ಪ್ರತಿಯೊಂದು ಮನೆ ಉದ್ಧಾರ ಆಗುವುದು ಅಥವಾ ಹಾಳಾಗುವುದು ಹಲವಾರು ಅಂಶಗಳಿಂದ ನಿರ್ಧಾರಿತವಾಗುತ್ತದೆ ಎಂಬುದಾಗಿ ಹೇಳಲಾಗುತ್ತದೆ. ಅವುಗಳಲ್ಲಿ ಜ್ಯೋತಿಷ್ಯ ಶಾಸ್ತ್ರ ಹಾಗೂ ವಾಸ್ತುಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರಗಳು ಕೂಡ ಅಡಕವಾಗಿವೆ. ಅದರಲ್ಲಿಯೂ ಪ್ರಮುಖವಾಗಿ ನೀವು ಒಂದು ವೇಳೆ ವಾಸ್ತು ಶಾಸ್ತ್ರದ ಪ್ರಕಾರ ತಪ್ಪಾದ ದಿಕ್ಕಿನಲ್ಲಿ ತಲೆ ಹಾಕಿ ಮಲಗಿದರೂ ಕೂಡ ನಿಮ್ಮ ಜೀವನದಲ್ಲಿ ಉದ್ದಾರ ಆಗದೇ ಇರುವಂತಹ ನಕಾರಾತ್ಮಕ ಪರಿಣಾಮಗಳು ಕೂಡ ಬೀರಬಹುದಾಗಿದೆ.

ಇದು ಕೇವಲ ವಾಸ್ತು ಶಾಸ್ತ್ರದ ಮೂಲಕ ಮಾತ್ರವಲ್ಲದೆ ವೈಜ್ಞಾನಿಕವಾಗಿ ಕೂಡ ಸಾಬೀತಾಗಿರುವಂತಹ ವಿಚಾರ. ಅದೇನೆಂದರೆ ಯಾವತ್ತೂ ಕೂಡ ಉತ್ತರ ದಿಕ್ಕಿನಲ್ಲಿ ತಲೆಹಾಕಿ ಮಲಗಲೇಬಾರದು. ನಕಾರಾತ್ಮಕ ತರಂಗಗಳು ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದಾಗ ಮನುಷ್ಯನ ದೇಹವನ್ನು ಪ್ರವೇಶಿಸಿ ಆತನ ಅದೃಷ್ಟ ಹಾಗೂ ಎಲ್ಲಾ ನಕಾರಾತ್ಮಕ ವಿಚಾರಗಳು ಆತನಿಗೆ ತಲುಪುವಂತೆ ಮಾಡುತ್ತವೆ ಇದರಿಂದಾಗಿ ಸಾಕಷ್ಟು ಅನಾಹುತಗಳು ನಡೆಯುತ್ತವೆ.

ವೈಜ್ಞಾನಿಕವಾಗಿ ಸಾಬೀತಾಗಿರುವಂತಹ ವಿಚಾರ ಇದಾಗಿದ್ದು ಇದರಿಂದಾಗಿ ಮನುಷ್ಯನ ಏಳಿಗೆ ಹಾಗೂ ಅದೃಷ್ಟ ಎರಡು ಕೂಡ ಪಾತಾಳ ಲೋಕದತ್ತ ಹೋಗುತ್ತದೆ ಅಂದರೆ ಅಧೋಗತಿಗೆ ಇಳಿಯುತ್ತದೆ ಎಂದು ಹೇಳಬಹುದು. ಹೀಗಾಗಿ ಯಾವತ್ತೂ ಕೂಡ ಮಲಗಬೇಕಾದರೆ ದಕ್ಷಿಣ ಭಾಗಕ್ಕೆ ತಲೆ ಹಾಕಿ ಮಲಗುವುದು ವಾಸ್ತು ಶಾಸ್ತ್ರದ ಪ್ರಕಾರ ಅತ್ಯುತ್ತಮ ಸಲಹೆ ಎಂದು ಹೇಳಿದರೆ ತಪ್ಪಾಗಲಾರದು.

ಇನ್ನು ಇನ್ನೊಂದು ವಿಚಾರ ಏನೆಂದರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮಧ್ಯಭಾಗವನ್ನು ಯಾವುದೇ ಪೀಠೋಪಕರಣಗಳು ಅಥವಾ ಬೇರೆ ವಸ್ತುಗಳಿಂದ ತುಂಬಿಸಬಾರದು ಮನೆಯ ಮಧ್ಯದ ಜಾಗವನ್ನು ಖಾಲಿ ಬಿಟ್ಟಿರಬೇಕು ಇದರಿಂದಾಗಿ ಸಕಾರಾತ್ಮಕತೆ ಎನ್ನುವುದು ಮನೆಯಲ್ಲಿ ತುಂಬಿ ತುಳು ಕಾಡುತ್ತದೆ ಎಂಬುದಾಗಿ ಕೂಡ ಉಲ್ಲೇಖವಿದೆ. ಹೀಗಾಗಿ ವಾಸ್ತು ಶಾಸ್ತ್ರದ ಈ ಎಲ್ಲ ವಿಚಾರಗಳನ್ನು ತಲೇಲಿ ಇಟ್ಟುಕೊಂಡು ನಿಮ್ಮ ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಸರಿಯಾದ ವಸ್ತುಗಳನ್ನು ಇಟ್ಟರೆ ಖಂಡಿತವಾಗಿ ನಿಮ್ಮ ಮನೆ ಏಳಿಗೆಯನ್ನು ಹೊಂದುತ್ತದೆ ಹಾಗೂ ಆರ್ಥಿಕವಾಗಿ ನೀವು ಸದೃಢರಾಗುತ್ತೀರಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!