Chanakya Neeti Kannada ಜೀವನ ಸಂಗಾತಿಯ ಆಯ್ಕೆಯ ಮುನ್ನ ಈ ನಾಲ್ಕು ಗುಣಗಳನ್ನು ಗಮನಿಸಿದರೆ ಮದುವೆಯ ನಂತರ ಪಶ್ಚಾತಾಪದ ಮಾತೇ ಇರುವುದಿಲ್ಲ ಎಂದು ಆಚಾರ ಚಾಣಕ್ಯ (Chanakya) ಅವರು ಹೇಳಿದ್ದಾರೆ. ಇದರಿಂದ ನೀವು ನಿಮಗಾಗಿ ಉತ್ತಮ ಜೀವನ ಸಂಗಾತಿಯನ್ನು ಕಂಡುಕೊಳ್ಳಬಹುದು.
ಜೀವನ ಸಂಗಾತಿಯ ಯಾವ ಗುಣಗಳ ಬಗ್ಗೆ ಆಚಾರ್ಯರು ಹೇಳಿದ್ದಾರೆ ಎಂಬುದನ್ನು ಈ ಕೆಳಗಿನ ಲೇಖನದಲ್ಲಿ ತಿಳಿಯೋಣ
1) ಆಂತರಿಕ ಸೌಂದರ್ಯ:- ನಿಮ್ಮ ಜೀವನದಲ್ಲಿ ಉತ್ತಮ ಜೀವನ ಸಂಗಾತಿಯನ್ನು (Life partner) ನೀವು ಬಯಸಿದರೆ ಅವರ ನೋಟಕ್ಕಿಂತ ಹೆಚ್ಚಾಗಿ ಅವರ ಆಂತರಿಕ ಸೌಂದರ್ಯಕ್ಕೆ ಹೆಚ್ಚು ಗಮನ ಕೊಡಿ ಎಂದು ಚಾಣಕ್ಯ ಹೇಳುತ್ತಾರೆ. ದೈಹಿಕ ಆಕರ್ಷಣೆಯು (Physical attraction) ಸ್ವಲ್ಪ ಸಮಯದ ನಂತರ ನಶಿಸುವಂತಹುದು ಆದರೆ ಆಂತರಿಕ ಸೌಂದರ್ಯವು ನಿಮ್ಮೊಂದಿಗೆ ಜೀವನದ ಉದ್ದಕ್ಕೂ ಇರುತ್ತದೆ. ಅಂತಹ ಜೀವನ ಸಂಗಾತಿ ನಿಮಗೆ ದೊರೆತರೆ ಒಳ್ಳೆಯದು ಎಂದು ಆಚಾರ್ಯರು ಹೇಳಿದ್ದಾರೆ.
2) ಒತ್ತಡದಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ :- ಚಾಣಕ್ಯ (Chanakya ) ಹೇಳುವಂತೆ, ಒಂದು ಕುಟುಂಬಕ್ಕೆ ಧಕ್ಕೆ ತರುವಂತಹ ಯಾವುದೇ ದುಡುಕು ನಿರ್ಧಾರ ತೆಗೆದುಕೊಳ್ಳಬಾರದು. ಎಂತಹ ಜೀವನ ಸಂಗಾತಿ ನಿಮಗೆ ಉತ್ತಮ ಎಂಬುದನ್ನು ಮೊದಲು ನೀವು ಚೆನ್ನಾಗಿ ಅರ್ಥೈಸಿಕೊಳ್ಳಬೇಕು. ಅಗತ್ಯ ಪರಿಸ್ಥಿತಿಯಲ್ಲಿ ನಿಮ್ಮ ಭುಜಕ್ಕೆ ಭುಜ ಕೊಟ್ಟು ಯಾರು ಜೊತೆ ಇರುತ್ತಾರೋ ಅವರನ್ನು ಸ್ವೀಕರಿಸಿ. ಆದ್ದರಿಂದ ಯಾರದೋ ಒತ್ತಡಕ್ಕೆ ಮಣಿದು ಮದುವೆಯಾಗುವ ನಿರ್ಧಾರ ಮಾಡಬೇಡಿ.
3) ಧಾರ್ಮಿಕ ಪ್ರವೃತ್ತಿ :- ಧಾರ್ಮಿಕ ಜನರು ಯಾವುದೇ ತಪ್ಪು ಕೆಲಸ ಮಾಡಲು ಹೆದರುತ್ತಾರೆ. ಆದ್ದರಿಂದ ನಿಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಅವರು ಧಾರ್ಮಿಕ ಮನೋಭಾವ ಉಳ್ಳವರೋ ಅಥವಾ ಅಲ್ಲವೋ ಎಂಬುದನ್ನು ಖಚಿತವಾಗಿ ಪರಿಶೀಲಿಸಿ. ಧಾರ್ಮಿಕ ಸ್ವಭಾವವು ಅವರನ್ನು ಉತ್ತಮ ಜೀವನ ಸಂಗಾತಿ ಎಂದು ಸಾಬೀತು ಪಡಿಸುತ್ತದೆ.
4) ತಾಳ್ಮೆಯ ಗುಣಮಟ್ಟ ಮುಖ್ಯ :- ಜೀವನವು ಎಂದಿಗೂ ಒಂದೇ ಆಗಿರುವುದಿಲ್ಲ ಸರಿಯಾದ ಸಮಯ ಬರಲು ತಾಳ್ಮೆಯಿಂದ ಕಾಯಬೇಕಾದ ಅಗತ್ಯ ಇರುತ್ತದೆ. ಆದ್ದರಿಂದ ನಿಮ್ಮ ಸಂಗಾತಿಯಲ್ಲಿ ತಾಳ್ಮೆಯ ಗುಣಮಟ್ಟವನ್ನು ಖಂಡಿತವಾಗಿ ಪರೀಕ್ಷಿಸಿ. ಕಷ್ಟದ ಸಮಯದಲ್ಲೂ ನಿಮಗೆ ಸರಿಯಾದ ಮಾರ್ಗವನ್ನು ತೋರಿಸುತ್ತಾರೆ. ಅವರ ಸಹಕಾರದಿಂದಾಗಿ ನೀವು ಎಲ್ಲ ಸವಾಲುಗಳನ್ನು ಸುಲಭವಾಗಿ ಪರಿಹರಿಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ.. ಪತ್ನಿ ಇದ್ದರೂ ಪರಸ್ತ್ರೀಯನ್ನು ಗಂಡ ಮೋಹಿಸುವುದು ಯಾಕೆ ಗೊತ್ತಾ? ಚಾಣಿಕ್ಯ ಹೇಳಿದ 5 ಕಾರಣ ಇಲ್ಲಿದೆ