ಭಾರತ ಸರ್ಕಾರವು ನಮ್ಮ ದೇಶದ ಜನತೆಗೆ ಅದರಲ್ಲೂ ಬಡವರಿಗಾಗಿ ಜಾರಿಗೆ ತಂದಿರುವ ವಿಶೇಷವಾದ ಯೋಜನೆ ಆಯುಶ್ಮಾನ್ ಕಾರ್ಡ್ ಆಗಿದೆ. ಇದು ದೇಶದ ಬಡ ಜನರಿಗೆ ಆರೋಗ್ಯ ಸೌಲಭ್ಯವನ್ನು ಉಚಿತವಾಗಿ ಒದಗಿಸಿಕೊಡುವಂಥ ಯೋಜನೆ ಆಗಿದೆ. ಅರ್ಹರಿಗೆ ಸರ್ಕಾರವೇ ಆಯುಶ್ಮಾನ್ ಕಾರ್ಡ್ ವಿತರಣೆ ಮಾಡಲಿದೆ. ಈಗಾಗಲೇ ಕೇಂದ್ರ ಸರ್ಕಾರದ ಮೂಲಕ ಬಹಳಷ್ಟು ಜನರಿಗೆ ಆಯುಶ್ಮಾನ್ ಕಾರ್ಡ್ ಸಿಕ್ಕಿದೆ. ಇನ್ನು ರಾಜ್ಯ ಸರ್ಕಾರ ಕೂಡ ಆಯುಶ್ಮಾನ್ ಕಾರ್ಡ್ ಒದಗಿಸುವುದಕ್ಕೆ ಮುಂದಾಗಿದೆ..
ಆಯುಶ್ಮಾನ್ ಕಾರ್ಡ್ ನಿಮ್ಮ ಬಳಿ ಇದ್ದರೆ, ಅನಾರೋಗ್ಯಕ್ಕೆ ಒಳಗಾದಾದ 5 ಲಕ್ಷದವರೆಗೂ ಉಚಿತ ಚಿಕಿತ್ಸೆ ಪಡೆದುಕೊಳ್ಳಬಹುದು. ಬಹಳ ಮಹತ್ವದ ಕಾರ್ಡ್ ಇದಾಗಿದ್ದು, ಒಂದು ವೇಳೆ ಏನೋ ಘಟನೆ ನಡೆದು ಆಯುಶ್ಮಾನ್ ಕಾರ್ಡ್ ಕಳೆದು ಹೋದರೆ ನಿಮಗೆ ಸಿಗುವ ಸೌಲಭ್ಯ ನಿಂತು ಹೋಗುತ್ತಾ? ಖಂಡಿತ ಇಲ್ಲ. ಒಂದು ವೇಳೆ ನಿಮ್ಮ ಆಯುಶ್ಮಾನ್ ಕಾರ್ಡ್ ಕಳೆದು ಹೋದರೆ, ಯೋಚನೆ ಮಾಡಬೇಡಿ.. ಮೊಬೈಲ್ ಇಂದಲೇ ಹೊಸ ಆಯುಶ್ಮಾನ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಬಹುದು..
ಆಯುಶ್ಮಾನ್ ಕಾರ್ಡ್ ಡೌನ್ಲೋಡ್ ಮಾಡಲು ಮೊದಲಿಗೆ ಈ https://beneficiary.nha.gov.in/ ಲಿಂಕ್ ಓಪನ್ ಮಾಡಿ. ಇದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಆಗಿದೆ.. ಹೋಮ್ ಪೇಜ್ ನ ರೈಟ್ ಸೈಡ್ ನಲ್ಲಿ ಲಾಗಿನ್ ಮಾಡುವುದಕ್ಕೆ ಬಾಕ್ಸ್ ಇರುತ್ತದೆ. ಅದರ ಮೂಲಕ ಲಾಗಿನ್ ಮಾಡಬಹುದು.
ಇಲ್ಲಿ ಫಲಾನುಭವಿ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ಬಳಿಕ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಇಂದ ಲಾಗಿನ್ ಮಾಡಿ, ನಿಮ್ಮ ಫೋನ್ ಗೆ ಬರುವ ಓಟಿಪಿ ಹಾಕುವ ಮೂಲಕ ಲಾಗಿನ್ ಮಾಡಬಹುದು.
ಲಾಗಿನ್ ಆದ ಬಳಿಕ ಹೊಸ ಪೇಜ್ ನಲ್ಲಿ ನಿಮ್ಮ ರಾಜ್ಯ, ಜಿಲ್ಲೆ ಇದೆಲ್ಲವನ್ನು ಆಯ್ಕೆ ಮಾಡಬಹುದು. ಇಲ್ಲಿ ಯೋಜನೆಗಳ ಪೈಕಿ PMJAY ಯೋಜನೆಯನ್ನು ಸೆಲೆಕ್ಟ್ ಮಾಡಿ. ಇಲ್ಲಿ ನೀವು PMJAY ಐಡಿ, ಹೆಸರು, ವಿಳಾಸ, ಗ್ರಾಮದ ಡೀಟೇಲ್ಸ್, ಇದೆಲ್ಲವನ್ನು ಬಳಸಿ ಆಯುಶ್ಮಾನ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು..
ಈಗ ನೀವು ಆಯುಶ್ಮಾನ್ ಭಾರತ್ ಕಾರ್ಡ್ ನಲ್ಲಿ ಆಧಾರ್ ಐಡಿ ಅಥವಾ ಫ್ಯಾಮಿಲಿ ಐಡಿ ಲಿಂಕ್ ಆಗಿರುವುದನ್ನು ನೋಡುತ್ತೀರಿ. ಈ ಆಯುಶ್ಮಾನ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಪಕ್ಕದಲ್ಲಿರುವ ಡೌನ್ಲೋಡ್ ಬಟನ್ ಕ್ಲಿಕ್ ಮಾಡಿ. ಬಳಿಕ ನಿಮ್ಮ ಫೋನ್ ನಂಬರ್ ಹಾಕಿ, ನಿಮಗೆ ಬರುವ ಓಟಿಪಿಯನ್ನು ನಮೂದಿಸಿ, ಈಗ ಆಯುಶ್ಮಾನ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಬಹುದು.