ಏಪ್ರಿಲ್ ಮೇ ತಿಂಗಳು ಬರುತ್ತಿದ್ದಂತೆ ಉಷ್ಣಾಂಶ ಹೆಚ್ಚಾಗಿ ನೀರು ಕಡಿಮೆಯಾಗಿ ಹಾಹಾಕಾರ ಪ್ರಾರಂಭವಾಗಿರುತ್ತದೆ. ಕರ್ನಾಟಕದ ಕೆಲವು ಭಾಗಗಳನ್ನು ಕುಡಿಯಲು ನೀರು ಸಿಗುವುದು ಕಷ್ಟವಾಗುತ್ತದೆ. ಬೋರ್ವೆಲ್ ನೀರು ಕಡಿಮೆಯಾಗುತ್ತದೆ. ಬೋರ್ವೆಲ್ ನಲ್ಲಿ ನೀರು ಕಡಿಮೆಯಾದರೂ ಕಡಿಮೆ ಪ್ರಮಾಣದಲ್ಲಿ ನಿರಂತರವಾಗಿ ಪಡೆಯಬಹುದು ಹಾಗಾದರೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ಪ್ರತಿ ವರ್ಷ ಏಪ್ರಿಲ್ ಮೇ ಬೇಸಿಗೆ ಇದ್ದು ಬಾವಿ ಬೋರ್ವೆಲ್ ಗಳಲ್ಲಿ ನೀರು ಕಡಿಮೆ ಆಗುತ್ತದೆ. ನಮ್ಮ ಕರ್ನಾಟಕದಲ್ಲಿ ಕುಡಿಯಲು ನೀರು ಸಿಗದಿರುವ ಪ್ರದೇಶಗಳು ಇದೆ. ಮಳೆಗಾಲದಲ್ಲಿ ಮಳೆ ಕಡಿಮೆಯಾಗುವುದರಿಂದ ಬೇಸಿಗೆ ಬರುತ್ತಿದ್ದಂತೆ ನೀರು ಕಡಿಮೆಯಾಗುತ್ತದೆ. ಏಪ್ರಿಲ್ ಮೇ ತಿಂಗಳಿನಲ್ಲಿ ನೀರಿನ ಸಮಸ್ಯೆ ಸುಮಾರು 90% ಜನರಿಗೆ ಕಾಡುತ್ತದೆ. ರೈತರ ಸಮಸ್ಯೆಗಳಲ್ಲಿ ನೀರಿನ ಸಮಸ್ಯೆಯೂ ಒಂದು ಪ್ರಮುಖ ಸಮಸ್ಯೆಯಾಗಿದೆ. ಬೋರ್ವೆಲ್ ನಲ್ಲಿ ಸಾಕಷ್ಟು ನೀರು ಬರುತ್ತದೆ ಆದರೆ ಬೇಸಿಗೆ ಹತ್ತಿರ ಬಂದಂತೆ ನೀರು ಕಡಿಮೆಯಾಗುತ್ತದೆ ಎರಡು ಇಂಚು ಮೂರು ಇಂಚು ನೀರು ಬರುತ್ತಿರುವ ಬೋರ್ವೆಲ್ ಕೂಡ ಬೇಸಿಗೆ ಬರುತ್ತಾ ನೀರು ಕಡಿಮೆಯಾಗಿ ಬಂದ್ ಇಡುವ ಸಂದರ್ಭ ಕೂಡ ಬರಬಹುದಾಗಿದೆ.
ಕೆಲವು ಬೋರ್ವೆಲ್ ನಲ್ಲಿ ಅರ್ಧ ಗಂಟೆ ಚೆನ್ನಾಗಿ ನೀರು ಬಂದು ನಂತರ ನೀರು ಬರುವುದಿಲ್ಲ. ಮೋಟಾರ್ ಅನ್ನು ಆರ್ ಎೈಬಿ ಎಂದು ಕನೆಕ್ಷನ್ ಮಾಡಿ ಮೋಟಾರ್ ರನ್ ಮಾಡುತ್ತಾರೆ ಇದರಿಂದ ನೀರು ಬರುತ್ತದೆ ಇದೆ ಕನೆಕ್ಷನ್ ಅನ್ನು ಉಲ್ಟಾ ರನ್ ಮಾಡಿದರೆ 25 ಪರ್ಸೆಂಟ್ ನೀರನ್ನು ಮೇಲೆತ್ತುತ್ತದೆ. ಆರ್ ವೈಬಿ ಕನೆಕ್ಷನ್ ಅನ್ನು ಸೀದಾ ಹಾಕಿದಾಗ ನೀರು ಜೋರಾಗಿ ಬಂದು ನಂತರ ಖಾಲಿ ಆಗುತ್ತದೆ. ಆರ್ ವೈಬಿ ಕನೆಕ್ಷನ್ ಅನ್ನು ಉಲ್ಟಾ ಮಾಡಿದಾಗ ಕಡಿಮೆ ನೀರು ಬಂದರೂ ನಿರಂತರವಾಗಿ ಬರುತ್ತದೆ. ಮೋಟಾರ್ ಅನ್ನು ಅರ್ಧ ಗಂಟೆ ಚಾಲೂ ಮಾಡಿ ಒಂದೆ ಸಮನೆ ನೀರು ಬಂದು ನಂತರ ಖಾಲಿ ಆಗುವುದಕ್ಕಿಂತ 2-3 ಗಂಟೆ ಕಡಿಮೆ ಪ್ರಮಾಣದ ನೀರು ಬರುವಂತೆ ಮಾಡಬಹುದು.
ಬೋರ್ವೆಲ್ ನಲ್ಲಿ ನೀರು ಬರದೆ ಇದ್ದಾಗ ಆರ್ ವೈಬಿ ಕನೆಕ್ಷನ್ ಅನ್ನು ಉಲ್ಟಾ ಮಾಡಿ ಬಿವೈಆರ್ ಕನೆಕ್ಷನ್ ಮಾಡಿದಾಗ 25 ಪರ್ಸೆಂಟ್ ನೀರು ನಿರಂತರವಾಗಿ ಬರುತ್ತದೆ. ಬಿವೈಆರ್ ಕನೆಕ್ಷನ್ ಮಾಡುವುದರಿಂದ ಮೋಟಾರ್ ನಲ್ಲಿ ನೀರು ಬರುವಂತೆ ಮಾಡಬಹುದು ಆದರೆ ಎಲ್ಲಾ ಕಂಪನಿಯ ಮೋಟಾರ್ ನಲ್ಲಿ ಬಿವೈಆರ್ ಕನೆಕ್ಷನ್ ಮಾಡಲು ಬರುವುದಿಲ್ಲ ಕೆಲವು ಕಂಪನಿಯ ಮೋಟಾರ್ ನಲ್ಲಿ ಮಾತ್ರ ಹೀಗೆ ಮಾಡಬಹುದು. ಒಟ್ಟಿನಲ್ಲಿ ಬೋರ್ವೆಲ್ ಹಾಕಿಸಿಕೊಂಡವರು ನೀರಿಲ್ಲವಾದರೆ ಸಲಹೆಯನ್ನು ಪಡೆದು ಮೋಟಾರ್ ನಲ್ಲಿ ಕನೆಕ್ಷನ್ ಉಲ್ಟಾ ಮಾಡಿಕೊಳ್ಳುವುದರಿಂದ ಕಡಿಮೆ ಪ್ರಮಾಣದಲ್ಲಿ ನೀರು ನಿರಂತರವಾಗಿ ಬರುವಂತೆ ಮಾಡಿಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.