ನಾಡ ಹಬ್ಬ ದಸರಾಕ್ಕೆ ಸಜ್ಜಾದ ಕ್ಯಾಪ್ಟನ್ ಅಭಿಮನ್ಯು ಗಜಪಡೆ

0 0

ಇನ್ನೇನು ಕೆಲವೇ ದಿನಗಳಲ್ಲಿ ನಾಡಹಬ್ಬ ದಸರಾ ಆರಂಭವಾಗಲಿದೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಮೈಸೂರು ರಾಜವಂಶಸ್ಥರು ನಾಡಹಬ್ಬವಾದ ದಸರಾವನ್ನು ಆಚರಿಸಲು ಆರಂಭಿಸಿದರು. ಅಂದಿನಿಂದ ಇಂದಿನವರೆಗೂ ಯಾವುದೇ ಅಡಚಣೆ ಉಂಟಾಗದಂತೆ ದಸರಾ ಹಬ್ಬವನ್ನು ಪ್ರತಿವರ್ಷವೂ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷದ ಹಾಗೆ ಹಳೆಯ ಸಂಪ್ರದಾಯವನ್ನು ಮರೆಯದೆ ಮೈಸೂರು ರಾಜವಂಶಸ್ಥರು ದಸರಾ ಹಬ್ಬವನ್ನು ನೆರವೇರಿಸಿದ್ದಾರೆ. ದಸರಾ ಹಬ್ಬದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಚಟುವಟಿಕೆಗಳು ಎಲ್ಲವೂ ಇರುತ್ತವೆ ಆದರೆ ಈ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಖ್ಯವಾದ ಅಥವಾ ಪ್ರಮುಖ ಆಕರ್ಷಣೆ ಎಂದರೆ ಕೊನೆಯಲ್ಲಿ ವಿಜಯದಶಮಿಯಂದು ನಡೆಯುವ ಅಂಬಾರಿ ಮೆರವಣಿಗೆ. ತಾಯಿ ಚಾಮುಂಡೇಶ್ವರಿಯನ್ನು ಹೊತ್ತುಕೊಂಡಂತಹ ಗಜಪಡೆಗಳನ್ನು ನೋಡುವುದೇ ಒಂದು ಸುಂದರ ಅನುಭವ. ಆ ಸಂದರ್ಭದಲ್ಲಿ ಅವುಗಳ ಗತ್ತು-ಗಾಂಭೀರ್ಯ ಅದ್ಭುತ.

ವಿಶ್ವವಿಖ್ಯಾತವಾದ ನಾಡಹಬ್ಬ ಮೈಸೂರು ದಸರಾಗೆ ಹೊಸದಾದ ರಂಗು ತುಂಬಿ ಮೆರಗು ಬಂದಂತಿದೆ. ಇದಕ್ಕೆ ಮುಖ್ಯವಾದ ಕಾರಣವೆಂದರೆ ವಿಜಯದಶಮಿಯಂದು ನಡೆಯುವಂತಹ ಅಂಬಾರಿ ಮೆರವಣಿಗೆ ಇದರ ಕ್ಯಾಪ್ಟನ್ ಅಥವಾ ನಾಯಕತ್ವವನ್ನು ಹೊಂದಿರುವ ಅಭಿಮನ್ಯು ನೇತೃತ್ವದ ಗಜಪಡೆಗಳ ತಂಡ ಮೈಸೂರಿನತ್ತ ಬಂದಿದೆ. ಗುರುವಾರ ಬೆಳಗ್ಗೆ ವೀರನಹೊಸಳ್ಳಿ ಯಲ್ಲಿ ಶಾಸ್ತ್ರೋಕ್ತವಾಗಿ ಗಜಪಡೆಗಳಿಗೆ ಪೂಜೆಯನ್ನು ನೆರವೇರಿಸಿ ಗಜಪಡೆಗಳನ್ನು ಕರೆತರುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು.

ಈ ಗಜಪಡೆಗಳು ಮೈಸೂರಿನ ಅರಣ್ಯ ಭವನಕ್ಕೆ ಬಂದು ಇಳಿಯಲಿದ್ದು ಗಜಪಡೆಯ ನಾಯಕ ಅಭಿಮನ್ಯು ಹಾಗೂ ಅವರ ಗುಂಪನ್ನು ಸ್ವಾಗತಿಸಲು ಅರಮನೆ ನಗರಿ ಮೈಸೂರು ಸಿದ್ಧವಾಗಿದೆ. ಗಜಪಡೆಗಳ ಸ್ವಾಗತಕ್ಕೆ ಅರಣ್ಯ ಭವನದಲ್ಲಿ ಸಕಲ ಸಿದ್ಧತೆಗಳನ್ನು ಮಾಡಲಾಗಿದ್ದು ಗಜಪಡೆಗಳು ಉಳಿದುಕೊಳ್ಳುವುದರ ಸಲುವಾಗಿ ಅರಣ್ಯ ಭವನದಲ್ಲಿ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ವೀರಣ್ಣ ಹೊಸಳ್ಳಿಯಲ್ಲಿ ಗಜಪಡೆಗಳಿಗೆ ಬೆಳಗ್ಗೆ 10 ರಿಂದ 11 ಗಂಟೆ ಶುಭಲಗ್ನದಲ್ಲಿ ಪೂಜೆಯನ್ನು ನೆರವೇರಿಸಲಾಗಿತ್ತು. ಈ ಪೂಜೆ ಕಾರ್ಯಕ್ರಮದಲ್ಲಿ ಬೇರೆ ಯಾವುದೇ ವ್ಯಕ್ತಿಗಳಿಗೆ ಹಾಗೂ ರಾಜವಂಶಸ್ಥರಿಗೆ ಬರಲು ಅವಕಾಶವನ್ನು ನೀಡದೆ ಕೇವಲ ಅಧಿಕಾರಿಗಳು ಮಾತ್ರ ಭಾಗವಹಿಸಿ ಪೂಜಾಕಾರ್ಯವನ್ನು ನೆರವೇರಿಸಿದರು.

Leave A Reply

Your email address will not be published.