ಪ್ರಸ್ತುತ ಕಾಲಮಾನದಲ್ಲಿ ಪ್ರತಿ ಒಬ್ಬ ವ್ಯಕ್ತಿಯು ಕೂಡ ಹೂಡಿಕೆಗೆ ಹೆಚ್ಚಿನ ಮಾನ್ಯತೆಯನ್ನು ಕೊಡುವನು. ದುಡಿದ ಸ್ವಲ್ಪ ಹಣವನ್ನು ಹೂಡಿಕೆ ಮಾಡಿದರೆ ಅದು ಮಾತ್ರ ಮುಂದಿನ ಭವಿಷ್ಯಕ್ಕೆ ಸಹಾಯಕ ಆಗುತ್ತದೆ.‌ ಕಷ್ಟ ಎಂದು ಬಂದಾಗ ಸಹಾಯಕ ಆಗುವುದೇ ಹೂಡಿಕೆಯ ಹಣ ಎಂದು ಹೇಳಬಹುದು‌. ಅದರಲ್ಲು ಈಗ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಲು ಕೂಡ ಅವಕಾಶ ಮಾಡಲಾಗಿದೆ ಕಡಿಮೆ ಮೊತ್ತ ಹೂಡಿಕೆ ಮಾಡುವ ಮೂಲಕ ಹೆಚ್ಚು ಲಾಭ ಗಳಿಕೆ ಮಾಡಬಹುದು.


ನಮ್ಮ ಮಕ್ಕಳ ಭವಿಷ್ಯ ವೃದ್ಧಿ ಆಗಬೇಕು. ಯಾವುದೇ ರೀತಿಯ ಕಷ್ಟ ಮಕ್ಕಳಿಗೆ ಉಂಟಾಗಬಾರದು ಎನ್ನುವುದೇ ಪೋಷಕರ ಅಭಿಲಾಷೆ ಆಗಿರುತ್ತದೆ. ಅದರಿಂದ ತಮ್ಮ ಮಕ್ಕಳಿಗೆ ಭವಿಷ್ಯಕ್ಕೆ ಒಳಿತಾಗಲಿ ಅವರು ಕೂಡ ಆರ್ಥಿಕವಾಗಿ ಸದೃಢವಾಗಿ ಇರಲಿ. ಮಕ್ಕಳಿಗೆ ಯಾವುದೇ ಸಮಸ್ಯೆ ಉಂಟಾಗಬಾರದು ಎನ್ನುವ ನಿಟ್ಟಿನಲ್ಲಿ ಪೋಷಕರು ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡುತ್ತಾರೆ. ಈ ರೀತಿಯ ಹೂಡಿಕೆ ಮಾಡುವ ಜನರಿಗೆ ಅಂಚೆ ಕಚೇರಿ ( Post Office ) ನೂತನ ಯೋಜನೆಯನ್ನು ರೂಪಣೆ ಮಾಡಿದೆ. ಈ ಯೋಜನೆಯ ಲಾಭ ಪೋಷಕರು ಪಡೆಯಬಹುದಾಗಿದೆ.

ಮಕ್ಕಳ ಜೀವ ವಿಮಾ ಯೋಜನ ( Bal Jeevan Bima Yojana ) :- ಅಂಚೆ ಇಲಾಖೆ ಮಕ್ಕಳ ಭದ್ರತೆಗಾಗಿ ಈ ಯೋಜನೆಯನ್ನು ಜಾರಿ ಮಾಡಿದೆ. ಇದರಲ್ಲಿ, ದಿನ ನಿತ್ಯ ಕನಿಷ್ಠ ಹೂಡಿಕೆ ಮಾಡುವ ಮುಖಾಂತರ ಪಾಲಕರು ಮಕ್ಕಳ ಖಾತೆಯಲ್ಲಿ ಲಕ್ಷಾಂತರ ರೂಪಾಯಿ ಉಳಿತಾಯ ಮಾಡಬಹುದು. ಈ ಯೋಜನೆಯಲ್ಲಿ ಕನಿಷ್ಠ ₹6 ರೂಪಾಯಿ ಹೂಡಿಕೆ ಮಾಡಿದರೆ ಸಾಕು, ಗರಿಷ್ಠ ₹3,00,000 ದವರೆಗೆ ಪಡೆಯಬಹುದಾಗಿದೆ. ಇದರಲ್ಲಿ ಮಗುವಿನ ಪೋಷಕರು 5 ವರ್ಷಗಳ ಯೋಜನೆ ಪಡೆಯುತ್ತಿದ್ದರೆ ಪ್ರತಿದಿನ ₹18 ರೂಪಾಯಿ, ಅದೇ 20 ವರ್ಷಗಳವರೆಗಿನ ಯೋಜನೆಯನ್ನು ಪಡೆಯಲು ದಿನಕ್ಕೆ ₹6 ರೂಪಾಯಿ ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ.

