ಬುರ್ಜ್ ಖಲೀಫಾ ಉದ್ಘಾಟನೆಗೆ ಮುಂಚೆ ಈ ಕಟ್ಟಡವನ್ನು ಬುರ್ಜ್ ದುಬೈ ಎಂದೂ ಕರೆಯಲಾಗುತ್ತಿತ್ತು. ಇದು ಸಂಯುಕ್ತ ಅರಬ್ ಎಮಿರೇಟ್ ದೇಶದ ಪ್ರಮುಖ ನಗರ ದುಬೈಯಲ್ಲಿರುವ ಒಂದು ಗಗನಚುಂಬಿ ಕಟ್ಟಡ. ಬುರ್ಜ್ ದುಬೈ ಇದುವರೆಗೂ ನಿರ್ಮಿಸಲಾದ ಅತ್ಯತ್ತರದ ಮಾನವನಿರ್ಮಿತ ಕಟ್ಟಡವಾಗಿದೆ. ಇದರ ನಿರ್ಮಾಣವು 2004ರ ಸೆಪ್ಟೆಂಬರ್ 21ರಂದು ಪ್ರಾರಂಭವಾಯಿತು. ಈ ಕಟ್ಟಡದ ಹೊರಭಾಗ ರಚನೆಯ ನಿರ್ಮಾಣವು 2009ರ ಅಕ್ಟೋಬರ್ 1ರಂದು ಸಂಪೂರ್ಣಗೊಂಡಿತು. ಈ ಕಟ್ಟಡವು ಸಾರ್ವಜನಿಕರಿಗಾಗಿ 2010ರ ಜನವರಿ 4ರಂದು ಅಧಿಕೃತವಾಗಿ ಮುಕ್ತವಾಯಿತು. ಈ ಕಟ್ಟಡವು 161 ಸ್ಥಳನ್ನು ಹೊಂದಿದ್ದು 2717ಫೀಟ್ ಎತ್ತರವಾಗಿದೆ. ಆದ್ದರಿಂದ ನಾವು ಇಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಅಮೆರಿಕಾ ಸಂಯುಕ್ತ ಸಂಸ್ಥಾನದ ಶಿಕಾಗೊ ನಗರದಲ್ಲಿರುವ ಸ್ಕಿಡ್ಮೋರ್, ಒವಿಂಗ್ಸ್ ಅಂಡ್ ಮೆರಿಲ್ ಕಟ್ಟಡ ವಿನ್ಯಾಸ ಸಂಸ್ಥೆಯು ಈ ಕಟ್ಟಡದ ರಚನೆ ಮತ್ತು ವಿನ್ಯಾಸ ಕಾರ್ಯ ಕೈಗೊಂಡಿತ್ತು. ಈಗ ತಮ್ಮದೇ ಉದ್ದಿಮೆ ನಡೆಸುತ್ತಿರುವ ಅಡ್ರಿಯನ್ ಸ್ಮಿತ್ ಬುರ್ಜ್ ದುಬೈ ಕಟ್ಟಡದ ಪ್ರಮುಖ ಶಿಲ್ಪಿ ಮತ್ತು ಬಿಲ್ ಬೇಕರ್ ಪ್ರಮುಖ ರಚನಾ ಎಂಜಿನಿಯರ್ ಆಗಿದ್ದರು. ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಸಿಟಿ ಈ ಕಟ್ಟಡ ನಿರ್ಮಾಣದ ಪ್ರಾಥಮಿಕ ಗುತ್ತಿಗೆದಾರ ಸಂಸ್ಥೆಯಾಗಿತ್ತು. ಈ ನಿರ್ಮಾಣ ಯೋಜನೆಯ ಒಟ್ಟಾರೆ ವೆಚ್ಚ ಸುಮಾರು1.5 ಶತಕೋಟಿ ಅಮೆರಿಕನ್ ಡಾಲರ್‌ಗಳು.
ಕಟ್ಟಡದ ಅಭೂತಪೂರ್ವ ಎತ್ತರದ ಕಾರಣ ಅದಕ್ಕೆ ಆಧಾರ ಬೆಂಬಲ ನೀಡಲು, ಇಂಜಿನಿಯರ್‌ಗಳು ಆಧಾರ ತಿರುಳು ಎನ್ನಲಾದ ಹೊಸ ರಾಚನಿಕ ವ್ಯವಸ್ಥೆ ವಿನ್ಯಾಸ ಮಾಡಿದರು. ಇದು Y ಆಕಾರದಲ್ಲಿರುವ ಮೂರು ಆಧಾರಗಳೊಂದಿಗೆ ಬಲಪಡಿಸಲಾದ ಷಡ್ಭುಜಾಕಾರದ ಅಂಶವನ್ನು ಹೊಂದಿದೆ. ಈ ರಾಚನಿಕ ವ್ಯವಸ್ಥೆಯು ಕಟ್ಟಡಕ್ಕೆ ಬದಿಭಾಗದ ಆಸರೆ ನೀಡಿ ಕಟ್ಟಡವು ತಿರುಚುವುದನ್ನು ತಡೆಗಟ್ಟುತ್ತದೆ. ಈ ಕಟ್ಟಡದ ಕೆಲವು ಅಂಶಗಳು ಸುಂದರ ಬಾಹ್ಯನೋಟಕ್ಕಾಗಿ ಹಾಗೂ ನೈಸರ್ಗಿಕ ಬೆಳಕಿಗೂ ಅವಕಾಶ ನೀಡುತ್ತವೆ.
ಬುರ್ಜ್ ಕಲೀಫಾ ಕಟ್ಟಡದ ಅಡಿಪಾಯದಲ್ಲಿ ಒಂದರ ಮೇಲೊಂದು ಪೇರಿಸಿಟ್ಟ ಪೈಪ್ ಗಳಿವೆ. ಪ್ರತಿಯೊಂದು ಪೈಪ್ ಸುಮಾರು 1.5 ಮೀಟರ್ ವ್ಯಾಸ ಹಾಗೂ 43 ಮೀಟರ್ ಉದ್ದವಿವೆ. ಇವನ್ನು ಸುಮಾರು 50 ಮೀ. ಕ್ಕಿಂತಲೂ ಅಧಿಕ ಆಳವಾದ ನೆಲದಲ್ಲಿ ಇಳಿಸಿ ಹೂಳಲಾಗಿದೆ. ಬುರ್ಜ್ ಖಲೀಫಾ ಅಡಿಪಾಯಗಳಲ್ಲಿ ಹೆಚ್ಚಿನ ಸಾಂದ್ರತೆಯಲ್ಲಿ ಕಡಿಮೆ ವ್ಯಾಪ್ಯತೆಯ ಜಲ್ಲಿಗಾರೆಯನ್ನು ಬಳಸಲಾಗಿತ್ತು. ಒಟ್ಟಾರೆ ಬುರ್ಜ್ ಖಲೀಫಾ ಕಟ್ಟಡದ ನಿರ್ಮಾಣ ಇತಿಹಾಸವಾಗಿದೆ. ಬುರ್ಜ್ ಖಲೀಫಾ ಕಟ್ಟಡವು ಜಗತ್ತಿನ ಅತ್ಯಂತ ಎತ್ತರದ ಕಟ್ಟಡವಾಗಿದೆ.