ಜೀವನದಲ್ಲಿ ಮುಂದೆ ಬರಬೇಕಾದರೆ ಪಾಲಿಸಬೇಕಾದ ನಿಯಮಗಳು ಇತರರೊಡನೆ ವ್ಯವಹರಿಸಬೇಕಾದ ರೀತಿ ಸಮಾಜದಲ್ಲಿ ನಮ್ಮ ನಡೆ ಹೇಗಿರಬೇಕು ಮುಂತಾದ ಅನೇಕ ವಿಷಯಗಳ ಬಗ್ಗೆ ಚಾಣಕ್ಯನು ನಮಗೆ ಅನೇಕ ನೀತಿಗಳನ್ನು ಬೋಧಿಸಿದ್ದಾರೆ. ನಮ್ಮ ಪ್ರಗತಿಗೆ ಅನೇಕ ಸಂದರ್ಭಗಳಲ್ಲಿ ಅವೆಲ್ಲವೂ ಕೂಡ ಉಪಯೋಗಕ್ಕೆ ಬರುತ್ತವೆ. ಚಾಣಕ್ಯ ಇವಷ್ಟನ್ನೇ ಅಲ್ಲದೆ ಸ್ತ್ರೀಯರ ಬಗ್ಗೆಯೂ ನಮಗೆ ಹಲವು ವಿಷಯಗಳನ್ನು ತಿಳಿಸಿದ್ದಾರೆ. ನಾವಿಂದು ನಿಮಗೆ ಚಾಣಕ್ಯನು ಮಹಿಳೆಯರ ಕುರಿತಾಗಿ ತಿಳಿಸಿರುವ ಹತ್ತು ರಹಸ್ಯಗಳು ಯಾವವು ಎಂಬುದನ್ನು ತಿಳಿಸಿಕೊಡುತ್ತೇವೆ.
ಅವುಗಳು ಯಾವುದೆಂದರೆ ಮೊದಲನೇಯದು ಸುಳ್ಳು ಹೇಳುವುದು ಸ್ವಾರ್ಥ ಅಸೂಯೆ ಕಠಿಣವಾಗಿ ವರ್ತಿಸುವುದು ಮೂರ್ಖತ್ವ ಪರಿಶುದ್ಧತೆಯನ್ನು ಪಾಲಿಸದಿರುವುದು ಕ್ರೂರತ್ವ ಮುಂತಾದ ಅಂಶಗಳು ಸ್ತ್ರೀಯರಲ್ಲಿ ಪ್ರಧಾನವಾಗಿರುತ್ತದೆ. ಇವುಗಳಿಂದಾಗಿ ಅನೇಕ ಸ್ತ್ರೀಯರು ಜೀವನದಲ್ಲಿ ಮುಂದೆ ಬರುವುದಕ್ಕೆ ಆಗುವುದಿಲ್ಲ ಈ ಲಕ್ಷಣಗಳೇ ಅವರಿಗೆ ಬದ್ಧ ವೈರಿಗಳಾಗಿರುತ್ತವೆ. ಎರಡನೆಯದು ಪುರುಷರಿಗಿಂತ ಮಹಿಳೆಯರಿಗೆ ಹಸಿವು ಎರಡು ಪಟ್ಟು ನಾಚಿಕೆ ನಾಲ್ಕು ಪಟ್ಟು ಧೈರ್ಯ ಆರು ಪಟ್ಟು ಆಸೆ ಎಂಟು ಪಟ್ಟು ಹೆಚ್ಚಾಗಿರುತ್ತದೆಯಂತೆ. ಮೂರನೆಯದು ಯಾವುದೇ ವಿಷಯವಾಗಲಿ ಸ್ತ್ರೀಯು ತನ್ನ ಗಂಡನ ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆಯಂತೆ ಇಲ್ಲವಾದಲ್ಲಿ ಗಂಡನ ಆಯುಸ್ಸು ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾರೆ.
ನಾಲ್ಕನೆಯದು ಪುರುಷನ ಶರೀರದಲ್ಲಿರುವ ಶಕ್ತಿಯನ್ನು ಸ್ತ್ರೀಯು ಒಂದೇ ಪೆಟ್ಟಿಗೆ ಹಿರಿಬಿಡುತ್ತಾಳಂತೆ. ಐದನೆಯದು ಯುವತಿ ಎಷ್ಟೇ ಕುರೂಪಿಯಾಗಿದ್ದರೂ ಅವಳು ಒಳ್ಳೆಯ ಕುಟುಂಬದಲ್ಲಿ ಜನಿಸಿದವಳಾಗಿದ್ದರೆ ಅವಳನ್ನು ವಿವಾಹವಾಗಬಹುದಂತೆ. ಆದರೆ ಎಷ್ಟೇ ಸುಂದರವಾಗಿದ್ದರೂ ಕೆಟ್ಟ ಕುಟುಂಬದಲ್ಲಿ ಹುಟ್ಟಿದರೆ ಅಂತಹ ಯುವತಿಯನ್ನು ಮದುವೆಯಾಗ ಬಾರದಂತೆ. ಆರನೆಯದು ನಮ್ಮ ಜ್ಞಾನವನ್ನು ಆಚರಣೆಯಲ್ಲಿ ತರದಿದ್ದರೆ ಜ್ಞಾನ ನಶಿಸುತ್ತದಂತೆ ತನ್ನ ನಿರ್ಲಕ್ಷದಿಂದ ಪುರುಷರೂ ಜ್ಞಾನವನ್ನು ಕಳೆದುಕೊಳ್ಳುತ್ತಾರೆ ಹೇಗೆ ಒಬ್ಬ ಮುಖಂಡ ನಿಲ್ಲದ ಕಾರಣ ಸೈನಿಕರು ಸೋಲುತ್ತಾರೆಯೋ ಅದೇ ರೀತಿ ಗಂಡನಿಲ್ಲದ ಮಹಿಳೆಯು ನಾಶವಾಗುತ್ತಾಳೆ ಎಂದು ಚಾಣಕ್ಯರು ತಿಳಿಸಿದ್ದಾರೆ.
ಏಳನೆಯದು ಬೆಂಕಿ ನೀರು ಆಸೆ ಹೆಚ್ಚಾಗಿರುವ ಸ್ತ್ರೀ ಮೂರ್ಖ ಹಾವು ಹಾಗೂ ದೊಡ್ಡ ಜನರಿಂದ ಆದಷ್ಟು ದೂರವಿರಬೇಕಂತೆ ಇಲ್ಲದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಎಂಟನೆಯದು ಮರ್ಯಾದೆಯನ್ನು ಕೊಟ್ಟು ಮರ್ಯಾದೆಯನ್ನು ತೆಗೆದುಕೊಳ್ಳುವುದನ್ನು ರಾಜಕುಟುಂಬದಿಂದಲೂ ಸಂಭಾಷಣೆಯನ್ನು ಹೇಗೆ ನಡೆಸಬೇಕು ಎಂಬುದನ್ನು ಪಂಡಿತರಿಂದಲೂ ಸುಳ್ಳು ಹೇಳುವುದನ್ನು ಜೂಜುಕೋರರಿಂದಲೂ ಕಲಿಯಬೇಕಂತೆ. ಒಂಬತ್ತನೆಯದು ಹಿತ್ತಾಳೆ ಪಾತ್ರೆಗಳನ್ನು ಬೂದಿಯಿಂದಲೂ ತಾಮ್ರದ ಪಾತ್ರೆಗಳನ್ನು ಹುಳಿ ಪದಾರ್ಥದಿಂದಲೂ ಹೇಗೆ ಶುಭ್ರ ಮಾಡಬಹುದೊ ಅದೇ ರೀತಿ ಋತುಚಕ್ರ ಸ್ತ್ರೀಯರನ್ನು ಶುಭ್ರಗೊಳಿಸುತ್ತದಂತೆ.
ಹತ್ತನೆಯದು ಸ್ತ್ರೀಯರ ಮನಸ್ಸನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವಂತೆ ಯಾವ ಸ್ತ್ರೀ ತನ್ನನ್ನು ಹೆಚ್ಚಾಗಿ ಪ್ರೀತಿಸುತ್ತಾಳೆ ಎಂದು ತಿಳಿಯುತ್ತಾನೋ ಅಂತಹ ಪುರುಷ ಆ ಸ್ತ್ರೀಗೆ ಅಡಿಯಾಳಾಗಿರುತ್ತಾನೆ. ಎಂದು ಚಾಣಕ್ಯನು ತಿಳಿಸಿದ್ದಾರೆ ಇದಿಷ್ಟು ಚಾಣಕ್ಯರು ಸ್ತ್ರೀಯರ ಕುರಿತಾಗಿ ತಿಳಿಸಿರುವ ಕೆಲವು ಮಾಹಿತಿಯಾಗಿದೆ. ಈಗಾಗಲೇ ನೀವು ಕೂಡ ಮಹಿಳೆಯರಲ್ಲಿ ಈ ಗುಣಗಳು ಇರುವುದನ್ನು ಗಮನಿಸಬಹುದು. ಚಾಣಕ್ಯರು ಸ್ತ್ರೀಯರ ಕುರಿತಾಗಿ ತಿಳಿಸುವ ಈ ರಹಸ್ಯಗಳನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಪರಿಚಿತರೊಂದಿಗೆ ಹಂಚಿಕೊಳ್ಳಿರಿ.