ನಾಳೆ ಚಂದ್ರ ಗ್ರಹಣದಂದು ಕೆಲವೊಂದು ಪ್ರಮುಖ ರಾಷ್ಟ್ರಗಳಲ್ಲಿ ಕಂಡುಬರುವಂತಹ ಗುರುತರವಾದಂತಹ ಬದಲಾವಣೆಗಳು ಹಾಗೂ ಪರಿಣಾಮದ ಕುರಿತಂತೆ ಇಂದು ತಿಳಿಯೋಣ ಬನ್ನಿ. ಮೊದಲಿಗೆ ಮೇಷ ರಾಶಿ; ರಾಹುಗ್ರಸ್ತ ಚಂದ್ರಗ್ರಹಣ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮೇಷ ರಾಶಿಯವರಿಗೆ ಭೂ ಸಂಬಂಧಿತ ಸಮಸ್ಯೆಗಳು ತಲೆದೋರಬಹುದು.

ಗೊಂದಲಮಯ ಪರಿಸ್ಥಿತಿಗಳು ನಿರ್ಮಾಣ ಆಗುವ ಕಾರಣದಿಂದಾಗಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವ ವಿಚಾರದಲ್ಲಿ ಕೊಂಚಮಟ್ಟಿಗೆ ಗಲಿಬಿಲಿಯಾಗುತ್ತದೆ. ಕೌಟುಂಬಿಕ ಕಲಹ ಹಾಗೂ ಆಂತರಿಕ ಕುಟುಂಬದ ಸಮಸ್ಯೆಗಳು ಕಂಡು ಬರಬಹುದು. ಗರ್ಭಿಣಿ ಸ್ತ್ರೀಯರಿಗೂ ಕೂಡ ಸಮಸ್ಯೆ ಕಂಡು ಬರುತ್ತದೆ ಹಾಗೂ ಈ ಸಮಯದಲ್ಲಿ ಮಾತಿನ ಮೇಲೆ ಹಿಡಿತ ಇರಬೇಕು.

ವೃಷಭ ರಾಶಿ; ಈ ಗ್ರಹಣ ಸಂದರ್ಭದಲ್ಲಿ ಕೆಲವೊಂದು ಆರೋಗ್ಯ ಸಮಸ್ಯೆಗಳು ಉಲ್ಬಣವಾಗುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ಯಾರಿಗೂ ಕುಟುಂಬದಲ್ಲಿ ಕಾಣಿಸಿಕೊಳ್ಳದಂತಹ ಒಂದು ದೊಡ್ಡ ಮಟ್ಟದ ಆರೋಗ್ಯ ಸಮಸ್ಯೆ ಕಾಡಬಹುದಾದ ಸಾಧ್ಯತೆ ಕೂಡ ಇದೆ. ದಾಂಪತ್ಯ ಜೀವನದಲ್ಲಿ ಕಲಹ ಮಾನಸಿಕ ಸ್ಥಿತಿಯಲ್ಲಿ ಏರುಪೇರು ಮತ್ತು ವ್ಯವಹಾರದಲ್ಲಿ ಬರಬೇಕಾಗಿರುವಂತಹ ಹಣ ಬರದೆ ಇರುವ ಸ್ಥಿತಿಕೂಡ ನಿರ್ಮಾಣ ಆಗಬಹುದು. ಗ್ರಹಣದ ಪ್ರಭಾವದಿಂದಾಗಿ ತಮಗೆ ಸಂಬಂಧವಿಲ್ಲದ ಸಮಸ್ಯೆಗಳಲ್ಲಿ ಕೂಡ ಸಿಲುಕಿಕೊಳ್ಳಬಹುದಾದ ಸಾಧ್ಯತೆ ಇದೆ. ಹೀಗಾಗಿ ಈ ಸಮಯದಲ್ಲಿ ದೈವಸ್ಮರಣೆ ನಿಜಕ್ಕೂ ಕೂಡ ಅತ್ಯಂತ ಅವಶ್ಯಕವಾದದ್ದು.

ಮಿಥುನ ರಾಶಿ; ಈ ಸಮಯದಲ್ಲಿ ಮಿಥುನ ರಾಶಿಯವರಿಗೆ ಸಾಕಷ್ಟು ಸಮಯಗಳಿಂದ ಬರಬೇಕಾಗಿದ್ದ ಹಣ ಬಂದು ಕೈ ಸೇರಲಿದೆ. ನೀವು ಯಾರಿಂದ ಭಾವನಾತ್ಮಕ ಸಂಬಂಧವನ್ನು ನಿರೀಕ್ಷೆ ಮಾಡುತ್ತಿರೋಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿದೆ. ಹೀಗಾಗಿ ಈ ಬಾರಿ ಈ ಚಂದ್ರಗ್ರಹಣದಲ್ಲಿ ಮಿಥುನ ರಾಶಿಯವರಿಗೆ ಹೇಳುವಂತಹ ದೊಡ್ಡ ಮಟ್ಟದ ಸಮಸ್ಯೆಗಳೇನು ಕೂಡ ಗೋಚರವಾಗುವುದಿಲ್ಲ ಕೇವಲ ಲಾಭಗಳಷ್ಟೇ ಕಂಡುಬರುತ್ತದೆ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ.

ಕರ್ಕಾಟಕ ರಾಶಿ; ರಾಹುವಿನ ಪ್ರಭಾವದಿಂದಾಗಿ ಚಂದ್ರ ಗ್ರಹಣದ ಸಂದರ್ಭದಲ್ಲಿ ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಅಪವಾದ ಕೇಳಿ ಬರುವ ಸಾಧ್ಯತೆ ಹೆಚ್ಚಾಗಿದೆ. ಅದರಲ್ಲಿಯೂ ವಿಶೇಷವಾಗಿ ಕಂಪ್ಯೂಟರ್ ಮುಂದೆ ಕುಳಿತುಕೊಂಡು ಕೆಲಸ ಮಾಡುವಂತಹ ಕೆಲಸಗಾರರು ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಈ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಬಹುದು ಸಾಧ್ಯತೆ ಹೆಚ್ಚಾಗಿರುತ್ತದೆ

ಹೀಗಾಗಿ ನೀವು ಇದಕ್ಕೆ ತಯಾರಾಗಿರಿ ಹಾಗೂ ಕೊಂಚಮಟ್ಟಿಗೆ ಜಾಗ್ರತೆಯಾಗಿರಿ. ಮನಸ್ಸು ಚಂಚಲ ಆಗುವ ಕಾರಣದಿಂದಾಗಿ ಹಲವಾರು ಸಮಸ್ಯೆಗಳಿಗೆ ನೀವು ಗುರಿಯಾಗಬೇಕಾಗುತ್ತದೆ. ದುರ್ಗಾದೇವಿಯ ಆರಾಧನೆಯಿಂದ ನೀವು ಈ ಸಮಸ್ಯೆಗಳಿಂದ ಹೊರಬರುವುದಾದ ಸಾಧ್ಯತೆ ಹೆಚ್ಚಾಗಿದೆ.

Leave a Reply

Your email address will not be published. Required fields are marked *