Caste and Income Certificate: ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ಮನೆಯಲ್ಲಿಯೇ ಕುಳಿತು (Mobile) ಮೊಬೈಲ್ ಹಾಗೂ ಕಂಪ್ಯೂಟರ್ (Computer) ಮೂಲಕವೇ ಮಾಡಿಸಬಹುದಾಗಿದೆ ಹಾಗೆಯೇ ಈ ಹಿಂದಿನ ಪದ್ಧತಿಯ ಹಾಗೆಯೇ ನಾಡ ಕಚೇರಿಗೆ (Naada kacheri)ಹೋಗಿ ಮಾಡಿಸಬೇಕು ಎನ್ನುವ ಪದ್ಧತಿ ಇಲ್ಲ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ವು ಪ್ರತಿಯೊಬ್ಬರಿಗೂ ಸಹ ಬೇಕಾಗುತ್ತದೆ
ಮಕ್ಕಳ ವಿದ್ಯಾಭ್ಯಾಸದಿಂದ ಹಿಡಿದು ಸರಕಾರದ ಸೌಕರ್ಯವನ್ನು ಪಡೆಯಲು ಹಾಗೂ ಇನ್ನತರ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಬೇಕಾಗುತ್ತದೆ ಹಾಗೆಯೇ ಜಾತಿ ಹಾಗೂ ಆದಾಯ ಪತ್ರವನ್ನು ಮಾಡಿಸಲು ಆಧಾರ್ ಕಾರ್ಡ್ ರೇಷನ್ ಕಾರ್ಡ್ ಹಾಗೂ ಹಳೆಯ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಹಾಗೂ ಶಾಲೆಯ ವರ್ಗಾವಣೆಯ ಪ್ರಮಾಣ ಪತ್ರ ಬೇಕಾಗುತ್ತದೆ ಇವೆಲ್ಲ ದಾಖಲೆಗಳು ಸರಿಯಾಗಿ ಇದ್ದರೆ ಆನ್ಲೈನ್ ಅಲ್ಲಿ ಅರ್ಜಿ ಹಾಕಬಹುದು.
ಮೊದಲಿನ ಹಾಗೆ ಜಾತಿ ಆದಾಯ ಪ್ರಮಾಣ ಪತ್ರ ಪಡೆಯಲು ತಿಂಗಳು ಗಟ್ಟಲೆ ಕಾಯಬೇಕಿತ್ತು ಆದರೆ ಈಗ ಬಹು ಬೇಗನೆ ಪಡೆದುಕೊಳ್ಳಬಹುದು ಜಾತಿ ಆದಾಯ ಪ್ರಮಾಣ ಪತ್ರವನ್ನು ಪಡೆಯಲು ಇಪ್ಪತ್ತೈದು ರೂಪಾಯಿಯನ್ನು ಪೆ ಮಾಡಬೇಕು ನಾವು ಈ ಲೇಖನದ ಮೂಲಕ ಹೊಸದಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಮೊಬೈಲ್ ಅಥವಾ ಕಂಪ್ಯೂಟರ್ ಅಲ್ಲಿ ಗೂಗಲ್ ಕ್ರೋಮ್ ಗೆ ಹೋಗಬೇಕು ಅದರಲ್ಲಿ ಸರ್ಚ್ ಒಳಗಡೆ ನಾಡ ಕಚೇರಿ ಡಾಟ್ ಕರ್ನಾಟಕ ಡಾಟ್ ಗವರ್ನಮೆಂಟ್ ಡಾಟ್ ಇನ್ ಎಂದು ಟೈಪ್ ಮಾಡಬೇಕು ನಂತರ ಎಂಟರ್ (enter) ಕೊಡಬೇಕು ಹೊಸ ವಿಂಡೋಸ್ ಓಪನ್ ಆಗುತ್ತದೆ ಅದರಲ್ಲಿ ಫೋನ್ ನಂಬರ್ ಅನ್ನು ಹಾಕಬೇಕು ನಂತರ ಫೋನ್ ನಂಬರ್ ಗೆ ಒಟಿಪಿ ಬರುತ್ತದೆ ಆ OTPಯನ್ನು ಹಾಕಿ ಲಾಗಿನ್ ಮಾಡಿಕೊಳ್ಳಬೇಕು ನಂತರ ನೋ ಥಾಂಕ್ಸ್ ಮೇಲೆ ಕ್ಲಿಕ್ ಮಾಡಬೇಕು ಅದರಲ್ಲಿ new request ಅಲ್ಲಿ ಜಾತಿ ಪ್ರಮಾಣ ಪತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು
ಆಧಾರ್ ಕಾರ್ಡ್ ಮೇಲೆ ಸಹ ಅರ್ಜಿ ಹಾಕಬಹುದು ರೇಷನ್ ಕಾರ್ಡ್ ಮೇಲೆ ಸಹ ಸೆಲೆಕ್ಟ್ ಮಾಡಿಕೊಳ್ಳಬಹುದು ಅದರಲ್ಲಿ ಆಧಾರ್ ಕಾರ್ಡ್ ಮೇಲೆ ಕ್ಲಿಕ್ ಮಾಡಿದಾಗ ಹೊಸ ವಿಂಡೋದಲ್ಲಿ ಜಿಲ್ಲೆಯನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು ಹಾಗೆಯೇ ತಾಲೂಕನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು ಸಿಟಿ ಹಾಗೂ rural ಎಂದು ಇರುತ್ತದೆ ಅದರಲ್ಲಿ ಯಾವುದು ಎಂದು ಸೆಲೆಕ್ಟ್ ಮಾಡಿಕೊಂಡು ವಾರ್ಡ್ ಸಹ ಬರುತ್ತದೆ ಅದರನ್ನು ಸಹ ಸೆಲೆಕ್ಟ್ ಮಾಡಿಕೊಳ್ಳಬೇಕು ಹಾಗೆಯೇ ಜಾತಿ ಪ್ರಮಾಣ ಪತ್ರ ಇಂಗ್ಲಿಷ್ ಅಲ್ಲಿ ಬೇಕೋ ಹಾಗೆಯೇ ಕನ್ನಡದಲ್ಲಿ ಬೇಕೋ ಎಂದು ಸೆಲೆಕ್ಟ್ ಮಾಡಿಕೊಳ್ಳಬೇಕು .
