ಭಾರತ ವೈವಿಧ್ಯತೆಯ ತವರೂರು ಹಲವಾರು ವೈವಿಧ್ಯಮಯ ವಿಷಯಗಳನ್ನು ತನ್ನೊಡಲಲ್ಲಿ ತುಂಬಿಸಿಕೊಂಡು ಜಗತ್ತಿನ ಗಮನವನ್ನು ತನ್ನತ್ತ ಸೆಳೆದು ಕೊಳ್ಳುತ್ತಿದೆ. ನಾವಿಂದು ನಮ್ಮ ಕರ್ನಾಟಕದಲ್ಲಿ ನಿರ್ಮಿಸಿರುವ ವಿಶ್ವದ ಅತಿ ಎತ್ತರದ, ಪಂಚ ಲೋಹದಿಂದ ನಿರ್ಮಿಸಿರುವ ತಾಯಿ ಚಾಮುಂಡೇಶ್ವರಿಯ ವಿಗ್ರಹದ ಬಗ್ಗೆ ತಿಳಿಸಿ ಕೊಡುತ್ತೇವೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗೌಡಗೆರೆಯ ಹೆಸರು ಎಲ್ಲರ ಬಾಯಲ್ಲಿ ಕೇಳಿ ಬರುತ್ತಿದೆ ಅದಕ್ಕೆ ಕಾರಣ ಅಲ್ಲಿ ಪಂಚ ಲೋಹದಿಂದ ನಿರ್ಮಿಸಿರುವ ಚಾಮುಂಡೇಶ್ವರಿ ವಿಗ್ರಹ. ಚನ್ನಪಟ್ಟಣ ಅಂದ ಕೂಡಲೇ ಎಲ್ಲರಿಗೂ ನೆನಪಾಗುವುದು ಗೊಂಬೆ ಅದರ ಪಟ್ಟಿಗೆ ಇಗ ಈ ಚಾಮುಂಡೇಶ್ವರಿ ವಿಗ್ರಹವು ಸೇರಿಕೊಂಡಿದೆ. ಪಂಚಲೋಹಗಳಾದ ಚಿನ್ನ ಬೆಳ್ಳಿ ತಾಮ್ರ ಹಿತ್ತಾಳೆ ಕಂಚು ಇವುಗಳನ್ನು ಬಳಸಿಕೊಂಡು ಸರಿಸುಮಾರು ಮೂವತ್ತೈದು ಸಾವಿರ ಕೆಜಿ ಇರುವ ಹದಿನೆಂಟು ಭುಜಗಳು ಇರುವ ಸೌಮ್ಯ ರೂಪದ ಅರವತ್ತು ಅಡಿ ಎತ್ತರವಿರುವ ವಿಗ್ರಹವನ್ನು ಚನ್ನಪಟ್ಟಣ ತಾಲೂಕಿನ ಗೌಡಗೆರೆಯಲ್ಲಿ ನಿರ್ಮಿಸಲಾಗಿದೆ ಈ ವಿಗ್ರಹವು ಪ್ರಪಂಚದಲ್ಲಿ ಪಂಚಲೋಹಗಳನ್ನು ಬಳಸಿಕೊಂಡು ನಿರ್ಮಿಸಿರುವ ಅತಿ ಎತ್ತರವಾದ ವಿಗ್ರಹ ಎಂದು ಗುರುತಿಸಲ್ಪಟ್ಟಿದೆ. ಈ ವಿಗ್ರಹದ ಒಂದು ಬೆರಳು ಸರಿಸುಮಾರು ಹದಿನೈದರಿಂದ ಹದಿನಾರು ಕೆಜಿ ಬರುತ್ತದೆ. ಆ ತಾಯಿ ಚಾಮುಂಡೇಶ್ವರಿಯ ಕೈಯಲ್ಲಿರುವ ಒಂದು ಕಮಂಡಲ ನೂರು ಕೆಜಿ ಭಾರವಿದೆ.

