ನಮಗೆಲ್ಲರಿಗೂ ತಿಳಿದ ಹಾಗೆ ಜನಸಂಖ್ಯೆಯಲ್ಲಿ ಗಣನೀಯವಾಗಿ ನಮ್ಮ ದೇಶದಲ್ಲಿ ಏರಿಕೆ ಆಗುತ್ತಿದೆ.ಹಾಗೆಯೇ ನಮ್ಮ ದೇಶ ಕೂಡ ಬೆಳವಣಿಗೆಯ ಹಾದಿಯಲ್ಲಿ ಸಾಗುತ್ತಿದೆ.ನಾವು ನೋಡುತ್ತಲೇ ಇರುತ್ತೇವೆ ನಮ್ಮ ಅಕ್ಕಪಕ್ಕದಲ್ಲಿ ದೊಡ್ಡ ದೊಡ್ಡ ರಸ್ತೆಗಳು, ಬಿಲ್ಡಿಂಗ್ ಗಳು ನಿರ್ಮಾಣ ಆಗುತ್ತಿರುತ್ತವೆ.ಆದರೆ ನಾವು ಇಲ್ಲಿ ಯೋಚನೆ ಮಾಡುವ ವಿಷಯವೇನೆಂದರೆ ಇದಕ್ಕೆ ಬೇಕಾದ ಸಾಮಗ್ರಿಗಳು ಎಲ್ಲಿ ಸಿಗುತ್ತವೆ ಎಂದು. ಈ ಬಿಸನೆಸ್ ಮಾಡಿದರೆ ಹೇಗೆ? ಮಾಡುವುದು ಹೇಗೆ?ಇಂತಹವುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ಇಲ್ಲಿ ತಿಳಿಯೋಣ.
ದೊಡ್ಡ ದೊಡ್ಡ ಅಪಾರ್ಟ್ಮೆಂಟ್ ಗಳು , ರಸ್ತೆಗಳು ಇವುಗಳನ್ನೆಲ್ಲ ನಿರ್ಮಿಸಲು ಅದರದೇ ಆದ ವಸ್ತುಗಳು ಬೇಕಾಗುತ್ತವೆ.ಅವುಗಳು ಎಲ್ಲಿಂದ ಸಿಗುತ್ತವೆ ಎಂದರೆ ಕನ್ಸ್ಟ್ರಕ್ಷನ್ ಬಿಸನೆಸ್ ಮಾಡುವವರು ಮತ್ತು ಸಫಲಾಯರ್ಸ್ ನಿಂದ ಬರುತ್ತದೆ. ಸಿಮೆಂಟ್, ಸ್ಟೀಲ್, ಇಟ್ಟಿಗೆ, ಮರಳು ಇವೆಲ್ಲವುಗಳು ಇವರುಗಳಿಂದಲೇ ಬರುತ್ತದೆ. ಆದ್ದರಿಂದ ಇಂತಹವುಗಳ ಬಿಸನೆಸ್ ಮಾಡಿದರೆ ಒಳ್ಳೆಯ ಲಾಭ ಪಡೆಯಬಹುದು. ಅಷ್ಟೇ ಅಲ್ಲದೆ ಈ ವ್ಯವಹಾರದಲ್ಲಿ ಲಾಭದ ಗೆರೆ ತುಂಬಾ ಜಾಸ್ತಿಯಾಗಿ ಇದೆ.
ಈ ಬಿಸನೆಸ್ ಶುರು ಮಾಡುವ ಮೊದಲು ಏರಿಯಾದಲ್ಲಿ ಸರ್ವೇ ಮಾಡಬೇಕು. ಯಾವ ಜಾಗದಲ್ಲಿ ಯಾವ ರೀತಿಯ ಸಿಮೆಂಟ್ ಬಳಕೆಯಾಗುತ್ತೆ, ಯಾವ ತರಹದ ಗ್ರಾಹಕರು ಇದ್ದಾರೆ, ಎಂದು ತಿಳಿಯಬೇಕು. ಇವೆಲ್ಲವುಗಳ ಬಗ್ಗೆ ತಿಳಿಯಬೇಕೆಂದರೆ ಈ ಬಿಸನೆಸ್ ಮಾಡುವವರ ಬಳಿ ತಿಳಿದುಕೊಳ್ಳಬೇಕು. ಯಾವುದಾದರೂ ಬಿಲ್ಡಿಂಗ್ ನಿರ್ಮಾಣ ಆಗುತ್ತಿದೆ ಎಂದರೆ ಆ ಮೇಸ್ತ್ರೀಯನ್ನು ಪರಿಚಯಿಸಿಕೊಳ್ಳಬೇಕು. ಇದಕೋಸ್ಕರ ಸುಮಾರು ಎರಡು ಅಥವಾ ಮೂರು ತಿಂಗಳು ಅಲ್ಲೇ ಅಲೆದಾಡಬೇಕಾಗುತ್ತದೆ.
