ಆರೋಗ್ಯಕ್ಕೆ ಹಲವು ಹಣ್ಣು ತರಕಾರಿಗಳಿವೆ ಹಾಗೆಯೆ ಅದರಲ್ಲಿ ಒಂದಾಗಿರುವಂತ ಬಾಳೆಹಣ್ಣು ಕೂಡ ಉತ್ತಮ ಆರೋಗ್ಯವನ್ನು ವೃದಿಸುವುದರ ಜೊತೆಗೆ ದೇಹಕ್ಕೆ ಪೌಷ್ಟಿಕಾಂಶವನ್ನು ಒದಗಿಸಿಕೊಡುತ್ತದೆ ಹಾಗೂ ವಿಟಮಿನ್ ಅಂಶಗಳನ್ನು ದೇಹಕ್ಕೆ ಪೂರೈಸುತ್ತದೆ. ದೇಹವನ್ನು ಬಲವಾಗಿ ಬೆಳೆಯಲು ಮೂಳೆಗಳ ಬಲವರ್ಧನೆಗೆ ಬಾಳೆಹಣ್ಣು ಸಹಕಾರಿ. ಹಾಗಾಗಿ ಜಿಮ್ ಗೆ ಹೋಗುವವರು ಪ್ರತಿದಿನ ಒಂದು ಗ್ಲಾಸ್ ಹಾಲು ಮತ್ತು ಬಾಳೆಹಣ್ಣು ಸೇವನೆ ಮಾಡುತ್ತಾರೆ.
ವಿಷ್ಯಕ್ಕೆ ಬರೋಣ ಬಾಳೆಹಣ್ಣು ಸೇವನೆಯಿಂದ ಯಾವೆಲ್ಲ ಅರೋಗ್ಯ ವೃದ್ಧಿಯಾಗುತ್ತದೆ ಅನ್ನೋದನ್ನ ಹೇಳುವುದಾದರೆ ದೇಹದಲ್ಲಿನ ರಕ್ತದೊತ್ತಡ ಸಮಸ್ಯೆಯನ್ನು ನಿವಾರಿಸುತ್ತದೆ, ಹಾಗೂ ಇದರ ಸೇವನೆಯಿಂದ ೩೦೦ ಕ್ಕೂ ಹೆಚ್ಚು ಎಂಜಿ ಅಷ್ಟು ಪೊಟ್ಯಾಶಿಯಂ ದೇಹದ ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಗೆ ತರುತ್ತದೆ. ಆದ್ದರಿಂದ ಬಾಳೆಹಣ್ಣು ಸೇವನೆ ಆರೋಗ್ಯಕ್ಕೆ ಉತ್ತಮ. ಇನ್ನು ಬೇಧಿ ಅತಿಸಾರ ಎದೆ ಹುರಿ ಸಮಸ್ಯೆ ಇರೋರು ಕೂಡ ಬಾಳೆಹಣ್ಣು ಸೇವನೆ ಮಾಡುವುದರಿಂದ ದೇಹಕ್ಕೆ ಔಷಧಿಯಾಗಿ ಕೆಲಸ ಮಾಡುತ್ತದೆ.
ಮಲಬದ್ಧತೆ ಸಮಸ್ಯೆ ಇರೋರು ಕೂಡ ಪ್ರತಿದಿನ ಬಾಳೆಹಣ್ಣು ಸೇವನೆ ಮಾಡುವುದರಿಂದ ಉತ್ತಮ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ನಾರಿನಂಶ ಅಧಿಕವಾಗಿರುವುದರಿಂದ ಮಲಬದ್ಧತೆಗೆ ಒಳ್ಳೆಯ ಔಷಧಿಯಾಗಿ ಕೆಲಸ ಮಾಡುವುದಲ್ಲದೆ ಮಲ ವಿಸರ್ಜನೆ ಸರಾಗವಾಗುತ್ತದೆ. ದೇಹದ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುವುದರ ಜೊತೆಗೆ ಇನ್ಸುಲಿನ್ ಸರಿಯಾಗಿ ಕೆಲಸ ಮಾಡೋ ಹಾಗೆ ಮಾಡುತ್ತೆ ಆದ್ದರಿಂದ ಸಕ್ಕರೆ ಕಾಯಿಲೆ ನಿಯಂತ್ರಣಗೊಳ್ಳುವುದು.
ಬಾಳೆಹಣ್ಣು ಅಜೀರ್ಣತೆ ಅಸಿಡಿಟಿ ನಿವಾರಿಸುತ್ತದೆ ಹಾಗಾಗಿ ಊಟದ ನಂತರ ಬಾಳೆಹಣ್ಣು ತಿನ್ನುವ ಅಬ್ಯಸ ಬಹಳಷ್ಟು ಜನರಲ್ಲಿ ಇರುತ್ತದೆ. ಬಾಳೆಹಣ್ಣಿನಲ್ಲಿ ವಿಟಮಿನ್ ಬಿ6 ಸಿಗುತ್ತದೆ ಹಾಗೂ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಅಷ್ಟೇ ಅಲ್ದೆ ದೇಹಕ್ಕೆ ಹಾನಿ ಮಾಡೋ ಫ್ರೀ ರಾಡಿಕಲ್ಸ್ ಕಡಿಮೆ ಮಾಡುವಂತ ಗುಣವನ್ನು ಬಾಳೆಹಣ್ಣು ಹೊಂದಿದೆ.