ಕರ್ನಾಟಕ ಸರ್ಕಾರ ಹಲವು ರೀತಿಯ ತೊಂದರೆಯಲ್ಲಿ ಇರುವವರಿಗೆ ಹಲವು ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಅದರಂತೆ ಸಣ್ಣ ವ್ಯಾಪಾರ, ಅಂಗಡಿಗಳನ್ನು ಇಟ್ಟುಕೊಂಡ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಮೈಕ್ರೋ ಸರ್ಕಾರ ಎಂಬ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು ಹೇಗೆ ಅರ್ಜಿ ಸಲ್ಲಿಸಬೇಕು, ಕೊನೆಯ ದಿನಾಂಕ ಈ ಎಲ್ಲಾ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಕರ್ನಾಟಕ ಸರ್ಕಾರದ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಮೈಕ್ರೋ ಸಾಲ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಕನಿಷ್ಟ 25 ವರ್ಷ ವಯಸ್ಸಾಗಿರಬೇಕು ಗರಿಷ್ಟ 50 ವರ್ಷ ವಯಸ್ಸಾಗಿರಬೇಕು ಹಾಗೂ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರಬೇಕು. ಈ ಯೋಜನೆಗೆ ಸಣ್ಣ ಪುಟ್ಟ ವ್ಯಾಪಾರ ಹಾಗೂ ಸಣ್ಣ ಅಂಗಡಿಗಳನ್ನು ನಡೆಸುತ್ತಿರುವವರು ಅರ್ಜಿ ಸಲ್ಲಿಸಬಹುದು. ಹೊಸದಾಗಿ ಅಂಗಡಿ, ವ್ಯಾಪಾರ ಮಾಡುವವರಿದ್ದರೂ ಅರ್ಜಿ ಸಲ್ಲಿಸಬಹುದು. ತರಕಾರಿ, ಹೂವು, ಹಣ್ಣು ಮಾರುವವರು, ತಳ್ಳುವ ಗಾಡಿಗಳನ್ನು ನಡೆಸುತ್ತಿರುವವರು ಅರ್ಜಿ ಸಲ್ಲಿಸಬಹುದು. ಈ ಯೋಜನೆಯ ಮೂಲಕ 10,000 ರೂಪಾಯಿ ಸಾಲವನ್ನು ನೀಡುತ್ತಾರೆ.
10,000 ರೂಪಾಯಿಯಲ್ಲಿ 2,000 ರೂಪಾಯಿ ಸಬ್ಸಿಡಿ ಇರುತ್ತದೆ ಅಂದರೆ 2,000 ರೂಪಾಯಿ ಉಚಿತವಾಗಿರುತ್ತದೆ. ಉಳಿದ 8,000 ರೂಪಾಯಿಯನ್ನು ಪಾವತಿಸಬೇಕು. ಅರ್ಜಿ ಸಲ್ಲಿಸುವವರ ಹತ್ತಿರ ಬಿಪಿಎಲ್ ರೇಷನ್ ಕಾರ್ಡ್ ಇರಬೇಕು. ಅರ್ಜಿ ಸಲ್ಲಿಸಲು ರೇಷನ್ ಕಾರ್ಡ್, ಆಧಾರ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್ ನಕಲು ಪ್ರತಿ ಬೇಕಾಗುತ್ತದೆ. ಈ ಯೋಜನೆಗೆ ಅರ್ಜಿಯನ್ನು ಆನ್ಲೈನ್ ನಲ್ಲಿ ಸಲಿಸಬೇಕು. www. Kmdcmaikro.karnataka.gov.in ಈ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ಅರ್ಜಿಯನ್ನು ಇದೆ ಡಿಸೆಂಬರ್ ತಿಂಗಳಿನ 10 ನೇ ತಾರೀಖಿನ ಒಳಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಿ ಪ್ರಿಂಟ್ ಔಟ್ ತೆಗೆದುಕೊಂಡು ಅದಕ್ಕೆ ಡಾಕ್ಯುಮೆಂಟ್ ಗಳನ್ನು ಅಟ್ಯಾಚ್ ಮಾಡಿ ತಾಲೂಕು ಅಥವಾ ಜಿಲ್ಲೆಯ ಅಲ್ಪ ಸಂಖ್ಯಾತರ ಅಭಿವೃದ್ದಿ ನಿಗಮ ಕಚೇರಿಗೆ ಈ ಅಪ್ಲಿಕೇಶನ್ ನ್ನು ಸಬಮಿಟ್ ಮಾಡಬೇಕು. ಹೀಗೆ ಮಾಡಲು 21/12/2020 ಕೊನೆಯ ದಿನಾಂಕವಾಗಿದೆ. ಈ ಮಾಹಿತಿಯನ್ನು ಸಣ್ಣ ವ್ಯಾಪಾರ ನಡೆಸುತ್ತಿರುವ ಅಲ್ಪಸಂಖ್ಯಾತರಿಗೆ ತಪ್ಪದೇ ತಿಳಿಸಿ.