ಮತ್ತೆ ಬಿಸನೆಸ್ ಮಾಡಬೇಕಾದರೆ ಕೆಲವು ಲೈಸನ್ಸ್ ಮತ್ತು ಪರ್ಮಿಶನ್ ತೆಗೆದುಕೊಳ್ಳಬೇಕಾಗುತ್ತದೆ. ಅಂದರೆ ಜಿ.ಎಸ್.ಟಿ., ಟಿನ್ ನಂಬರ್, ಹಾಗೆಯೇ ಮುನ್ಸಿಪಲ್ ಅತೋರಿಟಿಯಿಂದ ಪರ್ಮಿಶನ್ ತೆಗೆದುಕೊಳ್ಳಬೇಕು. ಶಾಪ್ ರಿಜಿಸ್ಟ್ರೇಷನ್ ಕೂಡ ಮಾಡಬೇಕು. ಇದಕ್ಕೆ ಒಂದು ಆಫೀಸ್ ಬೇಕು.ಅದಕ್ಕೆ ಕೆಲವು ಮಟೀರಿಯಲ್ ಬೇಕು. ವಸ್ತುಗಳನ್ನು ಸ್ಟೋರ್ ಮಾಡಲು ಒಂದು ಗೋಡೊನ್ ಬೇಕಾಗುತ್ತದೆ. ಹಾಗೆ ಒಂದು ವಿಸಿಟಿಂಗ್ ಕಾರ್ಡ್ ಮಾಡಿಸಬೇಕಾಗುತ್ತದೆ. ಸುತ್ತ ಮುತ್ತ ಎಲ್ಲಿ ಕಟ್ಟಡ ನಿರ್ಮಾಣ ಆಗುತ್ತಿದ್ದರೂ ಅಲ್ಲಿ ಈ ಕಾರ್ಡ್ ಕೊಡಬೇಕು.
ಇನ್ನು ಸಾಮಗ್ರಿಗಳ ಬಗ್ಗೆ ಹೇಳುವುದಾದರೆ ಮೊದಲು ಸಿಮೆಂಟ್. ನಿಮ್ಮ ಏರಿಯಾದಲ್ಲಿ ಯಾವ ರೀತಿಯ ಸಿಮೆಂಟ್ ಬಳಸುತ್ತಾರೆ ಎಂದು ನೋಡಿ ಆ ಕಂಪನಿಯ ಜೊತೆ ಡೀಲ್ ಮಾಡಿಕೊಂಡು ಸ್ಟೋರ್ ಮಾಡಿಕೊಳ್ಳಬೇಕು. ನಂತರ ಇಟ್ಟಿಗೆ. ಇಟ್ಟಿಗೆಯ ಹಲವು ಮಾದರಿಗಳನ್ನು ಇಟ್ಟುಕೊಳ್ಳಬೇಕು. ಎಲ್ಲಾ ಗ್ರಾಹಕರು ಒಂದೇ ರೀತಿಯ ಬೇಡಿಕೆ ಇಡುವುದಿಲ್ಲ. ಆದ್ದರಿಂದ ಇಟ್ಟಿಗೆ ತಯಾರಿಸುವವರ ಹತ್ತಿರ ಡೀಲ್ ಮಾಡಿಟ್ಟುಕೊಳ್ಳಬೇಕು.
ನಂತರ ಕಲ್ಲು. ಕಲ್ಲನ್ನು ಸಹ ಇಟ್ಟಿಗೆಯಂತೆ ಹಲವಾರು ಮಾದರಿಗಳನ್ನು ಗ್ರಾಹಕರ ಆಯ್ಕೆಗೆ ಮೀಸಲಿಡಬೇಕು. ನಂತರ ಟ್ರಕ್ ಮೂಲಕ ಸಾಗಿಸುವ ವ್ಯವಸ್ಥೆ ಮಾಡಬೇಕುರೋಡ್ಸ್- ಇವುಗಳನ್ನು ಅಕ್ಕಪಕ್ಕದ ಹೋಲ್ ಸೇಲ್ ವ್ಯಕ್ತಿಗಳಿಂದ ಪಡೆದು ಕೊಳ್ಳಬೇಕು. ಸಣ್ಣ ಸಣ್ಣ ಕಂಪನಿಗಳಿಂದಲೂ ತೆಗೆದುಕೊಳ್ಳಬಹುದು. ಎಜೆನ್ಸಿ ಮೂಲಕವೂ ಮಾಡಬಹುದು. ವಿತ್ ಏಜೆನ್ಸಿ ಆದರೆ 30 ಲಕ್ಷ ಹೂಡಿಕೆ ಮಾಡಬೇಕು. ವಿತ್ ಔಟ್ ಏಜೆನ್ಸಿ ಆದರೆ 5 ಲಕ್ಷ ಹೂಡಿಕೆ ಮಾಡಬೇಕು. ಒಟ್ಟಾರೆಯಾಗಿ ಹೇಳುವುದಾದರೆ ಈ ಬಿಸನೆಸ್ ಲ್ಲಿ 20 ರಿಂದ 50% ನಷ್ಟು ಲಾಭ ಪಡೆಯಬಹುದಾಗಿದೆ.