ನಮ್ಮ ದೇಶದಲ್ಲಿ ಕೃಷಿ ಜೀವಾಳವಾಗಿದೆ ಆದರೆ ಕೃಷಿಯಲ್ಲಿ ತೊಡಗಿಕೊಳ್ಳುತ್ತಿರುವವರ ಸಂಖ್ಯೆ ಕಡಿಮೆಯಾಗಿದೆ ರೈತರಿಗೆ ಬೆಂಬಲ ಬೆಲೆ ಇಲ್ಲದೆ ತಾವು ಬೆಳೆದ ಬೆಳೆಯಿಂದ ಯಾವುದೆ ರೀತಿಯ ಲಾಭ ಆಗದೆ ಇರುವುದು, ಸರಿಯಾದ ಸೌಕರ್ಯಗಳು ಇಲ್ಲದೆ ಇರುವುದು, ಭೂಮಿಯ ಕೊರತೆ ಹೀಗೆ ಅನೇಕ ಕಾರಣಗಳಿಂದ ಕೃಷಿ ಭೂಮಿಯತ್ತ ಜನರು ತೊಡಗಿಕೊಳ್ಳದೆ ಪೇಟೆಯತ್ತ ಒಲವು ತೋರಿಸುತ್ತಿದ್ದಾರೆ. ಕೆಲವರಿಗೆ ಭೂಮಿ ಇದ್ದರೂ ಒಣ ಭೂಮಿಯಾಗಿದ್ದು ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ ಈ ಸಮಸ್ಯೆಗೆ ರಾಯಚೂರಿನ ಮಸ್ಕಿ ಗ್ರಾಮದಲ್ಲಿ ಪರಿಹಾರವಿದೆ ಹಾಗಾದರೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ರಾಯಚೂರಿನ ಮಸ್ಕಿ ಗ್ರಾಮದಲ್ಲಿ ಒಣ ಭೂಮಿಯಾಗಿದ್ದು ಸುತ್ತ ಗುಡ್ಡಗಾಡು ಪ್ರದೇಶದಿಂದ ಕೂಡಿದೆ. ತಜ್ಞರು ಈ ಗ್ರಾಮಕ್ಕೆ ಭೇಟಿ ನೀಡಿದಾಗ ಇಲ್ಲಿ ನೀರು ಬರಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಒಂದು ಮಶೀನ್ ಸಹಾಯದಿಂದ ನೀರಿನ ಹರಿವನ್ನು ಗುರುತಿಸಲಾಗುತ್ತದೆ. ಸಿದ್ದು ಎಂಬ ವ್ಯಕ್ತಿ ಈ ಮಶೀನ್ ಸಹಾಯದಿಂದ ಒಣ ಭೂಮಿಯಲ್ಲಿ ಚಾಲೆಂಜ್ ತೆಗೆದುಕೊಂಡು ನೀರನ್ನು ಹರಿಸಿದ್ದಾರೆ. ಇವರ ಪ್ರಕಾರ ಮಶೀನ್ ಎಲ್ಲರೂ ಇಟ್ಟುಕೊಳ್ಳಬಹುದು ನೋಡುವ ವಿಧಾನದಲ್ಲಿ ವ್ಯತ್ಯಾಸಗಳಿವೆ ಎರಡು ವರ್ಷದಿಂದ ಈ ವೃತ್ತಿಯಲ್ಲಿ ಅನುಭವ ಪಡೆದು ಅವರು ಈ ಭೂಮಿಯಲ್ಲಿ ನೀಡಿಲ್ಲವೆಂದು ತಜ್ಞರು ಹೇಳಿದ್ದನ್ನು ಚಾಲೆಂಜ್ ಆಗಿ ತೆಗೆದುಕೊಂಡು ನೀರನ್ನು ಹರಿಸಿದ್ದಾರೆ.

ಮಶೀನ್ ಅನ್ನು ಯಾರು ಬೇಕಾದರೂ ಖರೀದಿಸಿ ತಿರುಗಾಡಬಹುದು, ಮಶೀನ್ ಇಟ್ಟುಕೊಂಡು ಭೂಮಿಗೆ ಬಂದರೆ ಜನರು ದುಡ್ಡು ಕೊಡುತ್ತಾರೆ ಆದರೆ ಅದು ಮುಖ್ಯವಲ್ಲ ಜನರಿಗೆ ಫಲಿತಾಂಶ ಕೊಡುವುದು ಮುಖ್ಯವಾಗಿದೆ. ಮಶೀನ್ ಸಹಾಯದಿಂದ 1000 ಮೀಟರ್ ವರೆಗೆ ಸ್ಕ್ಯಾನ್ ಮಾಡಬಹುದು. ಮಶೀನ್ ಇಂದ ಸ್ಕ್ಯಾನ್ ಮಾಡಿದಾಗ ವಾಟರ್ ಕ್ವಂಟಮ್, ವಾಟರ್ ಕ್ವಾಲಿಟಿ ಮುಂತಾದ ಹಲವು ವಿಷಯಗಳು ತಿಳಿಯುತ್ತದೆ.

