Capricorn horoscope October 2023: 12 ರಾಶಿಗಳಲ್ಲಿ ಮಕರ ರಾಶಿಯು ಒಂದು ಪ್ರಮುಖ ರಾಶಿಯಾಗಿದೆ ಆಯಾ ರಾಶಿಗಳಲ್ಲಿ ಜನಿಸಿದವರು ಒಂದೊಂದು ನಕ್ಷತ್ರದಲ್ಲಿ ಜನಿಸಿರುತ್ತಾರೆ ಹಾಗೆಯೆ ಒಂದೊಂದು ರಾಶಿಯಲ್ಲಿ ಜನಿಸಿದವರು ಆಯಾ ರಾಶಿಗೆ ತಕ್ಕಂತೆ ಗುಣ ಸ್ವಭಾವ ಅನುಕೂಲ ಅನಾನುಕೂಲತೆಗಳನ್ನು ಹೊಂದಿರುತ್ತಾರೆ. ಒಂದೊಂದು ರಾಶಿಯು ಒಂದೊಂದು ದೇವರ ಒಡೆತನದಲ್ಲಿ ಸಾಗುತ್ತದೆ. 12 ತಿಂಗಳಿನಲ್ಲಿ ಪ್ರತಿ ತಿಂಗಳು ಗ್ರಹಗಳ ಚಲನೆ ಉಂಟಾಗಿ ಬೇರೆ ಬೇರೆ ರೀತಿಯಲ್ಲಿ ಫಲಗಳನ್ನು ಅನುಭವಿಸುತ್ತಾರೆ. ಹಾಗಾದರೆ ಅಕ್ಟೋಬರ್ ತಿಂಗಳಿನಲ್ಲಿ ಮಕರ ರಾಶಿಯವರ ಮಾಸ ಭವಿಷ್ಯ ಹೇಗಿರುತ್ತದೆ ಎಂಬುದನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ.

ಮಕರ ರಾಶಿಯವರಿಗೆ ಅಕ್ಟೋಬರ್ ತಿಂಗಳು ಮಹತ್ವದ ಸಮಯವಾಗಿದೆ ಅಕ್ಟೋಬರ್ ತಿಂಗಳಿನಲ್ಲಿ ಮಕರ ರಾಶಿಯವರು ಜೀವನದ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಮತ್ತು ಈ ರಾಶಿಯವರು ಅಕ್ಟೋಬರ್ ತಿಂಗಳ ಹೊಸ ಜವಾಬ್ದಾರಿಯನ್ನು ವಹಿಸಿಕೊಂಡು ಯಶಸ್ವಿಯಾಗುತ್ತಾರೆ. ಬಂಧುಗಳಿಂದ ಮದುವೆಗೆ ಸಂಬಂಧಪಟ್ಟಂತೆ ಶುಭ ವಾರ್ತೆಗಳು ಬರುವುದರಿಂದ ಮನಸ್ಸಿಗೆ ನೆಮ್ಮದಿ ಸಂತೋಷ ಕಂಡುಬರುತ್ತದೆ. ವ್ಯಾಪಾರ ವ್ಯವಹಾರಕ್ಕೆ ಸಂಬಂಧಿಸಿದ ಕೆಲಸಗಳು ಅಕ್ಟೋಬರ್ ತಿಂಗಳಲ್ಲಿ ಸರಾಗವಾಗಿ ನಡೆಯುತ್ತದೆ ಹೆಚ್ಚಿನ ಪ್ರಮಾಣದ ಕೆಲಸಗಳು ಫೋನ್ ಸಂಪರ್ಕದ ಮೂಲಕವೆ ನಡೆಯುತ್ತದೆ.

ಪತಿ ಪತ್ನಿಯರ ನಡುವೆ ಸಂಬಂಧ ಉತ್ತಮಗೊಳ್ಳುತ್ತದೆ. ಮಕರ ರಾಶಿಯವರಿಗೆ ಅಕ್ಟೋಬರ್ ತಿಂಗಳಿನಲ್ಲಿ ಹವಾಮಾನಕ್ಕೆ ಸಂಬಂಧಿಸಿದಂತೆ ಸಣ್ಣಪುಟ್ಟ ಸಮಸ್ಯೆಗಳು ಕಂಡು ಬರಬಹುದು ಆರೋಗ್ಯದ ಬಗ್ಗೆ ಜಾಗರೂಕತೆಯಿಂದ ಇರಬೇಕು‌. ಅಕ್ಟೋಬರ್ ತಿಂಗಳಲ್ಲಿ ಮಕರ ರಾಶಿಯವರಿಗೆ ವಿದೇಶ ಪ್ರಯಾಣದ ಯೋಗವಿದೆ. ಕೆಲಸಗಳು ಸಾಗುತ್ತದೆ ಆದರೆ ಸ್ವಲ್ಪ ನಿಧಾನವಾಗಿ ಸಾಗುತ್ತದೆ ಆದರೆ ದೈವಾನುಗ್ರಹದಿಂದ ಯಾರಾದರೂ ಒಬ್ಬರು ಸಹಾಯಕ್ಕೆ ಬರುತ್ತಾರೆ ಮಕರ ರಾಶಿಯವರ ಸಹೋದರ ಸಹೋದರಿಯರು ಸಹಾಯ ಮಾಡುತ್ತಾರೆ.

