ಭಾರತ ಸರ್ಕಾರವು ಬಡತನ ರೇಖೆಯ ಕೆಳಗೆ ಇರುವವರಿಗೆ ಅನೇಕ ಸೌಲಭ್ಯಗಳನ್ನು ಒದಗಿಸಿದೆ. ಅಂತವರಿಗೆ ಸಹಾಯ ಮಾಡುವ ಸಲುವಾಗಿ ಹಲವಾರು ಯೋಜನೆಗಳನ್ನು ಹೊರಡಿಸಿದೆ. ಅದ್ರಲ್ಲಿ ನಮ್ಮ ಬಿ ಪಿ ಲ್ ಕಾರ್ಡು ಒಂದು. ಅತಿ ಕಡಿಮೆ ದರದಲ್ಲಿ ಜನರಿಗೆ ಸೋಪು, ಗೋದಿ, ರಾಗಿ ಹೀಗೆ ಇತ್ಯಾದಿ ಆಹಾರಗಳನ್ನು ಒದಗಿಸುತ್ತಾ ಬಂದಿದೆ ಅನ್ನೋದು ಖುಷಿಯ ವಿಷಯ.. ಇದರಿಂದ ಎಷ್ಟೋ ಬಡ ಕುಟುಂಬ ತಮ್ಮ ದಿನ ನಿತ್ಯದ ಜೀವನವನ್ನು ಖುಷಿಯಿಂದ ನಿಭಾಯಿಸುವ ಕರಗತ ಮಾಡಿಕೊಂಡಿದ್ದಾರೆ. ಶ್ರೀಮಂತ ವರ್ಗದವರು ಕೂಡ ಈ ಕಾರ್ಡುನ್ನು ಹೊಂದಿದ್ದು ಅದ್ನ ನಮ್ಮ ಸರ್ಕಾರ ರದ್ದು ಮಾಡಲಾಗಿದ್ದು ಬಡವರಿಗೆ ಮಾತ್ರ ಇದರ ಉಪಯೋಗ ಪಡದುಕೊಳ್ಳಬೇಕು ಎಂಬ ಕಾನೂನು ಜಾರಿಗೊಳಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಅಲ್ಲಿನು ಕೂಡ ನಾವು ಪಡಿತರ ಚೀಟಿ ಪಡೆಯಬಹುದು ಬನ್ನಿ ನೋಡೋಣ ಆನ್ಲೈನ್ ಅಲ್ಲಿ ಹೇಗೆ ನೊಂದಣಿ ಮಾಡ್ಬೇಕು ಎಂದು ಈ ಲೇಖನದಲ್ಲಿ ಮಾಹಿತಿ ಇದೆ ಗೆಳೆಯರೇ ಬಿಪಿಎಲ್ ಕಾರ್ಡು ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಲು ಬೇಕಾದ ದಾಖಲೆ ವಿವರ ಇಲ್ಲಿದೆ .

ಮೊದಲಿಗೆ ಮನೆಯ ಎಲ್ಲ ಸದಸ್ಯರ ಆಧಾರ್ ಕಾರ್ಡ್ ಅವರ ಮೊಬೈಲ್ ನಂಬರ್ ಜೋಡಣೆ ಆಗಿರಬೇಕು ನಮ್ಮ ಕರ್ನಾಟಕ ಸರಕಾರ ದಿಂದ ಆಧಾರ್ ಕಾರ್ಡ್ ಅಂಗೀಕಾರ ಆಗಿರಬೇಕು. ನಂತರ ಮನೆಯ ಎಲ್ಲ ಸದಸ್ಯರ ಆದಾಯ ಪ್ರಮಾಣ ಪತ್ರವನ್ನು ಅವರ ಹತ್ತಿರ ಕಂದಾಯ ಇಲಾಖೆಯಿಂದ ಪಡೆಯಬೇಕು. ಇವೆಲ್ಲ ಪ್ರತಿಗಳು ನಿಮ್ಮ ಹತ್ತಿರ ನೆಮ್ಮದಿ ಕೇಂದ್ರ, C S A ಅಥವಾ ಹೊಸ ರೇಷನ್ ಆನ್ಲೈನ್ ಸೆಂಟರ್ ಅಲ್ಲಿ ಇದ್ದಲಿಗೆ ಹೋಗಿ ಮನೆಯ ಯಜಮಾನಿ ಹೆಸರಲ್ಲಿ ರೇಷನ್ ಕಾರ್ಡ್ ಅನ್ನು ನಮೂದಿಸಿ ರಶೀದಿಯನ್ನು ಪಡೆಯಬೇಕು.

