ಕರ್ನಾಟಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ರಾಜ್ಯದಲ್ಲಿ ಬರಗಾಲ ಉಂಟಾಗಿರುವ ಕಾರಣ ಬರ ಪೀಡಿತರಿಗೆ ಪರಿಹಾರ ಹಣ ನೀಡಲು ಸಿದ್ಧವಾಗಿದೆ. ಕೇಂದ್ರ ಸರ್ಕಾರ NDRF ಸಮೀಕ್ಷೆ ನಡೆಸಿ ವರದಿಯನ್ನು ಸಲ್ಲಿಕೆ ಮಾಡಿದೆ.
STRF ರಾಜ್ಯದ ಪೂರಾ ಸಮೀಕ್ಷೆ ಮಾಡಿ ವರದಿಯನ್ನು ಸಲ್ಲಿಕೆ ಮಾಡಿದೆ. ಈ ಸಮೀಕ್ಷೆಯ ಪ್ರಕಾರ ಪ್ರತಿ ಎಕರೆ ಭೂಮಿಗೆ ₹22,500 ಹಣವನ್ನು ರೈತರ ಖಾತೆಗೆ ಪಾವತಿ ಮಾಡಬೇಕು ಎನ್ನುವ ವರದಿ ಸಲ್ಲಿಸಲಾಗಿದೆ. ಸರ್ಕಾರ ಪ್ರಸ್ತುತ ಮೊದಲನೆಯ ಕಂತಿನ ಹಣವನ್ನು ಬಿಡುಗಡೆ ಮಾಡಿದೆ ಅದು ಕೇವಲ ₹2,000 ರೂಪಾಯಿಗಳು ರೈತರ ಖಾತೆಗೆ ವರ್ಗಾವಣೆ ಆಗಿದೆ. ರಾಜ್ಯದ ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರು ರಾಜ್ಯದ ಪೂರಾ ಇರುವ ಬರ ಪೀಡಿತ ಜಿಲ್ಲೆಗಳ ಮತ್ತು ತಾಲ್ಲೂಕುಗಳ ರೈತರಿಗೆ ಹಣ ಪಾವತಿ ಮಾಡಲು ಸರ್ಕಾರ ನಿರ್ಧರಿಸಿದೆ ಎಂದಿದ್ದಾರೆ.
ರಾಜ್ಯದ ಪೂರಾ ಇರುವ ರೈತರ ಖಾತೆಗೆ ಬರ ಪರಿಹಾರ ಹಣವನ್ನು ಸರ್ಕಾರ ಜಮಾವಣೆ ಮಾಡಿದೆ. ರಾಜ್ಯ ಸರ್ಕಾರದಿಂದ 32 ಲಕ್ಷ ರೈತರಿಗೆ ₹575 ಕೋಟಿ ಬರ ಪರಿಹಾರ ಹಣ ವರ್ಗಾವಣೆ ಆಗಿದೆ ಎಂದು ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರು ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಈ ಹಿಂದೆ ಇತಿಹಾಸ ಕಾಣದ ಬರ ಎದುರಾಗಿದೆ ಕೇಂದ್ರದಿಂದ ಯಾವುದೇ ಪರಿಹಾರ ಹಣ ಬಿಡುಗಡೆಯಾಗದೆ ಇರುವ ಕಾರಣ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿದೆ. ಪ್ರತಿ ಬರ ಪೀಡಿತ ಪ್ರದೇಶದಲ್ಲಿ ಇರುವ ರೈತರ ಖಾತೆಗೆ ₹2,000ದಂತೆ 32 ಲಕ್ಷ ರೈತರಿಗೆ ಹಣ ವರ್ಗಾವಣೆ ಆಗಿದೆ. ಕೊಡಗಿನಲ್ಲಿ ಕೂಡ 11,000 ರೈತರಿಗೆ ₹1.5ದು ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವರು ಮಾಹಿತಿ ನೀಡಿದರು.
ರೈತರ ಪರಿಹಾರ ಹಣದ ದುರುಪಯೋಗ ನಿಯಂತ್ರಣ ಮಾಡಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ತಂತ್ರಾಂಶದ ಮೂಲಕ ಹಣವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ.
ಸರ್ಕಾರ ಪ್ರಸ್ತುತ ಹೊಸ ಹೊಸ ಯೋಜನೆಗಳ ಅಡಿಯಲ್ಲಿ ಹಣವನ್ನು ರೈತರ ಖಾತೆಗೆ ವರ್ಗಾವಣೆ ಮಾಡುತ್ತಿದೆ. ರೈತರನ್ನು ಬಿಟ್ಟು ರೈತರ ಹೆಸರು ಹೇಳಿ ಹಣ ಪಡೆಯುವ ಜನರೇ ಹೆಚ್ಚು ಅಂತವರನ್ನು ಮೊದಲು ಗುರುತಿಸಿದರೆ ನಿಜವಾದ ರೈತರಿಗೆ ಫಲ ಸಿಗುತ್ತದೆ.