ಈ ತಿಂಗಳಲ್ಲಿ ಮಕರ ರಾಶಿಯವರಿಗೆ ಶುಭ ಫಲವಿದ್ದರೂ ಹೆಚ್ಚು ಪ್ರಯತ್ನ ಮಾಡಬೇಕಾಗುತ್ತದೆ. ಮಕರ ರಾಶಿ ಮಣ್ಣಿನ ಹಾಗೂ ಚಲಿಸುವ ಚಿಹ್ನೆಯಾಗಿದ್ದು ಶನಿ ದೇವರ ಒಡೆತನದಲ್ಲಿರುವ ರಾಶಿಯಾಗಿದೆ. ಮಕರ ರಾಶಿಯವರು ಜೀವನದಲ್ಲಿ ಬದ್ಧತೆ ಹಾಗೂ ಶಿಸ್ತಿನಿಂದ ನಡೆದುಕೊಳ್ಳುತ್ತಾರೆ, ಇವರು ಸ್ವಭಾವತಃ ಸೃಜನಶೀಲರಾಗಿರುತ್ತಾರೆ. ಇವರಿಗೆ ಪ್ರಯಾಣ ಮಾಡುವುದೆಂದರೆ ಬಹಳ ಇಷ್ಟವಾಗಿರುತ್ತದೆ, ಮಕರ ರಾಶಿಯವರಿಗೆ ವಿದೇಶದಲ್ಲಿ ಹೋಗಿ ಕೆಲಸ ಮಾಡಲು ಅಥವಾ ವಿದೇಶದಲ್ಲಿ ಕಾರ್ಯಕ್ರಮ ಕೊಡುವ ಮನಸ್ಸಿದ್ದರೆ ಖಂಡಿತವಾಗಿಯೂ ಈ ಕೆಲಸವನ್ನು ಮಾಡಿ ವಿದೇಶದಲ್ಲಿ ಹೆಸರು ಗಳಿಸುವ ಯೋಗವಿದೆ. ಅನಗತ್ಯ ವಿಷಯಗಳ ಬಗ್ಗೆ ಯೋಚಿಸಬಾರದು ಇದರಿಂದ ಮಾನಸಿಕ ನೆಮ್ಮದಿಗೆ ಭಂಗ ಬರುತ್ತದೆ. ಗುರು ಮತ್ತು ರಾಹು ನಾಲ್ಕನೆ ಮನೆಯಲ್ಲಿರುವುದರಿಂದ ಮಕರ ರಾಶಿಯವರಿಗೆ ಅಕ್ಟೋಬರ್ ತಿಂಗಳಿನಲ್ಲಿ ಮಿಶ್ರ ಫಲಿತಾಂಶ ಸಿಗಲಿದೆ.

Capricorn horoscope October 2023

ಶನಿ ಗ್ರಹದ ಸ್ಥಾನ ಬದಲಾವಣೆಯಿಂದ ಮಕರ ರಾಶಿಯವರಿಗೆ ಅಕ್ಟೋಬರ್ ತಿಂಗಳಲ್ಲಿ ಹಣದ ಹರಿವು ಕಡಿಮೆಯಾಗುತ್ತದೆ ಜೊತೆಗೆ ಉಳಿತಾಯದ ಅವಕಾಶ ಕಡಿಮೆ ಇರುತ್ತದೆ, ಅನಗತ್ಯ ಖರ್ಚು ಮಾಡುವ ಸಂದರ್ಭ ಬರುತ್ತದೆ, ಭವಿಷ್ಯದ ಬಗ್ಗೆ ಅಭದ್ರತೆಯ ಭಾವನೆಯನ್ನು ಹೊಂದಿರುತ್ತಾರೆ ಹೀಗಾಗಿ ಖರ್ಚಿನ ಬಗ್ಗೆ ಈ ರಾಶಿಯವರು ಎಚ್ಚರ ವಹಿಸಬೇಕು ಹಾಗೆಂದ ಮಾತ್ರಕ್ಕೆ ಹಣವೆ ಇರುವುದಿಲ್ಲ ಎಂದರ್ಥವಲ್ಲ ಕೆಲವು ಸಮಯಗಳಲ್ಲಿ ಹಣದ ಆಗಮನವಾಗುತ್ತದೆ. ಅಕ್ಟೋಬರ್ ತಿಂಗಳು ಕಳೆಯುತ್ತಿದ್ದಂತೆ ಮಕರ ರಾಶಿಯವರಿಗೆ ಹಣದ ಸಮಸ್ಯೆ ಕಡಿಮೆಯಾಗುತ್ತಾ ಹೋಗುತ್ತದೆ.

