ಮನುಷ್ಯನ ಜೀವನದಲ್ಲಿ ಹಾಲು ಎಂಬುದು ಒಂದು ಅವಿಭಾಜ್ಯ ಅಂಶ ಯಾಕಂದ್ರೆ ಮಾನವನು ತಾನು ಹುಟ್ಟಿದಾಗಿನಿಂದ ಹಿಡಿದು ಸಾಯುವವರೆಗೂ ಸಹ ಹಾಲನ್ನು ಕುಡಿಯುತ್ತಲೇ ಇರುತ್ತಾನೆ, ದಿನಕ್ಕೆ ಒಮ್ಮೆಯಾದರೂ ಸಹ ಹಾಲನ್ನು ನಾವು ಕುಡಿಯುತ್ತೇವೆ ಹಾಲಿನಿಂದ ನಮ್ಮ ದೇಹಕ್ಕೆ ಆಗುವ ಪ್ರಯೋಜನಗಳ ಅರಿವಿಲ್ಲದಿದ್ದರು ಸಹ ನಾವು ಹಾಲನ್ನು ಕುಡಿಯುತ್ತಲೇ ಇರುತ್ತೇವೆ. ಮಾನವನು ತಾನು ಮಗುವಾಗಿದ್ದಾಗ ತಾಯಿಯ ಮೊಲೆಹಾಲು ನಂತರದಲ್ಲಿ ಮನುಜಾದಿಗಳ ಮಾತರೂಪು ಗೋವಿನ ಹಾಲನ್ನು ನಾವು ಬಳಸುತ್ತೇವೆ ಹಾಲು ಅಮೃತಕ್ಕೆ ಸಮಾನ ಎಂಬ ಮಾತು ಸತ್ಯಕ್ಕೆ ಬಹಳ ಹತ್ತಿರವಾದದ್ದು ಅಂತಹ ಅಮೃತವು ನಮ್ಮ ದೇಹಕ್ಕೆ ಒದಗಿಸುವ ಪೋಷಕಾಂಶಗಳ ಬಗ್ಗೆ ಮತ್ತು ನೀಡುವು ಆರೋಗ್ಯಕಾರಿ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ನಾಲ್ಕೈದು ಎಲಕ್ಕಿಗಳನ್ನು ಅರೆದು ಅದನ್ನು ಹಾಲು ಮತ್ತು ಎಳನೀರಿನೊಂದಿಗೆ ಸೇರಿಸಿ ಕುಡಿಯುವುದರಿಂದ ಕಟ್ಟು ಮೂತ್ರದ ಸಮಸ್ಯೆ ಸುದಾರಿಸುತ್ತದೆ, ಹಸುವಿನ ಹಾಲನ್ನು ಅಥವಾ ತಾಯಿಯ ಎದೆ ಹಾಲನ್ನು ತೆಗೆದುಕೊಂಡು ಆ ಹಾಲಿನೊಂದಿಗೆ ಒಣ ಶುಂಠಿಯನ್ನು ತೇದು ಅದರ ಗಂಧವನ್ನು ಹಣೆಗೆ ಲೇಪನ ಮಾಡಿಕೊಳ್ಳುವುದರಿಂದ ತಲೆ ನೋವು ಕಡಿಮೆಯಾಗುತ್ತದೆ, ನಾಲ್ಕು ಚಮಚ ಹಾಲಿನೊಂದಿಗೆ ಒಂದು ಚಮಚ ಉಪ್ಪನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ನಿಮ್ಮ ಮುಖ ಸುಕ್ಕುಗಟ್ಟದಂತೆ ಇದು ಸಹಕಾರಿಯಾಗಿರುತ್ತದೆ.
ನೀವು ಮುಖ ತೊಳೆಯುವ ನೀರಿನೊಂದಿಗೆ ಸ್ವಲ್ಪವೇ ಹಾಲು ಸೇರಿಸಿ ಮುಖ ತೊಳೆದುಕೊಳ್ಳುವುದರಿಂದ ನಿಮ್ಮ ಚರ್ಮ ಸುಲಭವಾಗಿ ಒಡೆಯುವುದಿಲ್ಲ, ಪ್ರತಿ ದಿನ ಒಂದು ಬಟ್ಟಲು ನೊರೆ ಹಾಲನ್ನು ಎರಡರಿಂದ ಮೂರು ದಿನಗಳ ವರೆಗೆ ಕುಡಿಯುವುದರಿಂದ ನಿಮ್ಮ ಬಾಯಿ ಹುಣ್ಣು ಗುಣಮುಖವಾಗುತ್ತದೆ. ಆಗತಾನೇ ಕರೆದ ಒಂದು ಲೋಟ ಹಸುವಿನ ಹಾಲಿಗೆ ಅರ್ಧ ಹೋಳು ನಿಂಬೆ ಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ಒಂದುವಾರ ಕುಡಿಯುತ್ತಾ ಬರುವುದರಿಂದ ಮೂಲವ್ಯಾದಿ ಗುಣಮುಖವಾಗುತ್ತದೆ.
ಎರಡರಿಂದ ಮೂರು ಬಾದಾಮಿ ಬೀಜಗಳನ್ನು ಸ್ವಲ್ಪವೇ ಹಾಲಿನೊಂದಿಗೆ ಸೇರಿಸಿ ನುಣ್ಣಗೆ ಅರೆದು ಮತ್ತದನ್ನು ಎರಡು ಚಮಚ ಹಾಲಿನಿಂದಿಗೆ ಬೆರೆಸಿ ಚಿಕ್ಕ ಚಿಕ್ಕ ಬ್ರೆಡ್ಡಿನ ತುಂಡುಗಳನ್ನು ಇದರಲ್ಲಿ ಅದ್ದಿ ಮುಖದ ಮೇಲೆ ಚೆನ್ನಾಗಿ ಉಜ್ಜಿಕೊಳ್ಳಬೇಕು, ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಹದಿನೈದು ನಿಮಿಷಗಳ ಕಾಲ ಒಂದು ವಾರ ಹೀಗೆ ಮಾಡುವುದರಿಂದ ನಿಮ್ಮ ಮುಖದ ಮೇಲಿರುವ ಮೊಡವೆಗಳು ಮಾಯವಾಗುತ್ತವೆ ಕಪ್ಪು ಕಲೆಗಳು ಸುದಾರಿಸುತ್ತವೆ ಮತ್ತು ನಿಮ್ಮ ಚರ್ಮದ ಬಣ್ಣ ಬದಲಾಗಿ ನಿಮ್ಮ ಮುಖದ ಕಾಂತಿ ಹೆಚ್ಚುತ್ತದೆ. ಅರಿಶಿನದ ಗಂಧವನ್ನು ಹಾಲಿನ ಕೆನೆಯಲ್ಲಿ ಚೆನ್ನಾಗಿ ಮಸೆದು ನಿಮ್ಮ ಒಡೆದಿರುವ ತುಟಿಗಳಿಗೆ ಮತ್ತು ಒಡೆದಿರುವ ಅಂಗಾಲುಗಳಿಗೆ ಹಚ್ಚಿಕೊಳ್ಳುವುದರಿಂದ ಆ ಭಾಗಗಳು ಶೀಘ್ರದಲ್ಲಿ ಗುಣಮುಖವಾಗುತ್ತವೆ.