ನಮ್ಮ ಜೀವನದಲ್ಲಿ ನಾವು ದಿನನಿತ್ಯ ಬಳಸುವ ಹಲವಾರು ವಸ್ತುಗಳ ಅನೇಕ ಲಾಭಗಳು ನಮಗೆ ತಿಳಿದಿರುವುದಿಲ್ಲ. ಕೆಲವು ವಸ್ತುಗಳನ್ನು ನಾವು ಸಾಮಾನ್ಯ ರೀತಿಯಲ್ಲಿ ಬಳಸಿಕೊಂಡು ಜೀವನ ಕಳೆಯುತ್ತಿರುತ್ತೇವೆ ಆದರೆ ಆ ವಸ್ತುಗಳನ್ನು ಮತ್ತೊಂದು ರೀತಿಯಲ್ಲಿ ಬಳಸುವುದರಿಂದ ನಾವು ಕೆಲವೊಂದು ವಿಶೇಷ ಲಾಭಗಳನ್ನು ಪಡೆದುಕೊಳ್ಳುತ್ತೇವೆ. ಅದೇ ರೀತಿ ನಾವು ಈ ಲೇಖನದಲ್ಲಿ ಬಿರಿಯಾನಿ ಎಲೆಯ ಬಗ್ಗೆ ಇದರಿಂದ ನಮಗೆ ಆಗುವ ಲಾಭಗಳು ಏನು? ಬಿರ್ಯಾನಿ ಎಲೆಯ ಮಹತ್ವ ಎನು? ಎನ್ನುವ ವಿಷಯದ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಆಧುನಿಕ ಜೀವನದಲ್ಲಿ ಮನುಷ್ಯ ಎಷ್ಟೇ ಹಣ ಗಳಿಸಿದರೂ ಕೂಡ ಮನಃಶಾಂತಿಗಾಗಿ ಹುಡುಕಾಡುವುದು ಏನೂ ತಪ್ಪಲಿಲ್ಲ. ಹೀಗಿರುವಾಗ ನಾವು ಶುದ್ಧವಾದ ಗಾಳಿಯನ್ನು ಉಸಿರಾಡುವುದರಿಂದ ಹಾಗೂ ಸುಗಂಧ ವಾಸನೆಯನ್ನು ನಾವು ತೆಗೆದುಕೊಳ್ಳುವುದರಿಂದ ನಮ್ಮ ಮನಸ್ಸಿಗೆ ಶಾಂತಿ ಮತ್ತು ಉತ್ಸಾಹ ಮೂಡುತ್ತದೆ.‌ ವೈದ್ಯಶಾಸ್ತ್ರದಲ್ಲಿ ಈ ರೀತಿ ಸುವಾಸನೆಯಿಂದ ಮನಸ್ಸನ್ನು ತಿಳಿ ಮಾಡುವ ವಿಧಾನವನ್ನು ಅರೋಮತೆರಪಿ ಎಂದು ಹೇಳುತ್ತಾರೆ. ನಮ್ಮ ಭಾರತೀಯ ಆಯುರ್ವೇದ ಶಾಸ್ತ್ರದಲ್ಲಿ ಬಿರ್ಯಾನಿ ಎಲೆ ಅಥವಾ ಪಲಾವ್ ಎಲೆಗೂ ಸಹ ಸಾಕಷ್ಟು ಮಹತ್ವದ ಪಾತ್ರವನ್ನು ನೀಡಲಾಗಿದೆ. ಹಾಗಾಗಿ ನೀವು ನಿಮ್ಮ ಮನೆಯಲ್ಲಿ ಒಂದೆರಡು ಬಿರಿಯಾನಿ ಎಲೆಗಳನ್ನು ಸುಡುವುದರಿಂದ ಈ ರೀತಿಯ ಪ್ರಯೋಜನಗಳನ್ನು ಪಡೆಯಬಹುದು.