ಮಕರ ರಾಶಿಯವರಿಗೆ ಸಾಧನೆ ಮಾಡುವ ಸಾಮರ್ಥ್ಯವಿದೆ ಆದರೆ ಕೆಲವು ಮಿತಿಗಳಿಗೆ ಒಳಪಡುತ್ತಾರೆ. ಅಕ್ಟೋಬರ್ ತಿಂಗಳಿನಲ್ಲಿ ಮನೆಯಲ್ಲಿ ಧಾರ್ಮಿಕ ಕಾರ್ಯಗಳು ಅಥವಾ ಶುಭ ಕಾರ್ಯಗಳು ನಡೆಯುವ ಸಾಧ್ಯತೆ ಇದೆ ಇದರಿಂದ ಮನೆಗೆ ಒಳ್ಳೆಯದಾಗುತ್ತದೆ ಹಾಗೂ ಮನಸ್ಸಿಗೆ ನೆಮ್ಮದಿ ತಂದುಕೊಡುತ್ತದೆ. ಅಕ್ಟೋಬರ್ ತಿಂಗಳಲ್ಲಿ ಮಕರ ರಾಶಿಯವರಿಗೆ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳು ಕಂಡು ಬರಬಹುದು, ಊಟ ಕಡಿಮೆ ಮಾಡುವ ಅಥವಾ ಊಟವನ್ನು ಬಿಡುವ ಪ್ರವೃತ್ತಿ ಬೆಳೆಸಿಕೊಳ್ಳಬಹುದು ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು. ಈ ತಿಂಗಳಲ್ಲಿ ಮಕರ ರಾಶಿಯವರು ಆಧ್ಯಾತ್ಮಿಕ ಉದ್ದೇಶಗಳಿಗಾಗಿ ಬೇರೆ ಬೇರೆ ಪ್ರದೇಶಗಳಿಗೆ ಪ್ರಯಾಣ ಮಾಡಬಹುದು ಒಟ್ಟಿನಲ್ಲಿ ಆಧ್ಯಾತ್ಮಿಕದತ್ತ ಆಸಕ್ತಿ ಬರುತ್ತದೆ. ತಿಂಗಳ ಕೊನೆಯಲ್ಲಿ ಮಕರ ರಾಶಿಯವರು ಹಳೆಯ ಆಸ್ತಿಯ ಮಾರಾಟದಿಂದ ಹಣವನ್ನು ಪಡೆಯುವ ಸಾಧ್ಯತೆ ಇದೆ ಹಾಗೆಯೆ ಸಂಗಾತಿಯೊಂದಿಗೆ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ ನಿಮ್ಮ ಪ್ರವಾಸ ವಿಶೇಷತೆಯಿಂದ ಕೂಡಿರುತ್ತದೆ.

ಆರೋಗ್ಯದ ವಿಷಯದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಮಕರ ರಾಶಿಯವರು ತಮ್ಮ ಪ್ರೀತಿ ಪಾತ್ರರ ಆರೋಗ್ಯದ ಬಗ್ಗೆ ಗಮನಹರಿಸಬೇಕು ಪ್ರತಿದಿನ ಮಕರ ರಾಶಿಯವರು 21 ಬಾರಿ ಓಂ ಹನುಮತಿ ನಮಃ ಎಂದು ಜಪಿಸಬೇಕು ದತ್ತಾತ್ರೇಯ ಸ್ತೋತ್ರವನ್ನು ಪಠಿಸಬೇಕು ಇದರಿಂದ ಮಕರ ರಾಶಿಯವರು ತಮ್ಮ ಕಷ್ಟಗಳನ್ನು ದೂರ ಮಾಡಿಕೊಂಡು ಸಂತೋಷವಾಗಿರಬಹುದು. ಒಟ್ಟಿನಲ್ಲಿ ಅಕ್ಟೋಬರ್ ತಿಂಗಳಲ್ಲಿ ಮಕರ ರಾಶಿಯವರು ಸುಖ-ದುಃಖದ ಮಿಶ್ರ ಫಲವನ್ನು ಅನುಭವಿಸಲಿದ್ದಾರೆ. ಹೆಚ್ಚು ಚಿಂತೆ ಬೇಡ ಆದರೆ ಪ್ರಯತ್ನ ಹೆಚ್ಚಾಗಲಿ ಎಂದು ಹೇಳುತ್ತಾ ಈ ಮಾಹಿತಿ ಉಪಯುಕ್ತವಾಗಿದ್ದು ಮಕರ ರಾಶಿಯವರಿಗೆ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!