ಹಾಗಲಕಾಯಿ ಅಂದ್ರೆ ಕೆಲವರು ಮಾರುದ್ದ ಓಡಿಹೋಗುತ್ತಾರೆ, ಆದ್ರೆ ಈ ಹಾಗಲಕಾಯಿ ಯಾವೆಲ್ಲ ಸಮಸ್ಯೆಗಳಿಗೆ ಪರಿಹಾರವಾಗಿದೆ ಇದರಿಂದ ಶರೀರಕ್ಕೆ ಎಷ್ಟೊಂದು ಲಾಭವಿದೆ ಅನ್ನೋದನ್ನ ಈ ಲೇಖನದ ಮೂಲಕ ತಿಳಿಯೋಣ. ರುಚಿಯಲ್ಲಿ ಕಹಿ ಅಂಶ ಹೊಂದಿದ್ದರು ಆರೋಗ್ಯಕ್ಕೆ ಇದರಿಂದ ಹೆಚ್ಚು ಲಾಭವಿದೆ ಅನ್ನೋದನ್ನ ತಜ್ಞರು ಹೇಳುತ್ತಾರೆ.
ಹಾಗಲಕಾಯಿಯನ್ನು ಅಡುಗೆಗೆ ಬಳಸಿ ಹೆಚ್ಚು ಉಪಯೋಗ ಪಡೆದುಕೊಳ್ಳಬಹುದು, ಇನ್ನು ಹಾಗಲಕಾಯಿ ಗೊಜ್ಜು ಮಾಡಿ ತಿನ್ನೋದ್ರಿಂದ ಹೊಟ್ಟೆ ಶುದ್ದಿಯಾಗುವುದರ ಜೊತೆಗೆ ಕರುಳಿನ ಹುಣ್ಣು ಮೂಲವ್ಯಾದಿ ಕೆಮ್ಮು ಮುಂತಾದ ಸಮಸ್ಯೆಗೆ ಪರಿಹಾರವಿದೆ.
ಹಾಗಲಕಾಯಿ ಹೊಟ್ಟೆಯಲ್ಲಿನ ಹುಳು ಸಮಸ್ಯೆ ನಿವಾರಿಸುವ ಜೊತೆಗೆ ಹೊಟ್ಟೆಯಲ್ಲಿನ ಜಂತು ಹುಳು ನಿವಾರಣೆಗೆ ಈ ಹಾಗಲಕಾಯಿ ರಸವನ್ನು ಕುಡಿಯುವುದು ಉತ್ತಮ ಎಂಬುದಾಗಿ ಆಯುರ್ವೇದಿಕ್ ತಜ್ಞರು ಹೇಳುತ್ತಾರೆ.
ಮುಖದ ಅಂದವನ್ನು ಹಾಳುಮಾಡುವಂತ ಮೊಡವೆ ನಿವಾರಣೆಗೆ ಹಾಗಲಕಾಯಿ ಮದ್ದು, ಹೌದು ಮೊಡವೆ ಇರುವಂತ ಜಾಗಕ್ಕೆ ಹಾಗಲಕಾಯಿ ರಸವನ್ನು ಹಚ್ಚುವುದರಿಂದ ಮೊಡವೆ ನಿಯಂತ್ರಣಕ್ಕೆ ಬರುತ್ತದೆ. ಅಷ್ಟೇ ಅಲ್ಲದೆ ಹಾಗಲಕಾಯಿಯನ್ನು ನಿಯಮಿತವಾಗಿ ಬಳಸುವುದರಿಂದ ದೇಹದ ಅನಗತ್ಯ ಬೊಜ್ಜು ಕಡಿಮೆಯಾಗುತ್ತ ಬರುತ್ತದೆ.
ಮೂಲವ್ಯಾದಿ ಇರುವವರು ಮಜ್ಜಿಗೆಯಲ್ಲಿ ಹಾಗಲಕಾಯಿ ರಸವನ್ನು ಹಾಕಿಕೊಂಡು ಸೇವನೆ ಮಾಡುವುದರಿಂದ ನೋವು ಮತ್ತು ಉರಿ ಕಡಿಮೆಯಾಗುತ್ತದೆ. ಇನ್ನು ಹಸಿ ಹಾಗಲಕಾಯಿಯನ್ನು ಮುಟಕ್ಕೂ ಮುಂಚೆ ತಿನ್ನುವುದರಿಂದ ಅಜೀರ್ಣತೆ ಸಮಸ್ಯೆ ಕಾಡೋದಿಲ್ಲ. ಹೀಗೆ ಹತ್ತಾರು ಆರೋಗ್ಯಕಾರಿ ಅಂಶಗಳನ್ನು ಹಾಗಲಕಾಯಿಯಲ್ಲಿ ಕಾಣಬಹುದಾಗಿದೆ.