ನಮ್ಮೆಲ್ಲರಿಗೂ ಒಂದು ಒಳ್ಳೆಯ ಉದ್ಯಮವನ್ನು ಪ್ರಾರಂಭಿಸಬೇಕು ಅದನ್ನು ಯಶಸ್ಸಿನತ್ತ ಕೊಂಡೊಯ್ಯಬೇಕು ಅದರಿಂದ ಪ್ರತಿಷ್ಠೆ ಮತ್ತು ದುಡ್ಡನ್ನು ಗಳಿಸಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ನಮಗೆ ಯಾವ ಉದ್ಯಮವನ್ನು ಪ್ರಾರಂಭಿಸಬೇಕು ಅದಕ್ಕೆ ಎಷ್ಟು ಬಂಡವಾಳ ಬೇಕಾಗುತ್ತದೆ ಎಂಬುದರ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ನಾವಿಂದು ನಿಮಗೆ ಒಂದು ಉದ್ಯಮದ ಬಗ್ಗೆ ತಿಳಿಸಿಕೊಡುತ್ತವೆ ಇದರಲ್ಲಿ ನೀವು ಇಪ್ಪತ್ತೈದು ಸಾವಿರ ಬಂಡವಾಳವನ್ನು ಹಾಕಿ ಒಂದುವರೆ ಲಕ್ಷ ರೂಪಾಯಿ ಸಂಪಾದನೆಯನ್ನು ಮಾಡಬಹುದು ಹಾಗಾದರೆ ಆ ಉದ್ಯೋಗ ಯಾವುದು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
ಕೆಲವೊಂದು ವ್ಯಾಪಾರಗಳಲ್ಲಿ ನಮಗೆ ಕಾಣಿಸದೇ ಇರುವಷ್ಟು ಲಾಭಗಳು ಇರುತ್ತವೆ. ನಾವು ಈ ರೀತಿಯಾಗಿಯೂ ಹಣ ಮಾಡಬಹುದು ಎಂಬುದು ಎಷ್ಟೊ ಜನರಿಗೆ ತಿಳಿದಿರುವುದಿಲ್ಲ. ಸಾಮಾನ್ಯವಾಗಿ ಜನರು ಸ್ನ್ಯಾಕ್ಸ್ ಗಳನ್ನು ತಿನ್ನುವುದರಿಂದಾಗಿ ನಾವು ಲಕ್ಷಗಟ್ಟಲೆ ಸಂಪಾದನೆ ಮಾಡಬಹುದು. ಇದು ಎಷ್ಟೊ ಜನರಿಗೆ ಗೊತ್ತಿಲ್ಲ ಈಗ ನಾವು ತಿಳಿಸುತ್ತಿರುವುದು ಅವಲಕ್ಕಿಯಿಂದ ಮಾಡುವ ಸ್ನ್ಯಾಕ್ಸ್ ಅನ್ನು ಪೋಹ ಎಂದು ಕರೆಯುತ್ತಾರೆ.
ನೋಡುವುದಕ್ಕೆ ಹೆಚ್ಚು ಕಡಿಮೆ ಪುಳಿಯೋಗರೆ ತರಹ ಇರುತ್ತದೆ. ಇದು ಉತ್ತರ ಭಾರತದ ತಿಂಡಿ ಎಂದು ಹೇಳಬಹುದು ಅವರಿಗೆ ಈ ಪೋಹ ಎಂದರೆ ತುಂಬಾ ಇಷ್ಟ.ಇದಕ್ಕೆ ಅವರು ಚಟ್ನಿಯನ್ನು ಹಾಕಿಕೊಂಡು ತುಂಬಾ ಆನಂದದಿಂದ ತಿನ್ನುತ್ತಾರೆ ಇದು ದಕ್ಷಿಣ ಭಾರತಕ್ಕೂ ಆವರಿಸಿದೆ ಎಂದು ಹೇಳಬಹುದು ಹಾಗಾಗಿ ಈಗ ಭಾರತದಲ್ಲಿ ಎಲ್ಲಾಕಡೆ ಇದನ್ನು ಸಂಜೆಯ ಸ್ನ್ಯಾಕ್ಸ್ ಆಗಿ ಬೆಳಗ್ಗೆ ತಿಂಡಿಯಾಗಿ ತಿನ್ನುತ್ತಿದ್ದಾರೆ. ಹಾಗಾಗಿ ಅವಲಕ್ಕಿಯನ್ನು ತಯಾರಿಸುವ ಉದ್ಯಮವನ್ನು ಪ್ರಾರಂಭಿಸಿದರೆ ಒಳ್ಳೆಯ ಲಾಭವನ್ನು ಗಳಿಸಬಹುದು ಎಂದು ಹೇಳಬಹುದು. ಹಾಗಾದರೆ ಇದನ್ನು ಹೇಗೆ ಮಾಡಬೇಕು ಇದಕ್ಕೆ ಯಾವ ರೀತಿಯ ಪ್ಲಾನ್ ಗಳನ್ನು ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ.
