ನಿರುದ್ಯೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ ಇದು ದೇಶದ ಬೆಳವಣಿಗೆಯಲ್ಲಿ ಒಂದು ಸಮಸ್ಯೆಯಾಗಿ ಕಾಣಿಸಿಕೊಳ್ಳುತ್ತಿದೆ. ಬಹಳಷ್ಟು ಜನರಿಗೆ ಸ್ವಂತ ಉದ್ಯೋಗ ಮಾಡುವ ಆಸೆ ಇರುತ್ತದೆ ಆದರೆ ಬಂಡವಾಳದ ಕೊರತೆ, ಕೌಶಲ್ಯದ ಕೊರತೆಯಿಂದ ಅದು ಅಸಾಧ್ಯ. ಹೀಗಾಗಿ ಕಡಿಮೆ ಬಂಡವಾಳವನ್ನು ಉಪಯೋಗಿಸಿಕೊಂಡು ಕೌಶಲ್ಯ ಇಲ್ಲದಿದ್ದರೂ ಉದ್ಯೋಗ ಮಾಡುವ ಕೆಲವು ಉದ್ಯೋಗಗಳಲ್ಲಿ ಸಿಮೆಂಟ್ ಇಟ್ಟಿಗೆ ಉದ್ಯೋಗವು ಒಂದಾಗಿದೆ. ಈ ಉದ್ಯೋಗವನ್ನು ಹೇಗೆ ಪ್ರಾರಂಭಿಸಬೇಕು ಅದರಲ್ಲಾಗುವ ಲಾಭದ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಸಿಮೆಂಟ್ ಬ್ರಿಕ್ಸ್ ಮೇಕಿಂಗ್ ಬಿಸಿನೆಸ್ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಮನೆ, ಬಿಲ್ಡಿಂಗ್ ಗಳನ್ನು ಹೆಚ್ಚು ಕಟ್ಟುತ್ತಿದ್ದಾರೆ. ಮನೆ ಕಟ್ಟಲು ಸಿಮೆಂಟ್ ಬೇಕೆ ಬೇಕು ಸಿಮೆಂಟ್ ಹಾಗೂ ಇಟ್ಟಿಗೆಯನ್ನು ಹೆಚ್ಚು ಬಳಸುತ್ತಿದ್ದಾರೆ ಆದ್ದರಿಂದ ಸಿಮೆಂಟ್ ಇಟ್ಟಿಗೆ ಮೇಕಿಂಗ್ ಬಿಸಿನೆಸ್ ಮಾಡುವುದರಿಂದ ಲಾಭಗಳಿಸಬಹುದು. ಸಿಮೆಂಟ್ ಇಟ್ಟಿಗೆ ಬಿಸಿನೆಸ್ ಮಾಡಬೇಕೆಂದರೆ ಸಿಮೆಂಟ್ ಇಟ್ಟಿಗೆ ತಯಾರಿಸಲು ಒಂದು ಮಷೀನ್ ಬೇಕಾಗುತ್ತದೆ. ಈ ಮಷೀನ್ ನ ಬೆಲೆ ಒಂದುವರೆ ಲಕ್ಷದಿಂದ ಪ್ರಾರಂಭವಾಗುತ್ತದೆ. ಒಂದು ಲಕ್ಷಕ್ಕೆ ಮ್ಯಾನ್ಯುವೆಲ್ ಮಷೀನ್ ಸಿಗುತ್ತದೆ. ಬಂಡವಾಳ ಜಾಸ್ತಿ ಇದ್ದರೆ 15ರಿಂದ 20 ಲಕ್ಷದ ಆಟೋಮೆಟಿಕ್ ಮಷೀನ್ ಖರೀದಿಸಿದರೆ ಬಹಳ ಒಳ್ಳೆಯದು. ಸಿಮೆಂಟ್ ಇಟ್ಟಿಗೆ ಮಾಡಲು ಸಿಮೆಂಟ್, ಜಲ್ಲಿ ಕಲ್ಲು, ಮರಳು, ನೀರು ಬೇಕಾಗುತ್ತದೆ. ಮಷೀನ್ ಸಪ್ಲೈ ಮಾಡುವವರು ಮಷಿನ್ ಹೇಗೆ ಆಪರೇಟ್ ಮಾಡುವುದು ಮತ್ತು ಅದಕ್ಕೆ ಬೇಕಾದ ರಾಮಟೀರಿಯಲ್ಸ್ ಬಗ್ಗೆ ಹೇಳುತ್ತಾರೆ.
ಕನ್ಸಟ್ರಕ್ಷನ್ ವರ್ಕ್ ಮಾಡುವವರು, ಸಿಮೆಂಟ್ ಶಾಪ್, ಟೈಲ್ಸ್ ಎಂಡ್ ಗ್ರಾನೈಟ್ ಶಾಪ್ ಇವುಗಳ ಜೊತೆ ಟೈಅಪ್ ಆಗಿ ಒಳ್ಳೆಯ ಬೆಲೆಗೆ ಮಾರಾಟ ಮಾಡಬಹುದು ಇದರಿಂದ ಲಾಭ ಪಡೆಯಬಹುದು. ಕನ್ಸ್ಟ್ರಕ್ಷನ್ ವರ್ಕ್ ಮಾಡುವವರ ಹಾಗೂ ಗಾರೆ ಕೆಲಸ ಮಾಡುವವರ ಜೊತೆ ಕಾಂಟಾಕ್ಟ್ ಇಟ್ಟುಕೊಂಡರೆ ಅಥವಾ ಅವರಿಗೂ ಕಮಿಷನ್ ಕೊಡುವುದಾದರೆ ಅವರು ಎಲ್ಲಿ ಕೆಲಸ ಮಾಡುವರೋ ಅಲ್ಲಿ ನಿಮ್ಮ ಇಟ್ಟಿಗೆಗಳನ್ನು ತೆಗೆದುಕೊಳ್ಳುತ್ತಾರೆ. ಪ್ರಾರಂಭದಲ್ಲಿ ಹೆಚ್ಚು ಪ್ರಾಫಿಟ್ ಯೋಚನೆ ಮಾಡಬಾರದು ಒಂದು ಸಿಮೆಂಟ್ ಇಟ್ಟಿಗೆಯನ್ನು 3 ರೂಪಾಯಿಗೆ ಮಾರಾಟ ಮಾಡಬೇಕು. ಪ್ರತಿದಿನ 10,000 ಇಟ್ಟಿಗೆಗಳನ್ನು ಮಾರಾಟ ಮಾಡಿದರೆ ಪ್ರತಿದಿನ 30,000 ರೂಪಾಯಿ ಲಾಭ ಸಿಗುತ್ತದೆ. ಹೀಗೆ ಮಾಡಿದರೆ ತಿಂಗಳಿಗೆ 9 ಲಕ್ಷ ರೂಪಾಯಿ ಹಣ ಗಳಿಸಬಹುದು. ಸ್ವಲ್ಪ ಹಣವನ್ನು ಜಾಹೀರಾತುಗಳಿಗೆ ಖರ್ಚು ಮಾಡಬೇಕು ಜಾಹೀರಾತು ಮಾಡುವುದರಿಂದ ಬಹುತೇಕ ಜನರಿಗೆ ತಿಳಿಯುತ್ತದೆ. ನೀವು ಮಾರ್ಕೆಟಿಂಗ್ ಹೇಗೆ ಮಾಡುತ್ತೀರಿ ಎನ್ನುವುದರ ಮೇಲೆ ಲಾಭ ಗಳಿಕೆ ಆಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಉದ್ಯೋಗ ಮಾಡುವಲ್ಲಿ ಯಶಸ್ವಿಯಾಗಿ.