ತಿರುಪತಿ ತಿಮ್ಮಪ್ಪನನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಬ್ಬೊಬ್ಬರಿಗೆ ಒಂದೊಂದು ವಿಚಾರ ಆಕರ್ಷಕ ಎನಿಸುತ್ತದೆ ಕೆಲವೊಬ್ಬರಿಗೆ ವಿಶಾಲವಾದ ಕಿವಿಗಳು ಇನ್ನು ಕೆಲವರಿಗೆ ಆ ಮಂದಸ್ಮಿತ ಮುಖಾರವಿಂದ ಮತ್ತು ಕೆಲವರಿಗೆ ಹೊಳೆಯುವ ಕಣ್ಣುಗಳು ಇನ್ನು ಬಹುತೇಕರಿಗೆ ತಿಮ್ಮಪ್ಪನ ಮೂರು ನಾಮಗಳು ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಆಕರ್ಷಣೆಯನ್ನು ಮಾಡುತ್ತಾನೆ ಆರ್ಚಾವತಾರದಲ್ಲಿರುವ ಕಲಿಯುಗವರದ ವೆಂಕಟೇಶ್ವರ ಸ್ವಾಮಿ. ಸ್ವಾಮಿಯ ನಾನಾ ಆಕರ್ಷಣೆಗಳಲ್ಲಿ ಒಂದು ಸ್ವಾಮಿಯ ಕಿರೀಟ ಸ್ವಾಮಿಯ ವಿಶಿಷ್ಟ ಕಿರೀಟಕ್ಕೆ ಅಮೋಘವಾದ ಹಿನ್ನೆಲೆಯಿದೆ. ಈ ಕಿರೀಟವನ್ನು ಮೊದಲು ಕೊಟ್ಟಿದ್ದು ಯಾರು ಯಾಕಾಗಿ ಹಾಗೂ ಈ ಕಿರೀಟಕ್ಕೆ ಇರುವ ವಿಶೇಷತೆ ಏನು ಎಂಬ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಅದು ಶ್ರೀನಿವಾಸ ಸ್ವಾಮಿಯ ಕಲ್ಯಾಣ ಸಮಯ ಮಾವನಾದ ಆಕಾಶರಾಜ ನನ್ನ ಮುದ್ದು ಅಳಿಯ ಪದ್ಮಾವತಿಯ ಪುರುಷ ಶ್ರೀನಿವಾಸ ಸ್ವಾಮಿಗೆ ನೂರು ಭಾರದ ಕಿರೀಟವನ್ನು ಉಡುಗೊರೆಯಾಗಿ ಕೊಡುತ್ತಾನೆ. ಮದುವೆಯ ಸಮಯದಲ್ಲಿ ಕೊಟ್ಟ ನೂರಾರು ಅಭರಣ ಉಡುಗೊರೆಗಳಲ್ಲಿ ಈ ಕಿರೀಟವು ಒಂದು. ನೂರು ಭಾರದ ಕಿರೀಟವನ್ನೇ ಏಕೆ ಕೊಡಲಾಯಿತು ಎಂದರೆ ಅದಕ್ಕೊಂದು ಪೌರಾಣಿಕ ಹಿನ್ನೆಲೆ ಇದೆ. ವಿರಾಟ ಸ್ವರೂಪನಾದ ವಿರಾಟ ಪುರುಷನ ಸಂಕೇತಗಳಲ್ಲಿ ಮಹಾವಿಷ್ಣುವಿನ ಕಿರೀಟವು ಒಂದು. ಶ್ರೀಹರಿಯ ಈ ಕಿರೀಟ ಬ್ರಹ್ಮ ಲೋಕದ ಸ್ಥಾನವಾಗಿದೆ ದೇವಮಾನವನ ರೀತಿಯಲ್ಲಿಯೇ ಪ್ರತಿ ಬ್ರಹ್ಮನಿಗೂ ನೂರುವರ್ಷ ಅಧಿಕಾರ ಅವಧಿ ಇರುತ್ತದೆ. ನಂತರ ಮತ್ತೊಂದು ದಿವ್ಯಶಕ್ತಿ ಬ್ರಹ್ಮ ಸ್ಥಾನವನ್ನು ಅಲಂಕರಿಸುತ್ತದೆ ಈ ಕಾರಣಕ್ಕಾಗಿಯೇ ಭೂಪಾಲ ಆಕಾಶರಾಜ ಶ್ರೀನಿವಾಸ ಸ್ವಾಮಿಗೆ ನೂರರ ಸಂಖ್ಯೆಗೆ ಅನುಗುಣವಾಗಿ ನೂರು ಭಾರದ ಕಿರೀಟವನ್ನು ಕೊಟ್ಟ. ಈ ಕಿರೀಟಕ್ಕು ಅಂದು ಶ್ರೀನಿವಾಸ ಸ್ವಾಮಿ ಧರೆಗಿಳಿದಾಗ ಗೊಲ್ಲನಿಂದ ಆದ ಪೆಟ್ಟಿಗೆ ಒಂದು ಸಂಬಂಧವಿದೆ.