ಚಾಮುಂಡೇಶ್ವರಿಯ ಭಕ್ತಾದಿಗಳು ನೀಡಿರುವ ಅವರ ಮನೆಯಲ್ಲಿ ಇರುವಂತಹ ಹಳೆಯ ಹಿತ್ತಾಳೆ ತಾಮ್ರದ ವಸ್ತುಗಳಿಂದ ಈ ವಿಗ್ರಹವನ್ನು ನಿರ್ಮಿಸಲಾಗಿದೆ ಈ ಈ ವಿಗ್ರಹವನ್ನು ನಿರ್ಮಿಸಿದವರು ಬೆಂಗಳೂರಿನ ಪಠಾಣ್ಎನ್ನುವವರು. ತುಂಬಾ ಅದ್ಭುತವಾಗಿ ಈ ವಿಗ್ರಹವನ್ನು ನಿರ್ಮಿಸಿದ್ದಾರೆ. ಈ ವಿಗ್ರಹವನ್ನು ಮೂರು ವರ್ಷಗಳ ಅವಧಿಯಲ್ಲಿ ನಿರ್ಮಿಸಲಾಗಿದೆ. ಈ ವಿಗ್ರಹದಲ್ಲಿನ ವೈಶಿಷ್ಟ್ಯತೆಯೆಂದರೆ ಮೈಸೂರು ರಾಜ್ಯ ಲಾಂಛನ ಗಂಡಬೇರುಂಡವನ್ನು ತಾಯಿಯ ಪದಕವನ್ನಾಗಿ ಮಾಡಲಾಗಿದೆ. ಈ ವಿಗ್ರಹದ ಹದಿನೆಂಟು ಕೈಗಳಲ್ಲಿ ಹದಿನೆಂಟು ಆಯುಧಗಳಿವೆ ಆ ಆಯುಧಗಳು ಹದಿನೆಂಟು ಶಕ್ತಿ ಪೀಠವನ್ನು ಪ್ರತಿನಿಧಿಸುತ್ತವೆ.

ಶ್ರವಣಬೆಳಗೊಳದ ಗೊಮ್ಮಟೇಶ್ವರನ ವಿಗ್ರಹ ಕ್ಕಿಂತ ಈ ವಿಗ್ರಹ ಎತ್ತರದಲ್ಲಿದೆ. ಪ್ರಪಂಚದಾದ್ಯಂತ ಇದಕ್ಕಿಂತಲೂ ಎತ್ತರದ ವಿಗ್ರಹಗಳಿವೆ ಆದರೆ ಅವುಗಳು ಕಲ್ಲು ಸಿಮೆಂಟಿನಿಂದ ನಿರ್ಮಿತವಾಗಿದೆ ಪಂಚ ಲೋಹದಿಂದ ನಿರ್ಮಿಸಿದ ವಿಗ್ರಹಗಳಲ್ಲಿ ಅತಿ ಎತ್ತರವಾದ ವಿಗ್ರಹ ಇದು ಎಂದು ಹೇಳಬಹುದು ಇದು ನಮ್ಮ ರಾಜ್ಯದ ಹೆಮ್ಮೆಯ ವಿಷಯವಾಗಿದೆ. ಸರಳವಾಗಿ ಭಕ್ತರ ಕೈಯಿಂದಲೇ ಈ ವಿಗ್ರಹದ ಅನಾವರಣವನ್ನು ಮಾಡಲಾಗಿದೆ. ಈ ವಿಗ್ರಹದ ಎದುರಿನಲ್ಲಿ ನಿಂತರೆ ಮೈ ಜುಂಎನ್ನುವ ಅನುಭವವಾಗುತ್ತದೆ ಜೊತೆಗೆ ಮನಸ್ಸು ನಿರಾಳ ಎನಿಸುತ್ತದೆ.

ಈ ವಿಗ್ರಹವನ್ನು ನಿರ್ಮಿಸುವ ಮೊದಲು ಮಣ್ಣಿನಿಂದ ಮೂರ್ತಿಯ ಆಕಾರವನ್ನು ನಿರ್ಮಿಸಿ ಕೊಳ್ಳಲಾಗಿತ್ತು ನಂತರ ಫೈಬರ್ ಬಳಸಿ ತದನಂತರ ಭಕ್ತರು ಕೊಟ್ಟಿರುವ ಲೋಹದ ವಸ್ತುಗಳನ್ನು ಬಳಸಿ ವಿಗ್ರಹವನ್ನು ನಿರ್ಮಿಸಲಾಗಿದೆ. ಮೂರು ಹಂತಗಳಲ್ಲಿ ಈ ತಾಯಿಯ ವಿಗ್ರಹವನ್ನು ಮಾಡಲಾಗಿದೆ. ಆ ತಾಯಿಯ ವಿಗ್ರಹದ ಕೆಳಗೆ ಪುಟ್ಟದಾದ ದೇವಾಲಯವನ್ನು ನಾವು ನೋಡಬಹುದಾಗಿದೆ. ದೇವಾಲಯದ ಧರ್ಮದರ್ಶಿ ಗಳಿಗೆ ಹದಿನಾಲ್ಕುವರ್ಷ ಇರುವಾಗ ಅವರಿಗೆ ಸಿಕ್ಕ ಮೂರ್ತಿಗೆ ಗರ್ಭಗುಡಿಯನ್ನು ಕಟ್ಟಿಸಿ ದೇವಾಲಯವನ್ನು ನಿರ್ಮಿಸಲಾಗಿದೆ.

