ಮನುಷ್ಯನಿಗೆ ನೋವುಗಳು ಉಂಟಾಗುವುದು ಸಹಜ. ಕೆಲವೊಮ್ಮೆ ಕೆಲಸಗಳನ್ನು ಮಾಡಿ ನೋವುಗಳು ಉಂಟಾಗುತ್ತದೆ. ಕೆಲವೊಮ್ಮೆ ಏನೂ ಕೆಲಸಗಳನ್ನು ಮಾಡದೆ ನೋವುಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಸ್ವಲ್ಪ ಬಗ್ಗಿದರೆ ಸಾಕು ಸೊಂಟ ಹಿಡಿದುಕೊಳ್ಳುತ್ತದೆ. ಹಾಗಾಗಿ ಇಂತಹ ನೋವುಗಳಿಗೆ ಒಂದು ರೀತಿಯ ಎಣ್ಣೆಯನ್ನು ಹಚ್ಚಿದರೆ ಬೇಗ ಕಡಿಮೆಯಾಗುತ್ತದೆ. ಆದ್ದರಿಂದ ನಾವು ಇಲ್ಲಿ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ನೋವುಗಳು ಉಂಟಾದಾಗ ಹೆಚ್ಚಾಗಿ ಕೊಬ್ಬರಿ ಎಣ್ಣೆಯನ್ನು ಹಚ್ಚುತ್ತಾರೆ. ಇದು ಅತಿಯಾದ ನೋವು ಇದ್ದಾಗ ಹಚ್ಚಿದರೆ ಕಡಿಮೆಯಾಗುವುದಿಲ್ಲ. ಆಗ ಯಾವುದಾದರೂ ನೋವು ನಿವಾರಕಗಳನ್ನು ಬಳಸುತ್ತಾರೆ. ನೋವುಗಳಿಗೆ ಔಷಧಿ ಅಂಗಡಿಯಲ್ಲಿ ಸಿಗುವ ಮುಲಾಮುಗಳನ್ನು ಬಳಸುತ್ತಾರೆ. ಒಂದು ವಿಶೇಷವೆಂದರೆ ಇವೆಲ್ಲವುಗಳನ್ನು ಹಚ್ಚುವುದರಿಂದ ಜಿಡ್ಡಿನ ಅಂಶ ಹಾಗೆಯೇ ಇರುತ್ತದೆ. ಹಾಗೆಯೇ ಕೆಲವರು ನೋವಿನ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಇದು ಆರೋಗ್ಯಕ್ಕೆ ಬಹಳ ಹಾನಿಕರ.
ಹಾಗೆಯೇ ಇದರಿಂದ ಸಂಪೂರ್ಣವಾಗಿ ನೋವು ಕಡಿಮೆಯಾಗುವುದಿಲ್ಲ. ಆದರೆ ನೀಲಗಿರಿ ಎಣ್ಣೆಯನ್ನು ಹಚ್ಚುವುದರಿಂದ ಯಾವುದೇ ರೀತಿಯ ಜಿಡ್ಡಿನ ಅಂಶ ಇರುವುದಿಲ್ಲ. ಹಾಗೆಯೇ ನೋವು ಬೇಗನೆ ನಿವಾರಣೆಯಾಗುತ್ತದೆ. ನೀಲಗಿರಿ ಎಣ್ಣೆಯನ್ನು ಹಚ್ಚುವುದರಿಂದ ಚರ್ಮಕ್ಕೆ ಕೂಡ ಬಹಳ ಒಳ್ಳೆಯದು. ಹಾಗೆಯೇ ನೀಲಗಿರಿ ಎಣ್ಣೆಯನ್ನು ಹಚ್ಚುವುದರಿಂದ ಅದು ಬೇಗ ಒಣಗುತ್ತದೆ. ಹಾಗೆಯೇ ಉಳಿದವುಗಳ ಹಾಗೆ ಜಿಡ್ಡಿನ ಅಂಶ ಇರುವುದಿಲ್ಲ.
ಹಚ್ಚಿದ ತಕ್ಷಣ ಚರ್ಮದ ಒಳಗೆ ಹೋಗಿ ಒಳಗಿನ ನೋವನ್ನು ತೆಗೆಯುತ್ತದೆ. ಹಾಗೆ ಇದರಿಂದ ಆ ಭಾಗದ ರಕ್ತಸಂಚಾರ ಕೂಡ ಸರಿಯಾಗಿ ಆಗುತ್ತದೆ. ಆದ್ದರಿಂದ ನೀಲಗಿರಿ ಎಣ್ಣೆಯನ್ನು ತಂದುಕೊಂಡು ಇಟ್ಟುಕೊಂಡರೆ ಬಹಳ ಒಳ್ಳೆಯದು. ಇದರಿಂದ ಯಾವುದೇ ರೀತಿಯ ನೋವುಗಳಿದ್ದರು ಇದನ್ನು ಹಚ್ಚಿ ಕಡಿಮೆ ಮಾಡಿಕೊಳ್ಳಬಹುದು. ಹಾಗೆಯೇ ಇದು ಒಳ್ಳೆಯ ಸುಗಂಧದ್ರವ್ಯ ಕೂಡ ಆಗಿದೆ. ಇದನ್ನು ಹತ್ತಿ ಚೂರಿನಲ್ಲಿ ನೆನೆಸಿ ಮನೆಯಲ್ಲಿ ಭಾಗ ಭಾಗಗಳಲ್ಲಿ ಇಡುವುದರಿಂದ ಮನೆಯು ಘಮಘಮವಾಗಿ ಪರಿಮಳವನ್ನು ಸೂಸುತ್ತದೆ