RBI New Rules for Bank: ಇದೀಗ ಬ್ಯಾಂಕ್ ನಿಂದ ಸಾಲ ಪಡೆಯುವುದು ತುಂಬಾ ಸುಲಭ ಈ ಕುರಿತಾಗಿ RBI ಮಹತ್ವದ ನಿರ್ಧಾರವನ್ನ ಕೈಗೊಂಡಿದ್ದು ಜೀವನದಲ್ಲಿನ ಅಗತ್ಯತೆಗಳನ್ನು ಪೂರೈಸಲು ಬ್ಯಾಂಕುಗಳಿಂದ ಸಾಲ ಪಡೆಯುವುದು ಮೊದಲಿಗಿಂತ ಹೆಚ್ಚು ಸುಲಭವಾಗಿದೆ ಇದರ ಹೊರತಾಗಿಯೂ ಅನೇಕ ಜನರು ಸಾಲ ಪಡೆಯಲು ಸಾಧ್ಯವಾಗುವುದಿಲ್ಲ.

ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ರಾಷ್ಟ್ರೀಯ ಹಣಕಾಸು ಮಾಹಿತಿ ನೋಂದಣಿ ಸ್ಥಾಪಿಸಲು ವಸೂದೆಯನ್ನು ಸಿದ್ಧಪಡಿಸಿದ್ದು ಜನರಿಗೆ ಸಾಲದ ವ್ಯಾಪ್ತಿಯನ್ನು ಹೆಚ್ಚಿಸುವುದು ಮತ್ತು ಅದನ್ನು ಅವರ ಬಳಿ ತಲುಪುವಂತೆ ಮಾಡುವುದು ಈ ಕಾಯ್ದೆಯ ಉದ್ದೇಶವಾಗಿರುತ್ತದೆ. ಅಂದ ಹಾಗೆ ರಾಷ್ಟ್ರೀಯ ಹಣಕಾಸು ಮಾಹಿತಿ ನೋಂದಣಿ ಎಂದರೆ ಸಾರ್ವಜನಿಕರಿಗಾಗಿ ಸಾಲಗಳಿಗೆ ಸಂಬಂಧಿಸಿದ ಮಾಹಿತಿಗಳಿಗೆ ಮೂಲ ಸೌಕರ್ಯವನ್ನು ರಚಿಸುವುದಾಗಿದೆ.

ಸೆಪ್ಟೆಂಬರ್ ನಲ್ಲಿ ನಡೆದ ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ಸಾಲ ಭಂಡಾರವನ್ನು ಸ್ಥಾಪಿಸುವ ಪ್ರಸ್ತಾಪದ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಚರ್ಚಿಸಿದ್ದಾರೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜಯ್ ಸೇಟು ಹೇಳಿಕೆ ನೀಡಿದ್ದರು. ಜೊತೆಗೆ ಆರ್ ಬಿ ಐ ಈಗಲೇ ಕರಡು ವಸೂದೆಯನ್ನು ಸಿದ್ಧಪಡಿಸಿ ಅದು ಇನ್ನೂ ಪರಿಗಣನೆಯಲ್ಲಿದೆ ಎಂದು ಇವರು ಹೇಳಿಕೆ ನೀಡಿದ್ದಾರೆ.

ಈ ಯೋಜನೆಯು ಸುಲಭ ಸಾಲ ನೀಡಲು ಸಹಾಯವಾಗುತ್ತದೆ ಹಾಗೆಯೇ ಆರ್ಥಿಕ ಸೇರ್ಪಡೆಯನ್ನ ಹೆಚ್ಚಿಸುತ್ತದೆ ಮತ್ತು ಆರ್ಥಿಕ ಸ್ಥಿರತೆಯನ್ನು ತೇಜಿಸುತ್ತದೆ ಎಂದು ಹಣಕಾಸು ಸಚಿವರು ತಮ್ಮ ಮೊದಲ ಬಜೆಟ್ ಭಾಷಣದಲ್ಲಿ ತಿಳಿಸಿದರು.

ಸಾಲದ ಬಗ್ಗೆ ತಿಳಿದಿರುವುದರ ಹೊರತಾಗಿ ತೆರಿಗೆ ಪಾವತಿಗಳು ವಿದ್ಯುತ್ ಬಳಕೆಯ ಪ್ರವೃತ್ತಿಗಳು ಹಾಗೂ ಇನ್ನಿತರ ಮಾಹಿತಿಗಳನ್ನು ಸಹ ಇದು ಹೊಂದಿರುತ್ತದೆ ಎಂದು ಹೇಳಿದ್ದಾರೆ ಅಷ್ಟೇ ಅಲ್ಲದೆ ಸಾಲದಾತರ ಬಳಿ ಮಾಹಿತಿಯ ಕೊರತೆ ಇದ್ದಲ್ಲಿ ಅದು ಅಪಾಯವನ್ನ ಸೃಷ್ಟಿಸುವುದರಿಂದ ಬಡ್ಡಿದರವು ಹೆಚ್ಚಾಗುತ್ತದೆ ಮತ್ತೊಂದೆಡೆ ಅಪಾಯಗಳನ್ನು ಸರಿಯಾಗಿ ಊಹಿಸಿದರೆ ಸಾಲಗಳು ಉತ್ತಮ ಬೆಲೆಯಲ್ಲಿ ಲಭ್ಯವಿರುತ್ತವೆ ಎಂಬುದಾಗಿ ತಿಳಿಸಿದರು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!