ಈ ಕ್ಷೇತ್ರದ ಮತ್ತೊಂದು ವಿಶೇಷವೇನೆಂದರೆ ಅಲ್ಲಿರುವ ಬಸವಣ್ಣ. ಬಸವಣ್ಣನನ್ನು ಪವಾಡ ಪುರುಷ ಎಂದು ನಡೆದಾಡುವ ದೇವರು ಎಂದು ಭಕ್ತರು ಕರೆಯುತ್ತಾರೆ. ಕಸಾಯಿಖಾನೆಗೆ ಮಾರಾಟ ಮಾಡಲಾದ ಕರುವನ್ನು ದೇವಸ್ಥಾನದ ಗೌಡರು ಒಬ್ಬರು ತೆಗೆದುಕೊಂಡು ಬಂದು ದೇವಸ್ಥಾನದಲ್ಲಿ ಬಿಡುತ್ತಾರೆ ಅಲ್ಲಿಂದ ಈ ದೇವಸ್ಥಾನದಲ್ಲಿ ನಡೆಯುವ ಪವಾಡಗಳಿಗೆ ಬಸವಣ್ಣ ಕಾರಣ ಎಂದು ಹೇಳಲಾಗುತ್ತದೆ. ಈ ಬಸವಣ್ಣನನ್ನು ಗೃಹಪ್ರವೇಶ ಗಳಿಗೆ ಮದುವೆಗಳಿಗೆ ದೇವಾಲಯದ ಅರ್ಚಕರನ್ನೂ ಆರಿಸುವ ಕಾರ್ಯಗಳಿಗೆ ಕರೆದುಕೊಂಡು ಹೋಗಲಾಗುತ್ತದೆ.

ಹಳೇ ಮೈಸೂರು ಪ್ರಾಂತ್ಯದ ಪದ್ಧತಿಯ ಪ್ರಕಾರ ದೇವಾಲಯದ ಅರ್ಚಕರನ್ನು ಆರಿಸುವಾಗ ಬಸವಣ್ಣನನ್ನು ಕರೆದುಕೊಂಡು ಹೋಗಲಾಗುತ್ತದೆ ಅದು ಯಾರನ್ನು ಗುರುತಿಸುತ್ತದೆಯೊ ಅವರು ದೇವಾಲಯದ ಪೂಜೆಯನ್ನು ಮಾಡಬೇಕು. ಈ ಬಸವಣ್ಣನನ್ನು ಕರ್ನಾಟಕದಲ್ಲಷ್ಟೇ ಅಲ್ಲದೆ ಹೊರರಾಜ್ಯದವರು ಕರೆದುಕೊಂಡು ಹೋಗುತ್ತಾರೆ ಇದನ್ನು ಕರೆದುಕೊಂಡು ಹೋಗುವುದಕ್ಕೆ ಪ್ರತ್ಯೇಕವಾದ ವಾಹನ ವ್ಯವಸ್ಥೆ ಇದೆ ಆ ವಾಹನವನ್ನು ಬಸವಪ್ಪನವರ ರಥ ಎಂದು ಕರೆಯಲಾಗುತ್ತದೆ. ಪ್ರತಿ ಭಾನುವಾರ ಬೆಳಿಗ್ಗೆ ನಾಲ್ಕು ಗಂಟೆಗೆ ಬ್ರಾಹ್ಮಿಣಿ ಮೂರ್ತ ದಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಬಸವಣ್ಣನ ಪಾದ ಪೂಜೆಯನ್ನು ಮಾಡಲಾಗುತ್ತದೆ.

