ಪ್ರತಿಯೊಬ್ಬರ ಗುಣ ಸ್ವಭಾವಗಳು ಆಯಾಯ ರಾಶಿಯವರ ಗ್ರಹದ ಅಧಿಪತಿಯನ್ನು ಅವಲಂಬಿಸಿರುತ್ತದೆ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ರಾಶಿಯಿಂದ ರಾಶಿಗೆ ಅವರ ಗುಣ ಸ್ವಭಾವದಲ್ಲಿ ಹಲವಾರು ಬದಲಾವಣೆಗಳು ಇರುತ್ತದೆ. ಇಂದಿನ ವಿಚಾರದಲ್ಲಿ ನಾವು ಕಷ್ಟಪಟ್ಟು ಹಠದಿಂದ ದುಡಿಯುವ ರಾಶಿಯವರು ಯಾರೆಲ್ಲ ಎಂಬುದನ್ನ ತಿಳಿದುಕೊಳ್ಳೋಣ ಬನ್ನಿ.
ವೃಷಭ ರಾಶಿ; ತಾಳ್ಮೆಯ ಸ್ವಭಾವವನ್ನು ಹೊಂದಿರುವ ಇವರು ಪ್ರತಿಯೊಂದು ಕೆಲಸವನ್ನು ಕೂಡ ಅದು ಸಂಪೂರ್ಣವಾಗಿ ಯಶಸ್ವಿಯಾಗುವವರೆಗೂ ಕೂಡ ಪರಿಶ್ರಮದಿಂದ ಮಾಡುವ ಗುಣ ಸ್ವಭಾವವನ್ನು ಇವರು ಹೊಂದಿದ್ದಾರೆ. ಇವರಲ್ಲಿರುವ ಸೋಮಾರಿತನ ಇವರ ಕಾರ್ಯವನ್ನು ತಡೆಯಲು ಪ್ರಯತ್ನಿಸಿದರು ಕೂಡ ಇವರು ಯಾವುದೇ ಹಿಡಿದ ಕಾರ್ಯಗಳನ್ನು ಮುಗಿಸದೆ ನಿಲ್ಲಿಸುವುದಿಲ್ಲ. ಕಠಿಣ ಪರಿಶ್ರಮದಿಂದಲೇ ತಮ್ಮ ವೃತ್ತಿ ಜೀವನದಲ್ಲಿ ಉತ್ತುಂಗಕ್ಕೆ ಏರುತ್ತಾರೆ.
ಸಿಂಹ ರಾಶಿ; ಚಿಕ್ಕವಯಸ್ಸಿನಿಂದಲೂ ಕೂಡ ಇವರು ಅತ್ಯಂತ ಧೈರ್ಯಶಾಲಿಗಳು. ಇವರಲ್ಲಿರುವ ಕಠಿಣ ಪರಿಶ್ರಮತನ ಎನ್ನುವುದು ಇವರನ್ನು ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಿಸುತ್ತದೆ. ಯಾವುದೇ ಕೆಲಸವನ್ನು ಆಗಲಿ ಅತ್ಯಂತ ಉತ್ಸಾಹದಿಂದ ಮಾಡಿ ಪೂರೈಸುತ್ತಾರೆ. ಇವರಿಗೆ ಸುಳ್ಳು ಹೇಳುವವರು ಹಾಗೂ ಮೋಸ ಮಾಡುವವರನ್ನು ಕಂಡರೆ ಆಗುವುದಿಲ್ಲ. ಜೀವನದಲ್ಲಿ ಅತ್ಯಂತ ಸತ್ಯವಂತರಾಗಿ ಇರುವುದೇ ಇವರ ಟ್ರೇಡ್ ಮಾರ್ಕ್ ಎಂದು ಹೇಳಬಹುದು.
ಕನ್ಯಾ ರಾಶಿ; ಜ್ಯೋತಿಷ ಶಾಸ್ತ್ರದಲ್ಲಿ ಉಲ್ಲೇಖವಾಗಿರುವಂತೆ ಕನ್ಯಾ ರಾಶಿಯವರು ಅತ್ಯಂತ ಬುದ್ಧಿವಂತರು ಹಾಗೂ ಶ್ರಮಜೀವಿಗಳು. ಇವರು ಯಾವುದೇ ಕಾರ್ಯವನ್ನು ಮಾಡುವ ಮುನ್ನ ಯೋಚಿಸಬೇಕಾಗುತ್ತದೆ ಯಾಕೆಂದರೆ ಇವರು ಹಠವಂತರು. ಹಿಂದೆ ಮುಂದೆ ಯೋಚಿಸದೆ ಯಾವುದೇ ಕಾರ್ಯವನ್ನಾಗಲಿ ಮಾಡಲು ಮುನ್ನುಗುತ್ತಾರೆ. ಇವರ ಉತ್ಸಾಹ ಹಾಗೂ ಹಟ ಯಾವ ಮಟ್ಟಕ್ಕೆ ಇದೆ ಎಂದರೆ ಇವರಿಗೆ ಯಾವುದೇ ಕೆಲಸವನ್ನು ನೀಡಿದರು ಕೂಡ ಅದನ್ನು ಅತ್ಯಂತ ವೇಗವಾಗಿ ಪೂರೈಸುವ ಸಾಮರ್ಥ್ಯ ಇವರಲ್ಲಿ ಇರುತ್ತದೆ.
ಮಕರ ರಾಶಿ; ಇವರಲ್ಲಿ ಆತ್ಮವಿಶ್ವಾಸ ಎನ್ನುವುದು ತುಂಬಾನೇ ಇದೆ. ಶನಿ ಗ್ರಹ ನಿಂದ ಆಳಲ್ಪಡುವ ಮಕರ ರಾಶಿಯವರಲ್ಲಿ ಆತ್ಮ ಅಭಿಮಾನ ಎನ್ನುವುದು ಅತ್ಯಂತ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಇವರಲ್ಲಿರುವ ಸ್ವಾಭಿಮಾನದಿಂದಾಗಿ ಕೆಲವೊಮ್ಮೆ ಇವರು ಸಮಸ್ಯೆಗೆ ಕೂಡ ಸಿಲುಕಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಆದರೆ ಕೊಟ್ಟಿರುವ ಕೆಲಸವನ್ನು ಪೂರೈಸುವ ಇವರ ಕಠಿಣ ಪರಿಶ್ರಮ ತನಕ್ಕೆ ಯಾವುದೇ ಸರಿಸಾಟಿ ಇಲ್ಲ ಎಂದು ಹೇಳಬಹುದು.