ಜಗತ್ತಿನಲ್ಲಿ ಅನೇಕ ವಿಸ್ಮಯಕಾರಿ ವಿಚಾರಗಳು, ವಸ್ತುಗಳು, ವ್ಯಕ್ತಿಗಳು, ಸ್ಥಳಗಳನ್ನು ನಾವು ಕೇಳುತ್ತೇವೆ ಹಾಗೂ ನೋಡುತ್ತೇವೆ. ಇವುಗಳು ಅನೇಕ ರಹಸ್ಯಗಳನ್ನು ತಮ್ಮಲ್ಲಿಯೇ ಉಳಿಸಿಕೊಂಡಿರುತ್ತದೆ. ಯಾವುದೇ ವಿಜ್ಞಾನ ಹಾಗೂ ಮುಂದುವರೆದ ತಂತ್ರಜ್ಞಾನದಿಂದಲೂ ಸಹ ಇವುಗಳ ರಹಸ್ಯಗಳನ್ನು ಭೇದಿಸಲು ಆಗುವುದಿಲ್ಲ. ಇಂದು ನಾವು ಒಂದು ರಹಸ್ಯವನ್ನು ತನ್ನಲ್ಲಿಯೇ ಉಳಿಸಿಕೊಂಡಿರುವ ಸ್ಥಳದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಭೋಜೇಶ್ವರ ದೇವಾಲಯ ಇದು ಮಧ್ಯಪ್ರದೇಶ ರಾಜ್ಯದ ಭೋಪಾಲ್ ಜಿಲ್ಲೆಯ ಒಂದು ಗ್ರಾಮದಲ್ಲಿದೆ. ವಿಶೇಷವೇನೆಂದರೆ ಈ ದೇವಸ್ಥಾನವನ್ನು ಒಂದೇ ರಾತ್ರಿಯಲ್ಲಿ ಕಟ್ಟಲಾಗಿದೆ ಎಂದು ಹೇಳುತ್ತಾರೆ. ಈ ದೇವಸ್ಥಾನಕ್ಕೆ ಛಾವಣಿಯೇ ಇಲ್ಲ. ಇದು ಅತ್ಯಂತ ಪುರಾತನವಾದ ದೇವಸ್ಥಾನವಾಗಿದೆ ಎಂದು ಹೇಳಲಾಗುತ್ತದೆ. ಇದು ಶಿವನ ದೇವಾಲಯವಾಗಿದೆ. ಯಾವುದೇ ಒಂದು ಅಪೂರ್ಣಗೊಂಡ ಕಥೆಯಾಗಲೀ ಅಥವಾ ನಿರ್ಮಾಣವಾಗಲಿ ಅವುಗಳನ್ನು ನೋಡಿದಾಗ ಅತ್ಯಂತ ಕುತೂಹಲ ಹಾಗೂ ಆಕರ್ಷಣೆಯು ನಮ್ಮಲ್ಲಿ ಉಂಟಾಗುತ್ತದೆ. ಕಾರಣ ಅವುಗಳ ಹಿಂದೆ ಒಂದು ದಂತಕಥೆಯು ಅಥವಾ ರಹಸ್ಯಗಳು ಇರುತ್ತದೆ. ಈ ಭೋಜೇಶ್ವರ ದೇವಾಲಯವು ಸಹ ಅಪೂರ್ಣಗೊಂಡ ನಿರ್ಮಾಣವಾಗಿದೆ ಹಾಗೂ ಈ ದೇವಸ್ಥಾನವನ್ನು ಪೂರ್ಣಗೊಳಿಸಲು ಯಾವ ರಾಜನ ಬಳಿಯಾಗಲಿ ಅಥವಾ ಯಾವ ಸರ್ಕಾರದ ಬಳಿಯಾಗಲಿ ಆಗುತ್ತಿಲ್ಲ.

ಈ ಭೋಜೇಶ್ವರ ದೇವಾಲಯವು ತನ್ನದೇ ಆದ ವೈಶಿಷ್ಟ್ಯತೆಗಳನ್ನು ಹೊಂದಿದೆ. 110 ಅಡಿ ಉದ್ದ ಹಾಗೂ 80 ಅಡಿ ಅಗಲವನ್ನು ಈ ದೇವಸ್ಥಾನವು ಹೊಂದಿದೆ. ಹಾಗೆಯೇ ಕೆಂಪುಕಲ್ಲಿನಿಂದ ನಿರ್ಮಿಸಲ್ಪಟ್ಟಿದೆ. ವೈಶಿಷ್ಟ್ಯವಾದ ಒಂದೇ ಕಲ್ಲಿನಿಂದ ಹಾಗೂ ಒಂದೇ ರಾತ್ರಿಯಲ್ಲಿ ಈ ಶಿವಲಿಂಗವನ್ನು ಕೆತ್ತಲಾಗಿದೆ. ಹಾಗೂ ಈ ಶಿವಲಿಂಗವು ದಿನದಿಂದ ದಿನಕ್ಕೆ ಎತ್ತರವಾಗುತ್ತದೆ. ಇದುವೇ ಈ ದೇವಾಲಯದ ಹಾಗೂ ಶಿವಲಿಂಗದ ನಿಗೂಢ ರಹಸ್ಯವಾಗಿದೆ. ಈ ಶಿವಲಿಂಗವು ಅತ್ಯಂತ ಪ್ರಾಚೀನವಾದ ಶಿವಲಿಂಗ ವಾಗಿದೆ. ಇತ್ತೀಚಿನ ದಿನಗಳಲ್ಲಿ ನಾವು ಸಿಮೆಂಟ್ ನಿಂದ ಮಾಡಿದ ಹಾಗೂ ಮತ್ತಿನ್ನಾವುದೇ ವಸ್ತುಗಳಿಂದ ಮಾಡಿದ ಶಿವಲಿಂಗವನ್ನು ಕಾಣುತ್ತೇವೆ.