ಈ ತರದ ಉದ್ಯಮವನ್ನು ಪ್ರಾರಂಭಿಸುವುದಕ್ಕೆ ನಾವು ಮೊದಲು ಎಷ್ಟು ಬಂಡವಾಳವನ್ನು ಹಾಕಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು. ಇಂತಹ ಉದ್ಯಮಗಳಿಗೆ ಕೆವಿಐಸಿ( ಖಾದಿ ವಿಲೇಜ್ ಇಂಡಸ್ಟ್ರೀಸ್ ಕಮಿಷನ್ ) ಅವರು ತುಂಬಾ ಬೆಂಬಲ ನೀಡುತ್ತಾರೆ. ಅನ್ನದಿಂದಲೇ ಅವಲಕ್ಕಿ ತಯಾರಾಗುತ್ತದೆ ಎಂದು ನಮಗೆ ಗೊತ್ತು ಹಾಗಾಗಿ ಅದಕ್ಕೆ ಬೇಕಾಗಿರುವಂತಹ ಸೆಟಪ್ ಗಳನ್ನು ನಾವು ಮಾಡಿಕೊಳ್ಳಬೇಕಾಗುತ್ತದೆ. ಅದಕ್ಕೆ ಎರಡು ಲಕ್ಷದ ನಲವತ್ಮೂರು ಸಾವಿರ ರೂಪಾಯಿ ಖರ್ಚು ಬರುತ್ತದೆ.
ಆದರೆ ನೀವು ಅಷ್ಟೊಂದು ಖರ್ಚು ಮಾಡುವ ಅವಶ್ಯಕತೆ ಇಲ್ಲ ಯಾಕೆಂದರೆ ಸರ್ಕಾರ ಸಣ್ಣ ಕೈಗಾರಿಕೆಗಳಿಗೆ ಆರ್ಥಿಕ ಸಹಾಯವನ್ನು ಮಾಡುತ್ತದೆ ಶೇಕಡ ತೊಂಬತ್ತರಷ್ಟು ಭಾಗ ಸಾಲವನ್ನು ಕೊಡುತ್ತದೆ ಹಾಗಾಗಿ ನೀವು ಸ್ವಲ್ಪಮಟ್ಟಿಗೆ ಕರ್ಚನ್ನು ಮಾಡಿದರೆ ಸಾಕು. ಹಾಗಾದ್ರೆ ಒಂದು ಉದ್ಯಮವನ್ನು ಪ್ರಾರಂಭಿಸುವುದಕ್ಕೆ ಯಾವ ರೀತಿಯ ಯಂತ್ರಗಳು ಬೇಕಾಗುತ್ತವೆ ಎಂಬುದನ್ನು ನೋಡೋಣ.