ಈ ದೇವಾಲಯದಲ್ಲಿ ಪ್ರತಿದಿನ ಅನ್ನದಾಸೋಹ ನಡೆಯುತ್ತದೆ ದಿನದ ಇಪ್ಪತ್ನಾಲ್ಕು ಗಂಟೆಯಲ್ಲಿ ನೀವು ಯಾವುದೇ ಸಮಯದಲ್ಲಿಯೂ ಹೋದರೂ ಸಹ ಅಲ್ಲಿ ಅನ್ನಪ್ರಸಾದ ಸಿಗುತ್ತದೆ. ಈ ಕ್ಷೇತ್ರದ ಇನ್ನೊಂದು ವಿಶೇಷತೆ ಏನೆಂದರೆ ಮೈಸೂರಿನಲ್ಲಿರುವ ಅಂಬಾರಿಯನ್ನು ಮತ್ತೆಲ್ಲೂ ನೋಡಲು ಸಾಧ್ಯವಿಲ್ಲ ಆದರೆ ಅದೇ ಮಾದರಿಯ ಪಂಚಲೋಹದಿಂದ ತಯಾರಿಸಿದ ಆರು ನೂರು ಕೆಜಿ ಇರುವ ಅಂಬಾರಿ ಈ ಕ್ಷೇತ್ರದಲ್ಲಿ ಕಾಣಸಿಗುತ್ತದೆ. ಏಪ್ರಿಲ್ ತಿಂಗಳ ವಸಂತ ನವರಾತ್ರಿಯಲ್ಲಿ ಇಲ್ಲಿ ಮೆರವಣಿಗೆ ನಡೆಸಲಾಗುತ್ತದೆ.

ಈ ದೇವಾಲಯವನ್ನು ಕಲ್ಲಿನಿಂದ ನಿರ್ಮಿಸಲಾಗಿದೆ ದೇವಾಲಯದ ಸುತ್ತಲೂ ನವ ಭೈರವರಿದ್ದಾರೆ. ದೇವರ ಅಭಿಷೇಕ ಮಾಡಿದ ನೀರು ಬೀಳುವಲ್ಲಿ ನಾಲ್ಕರಿಂದ ಐದು ಪ್ರಾಣಿ ಇರುವ ಒಂದೇ ವಿಗ್ರಹವನ್ನು ನೋಡಬಹುದು ಅಂದರೆ ಮೊಸಳೆಯ ಬಾಯಿ ಹಸುವಿನ ಕಿವಿ ನವಿಲುಗರಿ ಮತ್ತು ಸಿಂಹದ ಕಾಲನ್ನು ಹೊಂದಿರುವ ವಿಗ್ರಹವನ್ನು ಇಲ್ಲಿ ನೋಡಬಹುದು. ಗರ್ಭಗುಡಿಯ ಮೇಲೆ ಶ್ರೀಚಕ್ರವನ್ನು ಪ್ರತಿಷ್ಠೆ ಮಾಡಲಾಗಿದೆ. ಇಲ್ಲಿ ಶಿವನ ವಿಗ್ರಹ ತ್ರಿಪುರಸುಂದರಿ ಜ್ವಾಲಾಮುಖಿಯ ವಿಗ್ರಹ ಗಣಪತಿ ವಿಗ್ರಹವನ್ನು ನೋಡಬಹುದಾಗಿದೆ.

ಈ ಕ್ಷೇತ್ರ ಇರುವಂತಹದ್ದು ಮೂರು ಜಿಲ್ಲೆಗಳ ಮಧ್ಯದಲ್ಲಿ ರಾಮನಗರ ಜಿಲ್ಲೆ ಮದ್ದೂರು ಜಿಲ್ಲೆ ಮತ್ತು ತುಮಕೂರು ಜಿಲ್ಲೆಯ ಮಧ್ಯದಲ್ಲಿ ಈ ದೇವಾಲಯವಿದೆ. ತುಂಬಾ ಅದ್ಭುತವಾದಂತಹ ವಿಗ್ರಹವನ್ನು ನಾವಿಲ್ಲಿ ಕಾಣಬಹುದಾಗಿದೆ ಇಲ್ಲಿ ಇನ್ನೂ ಕೆಲಸ ಚಾಲ್ತಿಯಲ್ಲಿದೆ. ನೀವು ಕೂಡ ಈ ಕ್ಷೇತ್ರಕ್ಕೆ ಭೇಟಿ ನೀಡಿ ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಂಡು ತಾಯಿಯ ವಿಗ್ರಹವನ್ನು ಕಣ್ತುಂಬಿಕೊಳ್ಳಿ.

By

Leave a Reply

Your email address will not be published. Required fields are marked *