Breaking News Karnataka Election 2023: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಕಾವು ಹೆಚ್ಚಾಗಿದೆ, ಇನ್ನೇನು ಕೆಲವೇ ದಿನಗಳಲ್ಲಿ ಫಲಿತಾಂಶ ಹೊರಬೀಳಲಿದೆ. ಯಾವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುತ್ತೆ ಎಂದು ನೋಡಲು ಎಲ್ಲರೂ ಕಾತುರರಾಗಿದ್ದಾರೆ. ಮೇ ಹತ್ತಕ್ಕೆ ಚುನಾವಣೆ ನಡೆದಿದ್ದು ಇನ್ನು ಎರಡೇ ದಿನಗಳಲ್ಲಿ ಫಲಿತಾಂಶ ಬಿಡುಗಡೆಯಾಗಲಿದೆ. ರಾಜ್ಯದ ಮುಖ್ಯಮಂತ್ರಿ ಯಾರು ಎಂದು ಶೀಘ್ರದಲ್ಲೇ ನಿಶ್ಚಯವಾಗಲಿದ್ದು, ಈಗಾಗಲೇ ರಾಜ್ಯದಲ್ಲಿ ಸಾಕಷ್ಟು ಸಮೀಕ್ಷೆ ಕೂಡ ನಡೆದಿದೆ.
ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಹರಿಹರ ದ ಸಿದ್ದಲಿಂಗೇಶ್ವರ ಮಠದ ಪೀಠಾಧ್ಯಕ್ಷರಾಗಿದ್ದಾರೆ, ಇವರು 2023ರ ರಾಜಕೀಯ ಭವಿಷ್ಯವನ್ನು ನುಡಿದಿದ್ದಾರೆ. ಮೊದಲನೇದಾಗಿ ಕಮಲ ಮುಧುರಬಹುದಾ ಎನ್ನುವ ಪ್ರಶ್ನೆಗೆ ಅವರು ಏನು ಮಾತನಾಡಿಲ್ಲ, ಇನ್ನು ಕೈ ಮೇಲ್ ಎರಬಹುದಾ? ಎನ್ನುವ ಪ್ರಶ್ನೆಗೆ ಮೇಲೆ ಎರಬಹುದು ಎಂದಿದ್ದಾರೆ ಇದರ ಜೊತೆಗೆ ತೆನೆಯು ಕೂಡ ಮೇಲೆರಬಹುದು ಎಂದು ಹೇಳಿದ್ದಾರೆ. 2023ರ ಚುನಾವಣೆಯಲ್ಲಿಯೂ ಕೂಡ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎನ್ನುವುದನ್ನು ಸಿದ್ದಲಿಂಗಚಾರ್ಯ ಸ್ವಾಮೀಜಿಗಳು ಹೇಳಿದ್ದಾರೆ.
ಅಷ್ಟೇ ಅಲ್ಲ ಇವರ ಮಾತುಗಳನ್ನು ಸೂಕ್ಷ್ಮವಾಗಿ ನೋಡಿದರೆ 2023ರ ಚುನಾವಣೆಯಲ್ಲಿ ಯುವಕರೊಬ್ಬರು ಅತ್ಯುನ್ನತ ಸ್ಥಾನದಲ್ಲಿ ಕೂರಬಹುದು ಹಾಗೆ ಶಾಸಕರಾಗಿ ಮೊಟ್ಟಮೊದಲ ಸಲ ಆಯ್ಕೆಯಾದ ಕೂಡಲೇ ಆ ಯುವಕ ಕ್ಲಸ್ಟರ್ ಸ್ಥಾನಕ್ಕೆ ಏರಬಹುದು ಎಂದು ಹೇಳಿದ್ದಾರೆ. ಯಾರು MLA ಆದ ಕೂಡಲೇ ಸಿಎಂ ಆಗುತ್ತಾರೆಂಬ ಪ್ರಶ್ನೆ ಇದೀಗ ಜೋರಾಗಿ ಸದ್ದು ಮಾಡುತ್ತಿದೆ ಹಾಗಾದರೆ ನಿಜಕ್ಕೂ ಯುವಕನೇ ಮುಖ್ಯಮಂತ್ರಿಯಾಗಬಹುದಾ? ಸಿದ್ದಲಿಂಗಚಾರ್ಯರ ಭವಿಷ್ಯ ನಿಜವಾಗುತ್ತಾ? ಕಾಂಗ್ರೆಸ್ ಜೆಡಿಎಸ್ ಉತ್ತಮ ಸ್ಥಾನ ಪಡೆಯುತ್ತಾ? ಈ ಎಲ್ಲಾ ಅಂಶಗಳು ಇದೀಗ ಕುತೂಹಲವನ್ನು ಕೆರಳಿಸಿದೆ. ಇವೆಲ್ಲದಕ್ಕೂ ಉತ್ತರ ಶೀಘ್ರದಲ್ಲಿ ಸಿಗಲಿದೆ, ಚುನಾವಣೆಯ ಫಲಿತಾಂಶ ಇನ್ನೇನು ಕೆಲವೇ ದಿನಗಳಲ್ಲಿ ಹೊರ ಬೀಳಲಿದೆ.
ಸಿದ್ದಲಿಂಗಚಾರ್ಯ ನುಡಿದ ಭವಿಷ್ಯ ಒಂದು ಕಡೆಯಾದರೆ ಇನ್ನೊಂದು ಕಡೆ ರಾಜಕೀಯ ಭವಿಷ್ಯವನ್ನು ನುಡಿಯುವುದರಲ್ಲಿ ನಿಸ್ಸಿಮರು ಎನಿಸಿಕೊಂಡಂತಹ ನಮ್ಮದೇ ನಾಡಿನ ಕೋಡಿಮಠದ ಸ್ವಾಮೀಜಿಯವರು ಚುನಾವಣೆ ಭವಿಷ್ಯವನ್ನು ನುಡಿದಿದ್ದಾರೆ. 2023ರಲ್ಲಿ ಜಾಗತಿಕ ಮಟ್ಟದಲ್ಲಿ ದೊಡ್ಡ ಸಮಸ್ಯೆ ಎದುರಾಗಲಿದೆ ಎಂದು ನುಡಿದಿದ್ದಾರೆ ಮತ್ತು ಎರಡು ಮೂರು ದೊಡ್ಡ ದೊಡ್ಡ ತಲೆಗಳ ಸಾವಾಗಲಿದೆ, ಸಾಧುಸಂತರಿಗೆ ತೊಂದರೆ, ಒಂದು ಪಕ್ಷಕ್ಕೆ ಮಾತ್ರ ರಾಜ್ಯದಲ್ಲಿ ಅಧಿಕಾರ ಸಿಗಲಿದೆ ಎಂದಿದ್ದಾರೆ. ಭವಿಷ್ಯದಲ್ಲಿ ನಿಜವಾಗುತ್ತಾ ಎಂದು ನಾವು ನೋಡೋಣ!