Chanakya Niti: ವ್ಯಕ್ತಿಯ ವ್ಯಕ್ತಿತ್ವವು ಜನರ ಮನಸ್ಸನ್ನು ಬಹು ಬೇಗ ಆಕರ್ಷಣೆಗೆ ಒಳಗಾಗುವಂತೆ ಮಾಡುತ್ತದೆ. ಮನುಷ್ಯನ ರೀತಿ, ಆಲೋಚನೆ, ಗುಣ ಮತ್ತು ನಡುವಳಿಕೆ ಅವನ ವ್ಯಕ್ತಿತ್ವವನ್ನು ರೂಪಿಸುತ್ತವೆ ಚಾಣಕ್ಯರು ತಮ್ಮ ಶಾಸ್ತ್ರದಲ್ಲಿ ಆಕರ್ಷಣ ಗುಣಗಳನ್ನು ಉಲ್ಲೇಖಿಸಿದ್ದಾರೆ ಚಾಣಕ್ಯರ (Chanakya Niti) ಪ್ರಕಾರ ಪುರುಷರಲ್ಲಿರೋ ಕೆಲವು ಗುಣಗಳಿಗೆ ಹೆಣ್ಣು ಮಕ್ಕಳು ತುಂಬಾ ಬೇಗ ಮನಸೋಲುತ್ತಾರೆ. ಅಂತಹ ಗುಣಗಳನ್ನು ಹೊಂದಿರುವ ಪುರುಷರನ್ನು ಹೆಣ್ಣು ಮಕ್ಕಳು ತುಂಬಾ ಇಷ್ಟ ಪಡುತ್ತಾರೆ ಮತ್ತು ಅವರ ಜೊತೆ ಜೀವನ ನೆಡೆಸಲು ಇಚ್ಚಿಸುತ್ತಾರೆ.
ಬಹಳಷ್ಟು ಜನರು ತುಂಬಿರುವ ಗುಂಪಿನಲ್ಲಿ ಕಿಕ್ಕಿರಿದ ಜನಸಂದಣಿಯಲ್ಲಿ ಇದ್ದರೂ ಮಹಿಳೆಯರು ಪುರುಷರ ಯಾವ ಸ್ವಭಾವಗಳನ್ನು ಗಮನಿಸುತ್ತಾರೆ ಎಂದು ಚಾಣಕ್ಯರು ನೀತಿಯಲ್ಲಿ ಹೇಳಿದ್ದಾರೆ. ಯಾವುದೇ ಸಂಬಂಧದಲ್ಲೇ ಆಗಲಿ ಪ್ರಾಮಾಣಿಕತೆ, ಎನ್ನುವುದು ಅತಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ.ಇದರ ಪ್ರಕಾರ ಮಹಿಳೆಯರು ಪುರುಷರ ಪ್ರಾಮಣಿಕತೆಯನ್ನು ಗಮನಿಸುತ್ತಾರೆ.ಅಂದರೆ ಹೆಂಡತಿಗೆ ಮೋಸ ಮಾಡದ ಗಂಡನಿಗೆ ಅಂದರೆ ಗೆಳತಿ ಅಥವಾ ತಮ್ಮ ಸಂಗಾತಿಗೆ ಮೋಸ ಮಾಡಬಾರದು.ಅಂತಹ ಪುರುಷರನ್ನು ಮಹಿಳೆಯರು ದೂರ ಇಡಲು ಬಯಸುವುದಿಲ್ಲ.ಅವನೆ ಅವಳ ಸರ್ವಸ್ವದ ರೀತಿ ತಿಳಿದು ಜೀವನದ ಭಗವಾಗಿ ಇರಿಸಿಕೊಳ್ಳಲು ಬಯಸುತ್ತಾಳೆ.
ಚಾಣಕ್ಯನ ನೀತಿಯ ಪ್ರಕಾರ ಎಚ್ಚರಿಕೆ ಎಂದು ಹೇಳುವ ಪುರುಷರನ್ನು ಮಹಿಳೆಯರು ಇಷ್ಟ ಪಡುತ್ತಾರೆ.ಹಾಗೂ ಮಹಿಳೆಯರನ್ನು ಗೌರವಿಸುವ ಮತ್ತು ಅವರೊಂದಿಗೆ ಸೌಜನ್ಯದಿಂದ ವರ್ತಿಸುವ ಅಥವಾ ಮಾತನಾಡುವ ಪುರುಷರನ್ನು ಮಹಿಳೆಯರು ಇಷ್ಟ ಪಡುತ್ತಾರೆ..ಹಾಗೂ ಇನ್ನೊಂದು ಮುಖ್ಯ ವಿಷಯವೆಂದರೆ ಹೆಣ್ಣನ್ನು ಅನುಮಾನಿಸುವ ಅಥವಾ ಸಂಶಯ ಪಡುವ ಪುರುಷರು ಎಂದರೆ ಅಷ್ಟೆ ದ್ವೇಷಿಸುತ್ತಾರೆ.
ಹೆಣ್ಣು ಮಕ್ಕಳು ತಮ್ಮ ಸಂಗಾತಿಯು ತಮ್ಮ ಮಾತುಗಳನ್ನು ಆಲಿಸುವ ಮತ್ತು ಅರ್ಥ ಮಾಡಿಕೊಳ್ಳುವಂತ ಗುಣಗಳುಳ್ಳ ವ್ಯಕ್ತಿಯನ್ನು ಹೆಚ್ಚು ಇಷ್ಟ ಪಡುತ್ತಾರೆ.ಹೆಣ್ಣೆಂದರೆ ಭಾವಜೀವಿ ಅವಳು. ಸಾಮಾನ್ಯವಾಗಿ ಹೆಣ್ಣುಮಕ್ಕಳು ಹೆಚ್ಚು ಭಾವನಾತ್ಮಕವಾಗಿರುತ್ತಾರೆ ತಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಹಾಗೆ ತಮ್ಮ ನೋವುಗಳಿಗೆ ಸ್ಪಂದಿಸುವ ವ್ಯಕ್ತಿಗಳನ್ನು ಇಷ್ಟ ಪಡುತ್ತಾರೆ ಹಾಗೂ ಬಹು ಬೇಗ ಆಕರ್ಷಿತಾರಾಗುತ್ತಾರೆ.