ಸಂಬಂಧ ಏನು ಎಂದರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಶ್ರೀನಿವಾಸ ಸ್ವಾಮಿ ಬೆಟ್ಟದ ಮೇಲೆ ಬಂದಾಗ ಹಸಿವು ನೀರಡಿಕೆಗಳ ಜೊತೆಗೆ ಮಳೆಯನ್ನು ಎದುರಿಸಬೇಕಾಯಿತು ಆಗ ವಲ್ಮಿಕ ಅಂದರೆ ಹುಣಸೆ ಮರದ ಕೆಳಗಿದ್ದ ಹುತ್ತದೊಳಗೆ ಸ್ವಾಮಿ ಆಶ್ರಯವನ್ನು ಪಡೆಯುತ್ತಾರೆ. ಅಲ್ಲಿಗೆ ದಿನವು ಚೋಳರಾಜನ ಹಸುವು ಬಂದು ಹಾಲನ್ನು ಸುರಿಸುತ್ತಿತ್ತು ಹಸುವನ್ನ ಬೆನ್ನತ್ತಿ ಬಂದ ಗೊಲ್ಲ ಶ್ರೀನಿವಾಸ ಸ್ವಾಮಿಗೆ ಹಾಲನ್ನ ಸುರಿಸುತ್ತಿರುವ ಗೋವನ್ನ ಹೊಡೆಯುವುದಕ್ಕೆ ಹೋದಾಗ ಗೋಸಂರಕ್ಷಣಾರ್ಥವಾಗಿ ಶ್ರೀಹರಿಯೇ ಏಟನ್ನ ಸ್ವೀಕರಿಸುತ್ತಾನೆ.

ಸ್ವಾಮಿಯ ತಲೆಯಿಂದ ಧಾರಾಕಾರವಾಗಿ ರಕ್ತ ಹರಿಯುತ್ತದೆ ಅದನ್ನು ನೋಡಿದ ಕಾಮಧೇನು ನೇರವಾಗಿ ಅರಮನೆಯಲ್ಲಿದ್ದ ರಾಜನ ಬಳಿಗೆ ಹೋಯಿತು. ಮಲಗಿದ ರಾಜನನ್ನು ಗಂಟೆಬಡಿದು ಎಬ್ಬಿಸಿ ಶ್ರೀನಿವಾಸನಿದ್ದಲ್ಲಿಗೆ ಕರೆತಂದಿತು. ಹಿಂದಿನ ಕಾಲದಲ್ಲಿ ನಿಮಗೆ ಗೊತ್ತಿರುವಂತೆ ಪ್ರಜೆಗಳ ಅಧರ್ಮದ ಹೊಣೆ ರಾಜನದ್ದೆ. ರಾಜನೆ ಆ ಪಾಪಕರ್ಮಗಳ ಹೊರೆಯನ್ನು ಹೊರಬೇಕಿತ್ತು ಅದರಂತೆ ಶ್ರೀನಿವಾಸ ಸ್ವಾಮಿ ಅಂದು ಆ ಚೋಳ ರಾಜನಿಗೆ ಪಿಶಾಚತ್ವದ ಶಾಪವನ್ನು ಕೊಡುತ್ತಾನೆ. ಚೋಳರಾಜ ಕುಸಿದು ಹೋಗುತ್ತಾನೆ ಶಾಪ ನೀಡಿದ ನಂತರವೇ ಆತನಿಗೆ ಅರಿವಾಗುತ್ತದೆ ಈ ವ್ಯಕ್ತಿ ಸಾಮಾನ್ಯನಲ್ಲ ಸಾಕ್ಷಾತ್ ಶ್ರೀಹರಿ ಎಂದು ಕೂಡಲೇ ಕೈಮುಗಿದು ಬೊಗಸೆಯೊಡ್ಡಿದ ಪಿಶಾಚಿ ರೂಪದಲ್ಲಿರುವ ಚೋಳ ರಾಜ. ಭಗವಂತ ಭಕ್ತವತ್ಸಲ ದಯಾಮಯನಾದ ನ್ಯಾಯಪರನಾದ ನೀನು ಹೀಗೆ ಮಾಡುವುದು ಸರಿಯೇ ನಿರಪರಾಧಿಯಾದ ನನಗೇಕೆ ಈ ಪಿಶಾಚತ್ವದ ದುಃಖ. ಪ್ರಭು ಪರಿಹಾರ ಕೊಡು ಎಂದು ಬೇಡಿಕೊಂಡ ಚೋಳರಾಜ.

