ಬ್ಯಾಂಕ್ ಗಳಲ್ಲಿ ಕೆಲಸ ಸಿಕ್ಕರೆ ಜೀವನವೇ ಸೆಟ್ಲ್ ಆದ ಹಾಗೆ. ಹಲವರು ಓದುವಾಗಲೇ ಬ್ಯಾಂಕಿಂಗ್ ಕ್ಷೇತ್ರಕ್ಕೆ ಹೋಗಬೇಕು ಎಂದು ನಿರ್ಧಾರ ಮಾಡಿ, ಪರೀಕ್ಷೆಗಳಿಗೆ ತಯಾರಿ ನಡೆಸುತ್ತಾರೆ. ಹೀಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸಕ್ಕಾಗಿ ಕಾಯುತ್ತಿರುವವರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ನಮ್ಮ ದೇಶದಲ್ಲಿ ಒಳ್ಳೆಯ ನಂಬಿಕೆ ಗಳಿಸಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ 606 ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಆದೇಶ ನೀಡಲಾಗಿದ್ದು, ಚೀಫ್ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಸ್ಪೆಶಲಿಸ್ಟ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಆಸಕ್ತಿ ಇರುವವರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು, ಅರ್ಜಿ ಸಲ್ಲಿಕೆಗೆ ಫೆಬ್ರವರಿ 23 ಕೊನೆಯ ದಿನಾಂಕ ಆಗಿದ್ದು, ಈ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ..ಮೊದಲಿಗೆ ಖಾಲಿ ಇರುವ ಹುದ್ದೆಗಳ ಸಂಪೂರ್ಣ ವಿವರ ನೋಡುವುದಾದರೆ, ಚೀಫ್ ಮ್ಯಾನೇಜರ್ 5 ಹುದ್ದೆಗಳು, ಸೀನಿಯರ್ ಮ್ಯಾನೇಜರ್ 42 ಹುದ್ದೆಗಳು, ಮ್ಯಾನೇಜರ್ 451 ಹುದ್ದೆಗಳು, ಅಸಿಸ್ಟಂಟ್ ಮ್ಯಾನೇಜರ್ 108 ಹುದ್ದೆಗಳು ಖಾಲಿ ಇದೆ.
ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ ನೋಡುವುದಾದರೆ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಅಧಿಸೂಚನೆಯ ಅನುಸಾರ, ಮಾನ್ಯತೆ ಪಡೆದಿರುವ ಕಾಲೇಜಿನಿಂದ Bsc/Btech/BE/Mtech/MSc/Any Degree/CA/MBA/PGCDA/PGDBM/PGPM/ ಓದಿದ್ದು ಅನುಭವ ಹೊಂದಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ವಯೋಮಿತಿ ಬಗ್ಗೆ ಹೇಳುವುದಾದರೆ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರ ವಯಸ್ಸು 25 ರಿಂದ 45 ವರ್ಷಗಳ ಒಳಗಿರಬೇಕು. ಆದರೆ ವಯೋಮಿತಿ ಸಡಿಲಿಕೆ ಇದ್ದು, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, PwBD ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ..
ಅರ್ಜಿ ಶುಲ್ಕದ ಬಗ್ಗೆ ಹೇಳುವುದಾದರೆ.. ಜೆನೆರಲ್/ಓಬಿಸಿ/EWS ಅಭ್ಯರ್ಥಿಗಳು 850 ರೂಪಾಯಿ ಅರ್ಜಿ ಶುಲ್ಕ ಪಾವತಿ ಮಾಡಬೇಕು. ಎಸ್ಸಿ/ಎಸ್ಟಿ/PwBD ಅಭ್ಯರ್ಥಿಗಳು 175 ರೂಪಾಯಿ ಅರ್ಜಿ ಶುಲ್ಕ ಪಾವತಿ ಮಾಡಬೇಕು. ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬಹುದು.
ಆಯ್ಕೆ ಪ್ರಕ್ರಿಯೆ ಬಗ್ಗೆ ಹೇಳುವುದಾದರೆ, ಆನ್ಲೈನ್ ಎಕ್ಸಾಂ, ಗ್ರೂಪ್ ಡಿಸ್ಕಶನ್, ನೇರ ಸಂದರ್ಶನ ಮೂರು ಹಂತಗಳಲ್ಲಿ ಇಂಟರ್ವ್ಯೂ ನಡೆಯಲಿದೆ. ಆನ್ಲೈನ್ ಪರೀಕ್ಷೆಯಲ್ಲಿ ನೆಗಟಿವ್ ಮಾರ್ಕಿಂಗ್ ಇರುತ್ತದೆ. ಹುಷಾರಾಗಿ ಪರೀಕ್ಷೆ ಬರೆಯಬೇಕು.
ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಹೋಮ್ ಪೇಜ್ ನಲ್ಲಿ ಬರುವ recruitment ಆಪ್ಶನ್ ಸೆಲೆಕ್ಟ್ ಮಾಡಿ, Click here to apply ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಅಲ್ಲಿ ಕೇಳುವ ನಿಮ್ಮ ಪರ್ಸನಲ್ ಡೀಟೇಲ್ಸ್ ಫಿಲ್ ಮಾಡಿ. ಈಗ ಬರುವ ಡೀಟೇಲ್ಸ್ ಅನ್ನು ಲಾಗಿನ್ ಡೀಟೇಲ್ಸ್ ಆಗಿ ಬಳಸಿ. ಬಳಿಕ ಅಪ್ಲಿಕೇಶನ್ ನಲ್ಲಿರುವ ಎಲ್ಲಾ ಮಾಹಿತಿಗಳನ್ನು ಫಿಲ್ ಮಾಡಿ. ಪಾಸ್ ಪೋರ್ಟ್ ಸೈಜ್ ಫೋಟೋ ಮತ್ತು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್ಲೈ ಮಾಡಿ. ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ, ಬಳಿಕ ಅಪ್ಲಿಕೇಶನ್ ಅನ್ನು ಪ್ರಿಂಟೌಟ್ ತೆಗೆದುಕೊಳ್ಳಿ.