ಪ್ರತಿ ತಿಂಗಳ ಕೊನೆಯ ತಿಥಿಯಂದು ಹುಣ್ಣಿಮೆ ಇರುತ್ತದೆ. ಹಿಂದೂ ಧರ್ಮದಲ್ಲಿ ಹುಣ್ಣಿಮೆ ತಿಥಿಗೆ ವಿಶೇಷ ಮಹತ್ವವಿದೆ. ವೈಶಾಖ ಮಾಸದಲ್ಲಿ ಬರುವ ಹುಣ್ಣಿಮೆಯನ್ನು ವೈಶಾಖ ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಈ ದಿನದಂದು ವಿಷ್ಣುವನ್ನು ಪೂಜಿಸಲು ವಿಧಾನವಿದೆ. ಬುದ್ಧನು ಈ ದಿನ ಜನಿಸಿದ್ದನು ಮತ್ತು ಇದೇ ಕಾರಣದಿಂದ ವೈಶಾಖ ಹುಣ್ಣಿಮೆಯನ್ನು ಬುದ್ಧ ಪೂರ್ಣಿಮಾ ಎಂದೂ ಕೂಡ ಕರೆಯಲಾಗುತ್ತದೆ. ಈ ವರ್ಷ ಮೇ 16ರಂದು ವೈಶಾಖ ಹುಣ್ಣಿಮೆ ಬರುತ್ತಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ ಈ ದಿನದಂದು ಚಂದ್ರನನ್ನು ಪೂಜಿಸುವುದರಿಂದ ವ್ಯಕ್ತಿಯ ಜಾತಕದಲ್ಲಿರುವ ಚಂದ್ರನ ದೋಷದಿಂದ ಮುಕ್ತಿ ಸಿಗುತ್ತದೆ ಎನ್ನಲಾಗುತ್ತದೆ. ಶಾಸ್ತ್ರಗಳ ಪ್ರಕಾರ, ವೈಶಾಖ ಮಾಸವು ವಿಷ್ಣುವಿಗೆ ಪ್ರಿಯವಾದ ಮಾಸ ಎನ್ನಲಾಗುತ್ತದೆ.
ಬ್ರಹ್ಮದೇವರು ವೈಶಾಖ ಮಾಸವನ್ನು ಎಲ್ಲಾ ಹಿಂದೂ ಮಾಸಗಳಲ್ಲಿ ಅತ್ಯಂತ ಉತ್ತಮ ಮಾಸ ಎಂದು ಕರೆದಿದ್ದಾರೆ. ಈ ದಿನದಂದು ಉಪವಾಸ ಆಚರಿಸುವುದರಿಂದ ಮತ್ತು ವಿಧಿ-ವಿಧಾನಗಳಿಂದ ಪೂಜೆ ಸಲ್ಲಿಸುವುದರಿಂದ ಶ್ರೀ ವಿಷ್ಣು ಮತ್ತು ಮೃತ್ಯುದೇವ ಯಮರಾಜ ಪ್ರಸನ್ನನಾಗುತ್ತಾರೆ ಎಂಬುದು ಧಾರ್ಮಿಕ ನಂಬಿಕೆಯಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಈ ಮಂಗಳಕರ ದಿನವನ್ನು ವೈಶಾಖ ಹುಣ್ಣಿಮೆ ಅಥವಾ ಬುದ್ಧ ಹುಣ್ಣಿಮೆ ಎಂದೂ ಕರೆಯಲಾಗುತ್ತದೆ. ಸ್ನಾನ-ದಾನಕ್ಕಾಗಿ ಈ ಹುಣ್ಣಿಮೆಯನ್ನು ಪರಿಘ ಯೋಗದಲ್ಲಿ ಆಚರಿಸಲಾಗುತ್ತದೆ. ಸನಾತನ ಧರ್ಮದ ಪ್ರಕಾರ ಬುದ್ಧನು ಭೂಮಿಯ ಮೇಲಿನ ವಿಷ್ಣುವಿನ 9 ನೇ ಅವತಾರ ಎಂದು ತಿಳಿದುಬಂದಿದೆ. ಈ ವರ್ಷ ಬುದ್ಧ ಹುಣ್ಣಿಮೆಯ ಶುಭ ದಿನದಂದು ಮೊದಲ ಚಂದ್ರಗ್ರಹಣವೂ ಸಂಭವಿಸುತ್ತದೆ.
ಈ ಮೇ ತಿಂಗಳ 16ರ ನಂತರ ಕೆಳಗಿನ ಐದು ರಾಶಿಗಳಿಗೆ ಮಹಾ ರಾಜಯೋಗ, ಧನಲಾಭ ದೊರೆಯಲಿದೆ. ಆನೆ ನಡೆದಿದ್ದೇ ದಾರಿ ಎಂಬಂತೆ ಇವರು ನಡೆದಿದ್ದೇ ದಾರಿ ಆಗಲಿದೆ. ಆ ಮಹಾರಜಾಯೋಗ ಹೊಂದಿರುವ ರಾಶಿಗಳು ಯಾವುವು ಎಂದರೆ ತುಲಾ, ಮೀನಾ, ಕುಂಭ, ವೃಷಭ ಮತ್ತು ಸಿಂಹ ರಾಶಿಯವರಾಗಿದ್ದಾರೆ. ಕುಂಭ ರಾಶಿಯವರು ಕೆಲಸದಲ್ಲಿ ಭಡ್ತಿ ನಿರೀಕ್ಷೆಯಲ್ಲಿದ್ದವರು, ವ್ಯವಹಾರದಲ್ಲಿ ಪ್ರಗತಿ ಕಾಣಬೇಕು ಎಂದು ಬಯಸುತ್ತಿರುವವರ ಆಸೆಗಳು ಈಡೇರಲಿವೆ. ಇಷ್ಟು ದಿನ ಅವಿವಾಹಿತರಾಗಿ ಉಳಿದುಕೊಂಡವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.
ಕುಂಭ ರಾಶಿಯವರ ಆರ್ಥಿಕ ಬಿಕ್ಕಟ್ಟಿನ ಸಮಸ್ಯೆಗಳು ಗುರು ಗ್ರಹದ ಸ್ಥಾನ ಪಲ್ಲಟದಿಂದ ಬದಲಾವಣೆಯಾಗಲಿದೆ. ಈ ರಾಶಿಯವರಿಗೆ ಹೆಚ್ಚಿನ ಲಾಭ ಸಿಗಲಿದೆ. ಆಸ್ತಿ ಹಾಗೂ ಜಮೀನುಗಳಲ್ಲಿ ಹೂಡಿಕೆ ಮಾಡಬೇಕು ಎನ್ನುವವರಿಗೆ ಇದು ಉತ್ತಮ ಕಾಲವಾಗಿದೆ. ಜೊತೆಗೆ ವ್ಯವಹಾರಗಳಲ್ಲಿ ಅವರಿಗೆ ಉತ್ತಮ ಅವಕಾಶ ಸಿಗಲಿದೆ. ವೃತ್ತಿಪರ ವಿಷಯಗಳಲ್ಲಿ ನೀವು ಅನಿರೀಕ್ಷಿತ ಲಾಭವನ್ನು ಪಡೆಯಬಹುದು. ಕೆಲಸ ಮತ್ತು ವ್ಯವಹಾರದಲ್ಲಿ ಕಠಿಣ ಪರಿಶ್ರಮವು ಹೆಚ್ಚು ಇರುತ್ತದೆ, ಆದರೆ ನೀವು ಉತ್ತಮ ಲಾಭವನ್ನು ಸಹ ಪಡೆಯುತ್ತೀರಿ.