ಚೋಳರಾಜನ ದೈನ್ಯತೆಗೆ ಭಕ್ತಿಗೆ ಕರಗಿದ ಸ್ವಾಮಿ ಜೋಳ ರಾಜನಿಗೆ ಅಭಯವನ್ನು ನೀಡಿ ಶಾಪವಿಮೋಚನೆಯ ದಿನ ಮತ್ತು ಸಮಯವನ್ನು ತಿಳಿಸಿದ. ಚೋಳರಾಜ ದುಃಖಿಸಬೇಡ ಮುಂದೆ ಕೆಲವೇ ದಿನಗಳಲ್ಲಿ ಆಕಾಶರಾಜ ಎನ್ನುವವನು ಬರುತ್ತಾನೆ ಅವನು ನನಗೆ ನೂರು ಭಾರದ ವಜ್ರದ ಕಿರೀಟವನ್ನು ಉಡುಗರೆಯಾಗಿ ಕೊಡುತ್ತಾನೆ ಶುಕ್ರವಾರ ಸಾಯಂಕಾಲ ಕಿರೀಟವನ್ನು ಧರಿಸುತ್ತೇನೆ ನನ್ನ ಕಣ್ಣುಗಳು ತುಂಬಿಕೊಳ್ಳುತ್ತವೆ ಆ ಗಳಿಗೆ ನಿನಗೆ ಸುಖದ ಕಾಲ ಎಂದು ತಿಳಿಸುತ್ತಾನೆ ವೆಂಕಟೇಶ ಸ್ವಾಮಿ. ಈ ಘಟನೆಯಿಂದ ಕಿರೀಟ ಧರಿಸಿದ ದಿನ ಶಾಪಗ್ರಸ್ತನಾದ ಚೋಳರಾಜ ಶಾಪದಿಂದ ಮುಕ್ತನಾದ ಎನ್ನುವುದು ಪುರಾಣಗಳ ಉಲ್ಲೇಖ.

ಈ ವಿಚಾರ ಧಾರೆ ಬರಿ ಚೋಳರಾಜನಿಗೆ ಮಾತ್ರ ಸೀಮಿತವಲ್ಲ. ಈ ಕಿರೀಟ ರಹಸ್ಯ ನಮ್ಮ ನಿಮ್ಮಂತಹ ಸಾಮಾನ್ಯರಿಗೂ ಒಂದು ಅನುಕೂಲವನ್ನು ಮಾಡಿಕೊಟ್ಟಿದೆ. ಶುಕ್ರವಾರದ ದಿನ ಸ್ವಾಮಿಗೆ ಧರಿಸುವ ಕಿರೀಟ ಧಾರಣೆಯ ದರ್ಶನವನ್ನು ಮಾಡುವ ಭಕ್ತರಿಗೂ ಒಂದು ದಿವ್ಯ ಅನುಕೂಲವಿದೆ. ಆ ದಿನ ಸ್ವಾಮಿಗೆ ಧರಿಸುವ ಕಿರೀಟ ಧಾರಣೆಯನ್ನು ದರ್ಶನ ಮಾಡುವ ಭಕ್ತರಿಗೆ ಅವರ ಜೀವನದಲ್ಲಿ ಸಂಭವಿಸಿರುವ ಪಾಪ ಕರ್ಮಗಳಿಂದ ತಕ್ಷಣವೇ ಮುಕ್ತಿ ದೊರಕುವುದೆಂಬ ನಂಬಿಕೆ ಇದೆ. ಅಲ್ಲದೆ ಇಂತಹ ಕಿರೀಟಧಾರಣೆಯಲ್ಲಿ ಹಲವು ಮಹಾಮಹಿಮಾನ್ವಿತ ನಿಗೂಢ ತತ್ವಗಳಿವೆ ಮನೋಮಯ ಪ್ರಪಂಚದ ಶಕ್ತಿಕೇಂದ್ರ ಅಂದರೆ ಅದುವೇ ಆ ಬ್ರಹ್ಮದೇವ. ಬ್ರಹ್ಮನನ್ನು ಮನಸ್ಸಿನ ಯೋಗಗಳಿಗೆ ಹೋಲಿಸಲಾಗಿದೆ ಹಾಗಾಗಿ ಮನಸ್ಸೇ ಬ್ರಹ್ಮ ಈ ಮನಸ್ಸೇ ಸಮಸ್ತವನ್ನು ಸೃಷ್ಟಿಮಾಡುವುದು ಈ ಮನಸ್ಸಿನಿಂದಲೇ ಭ್ರಾಂತಿ ಇಂತಹ ಮನೋಲೋಕ ಸ್ಥಾನವಾದ ಬ್ರಹ್ಮಲೋಕ ಅಂದರೆ ಸ್ವಾಮಿಯ ಶಿರಸ್ಸು ವಜ್ರದ ಕಿರೀಟದಿಂದ ಅಲಂಕೃತವಾಗಿದೆ. ಇದರ ಅರ್ಥ ಮನಸ್ಸು ಬಾಹ್ಯದಲ್ಲಿ ವಜ್ರದಂತೆ ಕಠಿಣವಾಗಿದ್ದರೂ ಅಂತರಂಗದಲ್ಲಿ ಕೋಮಲವಾಗಿರಬೇಕೆಂದು ಹೀಗಾಗುವುದರಿಂದ ಜೀವನದಲ್ಲಿ ಎಂತಹದೇ ಸನ್ನಿವೇಶ ಬಂದರೂ ಅದನ್ನು ಎದುರಿಸಬಹುದು ಎಂಬುದನ್ನು ಸೂಚಿಸುತ್ತದೆ ಶ್ರೀನಿವಾಸ ಸ್ವಾಮಿಯ ವಜ್ರಖಚಿತ ಕಿರೀಟ.