ಯಾರ ಹೆಸರಿಗೆ ಜಾತಿ ಪ್ರಮಾಣ ಪತ್ರ ಬೇಕು ಅವರ ಹೆಸರನ್ನು ಟೈಪ್ ಮಾಡಬೇಕು ಆಧಾರ್ ಕಾರ್ಡ್ ಅಲ್ಲಿ ಇರುವ ಹಾಗೆ ಹೆಸರನ್ನು ಟೈಪ್ ಮಾಡಬೇಕು ನಂತರ ಕೆಳಗೆ ಗೇಟ್ ಪ್ರಿಂಟ್ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ಹೊಸ ವಿಂಡೋದಲ್ಲಿ ಒಪ್ಪಿಗೆ ಪತ್ರ ಬರುತ್ತದೆ ಅದನ್ನು ಸೇವ್ ಸಹ ಮಾಡಬಹುದು ಹಾಗೆಯೇ ಪ್ರಿಂಟ್ ಸಹ ಮಾಡಿ ಇಟ್ಟುಕೊಳ್ಳಬಹುದಾಗಿದೆ ಡೆಸ್ಟಾಪ್ ಅಲ್ಲಿ ಸೆಲೆಕ್ಟ್ ಮಾಡಿಕೊಂಡು ಸೇವ್ ಮಾಡಿಕೊಳ್ಳಬಹುದು
ನಂತರ ಅರ್ಜಿ ಸಲ್ಲಿಸುತ್ತಿರುವ ಆದಾಯ ಎಷ್ಟು ಇದೆ ಎಂಬುದನ್ನು ನೋಡಬೇಕು .ಒಂದು ವೇಳೆ ಅರ್ಜಿ ಸಲ್ಲಿಸುವರ ಹೆಸರಿನಲ್ಲಿ ಯಾವುದೇ ರೀತಿಯ ಆದಾಯ ಪ್ರಮಾಣ ಪತ್ರ ಇಲ್ಲ ಎಂದರೆ ನೋಟಿಫಿಕೇಶನ್ ಬರುತ್ತದೆ ಇಲ್ಲ ಎಂದರೆ ಅದರಲ್ಲಿ ಓಕೆ ಮೇಲೆ ಕ್ಲಿಕ್ ಮಾಡಬೇಕು ನಂತರ ಹೊಸ ಫಾರ್ಮೇಟ್ ಓಪನ್ ಆಗುತ್ತದೆ ಅದರಲ್ಲಿ ಸರಿಯಾದ ಮಾಹಿತಿಯನ್ನು ತುಂಬಬೇಕು ಹೆಸರು ಮತ್ತು ತಂದೆಯ ಹೆಸರು ತಾಯಿಯ ಹೆಸರನ್ನು ಟೈಪ್ ಮಾಡಬೇಕು
ಆಧಾರ ಕಾರ್ಡ್ ಅಲ್ಲಿ ಇರುವ ಹಾಗೆ ಟೈಪ್ ಮಾಡಬೇಕು ಯಾವುದಕ್ಕೆ ಬೇಕು ಎನ್ನುವುದನ್ನು ಕೇಳುತ್ತದೆ ಅದನ್ನು ಟೈಪ್ ಮಾಡಬೇಕು ಹಾಗೆಯೇ ಜಾತಿಯನ್ನು ಸಹ ಸೆಲೆಕ್ಟ್ ಮಾಡಿಕೊಳ್ಳಬೇಕು ಹಾಗೆಯೇ ಜನನ ದಿನಾಂಕ ಸಹ ಟೈಪ್ ಮಾಡಬೇಕು ಹಾಗೆಯೇ ಒಟ್ಟಾರೆ ಆದಾಯವನ್ನು ಕೇಳುತ್ತದೆ ಅದನ್ನು ಟೈಪ್ ಮಾಡಬೇಕು
ಅಪ್ಲೋಡ್ required scan documents ಅಲ್ಲಿ ಅಪ್ಲೋಡ್ ಮಾಡಬಹುದಾಗಿದೆ ಹಾಗೆಯೇ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಒಟರ್ ಅನ್ನು ಅಪ್ಲೋಡ್ ಮಾಡಬೇಕು ಡಾಕ್ಯುಮೆಂಟ್ ಪಿಡಿಎಫ್ ಒಳಗೆ ಸೇವ್ ಮಾಡಿಕೊಂಡು ಸ್ಕ್ಯಾನ್ ಮಾಡಬೇಕು ಅಪ್ಲೋಡ್ ಮಾಡಬೇಕು ಅಪ್ಲೋಡ್ ಆದರೆ ಸಕ್ಸೆಸ್ ಫುಲ್ ಎಂದು ಬರುತ್ತದೆ ಶಾಲೆಯ ವರ್ಗಾವಣೆ ಪತ್ರವನ್ನು ಸಹ ಅಪ್ಲೋಡ್ ಮಾಡಬಹುದು ಎರಡರಿಂದ ಮೂರು ಪ್ರಮಾಣ ಪತ್ರವನ್ನು ಅಪ್ಲೋಡ್ ಮಾಡಬೇಕು ಅಪ್ಲೋಡ್ ಆದ ನಂತರ ಸೇವ್ ಮಾಡಿಕೊಳ್ಳಬೇಕು .
