ಮುಖದ ಮೇಲೆ ಬ್ಲಾಕ್ ಹೆಡ್ಸ್ ಏಕಾಗುತ್ತದೆ ಹಾಗೂ ಆಯುರ್ವೇದ ತಜ್ಞರು ಹೇಳಿದ ಪರಿಹಾರವನ್ನು ಈ ಲೇಖನದ ಮೂಲಕ ತಿಳಿಯೋಣ.
ಮೂಗಿನ ಮೇಲೆ ಚಿಕ್ಕ ಚಿಕ್ಕ ಕಲೆಗಳಾಗುತ್ತವೆ ಅದನ್ನು ಬ್ಲಾಕ್ ಹೆಡ್ಸ್ ಎನ್ನುವರು. ಮುಖದ ಚರ್ಮದ ಮೇಲೆ ಸಣ್ಣ ಸಣ್ಣ ಹೋಲ್ಸ್ ಇರುತ್ತದೆ ಆ ಹೋಲ್ಸ್ ಮೂಲಕ ಎಣ್ಣೆ ಸ್ರವಿಸುತ್ತದೆ ಗಾಳಿ ಎಕ್ಸಚೇಂಜ್ ಆಗುತ್ತದೆ ಫ್ಯಾಟ್ ಹೊರಹೋಗುತ್ತದೆ ಆದರೆ ಮುಖಕ್ಕೆ ಪೌಡರ್ ಅಥವಾ ಇನ್ನಿತರ ಕ್ರೀಮ್ ಗಳನ್ನು ಹಚ್ಚುವುದರಿಂದ ಹೋಲ್ಸ್ ಮುಚ್ಚಿ ಹೋಗುತ್ತವೆ ಇದರಿಂದ ಫ್ಯಾಟ್ ಹೊರಹೋಗದೆ ಬಿಸಿಲಿಗೆ ಹೋದಾಗ ಕಪ್ಪಾಗಿ ಅಲ್ಲೇ ಉಳಿಯುತ್ತದೆ. ಇದಕ್ಕೆ ಪರಿಹಾರವೆಂದರೆ ತ್ರಿಫಲಾ ನೆಲ್ಲಿಕಾಯಿ, ಅಳಲೆಕಾಯಿ, ತಾರೇಕಾಯಿಗಳನ್ನು ನೆರಳಲ್ಲಿ ಒಣಗಿಸಿ ಪುಡಿಮಾಡಿ ಸಮಪ್ರಮಾಣದಲ್ಲಿ ಮಿಕ್ಸ್ ಮಾಡಿ ಅದನ್ನು ನೀರಿನಲ್ಲಿ ಹಾಕಿ ಕಲಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ಕೆಳಗಿನಿಂದ ಮೇಲಕ್ಕೆ ಸರ್ಕಲ್ ಆಕಾರದಲ್ಲಿ ಉಜ್ಜಬೇಕು ಇದರಿಂದ ಫ್ಯಾಟ್ ನ್ನು ಹೊರತೆಗೆಯಬಹುದು. ನಂತರ ಬೆಸಿನೀರಿನಿಂದ ಮುಖವನ್ನು ವಾಷ್ ಮಾಡಿಕೊಳ್ಳಬೇಕು. ಇದಲ್ಲದೆ ಮುಲ್ತಾನಿ ಮಿಟ್ಟಿಯನ್ನು ಮುಖಕ್ಕೆ ಹಚ್ಚಿ ಒಂದು ಗಂಟೆ ನಂತರ ನೀರು ಅಥವಾ ರೋಸ್ ವಾಟರ್ ನ್ನು ಸಿಂಪಡಿಸಿ ಕೆಳಗಿನಿಂದ ಮೇಲಕ್ಕೆ ಸ್ಕ್ರಬ್ ಮಾಡಿ ನಂತರ ಮುಖ ವಾಷ್ ಮಾಡಿಕೊಳ್ಳಬೇಕು.
ಒಮ್ಮೆ ಬ್ಲಾಕ್ ಹೆಡ್ಸ್ ನಿರ್ಮೂಲನೆಯ ನಂತರ ಮತ್ತೆ ಬರಬಾರದೆಂದರೆ ಪ್ರತಿನಿತ್ಯ ಮುಖಕ್ಕೆ ರೋಸ್ ವಾಟರ್ ಹಚ್ಚಿ ಬಿಸಿ ನೀರಿನ ಸ್ಟೀಮ್ ತೆಗೆದುಕೊಳ್ಳಬೇಕು ಇದರಿಂದ ಬ್ಲಾಕ್ ಹೆಡ್ಸ್ ಹೊರಹೋಗುತ್ತದೆ ನಂತರ ಮುಖವನ್ನು ತೊಳೆಯಬೇಕು. ಧೂಳಿಗೆ ಹೋಗುವಾಗ ಮುಖವನ್ನು ಕವರ್ ಮಾಡಬೇಕು ಅಥವಾ ಮುಖವನ್ನು ಪ್ರತಿದಿನ 2-3 ಸಲ ಬಿಸಿನೀರಿನಿಂದ ತೊಳೆಯಬೇಕು. ಈ ಸ್ಕ್ರಬ್ ನ್ನು ಬೆಳಗ್ಗೆ ಅಥವಾ ಸಾಯಂಕಾಲ ಮಾಡಬಹುದು ದಿನಕ್ಕೆ ಒಂದು ಬಾರಿ ಮಾತ್ರ ಮಾಡಬೇಕು. ಮಕ್ಕಳು ಸ್ಕ್ರಬ್ ಮಾಡಬಾರದು 25-30 ವರ್ಷದ ನಂತರ ಮಾಡಬಹುದು ಎಂಬುದು ಆಯುರ್ವೇದ ತಜ್ಞರ ಅಭಿಪ್ರಾಯ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.