ಇಡೀ ಭಾರತದಲ್ಲಿ ಇನ್ಯಾವ ಮೂರ್ತಿಗೂ ಅಂತಹ ಕಿರೀಟವಿಲ್ಲ. ಆರ್ಚಾವತಾರದಲ್ಲಿ ನೆಲೆನಿಂತಿರುವ ಸ್ವಾಮಿಯ ಶಿರಸ್ಸನ್ನು ಅಲಂಕರಿಸುವ ಈ ಕಿರೀಟ ಉದ್ದನೆಯ ಕೊಳಗದಂತೆ ಕಾಣುತ್ತದೆ ಸೂಕ್ಷ್ಮವಾಗಿ ಗಮನಿಸಿದರೆ ಈ ಕಿರೀಟ ದೇಹದಿಂದ ಪ್ರತ್ಯೇಕವಾಗಿ ಇಲ್ಲ ಎಂಬಂತೆ ಕಾಣಿಸುತ್ತದೆ ದೇಹಕ್ಕೆ ಅಂಟಿಕೊಂಡಿದೆಯೇನೋ ದೇಹದ ಜೊತೆ ಉದ್ಭವವಾಗಿದೆಯೇನೋ ಅನಿಸುತ್ತದೆ. ಇಂತಹ ಅದ್ಭುತ ಕಿರೀಟವನ್ನು ಭಗವಂತ ತಾನೇ ತನ್ನ ಕೈಯಾರೆ ಕಳಚಿ ತನ್ನ ಪರಮಭಕ್ತನ ತಲೆಗೆ ಇಟ್ಟಿದ್ದ.

ಭೀಮ ಎಂಬ ಪರಮಭಕ್ತನಿದ್ದ ತಿರುಮಲಾಧೀಶ ನಿಗೆ. ವೆಂಕಟೇಶ್ವರ ಸ್ವಾಮಿ ಎಂತಹ ದಾನಶೂರ ಎನ್ನುವುದಕ್ಕೆ ಈ ಭಕ್ತ ಭಿಮನೆ ದೊಡ್ಡ ಸಾಕ್ಷಿ. ಈ ಭೀಮನಿಗೂ ಭೀಮನ ಭಕ್ತಿಗೂ ವೆಂಕಟೇಶ್ವರಸ್ವಾಮಿಗೂ ದೇಗುಲ ಕಟ್ಟಿದ ಮಹಾಭಕ್ತ ತೊಂಡಮಾನನಿಗು ಒಂದು ನಂಟಿದೆ. ಶ್ರೀನಿವಾಸ ಸ್ವಾಮಿಗೆ ದೇಗುಲ ಕಟ್ಟಿದ ತೊಂಡಮಾನ ತನ್ನ ಅರಮನೆಗೆ ದೇವಾಲಯದಿಂದ ಸುರಂಗಮಾರ್ಗ ಒಂದನ್ನು ಮಾಡಿಕೊಂಡಿದ್ದ. ಪ್ರತಿದಿನ ಈ ಸುರಂಗ ಮಾರ್ಗದ ಮೂಲಕವಾಗಿಯೇ ಬಂದು ತೊಂಡಮಾನ ಸ್ವಾಮಿಯ ಸೇವೆಯನ್ನು ಮಾಡುತ್ತಿದ್ದ. ಆದರೆ ಒಂದು ದಿನ ಒಂದು ವಿಷಯವನ್ನು ಸ್ಪಷ್ಟವಾಗಿ ತಿಳಿಸಿದ್ದ ಸ್ವಾಮಿ ತೊಂಡಮಾನನಿಗೆ, ತೊಂಡಮಾನ ನೀನು ಬರುವುದಿದ್ದರೆ ಮಧ್ಯಾಹ್ನ ನೈವೇದ್ಯದ ನಂತರವೇ ಬರಬೇಕು. ತೊಂಡಮಾನ ಸಹ ಬಹುಕಾಲ ಈ ಮಾತನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದ ಆದರೆ ಒಂದು ದಿನ ಮಧ್ಯಾಹ್ನಕ್ಕೂ ಮೊದಲೇ ಬೆಳಗಿನ ಜಾವದಲ್ಲಿ ಬಂದುಬಿಟ್ಟಿದ್ದ ತೊಂಡಮಾನ. ಬಂದವನೇ ಸ್ವಾಮಿಯ ಕಾಲುಗಳನ್ನು ನೋಡಿ ದಂಗಾಗಿದ್ದ.

