ಮುಖದ ಕೆನ್ನೆ, ಹಣೆ, ಕೆಲವು ಬಾರಿ ಮೂಗು ಅಥವಾ ಗದ್ದದ ಮೇಲೆ ಕಂದು ಬಣ್ಣದ ಮಚ್ಚೆ, ಒಂದೊಂದು ಬಾರಿ ಪತಂಗದ ಆಕಾರದಲ್ಲೂ ಕಂಡುಬರಬಹುದಾದ ಚರ್ಮವ್ಯಾಧಿ ಇದು. ದೇಹದಲ್ಲಿ ಮೆಲನಿನ್ ಪ್ರಮಾಣ ಹೆಚ್ಚಾದರೂ ಅಪಾಯ, ಕಡಿಮೆ ಆದರೂ ಅಪಾಯ. ಅದರ ಫಲವಾಗಿ ಇದು ಕಾಣಿಸಿಕೊಳ್ಳುತ್ತದೆ. ನಾವು ಕಾಣುವ ಜಗತ್ತಿನ ಅನೇಕ ವಿಸ್ಮಯಗಳಲ್ಲಿ ಮನುಷ್ಯನ ದೇಹದ ಬಣ್ಣವೂ ಒಂದು. ಬಿಳಿ ಬಣ್ಣ, ಗೋಧಿ ಬಣ್ಣ, ನಸುಗೆಂಪು, ಕಪ್ಪು ಹೀಗೆ ಒಂದೊಂದು ದೇಶದ ಜನರ ಮೈಬಣ್ಣ ಒಂದೊಂದು ತೆರನಾಗಿರುತ್ತದೆ. ನಮ್ಮ ಶ್ರೀಕೃಷ್ಣನದಂತೂ ಮೈಪೂರ್ತಿ ನೀಲಿ! ಆದರೆ ವಿಶ್ವದ ಎಲ್ಲ ಜನರ ಮೈಬಣ್ಣವೂ ನಿರ್ಧಾರವಾಗುವುದು ಮೆಲನೋಸೈಟ್ ಎಂಬ ಕೋಶದಿಂದ ಉತ್ಪತ್ತಿಯಾಗುವ ಮೆಲನಿನ್ ಎಂಬ ರಾಸಾಯನಿಕದ ಮೇಲೆ. ಕೆಲ ವರ್ಣತಂತುಗಳು ಕೂಡ ದೇಹದ ಬಣ್ಣ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಾಗಿದ್ದರೆ ನಾವು ಸುಲಭವಾಗಿ ಬೇರೆ ಯಾವುದೇ ರಾಸಾಯನಿಕಗಳನ್ನು ಬಳಕೆ ಮಾಡದೇ ಮನೆಯಲ್ಲಿಯೇ ಹೇಗೆ ಈ ಭಂಗು ಇದನ್ನು ನಿವಾರಣೆ ಮಾಡಿಕೊಳ್ಳಬಹುದು ? ಹಾಗೂ ಮನೆಮದ್ದು ಏನು? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಈ ಮನೆಮದ್ದನ್ನು ಮಾಡಿಕೊಳ್ಳಲು ನಮಗೆ ಮುಖ್ಯವಾಗಿ ಬೇಕಾಗಿರುವುದು ಆಲೂಗಡ್ಡೆ. ಆಲೂಗಡ್ಡೆಯಲ್ಲಿ ಆಂಟಿ ಪಿಗ್ಮಂಟೆಶನ್ ಅಂಶ ಇರುವುದರಿಂದ ಇದು ಬಂಗು ನಿವಾರಣೆಗೆ ಉತ್ತಮ ಔಷಧ ಎಂದೇ ಹೇಳಬಹುದು. ಇದು ನ್ಯಾಚುರಲ್ ಬ್ಲೀಚಿಂಗ್ ಕೂಡಾ ಆಗಿದ್ದು ನಮ್ಮ ಚರ್ಮದಲ್ಲಿ ಇರುವ ಡಾರ್ಕ್ ಸ್ಪಾಟ್ ನಿವಾರಣೆಗೆ ಸಹಾಯಕಾರಿ. ಹಾಗಾಗಿ ಮಧ್ಯಮ ಗಾತ್ರದ ಒಂದು ಆಲೂಗಡ್ಡೆಯನ್ನು ತೆಗೆದುಕೊಂಡು ಅದರ ಸಿಪ್ಪೆ ತೆಗೆದು ತುರಿದು ರಸ ತೆಗೆದುಕೊಳ್ಳಬೇಕು. ನಂತರ ಒಂದು ಶುಚಿಯಾದ ಬೌಲ್ ನಲ್ಲಿ ಒಂದು ಚಮಚ ಅಕ್ಕಿಹಿಟ್ಟು ತೆಗೆದುಕೊಂಡು ಅದಕ್ಕೆ ಆಲೂಗಡ್ಡೆ ರಸ ಹಾಗೂ ಕೆಲವು ಹನಿಗಳಷ್ಟು ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಪೇಸ್ಟ್ ಮಾಡಿಕೊಳ್ಳಬೇಕು.
ನಂತರ ಈ ಪೇಸ್ಟನ್ನು ಮುಖಕ್ಕೆ ದಪ್ಪಗೆ ಹಚ್ಚಿಕೊಳ್ಳಬೇಕು. ನೈಸರ್ಗಿಕವಾಗಿ ಇರುವುದರಿಂದ ಮೊದಲ ಬಾರಿಗೆ ಇದರ ಪರಿಣಾಮ ತಿಳಿಯುವುದಿಲ್ಲ ಆದರೂ ಯಾವುದೇ ಅಡ್ಡ ಪರಿಣಾಮ ಏನೂ ಇದರಿಂದ ಉಂಟಾಗುವುದಿಲ್ಲ. ದಿನ ಬಿಟ್ಟು ದಿನ ಹಾಗೆ ಎರಡು ವಾರಗಳ ಕಾಲ ನಿಯಮಿತವಾಗಿ ಈ ಮನೆಮದ್ದನ್ನು ಬಳಸಬೇಕು. ಸ್ವಲ್ಪ ದಿನ ಬಿಟ್ಟು ಮತ್ತೆ ಎರಡು ವಾರ ದಿನ ಬಿಟ್ಟು ದಿನ ಹಚ್ಚಬೇಕು. ಇದರಲ್ಲಿ ನಿಂಬೆ ಹಣ್ಣಿನ ರಸ ಇರುವುದರಿಂದ ಇದು ಎಲ್ಲರ ಚರ್ಮಕ್ಕೂ ಸರಿ ಹೊಂದುವುದಿಲ್ಲ ಹಾಗಾಗಿ ಎರಡು ವಾರಗಳ ನಂತರ ಸ್ವಲ್ಪ ದಿನ ಬಿಟ್ಟು ಮತ್ತೆ ಪೇಸ್ಟ್ ತಯಾರಿಸಿಕೊಂಡು ಹಚ್ಚಬೇಕು. ತುಟಿಗಳಿಗೂ ಕೂಡಾ ಇದನ್ನು ಹಚ್ಚಬಹುದು. ತುಟಿಗಳಿಗೆ ಹಚ್ಚುವುದರಿಂದ ತುಟಿಗಳು ಕಪ್ಪಾಗುವುದನ್ನು ತಡೆಯಬಹುದು. ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ಇದನ್ನು ಮುಖಕ್ಕೆ ಹಚ್ಚಿಕೊಂಡು ಹಾಗೆಯೇ ಬಿಟ್ಟು ನಂತರ ನೀರಿನಿಂದ ಮುಖ ತೊಳೆದುಕೊಳ್ಳಬೇಕು.