ಟೆಕ್ನಾಲಜಿ ಸಹಾಯದಿಂದ ಕರ್ನಾಟಕದ ಯಾವ ಮೂಲೆಯಲ್ಲಿ ಒಣ ಭೂಮಿಯಲ್ಲಿ ನೀರನ್ನು ಹುಡುಕಿ ಹೇಳುತ್ತಾರೆ ನಮ್ಮ ಸಿದ್ದು ಸರ್. ಮಶೀನ್ ಅನ್ನು ಸರಿ ಆಪರೇಟ್ ಮಾಡಲು ತಿಳಿಯದೆ ಇದ್ದಾಗ ರೈತರಿಗೆ ತಪ್ಪದೆ ಸಲಹೆಯಿಂದ ತೊಂದರೆಯಾಗುತ್ತದೆ ಹೀಗೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಿದ್ದು ಸರ್ ಹೇಳುತ್ತಾರೆ. ಇವರ ಬಳಿ ಇರುವ ಮಶೀನ್ ಗಳು ಅಮೇರಿಕನ್ ಹಾಗೂ ಜಪಾನ್ ಟೆಕ್ನಾಲಜಿ ಆಗಿದೆ ಮಶೀನ್ ಪಾಯಿಂಟ್ ಸಿಕ್ಕಿದಾಗ 5 ಮೀಟರ್ ವರೆಗೆ ರೊಟೆಟ್ ಆಗುತ್ತದೆ ಹೀಗೆ ಪ್ರತಿ 5 ಮೀಟರ್ ಗೂ ಆಗುತ್ತದೆ ಮದ್ಯದಲ್ಲಿ ಒಂದು ಪಾಯಿಂಟ್ ಮಶೀನ್ ಐಡೆಂಟಿಫೈ ಮಾಡುತ್ತದೆ ಆಗ 30 ಮೀಟರ್ ಟೇಪ್ ಹಾಕುತ್ತಾರೆ 10 ಮೀಟರ್ ಗೆ ಒಂದು ಮಳೆ ಬಡಿಯುತ್ತಾರೆ ನಂತರ ಮಶೀನ್ ಗ್ರೌಂಡ್ ವಾಟರ್ ನ್ನು ಐಡೆಂಟಿ ಫೈ ಮಾಡುತ್ತದೆ ಜಿಯೋ ಫಿಸಿಕಲ್ ಮೆಥಡ್, ಮ್ಯಾನ್ಯುವಲ್ ಮೆಥಡ್, ಆಟೋ ಸರ್ಚ್ ಮೆಥಡ್ ಎಂಬ ಮೂರು ಮೆಥಡ್ ಗಳಿವೆ.

ಈ ಮಶೀನ ಸಹಾಯದಿಂದ ಸ್ವೀಟ್ ವಾಟರ್, ಮೀನಿರಲ್ ವಾಟರ್, ಸಾಲ್ಟ್ ವಾಟರ್ ಎಷ್ಟು ಫೀಟ್ ನಲ್ಲಿ ಇದೆ ಎಂಬುದರ ಬಗ್ಗೆಯೂ ತಿಳಿಯುತ್ತದೆ. ಮೊದಲಿಗೆ ಸೆಟ್ ಮಾಡಿದ ಮೇಲೆ ಮಶೀನ್ ಹಿಡಿದುಕೊಂಡು ಹೋಗುತ್ತಿದ್ದಾಗ ಆಂಟೆನಾ ರೊಟೇಟ್ ಆಗುತ್ತದೆ. ಇಂತಹ ಮಶೀನ್ ಕೆಲವರ ಬಳಿ ಇರುತ್ತದೆ ಆದರೆ ಇವರ ಬಳಿ ಇರುವ ಮಶೀನ್ ಉತ್ತಮವಾಗಿದೆ. ಜಿಯೋ ಫಿಸಿಕಲ್ ಮೆಥಡ್ ನಲ್ಲಿ ಗ್ರಾಫ್ ತೆಗೆದುಕೊಳ್ಳಲಾಗುತ್ತದೆ. ಸೆಟ್ ಮಾಡಿರುವುದರಿಂದ ಕೈಯಲ್ಲಿ ಮುಟ್ಟುವುದಿಲ್ಲ ಇದರಿಂದ ಪಾಯಿಂಟ್ ಇರುವ ಜಾಗವನ್ನು ಐಡೆಂಟಿ ಫೈ ಮಾಡಲು ಸುಲಭವಾಗುತ್ತದೆ.

ಇವರ ಬಳಿ ಎರಡು ಮಶೀನ್ ಇದ್ದು ಕರ್ನಾಟಕದ ಯಾವ ಮೂಲೆಯಲ್ಲಿಯೂ ಸರ್ವಿಸ್ ಕೊಡುತ್ತಾರೆ. ದೂರದ ಊರುಗಳಿಗೆ ಹೋದರೆ ಟ್ರಾವೆಲ್ ಚಾರ್ಜ್ ಹಾಗೂ ಫೀ ಹೆಚ್ಚಾಗುತ್ತದೆ ಲೋಕಲ್ ನಲ್ಲಿ ಫೀ ಕಡಿಮೆ ಇರುತ್ತದೆ. ಇವರು 2ರಿಂದ 3 ವರ್ಷದಲ್ಲಿ ಒಣ ಹಾಗೂ ಎಲ್ಲ ರೀತಿಯ ಭೂಮಿಯಲ್ಲಿ ನೀರಿನ ಹರಿವನ್ನು ಗುರುತಿಸಿ ಕೊಟ್ಟಿದ್ದಾರೆ. ಒಣ ಭೂಮಿ ಇರುವುದರಿಂದ ನೀರಾವರಿ ಇಲ್ಲದೆ ಕೃಷಿ ಮಾಡಲು ಸಾಧ್ಯವಾಗದೆ ಇರುವವರು ಇವರ ಮೆಥಡ್ ನಿಂದ ಭೂಮಿಯಲ್ಲಿ ನೀರನ್ನು ಹರಿಸಬಹುದು ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!