ಎಪ್ರಿಲ್ 2022 ಜ್ಯೋತಿಷ್ಯಶಾಸ್ತ್ರದಲ್ಲಿ ಮುಖ್ಯವಾಗಿದೆ. ನವಗ್ರಹಗಳ ಬದಲಾವಣೆ ಈ ಸಮಯದಲ್ಲಿ ನಡೆಯುತ್ತದೆ. ಜೋತಿಷ್ಯದಲ್ಲಿ ವರ್ಣನೀಯವಾದ, ಪ್ರಬಲನಾದ ಗುರುಗ್ರಹ ತನ್ನ ಸ್ಥಾನ ಬದಲಾವಣೆ ಮಾಡುತ್ತಾನೆ. ಯಾವಾಗ ಗುರು ತನ್ನ ಸ್ಥಾನ ಬದಲಾವಣೆ ಮಾಡುತ್ತಾನೆ ಹಾಗೂ ಅದರಿಂದ ಯಾವ ರಾಶಿಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಇದೆ ಏಪ್ರಿಲ್ 13 ರಂದು 3 ಗಂಟೆ 47 ನಿಮಿಷಕ್ಕೆ ಕುಂಭ ರಾಶಿಯಿಂದ ತನ್ನ ಸ್ವಕ್ಷೇತ್ರ ಮೀನ ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ. ಗುರುವಿನ ಸ್ಥಾನ ಬದಲಾವಣೆ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವು ರಾಶಿಗೆ ಗುರುವಿನಿಂದ ಒಳ್ಳೆಯದಾಗುತ್ತದೆ. ಕೆಲವು ರಾಶಿಗಳಿಗೆ ಕೆಟ್ಟ ಪರಿಣಾಮ ಬೀರುತ್ತದೆ. ಏಪ್ರಿಲ್ 13,2022 ರಿಂದ ಏಪ್ರಿಲ್ 23, 2023 ರವರೆಗೆ ಗುರು ಮೀನ ರಾಶಿಯಲ್ಲಿ ಇರುತ್ತಾನೆ. ಗುರು ಸ್ಥಾನ ಬದಲಾವಣೆಯಿಂದ ಮೇಷ ರಾಶಿಯವರು ಉದ್ವೇಗಕ್ಕೆ ಒಳಗಾಗುತ್ತಾರೆ. ಸಾಂಸಾರಿಕ ಜೀವನದಲ್ಲಿ ತೊಡಕು ಕಂಡುಬರುತ್ತದೆ. ಹಣ ಬರುವುದರಲ್ಲಿ ಅಡ್ಡಿಯಾಗುತ್ತದೆ. ಸಂಬಂಧಿಕರಲ್ಲಿ ವೈಮನಸ್ಸು ಉಂಟಾಗಬಹುದು. ಮೇಷ ರಾಶಿಯವರಿಗೆ ಒತ್ತಡ ಉಂಟಾಗುತ್ತದೆ. ಮೇಷ ರಾಶಿಯವರಿಗೆ ಮಕ್ಕಳಿಂದಲೆ ದುಃಖ ಉಂಟಾಗುತ್ತದೆ. ವೃಷಭ ರಾಶಿಯವರಿಗೆ ಗುರುವಿನ ಸ್ಥಾನ ಬದಲಾವಣೆಯಿಂದ ಶುಭವಾಗಲಿದೆ, 12 ವರ್ಷಕ್ಕೊಮ್ಮೆ ಇಂತಹ ಸಮಯ ಬರುತ್ತದೆ. ವೈವಾಹಿಕ ವಿಷಯಕ್ಕೆ ಸಂಬಂಧಿಸಿದಂತೆ ಒಳ್ಳೆಯದಾಗುತ್ತದೆ ಜೊತೆಗೆ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಿಗುತ್ತದೆ. ರಾಜಕೀಯದಲ್ಲಿರುವ ವೃಷಭ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಆರೋಗ್ಯದಲ್ಲಿಯೂ ಯಾವುದೆ ಸಮಸ್ಯೆ ಇರುವುದಿಲ್ಲ. ಈ ಒಂದು ವರ್ಷಗಳ ಕಾಲ ವೃಷಭ ರಾಶಿಯವರು ಒಳ್ಳೆಯ ಕೆಲಸಗಳನ್ನು ಮಾಡಬಹುದು.

