Borewell Point: ಮಳೆ ಇಲ್ಲದ ಇಳೆ ಬಿಸಿಲಿನ ಝಳಕ್ಕೆ ಬೆಂದು ಬರಡಾಗಿದೆ. ಬೆಳೆಗೆ ಬೇಕಿರುವ ನೀರನ್ನು ಬೋರ್ ವೆಲ್ ಮೂಲಕ ಪಡೆಯಬಹುದು. ಬೋರ್ ವೆಲ್ ಪಾಯಿಂಟ್ ಮಾಡುವುದು ಅತ್ಯಗತ್ಯ. ಆದರೆ, ಅದನ್ನು ಪರೀಕ್ಷೆ ಮಾಡುವ ವಿಧಾನ ತಿಳಿಯೋಣ ಬನ್ನಿ.
ಒಂದೇ ಕಡೆ 3 ಹೊಲ/ ಜಾಮೀನು/ ಸೈಟ್ ಅಕ್ಕಪಕ್ಕ ಇರುತ್ತದೆ. ಮೊದಲ ಜಾಗದಲ್ಲಿ ಎರಡು ರೀತಿಯ ನೀರಿನ ಸೆಲೆ ಹರಿಯುವ ಕಾರಣ ಬೋರ್ ವೆಲ್ ಪಾಯಿಂಟ್ ಯಶಸ್ವಿಯಾಗಿ ಆಗುತ್ತದೆ.
ಮೂರನೇ ಜಾಗದಲ್ಲಿ ಕೂಡ ನೀರಿನ ಸೆಲೆ ಇರುವುದಕ್ಕೆ ಆಲ್ಲಿ ಕೂಡ ಬೋರ್ ವೆಲ್ ಪಾಯಿಂಟ್ (Borewell Point) ಯಶಸ್ವಿಯಾಗುತ್ತದೆ. ಮೊದಲ ಮತ್ತು ಮೂರನೇ ಜಾಗದಲ್ಲಿ ಹೆಚ್ಚಾಗಿ ನೀರು ಸಿಕ್ಕಿದೆ ಎನ್ನುವ ಕಾರಣಕ್ಕೆ ಇದರ ನಡುವೆ ಇರುವ ಜಾಗದಲ್ಲಿ ಬೋರ್ ವೆಲ್ ಪಾಯಿಂಟ್ ಮಾಡಿದರೆ. ಅದು, ಮೂರನೇ ಜಾಗದಲ್ಲಿ ನೀರು ಸಿಕ್ಕಿರುವಲ್ಲಿ ಪಾಯಿಂಟ್ ಆಗಿರುತ್ತದೆ ಅದಕ್ಕಾಗಿ ಆಲ್ಲಿ ಬೋರ್ ಫೇಲ್ ಆಗುತ್ತದೆ. ಮತ್ತೊಂದು ಕಡೆ ಪಾಯಿಂಟ್ ಮಾಡಲು ಹೋದರೆ ಅದು ಕೂಡ ಮೊದಲನೇ ನೀರಿನ ಸೆಲೆ ಇರುವ ಕಡೆ ಪಾಯಿಂಟ್ ಆಗುವ ಕಾರಣ ಅದು ಕೂಡ ಮತ್ತೆ ಫೇಲ್ ಆಗುತ್ತದೆ.
ಎರಡು ಜಮೀನಿನ ನಡು ಮಧ್ಯೆ ಇರುವ ಜಮೀನಿನಲ್ಲಿ ನೀರು ಸಿಗಲು ಸಾಧ್ಯವೇ ಇಲ್ಲ. ಏಕೆಂದರೆ ನೀರಿನ ಸೆಲೆಗಳು ಆಯಾ ಜಾಗಕ್ಕೆ ಹೋಗಿರಲು ಸಾಧ್ಯವೇ ಇಲ್ಲ. ಅದರಲ್ಲಿ, ನೀರಿನ ಪಾಯಿಂಟ್ ಮಾಡಿರುವ ಜನರ ತಪ್ಪು ಇರುವುದಿಲ್ಲ.ಅಕ್ಕಪಕ್ಕದ ಜಾಗದಲ್ಲಿ ನೀರು ಹೆಚ್ಚಾಗಿ ಸಿಗೋದಕ್ಕೆ ಕಾರಣ ನೀರಿನ ಸರೋವರ ಅದು, ನಡು ಮಧ್ಯ ಇರುವ ಜಾಗದಲ್ಲಿ ಹೋಗಿರುವುದಿಲ್ಲ ಅದಕ್ಕೆ ನೀರು ಸಿಗುವುದಿಲ್ಲ.
ಒಂದು ವೇಳೆ ನೀರು ಸಿಗಲೇಬೇಕು ಎಂದರೆ, ಪೂರ್ವದಿಂದ ಪಶ್ಚಿಮಕ್ಕೆ ಇಲ್ಲ ಪಶ್ಚಿಮದಿಂದ ಪೂರ್ವಕ್ಕೆ ನೀರಿನ ಸೆಲೆ ಹರಿಯುವಂತೆ ಇದ್ದರೆ ಮಾತ್ರ ನೀರು ಸಿಗುತ್ತದೆ. ಆದರೆ ಅದು, ಸಾಧ್ಯವಾಗುವುದು ತುಂಬಾ ವಿರಳ. ಇದರಲ್ಲಿ, ಅದೃಷ್ಟ ಕೂಡ ಇರಬೇಕು.