ಎತ್ತರಕ್ಕೆ ತಕ್ಕಂತೆ ಹಾಗೂ ವಯಸ್ಸಿಗೆ ತಕ್ಕಂತೆ ತೂಕ ಹೊಂದುವುದು ಅವಶ್ಯಕ ಆದರೆ ಕೆಲವರು ಎತ್ತರಕ್ಕೆ ತಕ್ಕಂತೆ, ವಯಸ್ಸಿಗೆ ತಕ್ಕಂತೆ ತೂಕ ಇರುವುದಿಲ್ಲ.ಎಷ್ಟೇ ಊಟ ಮಾಡಿದರು ಅವರು ದಪ್ಪ ಆಗುವುದಿಲ್ಲ. ಮನೆಯಲ್ಲೆ ಒಂದು ಜ್ಯೂಸ್ ಮಾಡಿಕೊಂಡು ಒಂದು ವಾರ ಕುಡಿದರೆ ದಪ್ಪ ಆಗುತ್ತಾರೆ. ಹಾಗಾದರೆ ದಪ್ಪ ಆಗಲು ಜ್ಯೂಸ್ ಮಾಡುವ ವಿಧಾನವನ್ನು ಈ ಲೇಖನದ ಮೂಲಕ ತಿಳಿಯೋಣ.

ಅವಕಾಡೊ ಫ್ರೂಟ್ ಇದನ್ನು ಭಾರತದಲ್ಲಿ ಬಟರ್ ಫ್ರೂಟ್ ಎಂದು ಕರೆಯುತ್ತಾರೆ ಈ ಹಣ್ಣು ತರಕಾರಿ ಅಂಗಡಿಗಳಲ್ಲಿ ಸಿಗುತ್ತದೆ. ಈ ಹಣ್ಣು ನೋಡಲು ಕಪ್ಪಾಗಿರಬೇಕು ಆಗ ಬಳಸಬಹುದು. ಈ ಹಣ್ಣಿನಲ್ಲಿ ಆರೋಗ್ಯಕರ ಫ್ಯಾಟ್ ಇರುತ್ತದೆ. ಈ ಹಣ್ಣನ್ನು ಮಧ್ಯದಲ್ಲಿ ಕಟ್ ಮಾಡಿದಾಗ ಅದರಲ್ಲಿ ಒಂದು ಬೀಜ ಸಿಗುತ್ತದೆ ಅದನ್ನು ತೆಗೆದುಹಾಕಿ ಒಳಗಿನ ತಿರುಳನ್ನು ಮಿಕ್ಸಿಗೆ ಹಾಕಿ ಅದಕ್ಕೆ ಒಂದು ಸ್ಪೂನ್ ಶುದ್ಧ ಜೇನುತುಪ್ಪ, ಒಂದು ಗ್ಲಾಸ್ ಕ್ರೀಮ್ ಮಿಲ್ಕ್ ಸೇರಿಸಿ ಗ್ರೈಂಡ್ ಮಾಡಿಕೊಳ್ಳಬೇಕು ಆಗ ಸ್ಮೂತ್ ಆಗಿ ಥಿಕ್ ಆಗುತ್ತದೆ ಇದನ್ನು ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಹೀಗೆ ಒಂದು ವಾರ ಮಾಡಬೇಕು ಆಗ ಆರೋಗ್ಯಕರವಾಗಿ ದಪ್ಪ ಆಗುತ್ತಾರೆ.

ಇದಕ್ಕೆ ಬೇಕಾದರೆ ಬಾಳೆಹಣ್ಣನ್ನು ಹಾಕಬೇಕು. ಈ ಜ್ಯೂಸ್ ಕುಡಿಯುವುದರಿಂದ 3-4 ಕೆ.ಜಿ ತೂಕ ಹೆಚ್ಚಾಗುತ್ತದೆ. ತೆಳ್ಳಗಿರುವವರು ದಪ್ಪ ಆಗುವುದು ದಪ್ಪ ಇರುವವರು ತೆಳ್ಳಗಾಗುವುದು ಸುಲಭವಲ್ಲ.‌ ಮನೆಯಲ್ಲಿ ‌ತಯಾರಿಸಿದ ಜ್ಯೂಸ್ ಇನ್ನಿತರ ಆಹಾರವನ್ನು ಸೇವಿಸಿ ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳಬೇಕು ಆಗ ಯಾವುದೇ ಅಡ್ಡ ಪರಿಣಾಮವಾಗುವುದಿಲ್ಲ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!