ಕಷ್ಟ ಎನ್ನುವುದು ಯಾರಿಗೆ ಬರುವುದಿಲ್ಲ ಹೇಳಿ. ಎಷ್ಟೋ ಬಾರಿ ಕಷ್ಟ ಪರಿಹಾರ ಮಾಡಲು ಅಗತ್ಯ ಇರುವುದು ದುಡ್ಡು. ಆದರೆ, ದುಡ್ಡು ಸಾಲದ ರೂಪದಲ್ಲೇ ಆಗಲಿ ಯಾವಾಗಲೂ, ಕೇಳಿದ ಎಲ್ಲರಿಂದ ಸಿಗುವುದಿಲ್ಲ. ಆದರೆ, ಸಾಲ ಸಿಗುವ ಒಂದೇ ಜಾಗ ಅದು ಬ್ಯಾಂಕ್.

ಅವರು ಕೂಡ ಸುಮ್ನೆ ಸಾಲ ಕೊಡಲ್ಲ, ಏನಾದರೂ ಅಡ ಇಡಬೇಕು, ಶ್ಯೂರಿಟಿ ಬೇಕು, ಸಾಲ ಮರಳಿ ಕೊಡಲು ಒಳ್ಳೆ ಕೆಲಸ ಇರಬೇಕು. ಅವರು ಸಾಲ ಕೊಡುವ ಪ್ರೊಸೀಜರ್ ದೊಡ್ಡದು. ಆದರೆ, ಕೆನರಾ ಬ್ಯಾಂಕ್ ಖಾತೆ ಇರುವ ಗ್ರಾಹಕರಿಗೆ ಸಿಗುತ್ತದೆ ಸಾಲ. ಏನಿದು ಅಂತ ಯೋಚನೆ ಮಾಡ್ತಾ ಇದ್ದೀರಾ?. ಬನ್ನಿ ಏನಿದು ಸಾಲ (ಲೋನ್) ನೋಡೋಣ.

ಆರೋಗ್ಯ ಸಾಲದ (Health Loan) ಇದು, ಆರೋಗ್ಯ ಸಾಲದ ವಿಷಯದ ಬಗ್ಗೆ ಹೆಚ್ಚು ತಿಳಿಯಲು ಸಹಕಾರಿಯಾಗಿದೆ. ಈ ಭೂಮಿ ಮೇಲೆ ಯಾವುದು ಕೂಡ ಶಾಶ್ವತವಾಗಿ ಉಳಿಯುವುದಿಲ್ಲ. ಎಷ್ಟೇ ಅನುಕೂಲ ಇದ್ದರು ಕೂಡ ಕೆಲವೊಂದು ಪರಿಸ್ಥಿತಿಗಳಲ್ಲಿ ಹಣದ ಅವಶ್ಯಕತೆ ಹೆಚ್ಚು ಪ್ರಮುಖವಾಗಿ ಇರುತ್ತದೆ. ಅದರಲ್ಲಿ, ವಿಶೇಷವಾಗಿ ಯಾವುದಾದರೂ ಆಸ್ಪತ್ರೆಗೆ ಆರೋಗ್ಯದ ಸಮಸ್ಯೆ ಎಂದು ಸೇರಿದಾಗ ಹಣದ ಅವಶ್ಯಕತೆ ಇದ್ದೇ ಇರುತ್ತದೆ. ಆವಾಗ ಹಣಕ್ಕಿಂತ ಆರೋಗ್ಯ ಮುಖ್ಯವಾಗುತ್ತದೆ.

ಒಂದು ವೇಳೆ ಯಾರಾದರೂ ಕೆನರಾ ಬ್ಯಾಂಕಿನ ಗ್ರಾಹಕರಾಗಿ ಇದ್ದರೆ . ಅವರಿಗೆ ಈ ಮಾಹಿತಿ ಹೆಚ್ಚು ಉಪಯುಕ್ತ. ಕೆನರಾ ಹೀಲ್ ಎನ್ನುವ ಆರೋಗ್ಯ ಸಾಲದ (Health Loan ಬಗ್ಗೆ ತಿಳಿಯೋಣ. ಇದು, ಆರೋಗ್ಯ ಸಾಲದ ಕುರಿತು ಹೆಚ್ಚಾಗಿ ತಿಳಿಯಲು ಸಾಕಷ್ಟು ಸಹಾಯ ಮಾಡುತ್ತದೆ.

ಒಂದು ಪಕ್ಷ ಆಸ್ಪತ್ರೆಗೆ ಆರೋಗ್ಯದ ವಿಷವಾಗಿ ದಾಖಲಾಗಿದ್ದರೆ ಊಹೆಗಿಂತ ಹೆಚ್ಚಾಗಿ ಆಸ್ಪತ್ರೆಯ ಬಿಲ್ ಬಂದಿದ್ದರೆ, ಆ ಸಮಯದಲ್ಲಿ ಕೆನರಾ ಹೀಲ್ ಯೋಜನೆ ಸಹಾಯಕ್ಕೆ ಬರುತ್ತೆ. ಈ ಸಾಲದ ಸೌಕರ್ಯದಲ್ಲಿ, ಬೇರೆ ಸಾಲಗಳಿಗೆ ಹೋಲಿಕೆ ಮಾಡಿದರೆ ಸ್ಪರ್ಧಾತ್ಮಕ ಬಡ್ಡಿ ದರ ಇರುತ್ತದೆ.11.55 ರಿಂದ 12.30 ಪ್ರತಿಶತದವರಿಗೆ ಬಡ್ಡಿ ದರವನ್ನು ನಿಗದಿ ಮಾಡಲಾಗಿದೆ.

ಎಲ್ಲಕಿಂತ ಮಿಗಿಲಾಗಿ ತುರ್ತು ಸಂದರ್ಭದಲ್ಲಿ ಸಾಲದ ಸೌಕರ್ಯ ಸಿಗುತ್ತದೆ. ವೈದ್ಯಕೀಯ ಪರಿಹಾರವನ್ನು ತೆಗೆದುಕೊಳ್ಳುವ ಸಮಯದಲ್ಲಿ ಖರ್ಚು ಮಿತಿಯನ್ನು ದಾಟಿದರೆ. ಈ, ಯೋಜನೆಯ ಮೂಲಕ ಸಾಲವನ್ನು ತೆಗೆದುಕೊಂಡು ಖರ್ಚುಗಳನ್ನು ನಿಯಂತ್ರಣ ಮಾಡಿಕೊಳ್ಳಬಹುದಾಗಿದೆ. ಕೆನರಾ ಬ್ಯಾಂಕ್ ಕೇವಲ ಕೆನರಾ ಹೀಲ್ ಯೋಜನೆ ಮಾತ್ರವಲ್ಲದೆ, ಇದರೊಂದಿಗೆ ಕೆನರಾ ಬ್ಯಾಂಕ್, ಹೆಂಗಸರಿಗೆ ಕೆನರಾ ಏಂಜಲ್ ಅಕೌಂಟ್ ಕೂಡ ಪರಿಚಯ ಮಾಡಿದೆ. ಇದರ, ಮುಖಾಂತರ ಕ್ಯಾನ್ಸರ್ ಕೇರ್ ಪಾಲಿಸಿಯನ್ನು ಪಡೆದುಕೊಳ್ಳಬಹುದು.

ಇಲ್ಲಿ ಆನ್ಲೈನ್ ಸಾಲಗಳು ಮತ್ತು ಫಿಕ್ಸೆಡ್ ಡೆಪಾಸಿಟ್ ( Fixed Deposit ) ಅನ್ನು ಸಹ ಪಡೆದುಕೊಳ್ಳಬಹುದಾಗಿದೆ. ಇನ್ನು ಇದನ್ನು, ನವೀಕರಣ ಮಾಡಿಕೊಳ್ಳುವ ಮುಖಾಂತರ ಇನ್ನು ಹೆಚ್ಚಿನ ವಿಶೇಷತೆಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ.

ಕಷ್ಟದ ಸಮಯದಲ್ಲಿ ಕೆನರಾ ಹೀಲ್ ಯೋಜನೆ ಮತ್ತು ಕೆನರಾ ಏಂಜಲ್ ಯೋಜನೆ ಎರಡು ಕೂಡ ಆರ್ಥಿಕ ನೆರವನ್ನು ನೀಡುವುದಕ್ಕೆ ಗ್ರಾಹಕರ ಸಹಾಯಕ್ಕೆ ಬರುತ್ತದೆ. ಈ ಮುಖಾಂತರ ಕೆನರಾ ಗ್ರಾಹಕರು ಅವರಿಗೆ ಬೇಕಾಗಿರುವ ಆರ್ಥಿಕ ಸಹಾಯವನ್ನು ಈ ಯೋಜನೆಯ ಸಾಲ ಸೌಕರ್ಯದ ಮುಖಾಂತರ ಪಡೆದುಕೊಳ್ಳಬಹುದಾಗಿದೆ.

ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಆರ್ಥಿಕ ಸೌಕರ್ಯವನ್ನು ನೀಡುವ ಕೆಲಸವನ್ನು ಭಾರತದ ಅತ್ಯಂತ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್ ಮಾಡುತ್ತಿದೆ.
ಯಾರಾದರೂ ಕೆನರಾ ಬ್ಯಾಂಕಿನ ಗ್ರಾಹಕರಾಗಿ ಇದ್ದರೆ ಕೆನರಾ ಬ್ಯಾಂಕ್ ಪರಿಚಯ ಮಾಡಿರುವ ಸೌಕರ್ಯಗಳನ್ನು ಪಡೆದುಕೊಳ್ಳುವ ಮುಖಾಂತರ ಅವರು ಸಹ ಆರ್ಥಿಕ ಅವಶ್ಯಕತೆಗಳನ್ನು ಈ ರೂಪದಲ್ಲಿ ಪೂರೈಕೆ ಮಾಡಿಕೊಳ್ಳಬಹುದಾಗಿದೆ. ವಿಶೇಷವಾಗಿ ಕೆನರಾ ಹೀಲ್ ಯೋಜನೆಯ ಮುಖಾಂತರ ಆರೋಗ್ಯ ಸಾಲದ ಅವಶ್ಯಕತೆ ಇರುವ ಸಮಯದಲ್ಲಿ ಅನಿವಾರ್ಯ ಇರುವ ಆರ್ಥಿಕ ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!