ನೀವು ತಂದೆ ಮತ್ತು ಪೂರ್ವಜರ ಆಸ್ತಿಯಿಂದ ಲಾಭವನ್ನು ಪಡೆಯಬಹುದು. ನೀವು ಯಾರಿಗಾದರೂ ಹಣವನ್ನು ಸಾಲವಾಗಿ ನೀಡಿದ್ದರೆ, ನೀವು ಅದನ್ನು ಮರಳಿ ಪಡೆಯಬಹುದು. ಉದ್ಯೋಗದ ನಿರೀಕ್ಷೆಯಲ್ಲಿರುವ ಜನರು ಯಶಸ್ಸನ್ನು ಪಡೆಯಬಹುದು. ನೀವು ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಬೆಂಬಲವನ್ನು ಪಡೆಯುತ್ತೀರಿ.
ವೃಷಭ ರಾಶಿಯ ವ್ಯಕ್ತಿಗಳು ಕೆಲಸದ ನಿಮಿತ್ತ ಹೆಚ್ಚು ಪ್ರಯಾಣ ಮಾಡುವ ಅಗತ್ಯ ಎದುರಾಗುತ್ತದೆ. ಕಾರ್ಯಕ್ಷೇತ್ರದಲ್ಲಿ ಬಡ್ತಿ ಪಡೆಯುವ ಸಂಭವ ಹೆಚ್ಚಿರುತ್ತದೆ. ವ್ಯಾಪಾರದಲ್ಲಿ ಸಹ ಹೆಚ್ಚಿನ ಲಾಭ ಪಡೆಯುವ ಅವಕಾಶಗಳು ಎದುರಾಗುತ್ತವೆ. ಆರ್ಥಿಕ ಸ್ಥಿತಿ ಮತ್ತಷ್ಟು ಉತ್ತಮವಾಗುತ್ತದೆ. ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ. ಭಾಗ್ಯದಲ್ಲಿ ವೃದ್ಧಿಯಾಗಲಿದೆ. ಆರ್ಥಿಕವಾಗಿ ಹೆಚ್ಚಿನ ಸಬಲತೆ ಪ್ರಾಪ್ತವಾಗುತ್ತದೆ. ಶನಿ ಗ್ರಹಕ್ಕೆ ಸಂಬಂಧಿಸಿದ ವ್ಯಾಪಾರದಲ್ಲಿ ತೊಡಗಿಕೊಂಡವರಿಗೆ ಹೆಚ್ಚಿನ ಲಾಭ ದೊರಕುತ್ತದೆ. ಈ ಅವಧಿಯಲ್ಲಿ ಆರೋಗ್ಯ ಉತ್ತಮವಾಗಿರುತ್ತದೆ. ಸಂಗಾತಿಯೊಂದಿಗಿನ ಸಂಭಂದ ಮಧುರವಾಗಲಿದೆ. ರಾಜಕಾರಣದಲ್ಲಿ ಸಹ ಉತ್ತಮ ಪ್ರಗತಿಯನ್ನು ಪಡೆಯಬಹುದಾಗಿದೆ.
ತುಲಾರಾಶಿಯವರಿಗೆ ಈ ಹುಣ್ಣಿಮೆ ಮುಗಿದ ತಕ್ಷಣ ಈ ರಾಶಿಯವರ ಅದೃಷ್ಟ ಬದಲಾಗಲಿದೆ. ಅಡೆತಡೆಗಳು ಮತ್ತು ಸವಾಲುಗಳಿಂದ ಮುನ್ನಡೆ ಸಾಧಿಸಲು ಸಾಧ್ಯವಾಗದ ಎಲ್ಲ ಕೆಲಸಗಳೂ ಈಗ ಸರಾಗವಾಗಿ ನಡೆಯಲಿವೆ. ಆರೋಗ್ಯ ಸಂಬಂಧಿ ಸಮಸ್ಯೆಗಳೂ ದೂರವಾಗಲಿವೆ. ಈ ಬದಲಾವಣೆಯು ಹಣದ ವಿಷಯದಲ್ಲಿ ವಿಶೇಷ ಲಾಭವನ್ನು ನೀಡಲಿದೆ. ಅನೇಕ ವಿಷ್ಯದಲ್ಲಿ ತುಲಾ ರಾಶಿಯವರು ಸಂತೋಷ ಕಾಣಲಿದ್ದಾರೆ. ಎಲ್ಲ ರೀತಿಯ ವಿವಾದಗಳು ಕೊನೆಯಾಗಿ ಜೀವನದಲ್ಲಿ ಸುಖ-ಶಾಂತಿ,ನೆಮ್ಮದಿ ಸಿಗಲಿದೆ.