ಈ ಮಿಲ್ ಗಾಗಿ ತುಂಬಾ ದೊಡ್ಡದಾದ ಜಾಗದ ಅವಶ್ಯಕತೆ ಇರುವುದಿಲ್ಲ ಕೇವಲ ಐದು ನೂರು ಅಡಿ ಜಾಗ ಇದ್ದರೆ ಸಾಕು. ಈ ಮಿಲ್ ನ್ನು ಸೆಟ್ ಮಾಡುವುದಕ್ಕೆ ಒಂದು ಲಕ್ಷ ರೂಪಾಯಿ ಖರ್ಚಾಗುತ್ತದೆ ಇದರ ಜೊತೆಗೆ ಪೋಹಾ ಯಂತ್ರ ಅಂದ್ರೆ ಅವಲಕ್ಕಿಯನ್ನು ತಯಾರಿಸುವ ಯಂತ್ರವೂ ಕೂಡ ನಮಗೆ ಬೇಕಾಗುತ್ತದೆ. ಇದರ ಜೊತೆಗೆ ಪರ್ನೆನ್ಸ್ ಸೀಮ್ಸ್ ಪ್ಯಾಕಿಂಗ್ ಮಷೀನ್ ಚಿಕ್ಕ ಚಿಕ್ಕ ಡ್ರಮ್ ಗಳು ಬೇಕಾಗುತ್ತವೆ. ಇದೆಲ್ಲದಕ್ಕೂ ಸೇರಿ ನಮಗೆ ಇನ್ನೂ ಒಂದು ಲಕ್ಷ ರೂಪಾಯಿ ಖರ್ಚು ತಗುಲಬಹುದು.
ವರ್ಕಿಂಗ್ ಕ್ಯಾಪಿಟಲ್ ಅಂತ ನಲವತ್ಮೂರು ಸಾವಿರದಿಂದ ಐವತ್ತು ಸಾವಿರದವರೆಗೆ ಉದ್ಯಮವನ್ನು ಪ್ರಾರಂಭಿಸುವುದಕ್ಕೆ ನಮಗ ಬೇಕಾಗುತ್ತವೆ. ನಾವು ಇದನ್ನೆಲ್ಲ ಲೆಕ್ಕ ಹಾಕಿದರೆ ಮೊದಲು ಹೇಳಿದ ಹಾಗೆ ಇಪ್ಪತ್ತೈದು ಸಾವಿರದಲ್ಲಿ ಉದ್ಯಮವನ್ನು ಪ್ರಾರಂಭಿಸಬಹುದು ಎಂದುಕೊಂಡರೆ ಬರಿ ಯಂತ್ರಗಳಿಗೆ ನಾಲ್ಕರಿಂದ ಐದು ಲಕ್ಷ ರೂಪಾಯಿಗಳಾಗುತ್ತದೆ. ಅದಕ್ಕೋಸ್ಕರ ಕೆವಿಐಸಿ ಅವರು ಸಾಲವನ್ನು ಕೊಡುತ್ತಾರೆ. ಅದಕ್ಕೆ ಹೇಗೆ ಅರ್ಜಿಯನ್ನು ಸಲ್ಲಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ. ಮೊದಲನೆಯದಾಗಿ ನಮಗೆ ಈ ಖಾದಿ ಸಾಲ ಬೇಕು ಎಂದರೆ ಪ್ರೊಜೆಕ್ಟ್ ರಿಪೋರ್ಟ್ ತಯಾರಿಸಿಕೊಳ್ಳಬೇಕು.
ಆ ರಿಪೋರ್ಟ್ ನಿಂದಾ ವಿಲೇಜ್ ಇಂಡಸ್ಟ್ರೀಸ್ ಎಂಪ್ಲಾಯ್ಮೆಂಟ್ ಸ್ಕೀಮ್ ಅಡಿಯಲ್ಲಿ ಸಾಲಕ್ಕೆ ಅರ್ಜಿ ಹಾಕಬೇಕು. ನಂತರ ಕೆವಿಐಸಿಯವರು ಇದನ್ನು ನೋಡಿ ನೀವು ಉದ್ಯೋಗದಲ್ಲಿ ತುಂಬಾ ಆಸಕ್ತಿಯನ್ನು ಹೊಂದಿದ್ದಿರಿ ಎಂದು ಪರಿಗಣಿಸಿ ನಿಮಗೆ ಸಾಲವನ್ನು ಕೊಡುತ್ತಾರೆ. ಜೊತೆಗೆ ಈ ಉದ್ಯಮವನ್ನು ಹೇಗೆ ಪ್ರಾರಂಭಿಸಬೇಕು ಇದನ್ನ ಪ್ರಾರಂಭಿಸುವುದಕ್ಕೆ ನಿಮಗೆ ಯಂತ್ರಗಳು ಎಲ್ಲಿ ಸಿಗುತ್ತವೆ ಅದಕ್ಕೆ ನೀವು ಏನು ಮಾಡಬೇಕು ಯಂತ್ರಗಳನ್ನು ಹೇಗೆ ಬಳಸಬೇಕು ಎಲ್ಲದರ ಬಗ್ಗೆ ಅವರು ಮಾಹಿತಿಯನ್ನು ನೀಡುತ್ತಾರೆ.