ಆದರೆ ಈ ಶಿವಲಿಂಗವೂ ಪ್ರಾಚೀನವಾದ ಹಾಗೂ ಒಂದೇ ಕಲ್ಲಿನಿಂದ ಒಂದೇ ರಾತ್ರಿಯಲ್ಲಿ ನಿರ್ಮಿಸಿದ ಬೃಹತ್ ಶಿವಲಿಂಗ ವಾಗಿದೆ. ಈ ಶಿವಲಿಂಗದ ಎತ್ತರ ಸುಮಾರು ನಲವತ್ತು ಅಡಿಗಳಷ್ಟಿದೆ ಹಾಗೂ ಅಗಲ ಸುಮಾರು ಮೂವತ್ತು ಅಡಿಗಳಷ್ಟಿದೆ. ಮತ್ತೊಂದು ವಿಶೇಷತೆ ಏನೆಂದರೆ ಹಿಂದೂ ದೇವಾಲಯಗಳು ಪೂರ್ವಾಭಿಮುಖವಾಗಿ ಇರುತ್ತದೆ. ಆದರೆ ಈ ದೇವಾಲಯವು ಪಶ್ಚಿಮಾಭಿಮುಖವಾಗಿದೆ. ದೇವಾಲಯದ ಹೊರಭಾಗದ ಕೆತ್ತನೆಯು ಶಿಲ್ಪಕಲೆಗಳನ್ನು ಒಳಗೊಂಡಿದೆ ಹಾಗೂ ಹೊಸತನವನ್ನು ಉಳಿಸಿಕೊಂಡಿದೆ. ಈ ದೇವಾಲಯದ ಅನೇಕ ಭಾಗಗಳು ಮುಸ್ಲಿಂ ದಾಳಿಕೋರರ ದಾಳಿಯಿಂದ ಹಾಳಾಗಿದೆ.  ಈ ದೇವಾಲಯಕ್ಕೆ ಹೋಗಲು ಮೆಟ್ಟಿಲುಗಳ ಮೂಲಕ ದೊಡ್ಡ ಗುಡ್ಡವನ್ನು ಹತ್ತಬೇಕಾಗುತ್ತದೆ.

ಇಷ್ಟು ದೊಡ್ಡ ದೇವಾಲಯವನ್ನು ಇಷ್ಟು ಎತ್ತರದಲ್ಲಿ ನಿರ್ಮಿಸಿದರ ಬಗ್ಗೆ ಅಚ್ಚರಿಯು ಉಂಟಾಗುತ್ತದೆ. ಈ ದೇವಾಲಯವು ಸಂಪೂರ್ಣವಾಗಿ ನಿರ್ಮಿತಗೊಂಡಿಲ್ಲ. ಇದರ ಬಗ್ಗೆ ಅಲ್ಲಿನ ಇತಿಹಾಸಕಾರರು ವಿವರಿಸುವಂತೆ ನಿರ್ಮಾಣ ಹಂತದಲ್ಲಿ ಯುದ್ಧಗಳು ಪ್ರಾರಂಭವಾಗಿರಬಹುದು ಅಥವಾ ಪ್ರಕೃತಿ ವಿಕೋಪದಿಂದ ಪ್ರಳಯಗಳು ಸಂಭವಿಸಿರಬಹುದು ಎಂದು ಇತಿಹಾಸಕಾರರು ಊಹಿಸುತ್ತಾರೆ. ಬಹುಮುಖ್ಯವಾದ ಹಾಗೂ ಆಕರ್ಷಣೀಯವಾದ ವಿಚಾರವೇನೆಂದರೆ ಈ ಶಿವಲಿಂಗವು ದಿನದಿಂದ ದಿನಕ್ಕೆ ಸ್ವಲ್ಪ ಎತ್ತರವಾಗುತ್ತದೆ.  ನೀವೆಂದಾದರೂ ಮಧ್ಯಪ್ರದೇಶದ ಕಡೆಗೆ ಪ್ರವಾಸವನ್ನು ಕೈಗೊಂಡರೆ ಈ ಸ್ಥಳಕ್ಕೊಮ್ಮೆ ಭೇಟಿಯನ್ನು ನೀಡಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!