ಅಪ್ಲೋಡ್ ಮಾಡಿರುವುದು ಎರಡು ಎಂಬಿ ಒಳಗೆ ಇರಬೇಕು ನಂತರ ಫೈಲ್ ಅಪ್ಲೋಡ್ ಅಂತ ಬರುತ್ತದೆ ಹೀಗೆ ಬಂದರೆ ಮಾತ್ರ ಅಪ್ಲೋಡ್ ಆಗಿದೆ ಎಂದು ಅರ್ಥ ನಂತರ ಕೆಳಗೆ ಕಾಣಿಸುವ ಕ್ಯಾಪ್ಚರ್ ಕೋಡ್ ಅನ್ನು ಟೈಪ್ ಮಾಡಬೇಕು ನಂತರ ಸೇವ್ ಮಾಡಬೇಕು ನಂತರ ಹೊಸ ಪೇಜ್ ಅಲ್ಲಿ ಐಡಿ ನಂಬರ್ ಅನ್ನು ಕಾಪಿ ಮಾಡಿಕೊಳ್ಳಬೇಕು ಹಾಗೆಯೇ ಸೇವ್ ಮಾಡಿಕೊಳ್ಳಬೇಕು ನಂತರ ಪ್ರೋಸಿಡ್ ಟು ಈ ಪೇಮೆಂಟ್ ಮೇಲೆ ಕ್ಲಿಕ್ ಮಾಡಬೇಕು ಈ ಸೈನ್ ಎಂದು ಬರುತ್ತದೆ
ಅಲ್ಲಿ ಮೊಬೈಲ್ ನಂಬರ್ ಆಧಾರ್ ಕಾರ್ಡ್ ಅಲ್ಲಿ ಇರಬೇಕು ಹಾಗೆಯೇ ನಂತರ ಆಧಾರ ಕಾರ್ಡ್ ನಂಬರ್ ಹಾಕಿದಾಗ ಗೇಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು ನಂತರ ಮೊಬೈಲ್ ನಂಬರ್ ಗೆ ಒಟಿಪಿ ಬರುತ್ತದೆ ನಂತರ ಓಟಿಪಿಯನ್ನು ಹಾಕಬೇಕು ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು ನಂತರ ಡೌನ್ಲೋಡ್ ಆಪ್ಷನ್ ಇರುತ್ತದೆ .ಡೌನ್ಲೋಡ್ ಮಾಡಿ ಇಟ್ಟುಕೊಳ್ಳಬಹುದು ಆನ್ಲೈನ್ ಅರ್ಜಿ ಸಲ್ಲಿಸುವಾಗ ಇಪ್ಪತೈದು ರೂಪಾಯಿ ಪೇ ಮಾಡಬೇಕು
SBI ಅಲ್ಲಿ ಸಹ ಪೆ ಮಾಡಬಹುದು ನಂತರ ಒಂದು ಓಟಿಪಿ ಬರುತ್ತದೆ ಅದನ್ನು ಟೈಪ್ ಮಾಡಬೇಕು ನಂತರ ಪೆ ಮೇಲೆ ಎಂಟರ್ ಹೊಡೆದ ನಂತರ ಸಕ್ಸೆಸ್ ಫುಲ್ ಆಗಿ ಇರುತ್ತದೆ ನಂತರ ಪ್ರಿಂಟ್ ಸಹ ಪಡೆದುಕೊಳ್ಳಬಹುದು ಹೀಗೆ ಮನೆಯಲ್ಲಿಯೇ ಕುಳಿತು ಜಾತಿ ಹಾಗೂ ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು.