ಸಾವಯವ ಚಳುವಳಿ 1930-1940 ರ ದಶಕದಲ್ಲಿ ಬೇಸಾಯ ಕ್ಷೇತ್ರವನ್ನು ಕೃತಕ ಗೊಬ್ಬರಗಳ ಮೇಲೆ ಹೆಚ್ಚು ಅವಲಂಬಿಸುವುದನ್ನು ಹಿಮ್ಮೆಟ್ಟಿಸುವ ಸಲುವಾಗಿ ಪ್ರಾರಂಭವಾಯಿತು. ಕೃತಕ ಗೊಬ್ಬರಗಳನ್ನು ಮೊದಲು ಸೂಪರ್ ಫಾಸ್‌ಪೇಟ್ ಆನಂತರ ಅಮೋನಿಯದ ಉತ್ಪನ್ನಗಳಿಂದ ಭಾರಿ ಪ್ರಮಾಣದಲ್ಲಿ 18 ನೆಯ ಶತಮಾನದಲ್ಲಿ ಉತ್ಪನ್ನ ಮಾಡಲಾಯಿತು. ಮೊದಲನೆಯ ವಿಶ್ವ-ಮಹಾಯುದ್ಧದ ಸಮಯದಲ್ಲಿ ಹೇಬರ್ -ಬಾಷ್ ವಿಧಾನವನ್ನು ಅನುಸರಿಸಿ ಇದನ್ನು ತಯಾರಿಸಲಾಯಿತು. ಪ್ರಾರಂಭದಲ್ಲಿ ತಯಾರಾದ ಈ ಗೊಬ್ಬರಗಳು ಅಗ್ಗವಾಗಿ ದೊರೆಯುತ್ತಿದ್ದು ಶಕ್ತಿಯುತವಾಗಿಯೂ ಇದ್ದುದಲ್ಲದೆ ಸುಲಭವಾಗಿ ಸಾಗಾಣಿಕೆ ಮಾಡಲಾಗುತ್ತಿತ್ತು. ಇಂತಹುದೇ ಪ್ರಗತಿ 1940 ರ ಸುಮಾರಿನಲ್ಲಿ ರಾಸಾಯನಿಕ ಕೀಟನಾಶಕಗಳಲ್ಲಿಯೂ ಕಂಡುಬಂದಿತು. ಅದರ ಫಲವಾಗಿ ಈ ದಶಕವನ್ನು ‘ಕೀಟನಾಶಕ ಯುಗ’ವೆಂದು ಕರೆಯಲಾಯಿತು.
ರೈತರು ಎಂದೆಂದಿಗೂ ಭಾರತದ ಬೆನ್ನೆಲುಬಾಗಿದ್ದಾರೆ. ಎನ್ ಡಿ ಎ ಸರಕಾರವು ದೇಶದ ಬೆನ್ನೆಲುಬನ್ನು ಮತ್ತಷ್ಟು ಶಕ್ತಿಶಾಲಿಯನ್ನಾಗಿಸಲು ಹಲವು ಹೊಸ ಮತ್ತು ಬಲಿಷ್ಟ ಕ್ರಮಗಳನ್ನು ಕೈಗೊಳ್ಳುತ್ತಿದೆ.ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆಯು ನೀರಾವರಿ ವ್ಯವಸ್ಥೆಯನ್ನು ಖಾತರಿಪಡಿಸುವ ಮೂಲಕ ಕೃಷಿ ಉತ್ಪಾದನೆ ಹೆಚ್ಚಳಕ್ಕೆ ನೆರವಾಗುತ್ತಿದೆ. ಸಮಸ್ತ ಕೃಷಿ ಭೂಮಿಗೆ ಸಾಕಷ್ಟು ಪ್ರಮಾಣದಲ್ಲಿ ನೀರಾವರಿ ಸೌಲಭ್ಯವನ್ನು ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಪ್ರತಿ ಹನಿಗೆ ಹೆಚ್ಚು ಬೆಳೆ ಅಭಿಯಾನದ ಅಡಿಯಲ್ಲಿ ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡಲಾಗುತ್ತಿದೆ. ಹೀಗೆ ಹನುಮಂತ ಗೌಡ ಎಂಬಾತ ತನ್ನ ಶಿಕ್ಷಣ ಜೀವನದಲ್ಲಿ ಯಶಸ್ಸು ಸಿಗದ ಕಾರಣ ತನ್ನ ತಂದೆಯ ವೃತ್ತಿಯನ್ನೇ ಅವಲಂಬಿಸಿ ಕೃಷಿ ಕ್ಷೇತ್ರಕ್ಕೆ ಕಾಲಿಟ್ಟ ಹನುಮಂತ ಗೌಡರು