ಈ ನಿಯಮ ಇರುತ್ತದೆ :– ಮಕ್ಕಳ ಜೀವ ವಿಮಾ ಯೋಜನೆಗೆ ( Bal Jeevan Bima Yojana ) ಅರ್ಜಿ ಹಾಕಲು ಪೋಷಕರ ವಯಸ್ಸು 45 ವರ್ಷಕ್ಕಿಂತ ಹೆಚ್ಚು ಇರಬಾರದು.‌ ಈ ಯೋಜನೆಯ ಕೆಳಗೆ ಅರ್ಜಿ ಸಲ್ಲಿಸುವ ಮೊದಲು ಮಗುವಿನ ವಯಸ್ಸು ಕನಿಷ್ಠ 5 ವರ್ಷಗಳು ಮತ್ತು ಗರಿಷ್ಠ ವಯಸ್ಸು 20 ವರ್ಷಗಳು ಆಗಿರಬೇಕು. ಯಾರಾದರೂ ಮಧ್ಯದಲ್ಲಿ ಪಾಲಿಸಿಯಿಂದ ( policy ) ಹಿಂದೆ ಸರಿಯಲು ಬಯಸಿದರೆ 5 ವರ್ಷಗಳ ನಂತರ ಸರೆಂಡರ್​ ಆಗುವ ಅವಕಾಶ ಕೂಡ ಇದೆ. ಪಾಲಿಸಿದಾರರು ಅಂದರೆ ಪಾಲಕರು ಮರಣಹೊಂದಿದರೆ, ಮಕ್ಕಳ ಪಾಲಿಸಿಯ ಪ್ರೀಮಿಯಂ ಅನ್ನು ಪಾವತಿಸುವಂತೆ ನಿಯಮ ಇಲ್ಲ. ಇದರ ಅವಧಿ ಮುಗಿದ ಮೇಲೆ ಪೂರ್ಣ ವಿಮಾ ಮೊತ್ತ ಮತ್ತು ಬೋನಸ್‌ ಹಣವನ್ನು ಮಕ್ಕಳಿಗೆ ನೀಡಲಾಗುತ್ತದೆ.

ಈ ವಿಮೆ ಪಡೆಯಲು ಕೆಲವೊಂದು ಅಗತ್ಯ ಇರುವ ದಾಖಲೆಗಳು ಬೇಕಾಗುತ್ತದೆ ಯಾವುದು ಎಂದು ನೋಡೋಣ :-

  • ಆಧಾರ್ ಕಾರ್ಡ್ ( Aadhar card )
  • ರೇಷನ್ ಕಾರ್ಡ್ ( ration card )
  • ವಯಸ್ಸಿನ ಪತ್ರ
  • ವಿಳಾಸದ ಪುರಾವೆ ( address )
  • ಪೋಟೋ ( photo )
  • ಪೋಷಕರ ಆಧಾರ್ ಕಾರ್ಡ್ ( parents Aadhar card )
  • ಮೆಟ್ರಿಕ್ಯುಲೇಷನ್ ಪ್ರಮಾಣಪತ್ರ ಇತ್ಯಾದಿ ಬೇಕು.

ಬಾಲ ಜೀವನ್ ಬೀಮಾ ಯೋಜನೆಗೆ ಅರ್ಜಿ ಹಾಕಲು ಹತ್ತಿರದ ಅಂಚೆ ಕಚೇರಿಗೆ ಹೋಗಿ ಅರ್ಜಿ ಪಡೆದು ಅದನ್ನು ಭರ್ತಿ ಮಾಡಿ ಅರ್ಜಿ ಹಾಕಬಹುದು. ಮಕ್ಕಳ ಭವಿಷ್ಯದ ಕುರಿತು ಹೂಡಿಕೆ ಮಾಡಲು ಬಯಸುವ ವ್ಯಕ್ತಿಗಳು ಈ ಯೋಜನೆಯ ಪ್ರಯೋಜನ ಪಡೆಯಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!