ಮೀನಾ ರಾಶಿಯವರು ಈ ಅವಧಿಯಲ್ಲಿ ವ್ಯವಹಾರದಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ ಮತ್ತು ಹಣಕಾಸಿನ ಸಹಾಯವನ್ನು ಸಹ ಪಡೆಯಬಹುದು. ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಜನರಿಗೆ, ಇದು ಪ್ರಗತಿಯನ್ನು ಸಾಧಿಸುವ ಸಮಯ. ಈ ಸಮಯದಲ್ಲಿ ವೈವಾಹಿಕ ಜೀವನದಲ್ಲಿ ಕೆಲವು ಭಿನ್ನಾಭಿಪ್ರಾಯಗಳಿರಬಹುದು.
ಸಿಂಹ ರಾಶಿಯ ವ್ಯಕ್ತಿಗಳು ಕೆಲಸ ಕಾರ್ಯಗಳಲ್ಲಿ ಸಫಲತೆಯನ್ನು ಕಾಣಲು ಹೆಚ್ಚಿನ ಪರಿಶ್ರಮ ಪಡುವ ಅಗತ್ಯವಿದೆ. ಅಷ್ಟೇ ಅಲ್ಲದೆ ಈ ಅವಧಿಯಲ್ಲಿ ಹೊಸ ಅವಕಾಶಗಳು ಎದುರಾಗುತ್ತವೆ. ರಾಜಕಾರಣದಲ್ಲಿ ಸಹ ಅವಕಾಶಗಳು ಲಭ್ಯವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಗಳಿಸುವ ಯೋಗ ಸಹ ಈ ರಾಶಿಯವರಿಗಿದೆ.
ಈ ಬಾರಿ ಮನೆಯನ್ನು ಕೊಳ್ಳುವ ಸುಯೋಗವು ಸಹ ಪ್ರಾಪ್ತವಾಗಲಿದೆ. ಸಂಗಾತಿಯೊಂದಿಗೆ ಹಲವಾರು ಪ್ರದೇಶಗಳಿಗೆ ತೆರಳಿ ಉತ್ತಮ ಸಮಯವನ್ನುಕಳೆಯುವ ಸಂದರ್ಭವು ಎದುರಾಗುತ್ತದೆ. ಇದರಿಂದ ಬಾಂಧವ್ಯ ಗಟ್ಟಿಗೊಳ್ಳಲಿದೆ. ಆರೋಗ್ಯ ಉತ್ತಮವಾಗಿರಲಿದೆ. ರಾಜ ಯೋಗ ಹೊಂದಿರುವ ಇವರಿಗೆ ಉತ್ತಮ ಗಳಿಕೆಗೆ ಇದು ಸಕಾಲ. ಯಾವುದೇ ಕೆಲಸದಲ್ಲಿ ಅಭಿವೃದ್ಧಿ ಸಾಧಿಸಬಹುದು. ಯಾವುದೇ ಹೂಡಿಕೆ ಮಾಡಲು ಮುಂದಾಗಬಹುದು. ಯಾವುದೇ ಕಹಿ ಘಟನೆಗಳಿಂದ ಗುಣಮುಖರಾಗಲಿದ್ದೀರ.