅಪಾಯ ಅಂತವರಿಂದ ದೂರವಿರಬೇಕು. ಮನುಷ್ಯ ಎಷ್ಟೆ ಸುಂದರವಾಗಿದ್ದರು ವಿದ್ಯಾಭ್ಯಾಸ ಮುಗಿಸಿಲ್ಲ ಎಂದರೆ ಸುಗಂಧ ಇಲ್ಲದ ಹೂವಿನಂತಾಗುತ್ತದೆ. ಚಾಣಕ್ಯರು ಹೇಳಿದ ಈ ಎಲ್ಲ ಅಂಶಗಳನ್ನು ಪಾಲಿಸಿಕೊಂಡು ಹೋಗುವುದರಿಂದ ಜೀವನ ಸುಂದರವಾಗಿರುತ್ತದೆ.