Bhoo Odetana Yojane Online Application: ಒಂದು ವೇಳೆ ಮಹಿಳೆಯರು ಕೃಷಿ ಕೆಲಸ ಮಾಡುತ್ತಿದ್ದು, ಅವರ ಬಳಿ ಭೂಮಿ ಇಲ್ಲ ಎಂದರೆ ಅವರ ಮನೆಯ 10ಕಿಮೀ ವ್ಯಾಪ್ತಿಯಲ್ಲಿ ಕೃಷಿಗೆ ಸರಿ ಹೊಂದುವಂಥ 2 ಎಕರೆ ಅಥವಾ ಜಮೀನು ಖರೀದಿ ಮಾಡಲು ಅಥವಾ ಶುಷ್ಕವಾದ 1 ಎಕರೆ ಭೂಮಿ ಖರೀದಿ ಮಾಡುವುದಕ್ಕೆ ಸರ್ಕಾರವೇ ಸಹಾಯಧನ ನೀಡುತ್ತಿದೆ. ಭೂಮಿಯ ಒಡೆತನದ ಯೋಜನೆಯ ಮೂಲಕ ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ ಈಗಾಗಲೇ ನಿಗದಿ ಮಾಡಿರುವ ಘಟ್ಟಕ್ಕೆ 25 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಬೇರೆ ಜಿಲ್ಲೆಯ ಜನರಿಗೆ 20 ಲಕ್ಷ ವೆಚ್ಚವಾಗುತ್ತದೆ.
ಸರ್ಕಾರದಿಂದ ಸಿಗುವ ಈ ಧನ 50% ಸಹಾಯ ಧನ ಆಗಿರುತ್ತದೆ, ಇನ್ನು 50% ಸಾಲ ಕಟ್ಟಬೇಕಾಗುತ್ತದೆ. ಇದಕ್ಕಾಗಿ ಅರ್ಜಿ ಸಲ್ಲಿಸಲು ಈ ದಾಖಲೆಗಳು ಬೇಕಾಗುತ್ತದೆ, ಫೋಟೋ, ಕ್ಯಾಸ್ಟ್ ಸರ್ಟಿಫಿಕೇಟ್, ಆಧಾರ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್, ಕೃಷಿ ಕಾರ್ಮಿಕರ ದೃಢೀಕರಣ ಪತ್ರ. ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಬೋವಿ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ..
Bhoo Odetana Yojane Online Application
ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೇಮಾರಿ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಈ ಎಲ್ಲಾ ನಿಗಮಕ್ಕೆ ಸೇರಿದವರು ಈ ಯೋಜನೆಗೆ ಅಪ್ಲೈ ಮಾಡಿ, ಲಾಭ ಪಡೆಯಬಹುದು.
ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರ ಇವುಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಹಾಕುವುದಕ್ಕೆ ಕೊನೆಯ ದಿನಾಂಕ ನವೆಂಬರ್ 29 ಆಗಿರುತ್ತದೆ. ಹಾಕುವ ಅರ್ಜಿಗಳನ್ನು ಅಧಿಕಾರಿಗಳು ಪರಿಶೀಲಿಸಿ, ಎಲ್ಲವೂ ಸರಿಯಿದ್ದರೆ, ನಿಮಗೆ ಈ ಸೌಲಭ್ಯವನ್ನು ಒದಗಿಸಿ ಕೊಡುತ್ತಾರೆ. ಇದನ್ನೂ ಓದಿ ರೇಷನ್ ಕಾರ್ಡ್ ಮಾಡಿಸುವವರೇ ಇಲ್ಲಿ ಗಮನಿಸಿ, ಸರ್ಕಾರದಿಂದ ಹೊಸ ನಿಯಮ ಈ ಕೆಲಸ ಮಾಡಿಲ್ಲ ಅಂದ್ರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಲಿದೆ