ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏಪ್ರಿಲ್ 14 ರಂದು, ಸೂರ್ಯನು ಮೇಷ ರಾಶಿಯಲ್ಲಿ ಸಾಗುತ್ತಾನೆ. ಇದಕ್ಕೂ ಮುನ್ನ ಏಪ್ರಿಲ್ 7 ರಂದು ಮಂಗಳ ಗ್ರಹ ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಹಿಂದೂ ಪಂಚಾಂಗದ ಪ್ರಕಾರ 2022 ರ ಹೊಸ ವರ್ಷ ಪ್ರಾರಂಭವಾಗಿದೆ. ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಈ ವರ್ಷ ಬಹಳ ವಿಶೇಷವಾಗಿರಲಿದೆ. ಯಾಕೆಂದರೆ ಏಪ್ರಿಲ್‌ನಲ್ಲಿ, ಎಲ್ಲಾ ಒಂಬತ್ತು ಗ್ರಹಗಳು ರಾಶಿಚಕ್ರವನ್ನು ಬದಲಾಯಿಸಲಿವೆ. ಎಲ್ಲಾ ಒಂಭತ್ತು ಗ್ರಹಗಳು ರಾಶಿಚಕ್ರ ಪರಿವರ್ತನೆ ನಡೆಯೋದು ಎಷ್ಟೋ ವರ್ಷಗಳಿಗೆ ಒಮ್ಮೆ. ಈ ನಿಟ್ಟಿನಲ್ಲಿ ಜ್ಯೋತಿಷಿಗಳು ಹೇಳುವ ಪ್ರಕಾರ, ಈ ಗ್ರಹಗಳ ಸಂಯೋಜನೆಯು ತುಂಬಾ ಅಪರೂಪವಾಗಿರಲಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ, ರಾಹು ಮತ್ತು ಕೇತುಗಳು ಯಾವುದಾದರೂ ಒಂದು ರಾಶಿಯಲ್ಲಿ ಬಹಳ ಕಾಲ ಇರುತ್ತಾರೆ. ಈ ವರ್ಷದ ಅಪರೂಪದ ಗ್ರಹಗಳ ಸಂಯೋಜನೆಯು ಏಪ್ರಿಲ್‌ನಲ್ಲಿ ಸ್ಥಾನ ಬದಲಾವಣೆ ಆಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏಪ್ರಿಲ್ 14 ರಂದು ಸೂರ್ಯನು ಮೇಷ ರಾಶಿಯಲ್ಲಿ ಸಾಗುತ್ತಾನೆ.ಇದಕ್ಕೂ ಮುನ್ನ ಏಪ್ರಿಲ್ 7 ರಂದು ಮಂಗಳ ಗ್ರಹ ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಏಪ್ರಿಲ್ 8 ರಂದು ಬುಧ ಗ್ರಹ ಮೇಷ ರಾಶಿಯಲ್ಲಿ ಸಾಗಲಿದೆ. ಆದರೆ ಏಪ್ರಿಲ್ 24 ರಂದು, ಮತ್ತೆ ವೃಷಭ ರಾಶಿಯನ್ನು ಪ್ರವೇಶಿಸುತ್ತದೆ. ಅಲ್ಲದೆ, ಗುರು ಗ್ರಹವು ಏಪ್ರಿಲ್ 13 ರಂದು ಮೀನ ರಾಶಿಯನ್ನು ಪ್ರವೇಶಿಸಲಿದೆ.

ಇದಲ್ಲದೇ ಏಪ್ರಿಲ್ 27 ರಂದು ಶುಕ್ರ ಕೂಡಾ ಮೀನ ರಾಶಿಗೆ ಹೋಗುತ್ತಾನೆ. ಏಪ್ರಿಲ್ 11 ರಂದು ರಾಹು ಮೇಷ ರಾಶಿಗೆ ಕಾಲಿಟ್ಟರೆ ಏಪ್ರಿಲ್ 29 ರಂದು ಶನಿಯು ಕುಂಭ ರಾಶಿಗೆ ತೆರಳುತ್ತಾನೆ. ಕೇತು ಏಪ್ರಿಲ್ 11 ರಂದು ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ಇನ್ನು ಚಂದ್ರ ಗ್ರಹವು ಪ್ರತಿ ಎರಡೂವರೆ ದಿನಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದು ತಿಂಗಳೊಳಗೆ ಎಲ್ಲಾ 9 ಗ್ರಹಗಳ ರಾಶಿಯ ಬದಲಾವಣೆಯಿಂದಾಗಿ ಈ ತಿಂಗಳು ಬಹಳ ವಿಶೇಷವಾಗಿದೆ. ಈ ಗ್ರಹಗಳ ಬದಲಾವಣೆಯಿಂದ ಎಲ್ಲಾ 12 ರಾಶಿಗಳಲ್ಲಿ ಪ್ರಮುಖ ಬದಲಾವಣೆಗಳಾಗುತ್ತವೆ.

ಈ ಒಂಭತ್ತು ಗ್ರಹಗಳ ಪರಿವರ್ತನೆಯ ದುಷ್ಪರಿಣಾಮಗಳನ್ನು ತಪ್ಪಿಸಲು, ಪ್ರತಿದಿನ ಬೆಳಿಗ್ಗೆ ಸೂರ್ಯನಿಗೆ ನೀರನ್ನು ಅರ್ಪಿಸಬೇಕು. ಚಂದ್ರನಿಗೆ ಶಿವಲಿಂಗದ ಮೇಲೆ ಹಸುವಿನ ಹಾಲನ್ನು ಅರ್ಪಿಸಿ, ಮಂಗಳನ ಅನುಕೂಲಕರ ಪರಿಣಾಮಕ್ಕಾಗಿ, ಮಂಗಳವಾರ ಶಿವಲಿಂಗಕ್ಕೆ ಕೆಂಪು ಹೂವುಗಳನ್ನು ಅರ್ಪಿಸಬೇಕು, ಬುಧ ಗ್ರಹದ ಅನುಗ್ರಹಕ್ಕಾಗಿ ಗಣೇಶನ ಪೂಜೆ ಮಾಡಬೇಕು. ಗುರು ಗ್ರಹದ ಕೃಪೆಗಾಗಿ, ಗುರುವಾರದಂದು ಶಿವನಿಗೆ ಬೇಳೆ ಹಿಟ್ಟಿನ ಲಡ್ಡುಗಳನ್ನು ಅರ್ಪಿಸಿ. ಶುಕ್ರನಿಂದ ಶುಭ ಫಲ ಪಡೆಯಲು ಶುಕ್ರವಾರದಂದು ಶಿವಲಿಂಗಕ್ಕೆ ಹಾಲನ್ನು ಅರ್ಪಿಸಿ, ಶನಿ ಗ್ರಹದ ಪ್ರಕೋಪದಿಂದ ಬಚಾವಾಗಲು ಪ್ರತಿ ಶನಿವಾರ ಎಳ್ಳೆಣ್ಣೆ ದಾನ ಮಾಡಿ. ಇದಲ್ಲದೆ, ರಾಹು ಮತ್ತು ಕೇತುವನ್ನು ಸಮಾಧಾನ ಪಡಿಸಲು ಭೈರವ ಮಹಾರಾಜ ಮತ್ತು ಶನಿಯ ವಿಶೇಷ ಪೂಜೆಯನ್ನು ಮಾಡಬೇಕು.

Leave a Reply

Your email address will not be published. Required fields are marked *