ತಾನು ಸ್ವರ್ಣ ತುಳಸಿಯ ದಳಗಳಿಂದ ಪೂಜಿಸುತ್ತಿದ್ದ ಶ್ರೀಹರಿಯ ಕಾಲು ಮಣ್ಣು ಮೆತ್ತಿಕೊಳ್ಳಲು ಕಾರಣ ತುಳಸಿಯ ದಳದಲ್ಲಿದ್ದ ಮಣ್ಣು. ಇದರಿಂದ ಬೇಸರಗೊಂಡ ತೊಂಡಮಾನ ಶ್ರೀಹರಿಯ ಹತ್ತಿರ ಹೇಳುತ್ತಾನೆ ಪ್ರಭು ಏನಿದು ನಿನ್ನ ಉಪೇಕ್ಷೆ ಮಣ್ಣು ಮೆತ್ತಿದ ತುಳಸಿಯದಳಗಳನ್ನು ನೋಡಿಯೂ ನೋಡದಂತೆ ಇರುವೆಯಲ್ಲಾ ಅಷ್ಟಕ್ಕೂ ನಿನ್ನ ಪಾದಕಮಲಗಳಿಗೆ ಯಾವ ಭಕ್ತ ಮಹಾಶಯ ಈ ಮಣ್ಣಿನ ತುಳಸಿ ದಳಗಳನ್ನು ಹಾಕಿದ್ದಾನೆ ಎಂದು ಕೇಳುತ್ತಾನೆ.

ಇದಕ್ಕುತ್ತರವಾಗಿ ಶ್ರೀನಿವಾಸ ಹೀಗೆ ಹೇಳುತ್ತಾನೆ ತೊಂಡಮಾನ ಇಲ್ಲಿ ಕೇಳು ನನ್ನ ಭಕ್ತರಲ್ಲಿ ತ್ರಿಗುಣಾತ್ಮಕ ತ್ರಿವಿಧಾತ್ಮಕ ಭಕ್ತರೂ ಕೂಡ ಇದ್ದಾರೆ ಅದರಲ್ಲೊಬ್ಬ ಭೀಮ. ಭೀಮನಿಗೆ ನಿನ್ನಂತೆ ಚಿನ್ನದ ತುಳಸಿದಳಗಳನ್ನು ಅರ್ಪಿಸುವುದಕ್ಕೆ ಅವನ ಬಳಿ ಸಂಪತ್ತಿಲ್ಲ ಆದರೆ ಅವನಲ್ಲೂ ಒಂದು ಅನನ್ಯ ಭಕ್ತಿ ಇದೆ. ಆ ಭಕ್ತಿ ನನ್ನನ್ನು ಮಂತ್ರಮುಗ್ಧನನ್ನಾಗಿಸುತ್ತದೆ ಆ ಕಾರಣಕ್ಕೆ ಅವನು ಅರ್ಪಿಸುವ ಮಣ್ಣು ಮೆತ್ತಿದ ತುಳಸಿಯದಳವು ನನಗೆ ಖುಷಿ ಕೊಡುತ್ತದೆ. ದಿನವೂ ತನ್ನ ದಿನನಿತ್ಯದ ಕೃತ್ಯಗಳನ್ನು ಮುಗಿಸಿ ನನ್ನ ಮೂರ್ತಿಯ ಮುಂದೆ ಕುಳಿತು ಪೂಜಿಸುತ್ತಾನೆ ಭಜಿಸುತ್ತಾನೆ ಅವನಭಕ್ತಿಗೆ ಸಂತುಷ್ಟನಾಗಿರುವ ನಾನು ದಿನವು ಅವನ ಮನೆಗೆ ಹೋಗಿ ಬರುತ್ತೇನೆ ಮಧ್ಯಾಹ್ನದ ನೈವೇದ್ಯವನ್ನು ನಾನು ಅವನ ಮನೆಯಲ್ಲಿ ಸ್ವೀಕರಿಸುತ್ತೇನೆ ಅದಕ್ಕೆ ನಾನು ನಿನಗೆ ಮಧ್ಯಾಹ್ನದ ನಂತರವೇ ಬಾ ಎಂದು ತಿಳಿಸಿದ್ದೆ ಎಂದುಬಿಟ್ಟ ಶ್ರೀನಿವಾಸ ಸ್ವಾಮಿ.