ನೀವು ಸಾಲವನ್ನು ತೆಗೆದುಕೊಂಡ ನಂತರ ಯಂತ್ರಗಳನ್ನು ಖರೀದಿಸಬೇಕಾಗುತ್ತದೆ. ಇದಕ್ಕೆ ಮುಖ್ಯವಾಗಿ ಬೇಕಾಗಿರುವಂತಹ ಪೋಹಾ ಮೇಕಿಂಗ್ ಯಂತ್ರ ಸೀಮ್ಸ್ ಯಂತ್ರ ಪ್ಯಾಕಿಂಗ್ ಯಂತ್ರ ಹಾಗೆ ಪರ್ನೆನ್ಸ್ ಬೇಕಾಗುತ್ತದೆ. ಈ ಯಂತ್ರಗಳನ್ನು ತೆಗೆದುಕೊಂಡು ನೀವು ಉದ್ಯೋಗವನ್ನು ಪ್ರಾರಂಭಿಸಬಹುದು. ಇನ್ನು ಈ ಉದ್ಯೋಗದಲ್ಲಿ ಯಾವ ರೀತಿಯ ಲಾಭ ಇರುತ್ತದೆ ಎಂಬುದನ್ನು ನೋಡುವುದಾದರೆ, ವ್ಯಾಪಾರವನ್ನು ಶುರು ಮಾಡಿದ ಮೇಲೆ ನೀವು ಅವಲಕ್ಕಿಗಾಗಿ ನಿವೊಂದಿಷ್ಟು ಸರಕುಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ನಂತರ ನೀವು ಅದರಿಂದ ಒಂದು ಸಾವಿರ ಕ್ವಿಂಟಲ್ ನಷ್ಟು ಅವಲಕ್ಕಿಯನ್ನು ತಯಾರಿಸಿ ಮಾರಾಟ ಮಾಡಿದರೆ ನಿನಗೆ ಹತ್ತು ಲಕ್ಷದಷ್ಟು ಲಾಭ ಸಿಗುತ್ತದೆ. ಅದರಿಂದ ನೀವು ತೆಗೆದುಕೊಂಡಿರುವ ಸಾಲ ಸರಕಿನ ಖರೀದಿ ಯ ಖರ್ಚು ಕೆಲಸಗಾರರಿಗೆ ಸಂಬಳ ಹಾಗೂ ವಿದ್ಯುತ್ ಬಿಲ್ ಇದೆಲ್ಲಾ ಸೇರಿ ಎಂಟು ಲಕ್ಷದ ಅರವತ್ತು ಸಾವಿರ ಆಗಬಹುದು. ಆಗ ನಿಮಗೆ ಉಳಿಯುವ ಲಾಭ ಒಂದು ಲಕ್ಷದ ನಲವತ್ತು ಸಾವಿರ ರೂಪಾಯಿ.
