ರಕ್ತದಾನವನ್ನು ದಾನದಲ್ಲಿ ಮಹಾದಾನ ಎಂದು ಕರೆಯಲಾಗುತ್ತದೆ. ರಕ್ತದಾನವನ್ನು ಮಾಡುವುದರಿಂದ ದೇಹದಲ್ಲಿ ರಕ್ತ ಕಡಿಮೆ ಆಗುತ್ತದೆ ಎಂದು ಕೆಲವರು ತಿಳಿದಿರುತ್ತಾರೆ. ಆದರೆ ಹಾಗೆ ಆಗುವುದಿಲ್ಲ. ಹಾಗೆಯೇ ಎಲ್ಲಾ ರೀತಿಯ ರಕ್ತದ ಗುಂಪಿನವರು ಎಲ್ಲಾ ರೀತಿಯ ರಕ್ತದ ಗುಂಪಿನವರಿಗೆ ರಕ್ತದಾನ ಮಾಡಲು ಬರುವುದಿಲ್ಲ. ಅದಕ್ಕೆ ಹಲವಾರು ನಿಯಮಗಳು ಇವೆ. ನಾವು ಇಲ್ಲಿ ರಕ್ತದಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಅಪಘಾತಗಳು ಆಕಸ್ಮಿತವಾಗಿ ಸಂಭವಿಸುತ್ತವೆ. ಹೆಚ್ಚಾಗಿ ರಸ್ತೆಯಲ್ಲಿ ಅಪಘಾತಗಳು ಉಂಟಾಗಿ ರಕ್ತಸ್ರಾವ ಆಗುತ್ತದೆ. ಆಗ ತಕ್ಷಣ ಆಸ್ಪತ್ರೆಗಳಿಗೆ ಕರೆದೊಯ್ಯಬೇಕಾಗುತ್ತದೆ. ಇಲ್ಲವಾದಲ್ಲಿ ಜೀವ ಹೋಗುವ ಸಾಧ್ಯತೆ ಹೆಚ್ಚು. ಕೆಲವರು ರಕ್ತದಾನ ಮಾಡಲು ತುಂಬಾ ಭಯ ಪಡುತ್ತಾರೆ. ಏಕೆಂದರೆ ದೇಹಕ್ಕೆ ರಕ್ತ ಕಡಿಮೆ ಆಗಬಹುದು ಅಥವಾ ಅಶಕ್ತತೆ ಆಗಬಹುದು ಎಂದು. ಕೆಲವು ಸಂಶೋಧನೆಗಳು ರಕ್ತದಾನವನ್ನು ಮಾಡುತ್ತಾ ಬಂದರೆ ಕ್ಯಾನ್ಸರ್ ಬರುವ ಸಂಭವನೀಯತೆ ಕಡಿಮೆ ಎಂದು ಹೇಳುತ್ತವೆ. ಹಾಗೆಯೇ ಮೇದೋಜೀರಕ ಗ್ರಂಥಿಯ ಆರೋಗ್ಯ ಅಭಿವೃದ್ಧಿಗೊಳ್ಳುತ್ತದೆ.

ಹಾಗೆಯೇ ಹೃದಯ, ಜೀರ್ಣಕ್ರಿಯೆಗೆ ಸಂಬಂಧಿಸಿದಂತೆ ಎಲ್ಲಾ ವ್ಯವಸ್ಥೆಗಳಲ್ಲಿ ಒಳ್ಳೆಯ ಅಭಿವೃದ್ಧಿ ಆಗುತ್ತದೆ. ಇದರಿಂದ ಹಾರ್ಟ್ ಅಟ್ಯಾಕ್ ಆಗುವ ಸಂಭವ ಕಡಿಮೆ. ತೂಕ ಹೆಚ್ಚಿರುವವರು ರಕ್ತದಾನ ಮಾಡುತ್ತಾ ಬಂದರೆ ತೂಕ ಕಡಿಮೆ ಆಗುತ್ತದೆ. ರಕ್ತದಾನವನ್ನು ಮಾಡಲು ಅದರದೇ ಆದ ನಿಯಮಗಳು ಇವೆ. ರಕ್ತದಾನವನ್ನು 17ವರ್ಷ ಕೆಳಗಿನವರು ಮಾಡಬಾರದು. ತೂಕದಲ್ಲಿ 48ಕಿಲೋಗ್ರಾಮ್ ಗಿಂತ ಕಡಿಮೆ ಇರುವವರು ರಕ್ತದಾನ ಮಾಡಬಾರದು. ಹಾಗೆಯೇ ಅನಾರೋಗ್ಯ ಇರುವವರು ರಕ್ತದಾನ ಮಾಡಬಾರದು.

ರಕ್ತದಾನ ಮಾಡಿದ 2 ದಿನಕ್ಕೆ ಪುನಃ ರಕ್ತ ನಮ್ಮ ದೇಹದಲ್ಲಿ ತಯಾರಿ ಆಗುತ್ತದೆ. ಮಾನಸಿಕ ಆರೋಗ್ಯವನ್ನು ಕೂಡ ರಕ್ತದಾನ ಮಾಡುವುದರಿಂದ ಹೆಚ್ಚಿಗೆ ಮಾಡಿಕೊಳ್ಳಬಹುದು. ರಕ್ತದಾನ ಮಾಡಿದ ಸಮಾಧಾನದಿಂದ ದೇಹದಲ್ಲಿ ಮತ್ತು ಮನಸಿನಲ್ಲಿ ಸಕಾರಾತ್ಮಕ ಭಾವನೆ ಹೆಚ್ಚಾಗುತ್ತದೆ. ರಕ್ತದಾನವನ್ನು ಮಾಡಿದ ನಂತರ ಆಸ್ಪತ್ರೆಯಲ್ಲಿ ಜ್ಯೂಸ್ ನ್ನು ಕೊಡುತ್ತಾರೆ. ಅದನ್ನು ಕುಡಿಯಬೇಕು. ಇದರಿಂದ ಶಕ್ತಿ ಬರುತ್ತದೆ. ಆದ್ದರಿಂದ ಕೊನೆಯದಾಗಿ ಹೇಳುವುದೇನೆಂದರೆ ನಾವೆಲ್ಲ ನಮ್ಮ ಆರೋಗ್ಯವನ್ನು ಉಳಿಸಿಕೊಂಡು ಬೇರೆಯವರ ಆರೋಗ್ಯವನ್ನು ಕಾಪಾಡೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!