ಪ್ರಭುವಿನ ಬಾಯಲ್ಲಿ ಈ ಮಾತನ್ನು ಕೇಳಿ ದಿಗ್ಬ್ರಾಂತಿ ಆಯಿತು ತೊಂಡಮಾನನೀಗೆ. ತಾನು ಸ್ವಾಮಿಯ ಪರಮಭಕ್ತ ಎಂಬ ನೈತಿಕ ಅಹಂ ಇತ್ತು ತೊಂಡಮಾನನಿಗೆ ಆದರೆ ಯಾವಾಗ ಭೀಮನ ವಿಚಾರದಲ್ಲಿ ತಿಳಿಯಿತು ಅದು ಸಾಕ್ಷಾತ್ ಶ್ರೀಹರಿಯ ಬಾಯಿಂದ ಮೆಚ್ಚುಗೆಯ ಮಾತುಗಳನ್ನು ಕೇಳಿ ತಡೆಯುವುದಕ್ಕೆ ಆಗದೆ ಬೆಟ್ಟದ ಕೆಳಗಿರುವ ಕೂರ್ಮ ಸ್ಥಳಕ್ಕೆ ಬಂದು ಬಿಡುತ್ತಾನೆ. ತೊಂಡಮಾನ ಸ್ವಾಮಿಯ ಪರಮ ಭಕ್ತನನ್ನ ನೋಡುವ ಆತುರದಲ್ಲಿ ಬಡವನ ಮನೆಯ ಹೊಸ್ತಿಲು ಚಿಕ್ಕದಿರುತ್ತದೆ ಎನ್ನುವುದನ್ನು ಮರೆತು ಅರಮನೆಯ ಅಂತಃಪುರದ ಬಾಗಿಲನ್ನು ದಾಟುವಂತೆ ನುಗ್ಗಿ ಬಿಟ್ಟ. ಬಾಗಿಲ ಪಟ್ಟಿ ತಲೆಗೆ ತಾಗಿ ಮೂರ್ಛೆ ಹೋದ ತೊಂಡಮಾನ.

ರಾಜನ ಈ ಸ್ಥಿತಿಯನ್ನು ನೋಡಿ ಭಯಗೊಂಡ ಭೀಮ ಅವನನ್ನ ಉಪಚರಿಸಿ ಎಚ್ಚರಿಸುತ್ತಾನೆ. ಎಚ್ಚೆತ್ತುಕೊಂಡ ತೊಂಡಮಾನ ಹೇಳಿದ್ದು ಒಂದೇ ಯಾರು ಮಹಾಭಕ್ತ ಎಲ್ಲಿದ್ದಾನೆ ನನ್ನ ಸ್ವಾಮಿಯನ್ನೆ ತನ್ನ ಭಕ್ತಿಯಿಂದ ಪರವಶಗೊಳಿಸಿರುವವನು ಅವನ ಪಾದಪದ್ಮಗಳನ್ನು ವಂದಿಸುವುದು ನನ್ನ ಪುಣ್ಯವೇ ಸರಿ ಎಂದು ಹೇಳುತ್ತಾನೆ ತೊಂಡಮಾನ. ಅಷ್ಟರಲ್ಲಿ ಸಾಕ್ಷಾತ್ ವೆಂಕಟೇಶ್ವರ ಸ್ವಾಮಿ ಭೂದೇವಿ ಶ್ರೀದೇವಿ ಯರ ಸಹಿತನಾಗಿ ಪ್ರತ್ಯಕ್ಷನಾಗುತ್ತಾನೆ ಭೀಮನ ಮನೆಯಲ್ಲಿ.

ತನ್ನಂಥ ಬಡವನೆ ಮನೆಯಲ್ಲಿ ಸಾಕ್ಷಾತ್ ಪರಮಾತ್ಮನೇ ಪ್ರತ್ಯಕ್ಷವಾಗಿದ್ದನ್ನು ನೋಡಿ ಭೀಮ ಆಶ್ಚರ್ಯಚಕಿತನಾಗುತ್ತಾನೆ ಪುಲಕಿತನಾಗುತ್ತಾನೆ ಯಾಕೆಂದರೆ ಅಲ್ಲಿಯವರೆಗೆ ಶ್ರೀನಿವಾಸ ಸ್ವಾಮಿ ತನ್ನ ಮನೆಗೆ ಬರುತ್ತಿದ್ದ ವಿಷಯದ ಪ್ರತ್ಯಕ್ಷ ಅನುಭವ ಭೀಮನಿಗೆ ಆಗಿರಲಿಲ್ಲ. ಎಂದಿನಂತೆ ತನ್ನ ಕುಂಬಾರಿಕೆ ಕೆಲಸವನ್ನು ಮುಗಿಸಿ ನಿತ್ಯ ಪೂಜೆಯನ್ನು ಮಾಡುತ್ತಾ ಕಾಲ ಕಳೆಯುತ್ತಿದ್ದ. ಈಗ ಇದ್ದಕ್ಕಿದ್ದಂತೆ ಭಗವಂತನೇ ಪ್ರತ್ಯಕ್ಷನಾಗಿಬಿಟ್ಟಿದ್ದ ಸ್ವಾಮಿಯನ್ನು ಕಂಡು ಆನಂದಭರಿತನಾಗಿ ಬಗೆಬಗೆಯಾಗಿ ಸ್ವಾಮಿಯನ್ನು ಸ್ಮರಿಸುತ್ತಾನೆ ಮುಂದುವರೆದು ಈ ದರಿದ್ರನ ಮನೆಗೆ ದಯಪಾಲಿಸಿದೆಯಲ್ಲಾ ನೀನೆಂತಹ ಕರುಣಾಮಯಿ ಎಂದು ಕೊಂಡಾಡುತ್ತಾನೆ.

ಭೀಮನ ಜೊತೆ ಆತನ ಪತ್ನಿ ಕಮಲನಿಯು ದೇವನನ್ನ ಕೊಂಡಾಡುತ್ತಾಳೆ ತನ್ನ ಗಂಡನ ಪುಣ್ಯದಿಂದಾಗಿ ನನಗೂ ನಿನ್ನ ದರುಶನ ಭಾಗ್ಯ ಲಭಿಸಿತು. ನನ್ನ ಮನೆಯಲ್ಲಿ ನಿನಗಾಗಿ ಕೊಡುವುದಕ್ಕೆ ಏನು ಇಲ್ಲ ನೀನು ನಿಜವಾಗಿಯೂ ನನ್ನ ಗಂಡನ ಮೇಲೆ ಪ್ರಸನ್ನನಾಗಿದ್ದರೆ ನಾನು ಮಾಡುವ ಅಡುಗೆಯನ್ನು ಸ್ವೀಕರಿಸಬೇಕೆಂದು ಕೇಳಿಕೊಳ್ಳುತ್ತಾಳೆ. ಕಮಲಿನಿ ಕಮಲದ ದಂಟಿನ ಸೊಪ್ಪಿನಿಂದ ಅಡುಗೆಯನ್ನು ಮಾಡುತ್ತಾಳೆ. ತನ್ನ ಭಕ್ತನ ಮನೆಯಲ್ಲಿ ಆತನ ಹೆಂಡತಿ ತಯಾರಿಸಿದ ಅಡುಗೆಯನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸುತ್ತಾನೆ ಲಕ್ಷ್ಮಿ ಸಹಿತನಾದ ಶ್ರೀವೆಂಕಟೇಶ. ನಂತರ ತನ್ನ ಮೈಮೇಲಿನ ಒಡವೆಯನ್ನು ಭೀಮನಿಗೆ ತೊಡಿಸುತ್ತಾನೆ ತನ್ನ ತಲೆಯ ಮೇಲಿನ ಭವ್ಯ ಕಿರೀಟವನ್ನು ತೆಗೆದು ಭೀಮನಿಗೆ ತೊಡಿಸುತ್ತಾನೆ. ಲಕ್ಷ್ಮೀದೇವಿಯ ಬಳಿಇದ್ದ ಆಭರಣವನ್ನು ಭೀಮನ ಪತ್ನಿ ಕಮಲಿನಿಗೆ ಕೊಡಿಸುತ್ತಾನೆ. ಹೀಗೆ ಮನೆಗೆ ಬಂದಾಗ ದರಿದ್ರನ ಮನೆ ಎಂದವನನ್ನು ಸಿರಿವಂತನನ್ನಾಗಿ ಮಾಡಿ ಅವರನ್ನ ವೈಕುಂಟಕ್ಕೆ ಕಳಿಸುತ್ತಾನೆ ಅವರು ಮುಕ್ತಿಯನ್ನು ಪಡೆಯುತ್ತಾರೆ.

ಇದನ್ನೆಲ್ಲಾ ನೋಡಿದ ತೊಂಡಮಾನನಿಗೆ ಆಶ್ಚರ್ಯ ಬೇಸರ ಆತಂಕ ಅವಮಾನ ಎಲ್ಲವೂ ಆಗುತ್ತದೆ ನಾನು ಚಿನ್ನದ ತುಳಸಿದಳಗಳಿಂದ ಪೂಜೆ ಮಾಡಿದವನು ನನಗೆ ಇನ್ನೂ ದೇವರ ಸಾನಿಧ್ಯ ಸಿಕ್ಕಿಲ್ಲ. ಆದರೆ ಮಣ್ಣಿನ ತುಳಸಿದಳಗಳಿಂದ ಪೂಜೆಮಾಡಿದ ಭೀಮ ಮುಕ್ತಿದಾಮವಾದ ವೈಕುಂಠವನ್ನು ಸೇರಿದನಲ್ಲ ಅವನೇ ಅದೃಷ್ಟವಂತ ಎಂದುಕೊಂಡು ಶ್ರೀನಿವಾಸ ಸ್ವಾಮಿಯನ್ನು ಇದೇ ಪ್ರಶ್ನೆಯನ್ನು ಕೇಳುತ್ತಾನೆ. ದೇವ ನನ್ನ ರಾಜ್ಯದ ಸಾಮಾನ್ಯ ಕುಂಬಾರನಿಗೆ ಈ ಯೋಗ ಲಭಿಸಿದೆ ನಿನ್ನ ಅಂತರಂಗದ ಭಕ್ತ ಎಂದು ತಿಳಿದುಕೊಂಡಿರುವ ನನ್ನ ಸ್ಥಿತಿ ಏನು ಎಂದು ಪ್ರಶ್ನೆಯನ್ನು ಮಾಡುತ್ತಾನೆ.

