ಚಾಣಕ್ಯ ಶಾಸ್ತ್ರ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಯಶಸ್ವಿ ಜೀವನಕ್ಕೆ ಮುನ್ನುಡಿ ನೀಡುವಂತಹ ಪುಸ್ತಕ ಎಂದರೇ ತಪ್ಪಾಗಲಾರದು. ಹೀಗಾಗಿ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ನ್ಯಾಯದ ದಾರಿಯಲ್ಲಿ ಯಶಸ್ವಿಯಾಗಬೇಕು ಎಂದರೆ ಆ ಪುಸ್ತಕದಲ್ಲಿ ಬರೆದಿರುವ ಬರಹಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಇನ್ನು ಆ ಪುಸ್ತಕದಲ್ಲಿ ಕೆಲವೊಂದು ಗುಣಗಳನ್ನು ಹೊಂದಿರುವ ಮಹಿಳೆಯರ ಜೊತೆ ಇರಬಾರದು ಅಥವಾ ಅವರನ್ನು ಮದುವೆಯಾಗಬಾರದು ಇಲ್ಲದಿದ್ದರೆ ನಿಮ್ಮ ಜೀವನ ಸಂಪೂರ್ಣವಾಗಿ ಹಾಳಾಗಿ ಹೋಗುತ್ತದೆ ಎಂಬುದಾಗಿ ಉಲ್ಲೇಖಿತವಾಗಿದೆ. ಹಾಗಿದ್ದರೆ ಮಹಿಳೆಯಲ್ಲಿ ಇರಬಾರದ ಆ ಕೆಟ್ಟ ಗುಣಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಮೊದಲನೇದಾಗಿ ಆ ಹೆಣ್ಣಿನ ಚಾರಿತ್ರ್ಯ ಚೆನ್ನಾಗಿರಬೇಕು ಅದರಿಂದ ಕುಟುಂಬದ ನೆಮ್ಮದಿ ದೀರ್ಘಕಾಲದ ವರೆಗೆ ಉಳಿಯುತ್ತದೆ ಇಲ್ಲವಾದರೆ ಹಾಳಾಗುತ್ತದೆ. ಒಂದು ವೇಳೆ ಆ ಹೆಣ್ಣಿನಲ್ಲಿ ಸೋಮಾರಿತನ ಹಾಗೂ ಮಣ್ಣುತನ ಮತ್ತು ಯಾವುದೇ ಕಾರಣವಿಲ್ಲದೆ ಬೇಗನೆ ಕೋಪ ಮಾಡಿಕೊಳ್ಳುವ ಗುಣವಿದ್ದರೆ ಆ ಮನೆ ಬೇಗನೆ ಮುಳುಗಿ ಹೋಗುತ್ತದೆ. ಕೇವಲ ಇಷ್ಟು ಮಾತ್ರವಲ್ಲದೆ ಬೇರೆಯವರಿಗೆ ತೋರಿಸುವ ಸಲುವಾಗಿ ಅನಗತ್ಯ ಖರ್ಚು ಮಾಡುವ ಹೆಣ್ಣು ಮಕ್ಕಳು ಕೂಡ ಆ ಕುಟುಂಬವನ್ನು ಮುಳುಗಿಸುತ್ತಾರೆ.

ಒಂದು ವೇಳೆ ನೀವು ಮದುವೆಯಾಗಿರುವ ಹೆಂಡತಿಯ ನಡತೆ ಚೆನ್ನಾಗಿಲ್ಲದಿದ್ದರೆ ಅದು ಬೇರಿಗೆ ಅಂಟಿರುವ ಕೀಟದಂತೆ ಸಮಯಕ್ಕೆ ತಕ್ಕಂತೆ ನಿಮ್ಮ ಕುಟುಂಬದ ಶಾಂತಿ ನೆಮ್ಮದಿಯನ್ನು ಹಾಳು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಒಳ್ಳೆಯ ಗುಣ ಇಲ್ಲದೆ ಕೆಟ್ಟವಳಾಗಿದ್ದರೂ ಕೂಡ ಕೇವಲ ನಿಮ್ಮ ಮನೆಯವರ ಸುಖ ಶಾಂತಿ ನೆಮ್ಮದಿ ಮಾತ್ರವಲ್ಲದೆ ನಿಮ್ಮ ಕುಟುಂಬಕ್ಕೆ ಬೇಕಾಗಿರುವವರ ಜೊತೆಗೆ ನಿಮ್ಮ ಸಂಬಂಧವನ್ನು ಕೂಡ ಕಳೆದುಕೊಳ್ಳುವಂತೆ ಅವಳು ಮಾಡುತ್ತಾಳೆ.

ಕೆಟ್ಟ ಸಮಯದಲ್ಲಿ ಕೂಡ ತನ್ನ ಸಂಗಾತಿ ಅಥವಾ ಗಂಡನ ಜೊತೆಗೆ ನಿಲ್ಲುವ ಹೆಣ್ಣು ಮಗಳು ಕುಟುಂಬದ ಕಣ್ಣಾಗಿರುತ್ತಾಳೆ. ಇಂತಹ ಸುಸಂಸ್ಕೃತ ಹೆಣ್ಣುಮಗಳನ್ನು ಯಾವುದೇ ಎರಡನೇ ಆಲೋಚನೆ ಇಲ್ಲದೆ ಮದುವೆಯಾಗಿ ಖಂಡಿತವಾಗಿ ನಿಮ್ಮ ಮುಂದಿನ ಭವಿಷ್ಯದ ಜೀವನದಲ್ಲಿ ಆಕೆ ನಿಮಗೆ ಅದೃಷ್ಟಲಕ್ಷ್ಮಿಯಾಗಿ ಕಾಣಿಸಿಕೊಳ್ಳುತ್ತಾಳೆ. ಇದು ಸ್ವತಹ ಚಾಣಕ್ಯ ಶಾಸ್ತ್ರದಲ್ಲಿ ಬರೆದಿರುವ ವಿಚಾರವಾಗಿದ್ದು ಇದನ್ನು ನಿಮ್ಮ ಜೀವನದಲ್ಲಿ ಪಾಲಿಸಿದರೆ ಖಂಡಿತವಾಗಿ ನೀವು ಕೂಡ ಯಶಸ್ವಿ ಹಾಗೂ ಸುಖ ಪುರುಷರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!