ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ( BPNL ) ಇದು, ರಾಷ್ಟ್ರೀಯ ಸರ್ಕಾರೇತರ ಸಂಸ್ಥೆಯಾಗಿದ್ದು. ಇಲ್ಲಿ 5,250 ಹುದ್ದೆಗಳು ಖಾಲಿ ಇವೆ ಆಸಕ್ತಿ ಇರುವವರು ಮತ್ತು ಅರ್ಹತೆ ಉಳ್ಳವರು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು.
ಕೃಷಿ ನಿರ್ವಹಣಾ ಅಧಿಕಾರಿ, ಕೃಷಿ ಅಭಿವೃದ್ಧಿ ಅಧಿಕಾರಿ ಹಾಗೂ ಕೃಷಿ ಸ್ಪೂರ್ತಿ ಸೇರಿದಂತೆ ಹಲವು ರೀತಿಯ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಈ ಹುದ್ದೆಗಳಿಗೆ ಅಗತ್ಯ ಇರುವ ವಿದ್ಯಾರ್ಹತೆ ವಯಸ್ಸಿನ ಮಿತಿ ಜೊತೆಗೆ ವೇತನ ಶ್ರೇಣಿಯನ್ನು ಒಂದೊಂದಾಗಿ ತಿಳಿಯೋಣ ಬನ್ನಿ.
ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ಇಲಾಖೆಯಿಂದ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು ಹುದ್ದೆಗಳ ಸಂಖ್ಯೆ 5,250. ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಕೆ ಮಾಡಬಹುದು.
- ಕೃಷಿ ನಿರ್ವಹಣಾ ಅಧಿಕಾರಿ ಪೋಸ್ಟ್’ಗೆ 250 ಹುದ್ದೆಗಳು ಖಾಲಿ ಇವೆ
- ಕೃಷಿ ಅಭಿವೃದ್ಧಿ ಅಧಿಕಾರಿ ಪೋಸ್ಟ್’ಗೆ 1,250 ಹುದ್ದೆಗಳು ಖಾಲಿ ಇವೆ
- ಕೃಷಿ ಸ್ಪೂರ್ತಿ ಪೋಸ್ಟ್’ಗೆ 3,750 ಹುದ್ದೆಗಳು ಖಾಲಿ ಇವೆ.
ವಿದ್ಯಾ ಅರ್ಹತೆ :-ಮೇಲೆ ತಿಳಿಸಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛೆ ಪಡುವ ಅರ್ಜಿದಾರರು ಅಥವಾ ಅರ್ಹತೆ ಇರುವ ವ್ಯಕ್ತಿಗಳು. ಎಸ್.ಎಸ್.ಎಲ್.ಸಿ ( SSLC ), ಪಿಯುಸಿ ( PUC ), ಡಿಪ್ಲೋಮಾ ( DIPLOMA ) ಪದವಿಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಲ್ಲಿ ಉತ್ತೀರ್ಣರಾಗಿ ಇರಬೇಕು.
ವಯಸ್ಸಿನ ಮಿತಿ :-ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳನ್ನು ಹೊಂದಿರಬೇಕು ಮತ್ತು ಗರಿಷ್ಟ 45 ವರ್ಷ ಮೀರಿರಬಾರದು. ವೇತನ ಶ್ರೇಣಿ :-ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳ ಅನುಗುಣವಾಗಿ ವೇತನವನ್ನು ನಿಗದಿ ಮಾಡಲಾಗಿರುತ್ತದೆ.
- ಕೃಷಿ ನಿರ್ವಹಣಾ ಅಧಿಕಾರಿ ₹50,000/-
- ಕೃಷಿ ಅಭಿವೃದ್ಧಿ ಅಧಿಕಾರಿ ₹40,000/-
- ಕೃಷಿ ಸ್ಪೂರ್ತಿ ₹25,000/-
ಅರ್ಜಿ ಶುಲ್ಕ :- ಅರ್ಜಿ ಸಲ್ಲಿಕೆ ಮಾಡುವ ಅರ್ಹ ವ್ಯಕ್ತಿಗಳು ಅರ್ಜಿ ಶುಲ್ಕವನ್ನು ಹುದ್ದೆಗೆ ತಕ್ಕಂತೆ ಆನ್ಲೈನ್ ಮೂಲಕ ಪಾವತಿ ಮಾಡಬೇಕು.
- ಕೃಷಿ ನಿರ್ವಹಣಾ ಅಧಿಕಾರಿ 944/-
- ಕೃಷಿ ಅಭಿವೃದ್ಧಿ ಅಧಿಕಾರಿ 826/-
- ಕೃಷಿ ಸ್ಪೂರ್ತಿ 708/-
ಆಯ್ಕೆ ಮಾಡುವ ವಿಧಾನ :-ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳನ್ನು ಆನ್ಲೈನ್ ಪರೀಕ್ಷೆ ಮತ್ತು ಸಂದರ್ಶನ ನಡೆಸುವ ಮುಖಾಂತರ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ 02/06/2024.
https://pay.bharatiyapashupalan.com/onlinerequirment.
ಆಸಕ್ತಿ ಇರುವ ಅಭ್ಯರ್ಥಿಗಳು ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಆನ್ಲೈನ್ ಮುಖಾಂತರ ಅಪ್ಲಿಕೇಶನ್ ಸಲ್ಲಿಕೆ ಮಾಡಬಹುದು.