ಆಗ ಭಗವಂತ ತೊಂಡಮಾನನಿಗಿರುವ ಕರ್ಮ ಶೇಷದ ವಿವರಣೆಯನ್ನು ಕೊಟ್ಟು ವೈರಾಗ್ಯವನ್ನು ಬೋಧಿಸುತ್ತಾನೆ. ಶೇಷಗಳು ಮುಗಿದ ಕೂಡಲೇ ನಿನಗೂ ವೈಕುಂಠ ಪ್ರಾಪ್ತಿಯಾಗುತ್ತದೆ ಸಧ್ಯ ನೀನು ಪುಷ್ಕರಣಿಯ ದಡದಲ್ಲಿ ತಪಸ್ಸನ್ನು ಆಚರಿಸು ಎಂದು ಹೇಳುತ್ತಾನೆ. ಅದೇ ರೀತಿ ಪುಷ್ಕರಣಿ ದಡದಲ್ಲಿ ತಪಸ್ಸನ್ನಾಚರಿಸಿ ತನ್ನೆಲ್ಲಾ ಕರ್ಮ ಶೇಷ ಗಳನ್ನು ಕಳೆದುಕೊಂಡು ತೊಂಡಮಾನ ವೈಕುಂಠ ವಾಸಿಯಾಗುತ್ತಾನೆ.

ಈ ಘಟನೆ ನಡೆದಿದ್ದಕ್ಕೆ ಪೂರಕವಾಗಿ ಕಾಳಹಸ್ತಿಯ ಪಕ್ಕದಲ್ಲಿ ಭೀಮನ ಗುಡಿಸಲಿದ್ದ ಜಾಗವಿದೆ ಈ ಜಾಗದಲ್ಲಿ ಪುಟ್ಟ ದೇವಸ್ಥಾನವಿದೆ ಶ್ರೀನಿವಾಸ ಶ್ರೀದೇವಿ ಭೂದೇವಿ ಸಹಿತನಾಗಿ ಕುಳಿತಿರುವ ಭಂಗಿ ಇರುವ ಏಕೈಕ ದೇವಾಲಯ ಇದು. ಏಕೆಂದರೆ ಇಲ್ಲಿ ಭೀಮನ ಮನೆಯಲ್ಲಿ ಊಟಕ್ಕೆ ಕುಳಿತಿದ್ದರು ಶ್ರೀನಿವಾಸ ದಂಪತಿ. ಅಲ್ಲದೆ ತೊಂಡಮಾನನಿಗೆ ವೈರಾಗ್ಯ ಬೋಧಿಸಿದ್ದು ಕೂಡ ಈ ಕುಳಿತ ಭಂಗಿಯಲ್ಲಿ. ಧನ-ಕನಕಗಳ ಒಡೆಯನಾದ ಲಕ್ಷ್ಮಿ ಸಹಿತನಾದ ಶ್ರೀನಿವಾಸನಿಗೆ ನೈವೇದ್ಯವನ್ನು ಇಡುವುದು ಮಣ್ಣಿನ ಮಡಿಕೆಯಲ್ಲಿ ಇದರ ಅರ್ಥ ಚಿನ್ನದ ತುಳಸಿಯ ದಳದಲ್ಲಿ ಪೂಜಿಸಿದ ಚಕ್ರವರ್ತಿ ತೊಂಡಮಾನನಿಗಿಂತಲೂ ಮಣ್ಣು ತಾಗಿರುವ ತುಳಸಿದಳಗಳಿಂದ ಪೂಜಿಸಿದ ಭೀಮ ಹೇಗೆ ಶ್ರೇಷ್ಠನಾದ ಹೇಗೆ ಸ್ವಾಮಿಯ ಕಿರೀಟವನ್ನು ಪಡೆದ ಎಂಬ ಸಂದೇಶವನ್ನು ಕೊಟ್ಟಿದ್ದಾನೆ ಸ್ವಾಮಿ ತನ್ನ ಭಕ್ತರಿಗೆ. ಇದು ಶ್ರೀನಿವಾಸನ ಕಿರೀಟದ ಸುತ್ತ ಇರುವ ಕೆಲವು ಪೌರಾಣಿಕ ಮಾಹಿತಿಗಳು. ಈ ಮಾಹಿತಿ ನಿಮಗೆ ಇಷ್ಟ ಆದರೆ ನಿಮ್ಮ ಸ್ನೇಹಿತರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ.

ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!