ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು 85 ದಶಲಕ್ಷ ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ. ಬೇರೆ ಭಾಷೆಯವರು ಸಹ ಕನ್ನಡ ಭಾಷೆಯನ್ನು ತುಂಬಾ ಇಷ್ಟಪಡುತ್ತಾರೆ. ಅನೇಕ ಸೆಲೆಬ್ರಿಟಿಗಳು ಹಲವು ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡಿದ್ದಾರೆ. ಆದ್ದರಿಂದ ನಾವಿಲ್ಲಿ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ದಕ್ಷಿಣ ಆಫ್ರಿಕಾ ತಂಡದ ಸುಪ್ರಸಿದ್ಧ ಆಟಗಾರ ಎಬಿಡಿ ವಿಲಿಯರ್ಸ್ ಅವರು ಐಪಿಎಲ್ ಮಾದರಿ ಕ್ರಿಕೆಟ್ನಲ್ಲಿ ಐಪಿಎಲ್ ತಂಡವನ್ನು ಹಾಡುತ್ತಾರೆ. ಐಪಿಎಲ್ ಕ್ರಿಕೆಟ್ ಟೂರ್ನಿ ಸಂದರ್ಭದಲ್ಲಿ ಒಂದು ಸಂದರ್ಶನದಲ್ಲಿ ಕನ್ನಡದ ಉಪೇಂದ್ರ ಅವರ ಹಾಡನ್ನು ಹೇಳಿ ಕನ್ನಡದ ಮೇಲಿನ ಅಭಿಮಾನವನ್ನು ತೋರ್ಪಡಿಸಿದ್ದಾರೆ. ಹಿಂದಿ ಚಲನಚಿತ್ರದ ಅದ್ಭುತ ನಟರಲ್ಲಿ ಒಬ್ಬರಾದ ಸಲ್ಮಾನ್ ಖಾನ್ ಅವರು ಹಳ್ಳಿ ಹೈದ ಪ್ಯಾಟೆಗ್ ಬಂದ ರಿಯಾಲಿಟಿ ಶೋದ ಜಾಹೀರಾತಿಗೆ ಕನ್ನಡದಲ್ಲಿ ಮಾತನಾಡಿ ಅಭಿಮಾನವನ್ನು ತೋರ್ಪಡಿಸಿದ್ದಾರೆ. ಇನ್ನೋರ್ವ ನಟಿಯಾದ ಐಶ್ವರ್ಯ ರೈ ಅವರು ಮೀಡಿಯಾ ಸಂದರ್ಶನವೊಂದರಲ್ಲಿ ಕನ್ನದಲ್ಲಿ ಮಾತನಾಡಿದ್ದಾರೆ.

ಭಾರತ ಕ್ರಿಕೆಟ್ ತಂಡದ ಅದ್ಭುತ ಆಟಗಾರರಾಗಿದ್ದ ವಿರೇಂದ್ರ ಸೆಹವಾಗ್ ಅವರು ಕೆಸಿಸಿ ಟೂರ್ನಮೆಂಟ್ ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಸೃಜನ್ ಲೋಕೇಶ್ ಅವರು ಹೇಳಿಕೊಟ್ಟ ಹಾಗೆ ಕನ್ನಡದಲ್ಲಿ ಅವರು ಕೂಡ ಮಾತನಾಡುತ್ತಾರೆ. ಈ ಸಂದರ್ಭದಲ್ಲಿ ಕನ್ನಡ ಮಾತನಾಡುವುದು ತುಂಬಾ ಕಷ್ಟ ಎಂದು ವೀರೇಂದ್ರ ಸೆಹ್ವಾಗ್ ಅವರು ಹೇಳಿದ್ದಾರೆ. ಪ್ರಖ್ಯಾತ ಬಾಲಿವುಡ್ನ ನಟಿಯಾಗಿರುವ ಸನ್ನಿ ಲಿಯೋನ್ ಅವರು ಟಿವಿ ಸಂದರ್ಶನವೊಂದರಲ್ಲಿ ಕನ್ನಡದಲ್ಲಿ ಮಾತನಾಡುತ್ತಾರೆ. ತೆಲುಗು ಚಿತ್ರರಂಗದ ಅದ್ಭುತ ನಟರಾಗಿರುವ ಜೂನಿಯರ್ ಎನ್ ಟಿ ಆರ್ ಅವರು ರಿಯಾಲಿಟಿ ಶೋ ಒಂದರಲ್ಲಿ ನನಗೆ ಕನ್ನಡ ತುಂಬಾ ಚೆನ್ನಾಗಿ ಮಾತನಾಡಲು ಬರುತ್ತದೆ ಎಂದು ಹೇಳಿದ್ದಾರೆ. ಅವರ ತಾಯಿ ಮೂಲತಹ ಕುಂದಾಪುರದವರು ಎಂದು ಅವರು ಹೇಳಿಕೊಂಡಿದ್ದಾರೆ. ಅವರು ತುಂಬಾ ಚೆನ್ನಾಗಿ ಕನ್ನಡವನ್ನು ಮಾತನಾಡುತ್ತಾರೆ.

ಖ್ಯಾತ ಹಿಂದಿ ನಟರಾಗಿರುವ ಗೋವಿಂದ ಅವರು ಟಿವಿ ರಿಯಾಲಿಟಿ ಶೋ ಒಂದರಲ್ಲಿ ಡಾಕ್ಟರ್ ರಾಜಕುಮಾರ್ ಅವರ ಹಾಡನ್ನು ಹೇಳಿ ಕರ್ನಾಟಕದ ಸಂಗೀತ ಸ್ಪರ್ಧೆಯನ್ನು ಹುರಿದುಂಬಿಸಿದ್ದಾರೆ. ಹಿಂದಿಯ ಖ್ಯಾತ ನಟಿಯಾಗಿರುವ ದೀಪಿಕಾ ಪಡುಕೋಣೆ ಅವರು ಮೂಲತಹ ಮಂಗಳೂರಿನವರಾಗಿದ್ದು ಅಭಿಷೇಕ್ ಬಚ್ಚನ್ ಅವರು ನಡೆಸಿಕೊಡುವ ಟಿವಿ ಕಾರ್ಯಕ್ರಮದಲ್ಲಿ ಕನ್ನಡವನ್ನು ಹೇಳಿಕೊಡುತ್ತಾರೆ ಮತ್ತು ಅಭಿಷೇಕ್ ಬಚ್ಚನ್ ಅವರು ಕನ್ನಡವನ್ನು ಅವರು ಹೇಳಿದ ಹಾಗೆ ಮಾತನಾಡುತ್ತಾರೆ. ಹೀಗೆ ಅನೇಕ ಸೆಲೆಬ್ರಿಟಿಗಳು ಕನ್ನಡ ಭಾಷೆಯಲ್ಲಿ ಮಾತನಾಡಿ ಕನ್ನಡ ಪ್ರೇಮವನ್ನು ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!