ಗೋಕುಲ್ ಆರ್ಗ್ಯಾನಿಕ್ಸ್ ಸಂಸ್ಥಾಪಕರಾದರು. ಇವರ ಕುಟುಂಬವೇ ಕೃಷಿ ಕುಟುಂಬ ಎಂದು ಹೆಸರುವಾಸಿಯಾಗಿದೆ, ಇಲ್ಲಿ ವಿವಿಧ ರೀತಿಯ ಬೆಳೆಗಳ ಪರಿಚಯಿಸುವಿಕೆ ಮುಂದುವರೆಯುತ್ತಲಿದೆ. ಕಬ್ಬು,ಜೋಳ,ಭತ್ತ ಇತ್ಯಾದಿಗಳನ್ನು ಪರಿಚಯಿಸುವುದರ ಜೊತೆಗೆ ಇತರ ಜನರಿಗೂ ಸಾವಯವ ಕೃಷಿ ಬಗೆಗಿನ ವಿಷಯದ ಜ್ಞಾನವನ್ನು ಭೋಧಿಸುವುದರ ಜೊತೆಗೆ ಅವರಲ್ಲಿ ಆಸಕ್ತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಬೆಳೆಗಳಿಗೆ ಭಾರತದಲ್ಲಿ ಮಾತ್ರವಲ್ಲದೆ ವೀದೇಶಗಳಿಂದಲೂ ಬೇಡಿಕೆಗಳ ಸುರಿಮಳೆಯಾಗುತ್ತಿದೆ. ಪ್ರಸ್ತುತ ಹನುಮಂತ ಗೌಡರು ಮಾರ್ಕೇಟಿಂಗ್ ಮಾಡುತ್ತಾ ತಮ್ಮ ಕೃಷಿ ಜೀವನವನ್ನು ಸಾಗಿಸುತ್ತಿದ್ದಾರೆ.
ಸಾವಯವ ಕೃಷಿಯ ಪ್ರಮುಖ ಪ್ರಯೋಜನವೆಂದರೆ ನೀವು ದೀರ್ಘಕಾಲದವರೆಗೆ ನಿಮ್ಮ ತೋಟದ ಮಣ್ಣಿನ ಫಲವತ್ತತೆಯನ್ನು ಸಂರಕ್ಷಿಸಬಹುದು, ಇದರಿಂದಾಗಿ ರಾಸಾಯನಿಕ ಗೊಬ್ಬರಗಳ ಬಳಕೆ ಇಲ್ಲದೆ ಕೂಡ ಲಾಭದಾಯಕವಾಗಿಸಬಹುದು. ನಿಮ್ಮ ತೋಟಗಳಲ್ಲಿ ಸಾವಯವ ಕೃಷಿಯಿಂದ ಮಣ್ಣಿನ ಫಲವತ್ತತೆಯ ಕಾರಣದಿಂದ ನೀವು ಈ ಹಿಂದೆ ಬಿತ್ತದೆ ಇರುವಂತಹ ಬೆಳೆಗಳನ್ನು ಸಹ ಬಿತ್ತನೆ ಮಾಡಬಹುದು. ಸಾವಯವ ಕೃಷಿಯಿಂದ ಪ್ರಾಣಿಗಳು ಸೇವಿಸುವ ಮೇವು ಸಹ ರಾಸಾಯನಿಕ ರಹಿತವಾಗಿರುವ ಕಾರಣದಿಂದ ಸುಧಾರಿತ ಗುಣಮಟ್ಟದ ಹಾಲು ಮತ್ತು ಉತ್ತಮ ಆರೋಗ್ಯ ಕಾಣಬಹುದು. ಇದು ಪ್ರಾಣಿಗಳ ಮೇಲೆ ಮತ್ತು ಮನುಷ್ಯನ ಆರೋಗ್ಯದ ಮೇಲೆ ದೀರ್ಘಕಾಲದ ಪರಿಣಾಮಗಳನ್ನು ಬೀರುತ್ತದೆ, ಅದನ್ನು ಅನೇಕ ರೋಗಗಳಿಂದ ತಡೆಗಟ್ಟಬಹುದು ಮತ್ತು ಅವರ ಆರೋಗ್ಯವನ್ನು ಗುಣಪಡಿಸಬಹುದು. ಸಾವಯವ ಕೃಷಿಯಿಂದಾಗಿ ಆರಂಭಿಕ ಹಂತದಲ್ಲಿ ಕೆಲವು ಸಮಸ್ಯೆ ಎದುರಿಸಬಹುದು ಆದರೆ ದೀರ್ಘಾವಧಿಯವರೆಗೆ ನಿಮ್ಮ ಬೆಳೆಗಳ ಗುಣಮಟ್ಟ ಉತ್ತಮವಾಗಿರುತ್ತದೆ ಮತ್ತು ನೀವು ಉತ್ತಮ ಲಾಭ ಪಡೆಯಬಹುದು. ಈ ಬೆಳೆಯನ್ನು ಬೆಳೆದು Contact No: 9741663069