ಬಡವರು ಉಳಿದುಕೊಳ್ಳಲು ಮನೆಯನ್ನು ಕಟ್ಟಿಕೊಳ್ಳಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಸರ್ಕಾರವು ಸ್ಥಳವನ್ನು ಗ್ರಾಮೀಣ ಹಾಗೂ ನಗರಗಳೆಂದು ವಿಂಗಡಿಸುತ್ತದೆ. ನಗರಗಳಲ್ಲಿ ಬೇರೆ ಬೇರೆ ರೀತಿಯ ಯೋಜನೆಗಳು ಇವೆ. ಹಾಗೆಯೇ ಗ್ರಾಮಗಳಲ್ಲಿ ಬೇರೆ ಬೇರೆ ರೀತಿಯ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅಂದರೆ ಪ್ರತ್ಯೇಕವಾಗಿ ನಗರ ಹಾಗೂ ಗ್ರಾಮೀಣ ಬಡತನಗಳಿಗಾಗಿ ವಿವಿಧ ಯೋಜನೆಗಳನ್ನು ಕ್ರಮಾನುಸಾರವಾಗಿ ರೂಪಿಸಲಾಗುತ್ತದೆ. ಆದ್ದರಿಂದ ನಾವು ಇಲ್ಲಿ ಆಶ್ರಯ ಯೋಜನೆಯ ಫಲಾನುಭವಿಗಳ ಹೆಸರನ್ನು ತಿಳಿಯುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಭಾರತೀಯ ಪ್ರಜೆಗಳ ಜೀವನದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತವೆ. ಅದರಂತೆ ಆಶ್ರಯ ಯೋಜನೆಯು ಗ್ರಾಮೀಣ ಪ್ರದೇಶದ ಜನರಿಗಾಗಿ ರೂಪುಗೊಂಡಿದೆ. ಇದರ ಯೋಜನೆಯನ್ನು ಪಂಚಾಯತದ ಮೂಲಕ ವಿತರಿಸಲಾಗುತ್ತದೆ. ಇದರ ಬಗೆಗಿನ ವಿವರವನ್ನು ಮೊಬೈಲ್ನ ಮೂಲಕವೂ ತೆಗೆದುಕೊಳ್ಳಬಹುದಾಗಿದೆ. ಇಂದಿರಾ ಆವಾಸ್ ಯೋಜನೆಯು ಭಾರತದ ಗ್ರಾಮೀಣ ಪ್ರದೇಶದ ಬಡಜನರಿಗಾಗಿ ವಸತಿ ಕಲ್ಪಿಸುವ ಉದ್ದೇಶದಿಂದ ರೂಪುಗೊಂಡ ಸಮಾಜ ಕಲ್ಯಾಣ ಯೋಜನೆಯಾಗಿದೆ.
ಈ ಯೋಜನೆಯನ್ನು ಸಂಕ್ಷಿಪ್ತವಾಗಿ ಐ.ಏ.ವೈ ಎನ್ನಲಾಗುತ್ತದೆ. ಇದು ಗ್ರಾಮೀಣಾಭಿವೃಧಿ ಖಾತೆಗೆ ಸೇರಿದೆ. ಇದನ್ನು ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದ ಸಮಯದಲ್ಲಿ ಜಾರಿಗೊಳಿಸಿದರು. ಇದರ ಮೂಲ ಉದ್ದೇಶ ಹಳ್ಳಿಗಳಲ್ಲಿ ಬಡಜನರಿಗೆ ಅಂದರೆ ಬಡತನ ರೇಖೆಗಿಂತ ಕೆಳಗಿನ ಜನರಿಗೆ ಮನೆಗಳನ್ನು ದರ ರಹಿತವಾಗಿ ಕಟ್ಟಿಸಿಕೊಡುವುದು. ಮೊಬೈಲ್ ನಲ್ಲಿ ಈ ಯೋಜನೆಯ ಮಾಹಿತಿಗಳನ್ನು ಪಡೆಯಬಹುದು. ಮೊದಲು ಮೊಬೈಲ್ ನಲ್ಲಿ ವೆಬ್ ಬ್ರೌಸರ್ ಓಪನ್ ಮಾಡಿಕೊಂಡು ಅಲ್ಲಿ ಪಂಚತಂತ್ರ ಎಂದು ಸರ್ಚ್ ಕೊಡಬೇಕು. ನಂತರ ಪಂಚತಂತ್ರದ ಮೇಲೆ ಕ್ಲಿಕ್ ಮಾಡಿದರೆ panchatantra.kar.nic. ಓಪನ್ ಆಗುತ್ತದೆ.
ಇದು ಕರ್ನಾಟಕ ಸರ್ಕಾರದ ವೆಬ್ಸೈಟ್ ಆಗಿದ್ದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಗೆ ಸಂಬಂಧ ಪಟ್ಟಿರುತ್ತದೆ. ನಂತರ ಪಂಚಮಿತ್ರ-ಪಂಚಾಯಿತಿ ಅಂತರ್ಜಾಲ ತಾಣದ ಮೇಲೆ ಕ್ಲಿಕ್ ಮಾಡಬೇಕು. ನಂತರ ಕರ್ನಾಟಕ ನಕಾಶೆ ಓಪನ್ ಆಗುತ್ತದೆ. ಅಲ್ಲಿ ಜಿಲ್ಲೆಯನ್ನು ಕ್ಲಿಕ್ ಮಾಡಬೇಕು. ನಂತರ ಜಿಲ್ಲೆಯ ನಕಾಶೆ ಓಪನ್ ಆದಾಗ ಅಲ್ಲಿ ಕ್ಲಿಕ್ ಮಾಡಿದರೆ ಬಲಭಾಗದಲ್ಲಿ ಯಾವ ಪಂಚಾಯಿತಿ ಎಂದು ಕ್ಲಿಕ್ ಮಾಡಬೇಕು. ನಂತರದಲ್ಲಿ ಒಂದು ಪೇಜ್ ಓಪನ್ ಆದಾಗ ಅಲ್ಲಿ ಫಲಾನುಭವಿಗಳು ಮೇಲೆ ಕ್ಲಿಕ್ ಮಾಡಬೇಕು. ನಂತರ ಆ ಪಂಚಾಯತ್ ಊರಿನ ಫಲಾನುಭವಿಗಳ ಹೆಸರು ದೊರೆಯುತ್ತದೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466