ಒಂದು ಬಿರ್ಯಾನಿ ಎಲೆ ಅಥವಾ ಪಲಾವ್ ಎಲೆಯನ್ನು ಸುಡಬೇಕು ನಂತರ ಕನಿಷ್ಠ ಪಕ್ಷ ಹತ್ತು ನಿಮಿಷಗಳ ಕಾಲ ಆದರೂ ಈ ಎಲೆಯನ್ನು ಸುಟ್ಟಾದ ನಂತರ ನಿಮ್ಮ ಮನೆಯ ಎಲ್ಲಾ ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಬೇಕು. ಇದರಿಂದ ಎಲೆಯಿಂದ ಬರುವ ಸುವಾಸನೆ ನಿಮ್ಮ ಮನೆಯ ತುಂಬಾ ಹರಡುತ್ತದೆ. ಒಂದು ವೇಳೆ ನಿಮಗೆ ಸಾಧ್ಯವಾದರೇ ನೀವು ಕೂಡ 10 ನಿಮಿಷ ಮನೆಯಿಂದ ಹೊರಗೆ ಇರಿ. 10 ನಿಮಿಷ ಬಿಟ್ಟು ನೀವು ಮನೆ ಒಳಗಡೆ ಹೋದರೇ ಸುಗಂಧ ವಾಸನೆ ನಿಮ್ಮ ಮನೆಯ ತುಂಬಾ ಹರಡುವುದರಿಂದ ನಿಮ್ಮ ಮನಸ್ಸಿಗೆ ಪ್ರಶಾಂತತೆ ಸಿಗುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಮನೆಯಲ್ಲಿ ಸೊಳ್ಳೆ ಮತ್ತು ನೊಣಗಳು ಇದ್ದರೂ ಸಹ ತಕ್ಷಣವೇ ಹೊರಹೋಗುತ್ತವೆ. ಇನ್ನು ಇಷ್ಟೇ ಅಲ್ಲ ನೀವು ಬಿರಿಯಾನಿ ಎಲೆಗಳನ್ನು ಬಳಸಿಕೊಂಡು ನಿಮ್ಮ ಮನೆಯಲ್ಲಿ ಇರುವಂತಹ ಜಿರಲೆಯನ್ನು ಸಹ ಬಹಳ ಸುಲಭವಾಗಿ ತೆಗೆದುಹಾಕಬಹುದಾಗಿದೆ. ನೀವು ಮಾಡಬೇಕಾಗಿರುವುದು ಇಷ್ಟೇ, ಒಂದು ಬಿರಿಯಾನಿ ಎಲೆಯನ್ನು ತೆಗೆದುಕೊಂಡು ಪುಡಿ ಮಾಡಿ ಜಿರಳೆಗಳು ಓಡಾಡುತ್ತಿರುವ ಸ್ಥಳದಲ್ಲಿ ಎಸೆದರೇ ಈ ಎಲೆಯ ವಾಸನೆ ಜಿರಲೆಗಳಿಗೆ ಆಗದೇ ಇರುವುದರಿಂದ ಜಿರಲೆಗಳು ದೂರ ಹೋಗುತ್ತವೆ. ಇದರಿಂದ ನೀವು ಸುಲಭವಾಗಿ ಜಿರಲೆಗಳನ್ನು ಸಹ ಮನೆಯಿಂದ ಓಡಿಸಬಹುದಾಗಿದೆ. ನಾವು ಹೀಗೆ ಹಲವಾರು ವರ್ಷಗಳಿಂದ ಮಸಾಲಾ ಪದಾರ್ಥವಾಗಿ ಬಳಸುತ್ತಿರುವ ಬಿರಿಯಾನಿ ಎಲೆಯಿಂದ ಇಷ್ಟೆಲ್ಲಾ ಲಾಭಗಳು ಇರುವಾಗ ಅವುಗಳ ಸರಿಯಾದ ಪ್ರಯೋಜನವನ್ನು ನಾವು ಪಡೆಯದೆ ಇರಲು ಹೇಗೆ ಸಾಧ್ಯ ಮೇಲೆ ಹೇಳಿದ ರೀತಿಯಲ್ಲಿ ಬಿರ್ಯಾನಿ ಎಲೆಯನ್ನು ಸುಟ್ಟು ನೋಡಿ ಹಾಗೂ ಅದರ ಪ್ರಯೋಜನ ಪಡೆದುಕೊಳ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!