ಬಿಪಿಎಲ್ ಅರ್ಜಿ ಹಾಕಿದ ನಂತರ ಪಾಲಿಸಬೇಕಾದ ನಿಯಮಗಳು.
ಮೂಲ ಅರ್ಜಿಯೊಂದಿಗೆ ಕುಟುಂಬ ಎಲ್ಲ ಸದಸ್ಯರ ದಾಖಲೆ ಹಾಗೂ ಜಾತಿ ಆದಾಯ ಪ್ರಮಾಣ ಪತ್ರದೊಂದಿಗೆ ನಿಮ್ಮ ಹತ್ತಿರದ ತಹಶೀಲ್ದಾರ್ ಕಚೇರಿಗೆ ಹೋಗಿ ಅಲ್ಲಿ ಆಹಾರ ಇಲಾಖೆ ಯ ಫುಡ್ ಆಫೀಸರ್ ಗೆ ಅರ್ಜಿಯನ್ನು ನೀಡ್ಬೇಕು. ಅರ್ಜಿಯನ್ನು ಫುಡ್ ಆಫೀಸರ್ ಪರಿಶೀಲಿಸಿದ ನಂತರ ಸರಿಯಾಗಿದಲ್ಲಿ ಒಂದು ಪಂಚನಾಮೆ ಪ್ರತಿ ಮತ್ತು ಗ್ರಾಮ ಲೆಕ್ಕಾಧಿಕಾರಿ ಚೆಕ್ ಲಿಸ್ಟ್ ಮುದ್ರಿಸಿ ಕೊಡುತ್ತಾರೆ.

ತದನಂತರ ಪಂಚನಾಮೆ ಮತ್ತು ಸದಸ್ಯರ ಆಧಾರ್ ಕಾರ್ಡ್ ನಕಲಿ ಪ್ರತಿ ಜೊತೆಗೆ ನಿಮ್ಗೆ ಸಂಭಂದಪಟ್ಟ ಗ್ರಾಮ ಲೆಕ್ಕಾಧಕಾರಿಗಳನ್ನು ಬೇಟಿ ಮಾಡಿ ಅವರಿಗೆ ಚೆಕ್ ಲಿಸ್ಟ್ ಮತೆ ಎಲ್ಲ ನಕಲು ದಾಖಲೆ ಲಗತ್ತಿಸಬೇಕು. ಅವರು ಅದನ್ನು ಪರಿಶೀಲಿಸಿ ಚೆಕ್ ಸಹಿ ಮಾಡುತ್ತಾರೆ. ಗ್ರಾಮ ಲೆಕ್ಕಾಧಿಕಾರಿಗಳ ಬಳಿ ನಿಮ್ಮ ಕುಟುಂಬದವರ ಜಮೀನಿನ ಪೂರ್ಣ ವಿವರ ಇರುತ್ತದೆ ನೀವು ಬಡತನ ರೇಖೆಯ ಒಳಗಡೆ ಇರುವಿರ ನಿಮ್ಮ ಜಾಮೀನು 7 ಎಕ್ರೆ ಕಡಿಮೆ ಇದ್ದು ಇವರು ಸದರಿ ಕುಟುಂಬ ಯೋಜನೆಗೆ ಯೋಗ್ಯರು ಎಂದು ಚೆಕ್ ಲಿಸ್ಟ್ ಸಹಿ ಮಾಡುತ್ತಾರೆ.

