Bele parihara list karnataka: ರಾಜ್ಯದಲ್ಲಿ ಈ ವರ್ಷ ಮಳೆ ಸರಿಯಾಗಿ ಇಲ್ಲದ ಕಾರಣ ಬರದ ಪರಿಣಾಮವನ್ನು ರೈತರು ಎದುರಿಸುತ್ತಿದ್ದಾರೆ. ಹಾಗಾಗಿ ನಮ್ಮ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಟ್ಟು 195 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳು ಎಂದು ಘೋಷಿಸಲಾಗಿದ್ದು, ರೈತರಿಗೆ ಬರ ಪರಿಹಾರ ನಿಧಿ ನೀಡಲಾಗುತ್ತಿದೆ, ಎಲ್ಲಾ ರೈತರು ಕೂಡ ಈ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಬರಪೀಡಿತ ರೈತರಿಗೆ ಕಂದಾಯ ಇಲಾಖೆಯು ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲಿದೆ. ಫ್ರೂಟ್ಸ್ ಕಾಯ್ದೆಯ ಅಡಿಯಲ್ಲಿ ಈ ಪರಿಹಾರ ನೀಡಲಾಗುತ್ತಿದೆ.

ರೈತರಿಗೆ ಮತ್ತು ಸರ್ಕಾರಕ್ಕೆ ನಷ್ಟ ಆಗಬಾರದು ಎಂದು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಈ ಪರಿಹಾರ ಹಣ ಪಡೆಯಲು, ರೈತರು ಫ್ರೂಟ್ಸ್ ಕಾಯ್ದೆಯಲ್ಲಿ ರಿಜಿಸ್ಟಾರ್ ಮಾಡಿಕೊಂಡಿರಬೇಕು, ಇದಕ್ಕೆ FID ಕಡ್ಡಾಯ ಆಗಿದೆ. FID ಗಾಗಿ ರೈತರು ಜಮೀನಿನ ದಾಖಲೆ, ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಇದೆಲ್ಲವು ಬೇಕಾಗುತ್ತದೆ. FID ರಿಜಿಸ್ಟರ್ ಆದ ತಕ್ಷಣವೇ ರೈತರಿಗೆ ಬರ ಪರಿಹಾರ ನಿಧಿಯ ಹಣ ವರ್ಗಾವಣೆ ಆಗುತ್ತದೆ. ಈ ಮೊದಲು ಬರ ಪರಿಹಾರ ನಿಧಿಯ ಹಣವನ್ನು ರೈತರಿಗೆ ಜಿಲ್ಲಾವಾರು ರೀತಿಯಲ್ಲಿ ಪರಿಹಾರ ನೀಡಲಾಗುತ್ತಿತ್ತು.

ಆಗ ಎಲ್ಲಾ ರೈತರಿಗೂ ಪರಿಹಾರದ ಹಣ ಸರಿಯಾಗಿ ತಲುಪುತ್ತಿರಲಿಲ್ಲ. ರೈತರಿಗೆ ಈ ತೊಂದರೆ ಆಗಬಾರದು ಎಂದು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಫ್ರೂಟ್ಸ್ ಐಡಿಯನ್ನು ಚೆಕ್ ಮಾಡುವುದು ಹೇಗೆ ಎಂದು ತಿಳಿಯೋಣ..
ಮೊದಲಿಗೆ ನೀವು fruitspmk.karnataka.gov.in ಸರ್ಕಾರದ ಈ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
ಇದು Farmers Registration and Unified beneficiary Information System PM-KISAN ಪೇಜ್ ಆಗಿರುತ್ತದೆ. ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಲು, ಆಧಾರ್ ನಂಬರ್ ಹಾಕಿ ಸರ್ಚ್ ಮಾಡಬಹುದು.

ಈಗ ನಿಮ್ಮ 16 ಡಿಜಿಟ್ ಗಳ ಫ್ರೂಟ್ಸ್ ಐಡಿ ನಿಮ್ಮ ಸ್ಕ್ರೀನ್ ಮೇಲೆ ಕಾಣಿಸುತ್ತದೆ. ಇದು ಬಂದರೆ ಬರ ಪರಿಹಾರ ಪಡೆಯಲು ನಿಮಗೆ ಅರ್ಹತೆ ಎಂದು ಅರ್ಥ. ಅಕಸ್ಮಾತ್ ಆಧಾರ್ ನಂಬರ್ ಹಾಕಿದ ಮೇಲೆ No Data Found ಎಂದು ಬಂದರೆ, ನಿಮಗೆ ಹತ್ತಿರ ಇರುವ ರೈತರ ಸಂಪರ್ಕ ಕೇಂದ್ರಕ್ಕೆ ಹೋಗಿ ಪರಿಹಾರ ಪಡೆದುಕೊಳ್ಳಬಹುದು. ಪರಿಹಾರ ಪಡೆಯುವುದಕ್ಕೆ ಎಲ್ಲಾ ರೈತರು ಡಿಸೆಂಬರ್ ತಿಂಗಳ ಒಳಗೆ ಫ್ರೂಟ್ಸ್ ಐಡಿ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ ಖಚಿತಪಡಿಸಿದೆ. ಇಲ್ಲದಿದ್ದರೆ ಪರಿಹಾರದ ಹಣ ಸಿಗುವುದಿಲ್ಲ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!