ಹಾಗಾದರೆ ಉದ್ಯಮವನ್ನು ಹೇಗೆ ಉತ್ತಮಗೊಳಿಸಬೇಕು ಅದನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಬೇಕೆಂದರೆ ಏನು ಮಾಡಬೇಕು ಎಂದರೆ, ಅವಲಕ್ಕಿ ಬೇಗ ಕೆಡು ವಂತದ್ದಲ್ಲ ಹಾಗಾಗಿ ನೀವು ದೇಶದ ಯಾವ ಮೂಲೆಗೆ ಬೇಕಾದರೂ ಇದನ್ನು ಪೂರೈಸಬಹುದು. ಸೂಪರ್ ಮಾರ್ಕೆಟ್ ಗಳಲ್ಲಿ ಇವುಗಳನ್ನು ಹೆಚ್ಚಿನ ಬೆಲೆಗೆ ಕೊಂಡುಕೊಳ್ಳುತ್ತಾರೆ ನೀವೆಲ್ಲ ಗಮನಿಸಿರುವ ಹಾಗೆ ಅವಲಕ್ಕಿಯನ್ನು ಹೊರಗಡೆ ತೆಗೆದುಕೊಳ್ಳುವುದಕ್ಕಿಂತ ಸೂಪರ್ ಮಾರ್ಕೆಟ್ ನಲ್ಲಿ ತೆಗೆದುಕೊಂಡಾಗ ಅದಕ್ಕೆ ಸ್ವಲ್ಪ ಬೆಲೆ ಹೆಚ್ಚಿಗೆ ಇರುತ್ತದೆ. ಹಾಗಾಗಿ ನೀವು ಅವರ ಜೊತೆ ಡೀಲ್ ಮಾಡಿಕೊಂಡು ಅವರಿಗೆ ಸಪ್ಲೈ ಮಾಡಬಹುದು.
ಇದರ ಜೊತೆಗೆ ಮನೆಗಳಿಗೆ ಡೋರ್ ಡಿಲೆವರಿ ಕೂಡ ಮಾಡಬಹುದು ಸ್ವಲ್ಪ ಕಡಿಮೆ ಬೆಲೆಗೆ ಕೊಡುವುದರಿಂದ ಅವರು ನಿಮ್ಮ ಹತ್ತಿರಾನೆ ತೆಗೆದುಕೊಳ್ಳುತ್ತಾರೆ. ಹಾಗೆ ದೇವಸ್ಥಾನಗಳಲ್ಲಿ ಅವಲಕ್ಕಿ ಪ್ರಸಾದ ಕೊಡುತ್ತಿರುತ್ತಾರೇ ನಿವು ಅಲ್ಲಿ ಕೂಡ ಮಾರುವುದರಿಂದ ಒಳ್ಳೆಯ ಲಾಭ ಪಡೆಯಬಹುದು. ಅದೇರೀತಿ ಅಂಗಡಿಗಳಿಗೆ ಕಡಿಮೆ ಬೆಲೆಗೆ ಹೆಚ್ಚಿನ ಸರಕನ್ನು ಮಾರುವ ಮೂಲಕ ಹೆಚ್ಚಿನ ಲಾಭ ಪಡೆಯಬಹುದು. ಇದಲ್ಲದೆ ರಸ್ತೆಯ ಬದಿಗಳಲ್ಲಿ ಅವಲಕ್ಕಿಯಿಂದ ತಯಾರಿಸುವ ಚೌಚೌ ಮಾರಾಟ ಮಾಡುತ್ತಿರುತ್ತಾರೆ ಅವರಿಗೂ ಕೂಡ ನೀವು ಅವಲಕ್ಕಿಯನ್ನು ಪೂರೈಸಬಹುದು. ಆ ಮೂಲಕ ನೀವು ಲಾಭವನ್ನು ಪಡೆಯಬಹುದು.
ಈ ರೀತಿಯಾಗಿ ತಿಂಗಳಿಗೆ ಇಪ್ಪತ್ತೈದು ಸಾವಿರ ಬಂಡವಾಳವನ್ನು ಹಾಕಿ ಒಂದೂವರೆ ಲಕ್ಷ ರೂಪಾಯಿ ಸಂಪಾದನೆಯನ್ನು ಮಾಡಬಹುದಾದ ಉದ್ಯಮವಾಗಿದೆ ನೀವು ಕೂಡ ಅವಲಕ್ಕಿಯನ್ನು ತಯಾರಿಸಿ ಮಾರಾಟಮಾಡುವ ಉದ್ಯಮವನ್ನು ಪ್ರಾರಂಭಿಸಿದರೆ ಒಳ್ಳೆಯ ರೀತಿಯ ಲಾಭವನ್ನು ಪಡೆಯಬಹುದಾಗಿದೆ. ಈ ಉದ್ಯಮದ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರಿಗೂ ಕೂಡ ತಿಳಿಸಿ.
ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430