ಕೆಲವೊಮ್ಮೆ ಸ್ವತಃ ಗ್ರಾಮ ಲೆಕ್ಕಾಧಿಕಾರಿ ನಿಮ್ಮ ಮನೆಗೆ ಬಂದು ನಿಮ್ಮ ಆಸ್ತಿ ವಿವರವನ್ನು ಅಕ್ಕ ಪಕ್ಕ ಮನೆಯವರಿಂದ ಮಾಹಿತಿ ಕಲೆ ಹಾಕಿ ಸರಿಯಾಗಿದಲಿ ನಿಮ್ಮ ಪಂಚನಾಮೆ ಸಹಿ ಹಾಕುತ್ತಾರೆ. ಪುನಃ ಗ್ರಾಮ ಲೆಕ್ಕಾಧಿಕಾರಿಗಳು ಕೊಟ್ಟ ದಾಖಲೆ ಜೊತೆಗೆ ನಿಮ್ಮ ವಿವರ ಪ್ರತಿ ಜೊತೆ ನಿಮ್ಮ ಫುಡ್ ಆಫೀಸರ್ ಕೊಟ್ಟು ರಶೀದಿ ಪಡೆಯಬೇಕು. ಇದೆಲ್ಲ ಮಾಡಿದ ಮೇಲೆ ನಿಮಗೆ ಹೊಸ ಬಿ ಪಿ ಲ್ ಪಡಿತರ ಚೀಟಿ ದೊರೆಯುತ್ತದೆ. ಇಲ್ಲವಾದಲ್ಲಿ ಕಾರ್ಡ್ ತಿರಸ್ಕಾರ ಆಗಬಹುದು ಅಥವಾ ಜಾಸ್ತಿ ದಿನ ಆದಮೇಲೆ ಸಿಕ್ಕರೂ ಸಿಗ್ಬಹುದು ಇಲ್ಲವಾದಲ್ಲಿ ಇಲ್ಲ.

ಬಿಪಿಎಲ್ ಪಡಿತರ ಚೀಟಿಯ ಉಪಯೋಗ ನೋಡೋಣ
ಬಿಪಿಎಲ್ ಪಡಿತರ ಚೀಟಿಯ ಪಾಲನುಭವಿಗಳು ಮೊದಲು ಬಡತನ ರೇಖೆಯ ಅಡಿಯಲ್ಲಿ ಇರ್ಬೇಕು.
ಪಲನುಭವಿಗಳು ತಮ್ಮ ಜಾಮೀನು 7 ಎಕ್ರೆ ಗಿಂತ ಕಮ್ಮಿ ಇರ್ಬೇಕು. ಯಾವ್ದೇ ಸರಕಾರಿ ನೌಕರರು ಆಗಿರಬಾರದು ಸುಳ್ಳು ಮಾಹಿತಿ ನೀಡಿ ಈ ಕಾರ್ಡಿನ ದುರುಪಯೋಗ ವಾಗಿದ್ದಲಿ ಶಿಕ್ಷೆ ಕಟ್ಟಿಟ್ಟ ಬುಟ್ಟಿ. ಬಿಪಿಎಲ್ ಕಾರ್ಡು ಮುಖ್ಯವಾಗಿ ಬಡವರಿಗೆ ವ್ಯೆದ್ಯಕೀಯ ಸೇವೆಗೆ ಅಂದ್ರೆ ಆಪರೇಷನ್ ಸಮಯದಲ್ಲಿ ತುಂಬ ಉಪಯುಕ್ತ. ಯಾರು ಇನ್ನೂ ಕಾರ್ಡ್ ಅನ್ನು ಹೊಂದಿಲ್ಲ ಅವರು ದಯವಿಟ್ಟು ಇಂದೆ ನಿಮ್ಮ ಹತ್ತಿರ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಿ.ಅದರ ಉಪಯೋಗವನ್ನು ಪಡೆದುಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!