ಒಂದು ಮನೆಯಿಂದ ಮೇಲೆ ಹೆಣ್ಣು ಮಗು ಇರಲೇಬೇಕು ಎಂಬುದಾಗಿ ಹಿರಿಯರು ಹೇಳುತ್ತಾರೆ. ಮನೆಯ ಅದೃಷ್ಟಲಕ್ಷ್ಮಿ ಎಂಬುದಾಗಿ ಹೆಣ್ಣುಮಗಳನ್ನು ಕರೆಯಲಾಗುತ್ತದೆ. ಕೇವಲ ಬಾಯಿ ಮಾತಿನಲ್ಲಿ ಮಾತ್ರವಲ್ಲದೆ ಜ್ಯೋತಿಷ್ಯ ಶಾಸ್ತ್ರದ ಮೂಲಕವೂ ಕೂಡ ಈ ಮೂರು ರಾಶಿಯ ಹೆಣ್ಣು ಮಕ್ಕಳು ಜನಿಸಿದರೆ ಆ ತಂದೆಗೆ ಮತ್ತು ಹುಟ್ಟಿದ ಮನೆಗೆ ಭಾಗ್ಯಲಕ್ಷ್ಮಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂಬುದಾಗಿ ಉಲ್ಲೇಖಿತವಾಗಿದೆ. ಹಾಗಿದ್ದರೆ ಆ ಮೂರು ರಾಶಿಯವರು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಕರ್ಕ ರಾಶಿ; ಕರ್ಕ ರಾಶಿಯ ಹೆಣ್ಣು ಮಕ್ಕಳ ಜನನದಿಂದಾಗಿ ತಂದೆಯ ಗೌರವ ಹಾಗೂ ಘನತೆಯನ್ನುವುದು ಸಮಾಜದಲ್ಲಿ ಹೆಚ್ಚಾಗುತ್ತದೆ. ಮನೆಯಲ್ಲಿರುವ ಆರ್ಥಿಕ ಸಂಕಷ್ಟ ದೂರಾಗಿ ಆರ್ಥಿಕ ಪರಿಸ್ಥಿತಿ ಎನ್ನುವುದು ಉನ್ನತವಾಗುತ್ತದೆ ಮತ್ತು ಹೆಣ್ಣು ಮಕ್ಕಳು ಕೂಡ ಅತ್ಯಂತ ಕಡಿಮೆ ಸಮಯದಲ್ಲಿ ಯಾರು ಊಹಿಸಲಾಗದಷ್ಟು ದೊಡ್ಡ ಮಟ್ಟದ ಸಾಧನೆ ಮಾಡುತ್ತಾರೆ. ಒಟ್ಟಾರೆಯಾಗಿ ತಮ್ಮ ಕುಟುಂಬದ ಗೌರವ ಹೆಚ್ಚಾಗುವಂತಹ ಕೆಲಸವನ್ನು ಇವರು ಮಾಡುತ್ತಾರೆ.
ಕನ್ಯಾ ರಾಶಿ; ತಮ್ಮ ಕಾಲಿನ ಮೇಲೆ ನಿಂತುಕೊಳ್ಳುವ ಇವರು ಸ್ವಾವಲಂಬಿ ಜೀವನವನ್ನು ನಡೆಸುವಲ್ಲಿ ಎತ್ತಿದ ಕೈ. ಇವರ ಆಗಮನದಿಂದಲೇ ಇವರ ಮನೆಯವರು ಆರ್ಥಿಕವಾಗಿ ಸದೃಢತೆಯನ್ನು ಸಾಧಿಸುತ್ತಾರೆ. ಇವರ ಆಗಮನದಿಂದ ಮನೆಯ ಅದೃಷ್ಟವೂ ಕೂಡ ಹೆಚ್ಚಾಗಲಿದ್ದು ಇವರ ಬುದ್ಧಿವಂತಿಕೆಗೆ ಯಾರು ಕೂಡ ಸರಿಸಾಟಿ ಇಲ್ಲ. ಜವಾಬ್ದಾರಿ ವಿಚಾರಕ್ಕೆ ಬಂದರೆ ಮನೆಗೆ ಮಗನಂತೆ ತಮ್ಮ ತಂದೆಗೆ ಎಲ್ಲಾ ವಿಚಾರಗಳಲ್ಲಿಯೂ ಕೂಡ ದೊಡ್ಡ ಬೆಂಬಲವಾಗಿ ನಿಲ್ಲುತ್ತಾರೆ.
ಮಕರ ರಾಶಿ; ಸಾಕಷ್ಟು ಕರುಣಾಳು ಸ್ವಭಾವದವರಾಗಿರುವ ಇವರು ಯಾವುದೇ ಕಷ್ಟದ ಕೆಲಸವನ್ನು ಮಾಡಲು ಕೂಡ ಹಿಂದೆ ಮುಂದೆ ನೋಡುವ ಗೋಜಿಗೆ ಹೋಗುವುದಿಲ್ಲ. ತಮ್ಮ ಕೆಲಸ ಹಾಗೂ ಬುದ್ದಿವಂತಿಕೆಯಿಂದಾಗಿ ತಮ್ಮ ಕುಟುಂಬದ ಹಣೆಬರವನ್ನೇ ಬದಲಾಯಿಸಿ ಬಿಡುವ ಶಕ್ತಿ ಇವರಲ್ಲಿದೆ. ಗುರಿಯನ್ನು ಮುಟ್ಟುವವರೆಗೂ ಕೂಡ ಇವರು ತಮ್ಮ ಸೋಲನ್ನು ಒಪ್ಪಿಕೊಳ್ಳುವ ಮಾತೇ ಇಲ್ಲ. ಇವರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದ್ದು ಇದರಿಂದಲೇ ಎಲ್ಲರೂ ಕೂಡ ಇವರತ್ತ ಆಕರ್ಷಿಸುತ್ತಾರೆ.