ಕೊರೋನ ವೈರಸ್ ಧಾಳಿಗೆ ಇಡಿ ದೇಶವೆ ತತ್ತರಿಸುತ್ತಿದೆ. ಕೊರೋನ ವೈರಸ್ ತಗುಲಿದ ರೋಗಿಗಳು ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಸಿಗದೆ ನರಳುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸಾಯುವವರ ಸಂಖ್ಯೆ ದಿನೆ ದಿನೆ ಏರುತ್ತಿದೆ. ಇಂತಹ ಸಂದರ್ಭದಲ್ಲಿ ದೇವರಂತೆ ಬರುತ್ತಾರೆ ಎನ್ನುವುದು ನಿಜವಾಗಿದೆ. ಜಾವೇದ್ ಖಾನ್ ಎನ್ನುವವರು ತಮ್ಮ ಆಟೋವನ್ನು ಆ್ಯಂಬುಲೆನ್ಸ್ ಆಗಿ ಮಾಡಿಕೊಂಡು ಕೊರೋನ ರೋಗಿಗಳಿಗೆ ಸಹಾಯ ಮಾಡುತ್ತಿದ್ದಾರೆ ಅದರ ಬಗ್ಗೆ ಈ ಲೇಖನದಲ್ಲಿ ನೋಡೋಣ.
ಆ್ಯಂಬುಲೆನ್ಸ್‌ಗಳ ತೀವ್ರ ಕೊರತೆಯಿಂದ ಕೊರೋನಾಕ್ಕೆ ತುತ್ತಾದ ರೋಗಿಗಳು ಆಸ್ಪತ್ರೆಯಲ್ಲಿ ಸಾಯುವುದು ಸಾಮಾನ್ಯವಾಗಿದೆ. ಹೀಗಿರುವಾಗ ಮಧ್ಯಪ್ರದೇಶದ ಜಾವೇದ್ ಖಾನ್ ಎಂಬ ಆಟೊ ಚಾಲಕನೊಬ್ಬ ತನ್ನ ಆಟೊದಿಂದ 200-300ರೂಪಾಯಿ ಆದಾಯ ಪಡೆಯುತ್ತಿದ್ದರು. ಖಾನ್ ಈಗ ತನ್ನ ಪತ್ನಿಯ ಚಿನ್ನಾಭರಣಗಳನ್ನು ಮಾರಾಟ ಮಾಡಿ ತಮ್ಮ ಆಟೋವನ್ನು ಉಚಿತವಾಗಿ ಆ್ಯಂಬುಲೆನ್ಸ್ ಸೇವೆಗೆ ಮೀಸಲಿಟ್ಟಿದ್ದಾರೆ ಅಲ್ಲದೆ ಈ ಆಟೋದಲ್ಲಿ ಅವರು ಆಮ್ಲಜನಕ ನೆರವಿನ ವ್ಯವಸ್ಥೆಯನ್ನು ಸಹ ಮಾಡಿದ್ದಾರೆ ಇದು ವಿಶೇಷವಾಗಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿದ ಖಾನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸುದ್ದಿ ವಾಹಿನಿಗಳಲ್ಲಿ ಆ್ಯಂಬುಲೆನ್ಸ್‌ಗಳಿಲ್ಲದೆ ಆಸ್ಪತ್ರೆಗೆ ಹೋಗಲು ಪರದಾಡುತ್ತಿದ್ದದ್ದನ್ನು ನೋಡಿದೆ ಬೇಸರವಾಯಿತು, ಹೀಗಾಗಿ ನನ್ನ ರಿಕ್ಷಾವನ್ನು ಆ್ಯಂಬುಲೆನ್ಸ್ ಆಗಿ ಪರಿವರ್ತಿಸಿದ್ದೇನೆ. ಇದಕ್ಕೆ ಹಣದ ಕೊರತೆಯಾದಾಗ ಪತ್ನಿಯ ಚಿನ್ನಾಭರಣಗಳನ್ನು ಮಾರಿದ್ದೇನೆ.
ಕಳೆದ 15-20 ದಿನದಲ್ಲಿ ತೀವ್ರ ಅನಾರೋಗ್ಯದಲ್ಲಿದ್ದ 9ಕ್ಕೂ ಹೆಚ್ಚು ರೋಗಿಗಳನ್ನು ಆಸ್ಪತ್ರೆಗೆ ಸೇರಿಸಿದ್ದೇನೆ ಎಂದಿದ್ದಾರೆ. ಅವರು ಮಾಡುತ್ತಿರುವ ಪುಣ್ಯದ ಕೆಲಸಕ್ಕೆ ಎಲ್ಲರೂ ಅವರನ್ನು ಮೆಚ್ಚಲೇಬೇಕು. ಕೆಲವರು ಕೋಟಿ ಕೋಟಿ ಹಣ ಕೊಳೆಯುತ್ತಾ ಬಿದ್ದರೂ ಹಣವನ್ನು ಸಮಾಜ ಸೇವೆಗೆ ಮೀಸಲಿಡುವುದಿಲ್ಲ ಹೀಗಿರುವಾಗ ತಾವು ಬಾಡಿಗೆ ಓಡಿಸುತ್ತಿದ್ದ ಆಟೋವನ್ನು ಆ್ಯಂಬುಲೆನ್ಸ್ ಆಗಿ ಪರಿವರ್ತಿಸಿರುವುದಲ್ಲದೆ ತಮ್ಮ ಆಟೋದಲ್ಲಿ ಆಕ್ಸಿಜನ್ ವ್ಯವಸ್ಥೆಯನ್ನು ಮಾಡಿಕೊಂಡು ಕೊರೋನ ರೋಗಿಗಳಿಗೆ ಉಚಿತವಾಗಿ ಆಸ್ಪತ್ರೆಗಳಿಗೆ ಹೋಗಲು ಸಹಾಯ ಮಾಡುತ್ತಿದ್ದಾರೆ. ಕೊರೋನ ವೈರಸ್ ತಗುಲಿದೆ ಎಂದರೆ ನಮ್ಮವರೆ ನಮ್ಮ ಹತ್ತಿರ ಬರುವುದಿಲ್ಲ ಹೀಗಿರುವಾಗ ಖಾನ್ ಅವರು ನಿಜಕ್ಕೂ ದೇವರು ಎಂದರೆ ತಪ್ಪಾಗಲಾರದು, ಅವರ ಈ ಕಾರ್ಯ ಶ್ಲಾಘನೀಯವಾಗಿದೆ. ಖಾನ್ ಅವರಿಗೆ ದೇವರು ಆರೋಗ್ಯ, ಆಯಸ್ಸು ಕರುಣಿಸಲಿ ಎಂದು ಆಶಿಸೋಣ.