ಮಿಥುನ ರಾಶಿಗೆ ಗುರುವಿನ ಸ್ಥಾನ ಬದಲಾವಣೆಯಿಂದ ಅಶುಭ ಫಲವಿದೆ. ಅನಾವಶ್ಯಕ ಕೆಲವು ಸುತ್ತಾಟಗಳು ಬರಬಹುದು, ಜೊತೆಗೆ ಆಯಾಸವಾಗುವುದು. ಮಿಥುನ ರಾಶಿಯವರು ಒತ್ತಡದಲ್ಲಿ ಕೆಲಸ ಮಾಡಬೇಕಾಗುತ್ತದೆ ಹಾಗೂ ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ ಕಡಿಮೆಯಾಗುವ ಸಂಭವವಿದೆ. ಮಿಥುನ ರಾಶಿಯವರಿಗೆ ಗುರು ಮಿಶ್ರ ಫಲವನ್ನು ಕೊಡಲಿದ್ದಾರೆ. ಕರ್ಕಾಟಕ ರಾಶಿಯವರಿಗೆ ಗುರುವಿನ ಸ್ಥಾನ ಬದಲಾವಣೆಯಿಂದ ಕಳೆದುಕೊಂಡ ಭಾಗ್ಯ ಅಥವಾ ಕಳೆದುಕೊಂಡ ಹೆಸರು ಮತ್ತೆ ಸಿಗಲಿದೆ. ಈ ರಾಶಿಯವರ ಆರೋಗ್ಯ ವೃದ್ಧಿಯಾಗುತ್ತದೆ, ಸಂಪತ್ತಿನ ವೃದ್ಧಿಯಾಗುತ್ತದೆ. ಸಿಂಹ ರಾಶಿಯವರಿಗೆ ಗುರು ಬದಲಾವಣೆಯಿಂದ ನಕಾರಾತ್ಮಕ ಫಲ ಸಿಗಲಿದೆ. ವಯೋವೃದ್ಧರಾಗಿದ್ದರೆ ಆರೋಗ್ಯದಲ್ಲಿ ಏರುಪೇರು ಕಂಡುಬರುತ್ತದೆ. ಸಂಬಂಧಗಳಲ್ಲಿ ಬಿರುಕು ಉಂಟಾಗುತ್ತದೆ. ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಮಕ್ಕಳಿಂದ ಚಿಂತೆ ಕಾಡುತ್ತದೆ. ಸಿಂಹರಾಶಿಯವರಿಂದ ಹಣ ಪಡೆದುಕೊಂಡು ಕೊಡದೆ ಸತಾಯಿಸುವುದು, ಅಪವಾದಗಳು ಬರುವ ಸಾಧ್ಯತೆಗಳಿವೆ.

ಕನ್ಯಾ ರಾಶಿಗೆ ಗುರು ಸ್ಥಾನ ಬದಲಾವಣೆಯಿಂದ ಒಳ್ಳೆಯದಾಗಲಿದೆ. ಆರೋಗ್ಯದಲ್ಲಿ ವೃದ್ಧಿಯಾಗುತ್ತದೆ. ವಿವಾಹವಾಗದೆ ಇರುವವರಿಗೆ ವಿವಾಹಯೋಗ ಸಿಗಲಿದೆ. ಕನ್ಯಾರಾಶಿಯವರಿಗೆ ಶತ್ರುಗಳು ಮಿತ್ರರಾಗುವ ಸಮಯ ಇದಾಗಿದೆ. ತುಲಾ ರಾಶಿಯವರಿಗೆ ಗುರುವಿನ ಸ್ಥಾನ ಬದಲಾವಣೆಯಿಂದ ಮಿಶ್ರ ಫಲ ಸಿಗಲಿದೆ. ತುಲಾ ರಾಶಿಯವರಿಗೆ ಸಂಬಂಧಿಕರಲ್ಲಿ ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಸ್ನೇಹಿತರಿಂದ ನಷ್ಟ ಅನುಭವಿಸಬೇಕಾಗುತ್ತದೆ ಆದ್ದರಿಂದ ಅವರ ಮೇಲೆ ಕಣ್ಣಿಡಬೇಕಾಗುತ್ತದೆ. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯ ಕಂಡು ಬರುತ್ತದೆ. ಒಂದು ವರ್ಷಗಳವರೆಗೆ ತುಲಾ ರಾಶಿಯವರಿಗೆ ಗುರು ಮಿಶ್ರ ಫಲವನ್ನು ಕೊಡಲಿದ್ದಾನೆ. ತುಲಾ ರಾಶಿಯವರು ಆಲಸ್ಯ, ನಿದ್ದೆ ಮಾಡುತ್ತಾರೆ.

ವೃಶ್ಚಿಕ ರಾಶಿಯವರಿಗೆ ಗುರುವಿನ ಸ್ಥಾನ ಬದಲಾವಣೆಯಿಂದ ಬಹಳ ಒಳ್ಳೆಯದಾಗಲಿದೆ. ವೃಶ್ಚಿಕ ರಾಶಿಯವರಿಗೆ ಭಾರಿ ಸಂಪತ್ತು ಸಿಗಲಿದೆ, ಮಕ್ಕಳಿಂದ ಸಂತೋಷ ಸಿಗುತ್ತದೆ. ಆರೋಗ್ಯದಲ್ಲಿ ವೃದ್ಧಿ, ಮನಸ್ಸು ಶಾಂತಿಯಿಂದ ಕೂಡಿರುತ್ತದೆ. ಕುಟುಂಬದಲ್ಲಿ ಸೌಖ್ಯ ತರುತ್ತಾನೆ. ಧನಸ್ಸು ರಾಶಿಯ ಮೇಲೆ ಗುರು ಸಾಮಾನ್ಯ ಫಲವನ್ನು ನೀಡಲಿದ್ದಾನೆ. ಆರೋಗ್ಯದಲ್ಲಿ ವೃದ್ಧಿ ಕಂಡುಬರುತ್ತದೆ. ಅನಾವಶ್ಯಕ ಸುತ್ತಾಟ ಮಾಡಬೇಕಾಗುತ್ತದೆ, ಹಣ ಬಂದರೂ ಖರ್ಚು ಮಾಡುವ ಮೂಲಕ ಹಣ ಖಾಲಿಯಾಗುತ್ತದೆ. ಧನಸ್ಸು ರಾಶಿಯವರು ಈ ವರ್ಷದಲ್ಲಿ ಭೂಮಿ ಖರೀದಿ, ಮನೆ ನಿರ್ಮಾಣ ಇತ್ಯಾದಿ ಕೆಲಸಗಳಿಗೆ ಕೈಹಾಕದೆ ಇರುವುದು ಒಳ್ಳೆಯದು. ಉದ್ಯೋಗ ಬದಲಾವಣೆ ಮಾಡುವವರು ಈ ವರ್ಷ ನಿರ್ಧಾರವನ್ನು ತೆಗೆದುಕೊಳ್ಳದೆ ಇರುವುದು ಒಳ್ಳೆಯದು. ಈ ವರ್ಷ ಈ ರಾಶಿಯವರಿಗೆ ಆಲಸ್ಯ ಕಾಡುತ್ತದೆ. ಈ ರಾಶಿಯವರಿಗೆ ಈ ಸಮಯದಲ್ಲಿ ಚಂಚಲ ಸ್ವಭಾವ ಇರುತ್ತದೆ.

ಮಕರ ರಾಶಿಯವರಿಗೆ ಗುರು ವಿಶ್ವಾಸವನ್ನು ನೀಡಲಿದ್ದಾನೆ. ಬಂಧುಗಳೊಂದಿಗೆ, ಒಡಹುಟ್ಟಿದವರೊಂದಿಗೆ ಪ್ರೀತಿ-ವಿಶ್ವಾಸದಿಂದ ಇರುತ್ತಾರೆ. ಹೆಚ್ಚಿನ ಖರ್ಚುಗಳಾಗುತ್ತದೆ ಆದರೆ ಒಳ್ಳೆಯ ಕೆಲಸಕ್ಕೆ ಹಣ ಖರ್ಚಾಗಿರುತ್ತದೆ. ವಿವಾಹವಾಗದೆ ಇರುವವರು ಈ ಸಮಯದಲ್ಲಿ ಪ್ರಯತ್ನ ಮಾಡಬಹುದಾಗಿದೆ. ಮಕರ ರಾಶಿಯವರ ತಂದೆ-ತಾಯಿಯರ ಆರೋಗ್ಯದಲ್ಲಿ ಉತ್ತಮವಾಗಿರುತ್ತದೆ. ಕುಂಭ ರಾಶಿಯವರಿಗೆ ಗುರುವಿನ ಸ್ಥಾನ ಬದಲಾವಣೆಯಿಂದ ಒಳ್ಳೆಯದಾಗುತ್ತದೆ. ಸಂಪತ್ತಿನ ವಿಚಾರದಲ್ಲಿ ಕುಂಭರಾಶಿಯವರ ಸಹಾಯಕ್ಕೆ ಬಹಳ ಜನ ಬರುತ್ತಾರೆ, ಸಂಪತ್ತು ವೃದ್ಧಿಯಾಗುತ್ತದೆ. ಸಂಸಾರಿಕ ಜೀವನದಲ್ಲಿ ನೆಮ್ಮದಿ ಇರಲಿದೆ. ಸಮಾಜದಲ್ಲಿ ಮನ್ನಣೆ, ಗೌರವ ಸಿಗುತ್ತದೆ. ಕುಂಭ ರಾಶಿಯವರಿಗೆ ಈ ವರ್ಷ ಅದೃಷ್ಟದ ಸಮಯವಾಗಿದ್ದು, ಒಳ್ಳೆಯ ಕೆಲಸಗಳನ್ನು ಈ ಸಮಯದಲ್ಲಿ ಮಾಡಬೇಕು. ಬಹಳ ವರ್ಷಗಳ ನಂತರ ಕುಂಭರಾಶಿಯವರಿಗೆ ಒಳ್ಳೆಯದಾಗಲಿದೆ. ಈ ರಾಶಿಯವರಿಗೆ ಈ ವರ್ಷ ಮೋಸವಾಗುವ ಸಾಧ್ಯತೆಗಳು ಕಡಿಮೆ ಇದೆ.

ಮೀನ ರಾಶಿಯಲ್ಲಿ ಗುರು ಇದ್ದು ಗುರು ತನ್ನ ಸ್ವಕ್ಷೇತ್ರಕ್ಕೆ ಪ್ರವೇಶ ಮಾಡುತ್ತಾನೆ. ಇದರಿಂದ ಸ್ವಲ್ಪ ಅಶುಭ ಫಲವನ್ನು ನೋಡುತ್ತೇವೆ. ಮೀನ ರಾಶಿಯವರಿಗೆ ಕುಟುಂಬದಲ್ಲಿ ಸೌಖ್ಯ ಇರುವುದಿಲ್ಲ. ಹಣಕಾಸಿನ ತೊಂದರೆ ಕಂಡುಬರುತ್ತದೆ. ಸಂಬಂಧಿಕರಲ್ಲಿ ವಿಶ್ವಾಸ ಕಡಿಮೆಯಾಗುತ್ತದೆ. ಗುರು ಮೀನ ರಾಶಿಯವರಿಗೆ ಮಿಶ್ರ ಫಲವನ್ನು ಕೊಡುತ್ತಾನೆ. ಮೀನ ರಾಶಿಯವರು ಒತ್ತಡಕ್ಕೆ ಒಳಗಾಗದೆ ತಾಳ್ಮೆಯಿಂದ ವರ್ತಿಸಬೇಕು. ಗುರುಬಲ ಇಲ್ಲದೆ ಇರುವ ರಾಶಿಯವರು ಪ್ರತಿ ಗುರುವಾರ ಮಂತ್ರಾಲಯದ ರಾಯರ ದರ್ಶನ ಮಾಡುವುದರಿಂದ ಒಳ್ಳೆಯದಾಗುತ್ತದೆ. ಗುರು ದರ್ಶನ ಹಾಗೂ ಪಾದಪೂಜೆ ಮಾಡಬೇಕು. ಪರಮಪೂಜ್ಯ ಗುರುಗಳ ಆಶೀರ್ವಾದ ಪಡೆಯಬೇಕು. ಗುರು ಶಾಂತಿ ಹೋಮವನ್ನು ಮಾಡಬಹುದು. ಹಳದಿ ವಸ್ತ್ರ, ಚಿನ್ನದ ಚೂರು, ಕಡಲೆಬೇಳೆ, ಹಳದಿ ಹೂವುಗಳನ್ನು ದಕ್ಷಿಣೆಯೊಂದಿಗೆ ಪುರೋಹಿತರಿಗೆ ಕೊಟ್ಟು ನಮಸ್ಕಾರ ಮಾಡುವುದರಿಂದಲೂ ಗುರುವಿನ ಆಶೀರ್ವಾದ ಪಡೆಯಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!